Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವ್ಯಾಯಾಮಗಳು ಏಕೆ ನಿಮ್ಮನ್ನು ಸಂತೋಷವಾಗಿಡುತ್ತದೆ ಗೊತ್ತೇ?
ನಿಮಗೆ ಸುಸ್ತು ಎನಿಸುತ್ತಿದೆಯೇ? ಕೆಲಸದ ಬಗ್ಗೆ ಹೆಚ್ಚು ಒತ್ತಡ ತಾಳುತ್ತಿದ್ದೀರ? ಇಡೀ ದಿನ ಬಳಲುತ್ತಿದ್ದೀರಾ? ಇದೆಲ್ಲದರಿಂದ ಹೊರಬನ್ನಿ.ಮೆಟ್ಟಿಲು ಹತ್ತಿ ಹೋಗಲು ಸುಸ್ತಾಗುತ್ತಿದೆಯೇ? ಹಾಗಿದ್ದರೆ ಬೆಟ್ಟವನ್ನು ಹತ್ತುವ ಪ್ರಯತ್ನ ಮಾಡಿನೋಡಿ.ನಿಮ್ಮ ಜೀವನಕ್ಕೆ ಯಾವ ವ್ಯಾಯಾಮ ಮಾಡಿ ಆನಂದವಾಗಿರಬಹುದು ಎಂಬುದು ನಿಜಕ್ಕೂ ಆಶ್ಚರ್ಯ ನೀಡುವ ವಿಷಯ.
ಇದು ಕೇವಲ ನಿಮ್ಮ ಮೂಡ್ ಸರಿ ಮಾಡಿಕೊಳ್ಳವ ಪ್ರಶ್ನೆಯಲ್ಲ. ನಿಮ್ಮ ಜೀವನವನ್ನು ಹೆಚ್ಚು ಸಂತೋಷಗೊಳಿಸುವ ಪ್ರಶ್ನೆ. ನಿಮಗೆ ವ್ಯಾಯಾಮ ಮಾಡುವುದು ಸುಲಭವೆನಿಸಿದರೆ ಇನ್ನೆಲ್ಲವನ್ನು ಕೂಡ ಮಾಡುವುದು ಸುಲಭವಾಗಿಬಿಡುತ್ತದೆ.ಈ ಕೆಳಗೆ ನಾವು ನೀಡಿರುವ ಸಲಹೆಗಳನ್ನು ನೋಡಿ ನೀವು ಅನುಕರಿಸಬಹುದೇ ಎಂದು ಪ್ರಯತ್ನಿಸಿ.

ಒಳ್ಳೆಯ ಮನಸ್ಥಿತಿ
ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡಿದ ಐದೇ ನಿಮಿಷದಲ್ಲಿ ನೀವು ಸಂತೋಷವನ್ನು ಹೆಚ್ಚಿಸಿಕೊಳ್ಳಬಹುದು. ನೀವು ವ್ಯಾಯಾಮ ಮಾಡಲು ಪ್ರಾರಭಿಸಿದ ತಕ್ಷಣ ನಿಮ್ಮ ಮೆದುಳು ಸೆರೊಟೋನಿನ್, ಡೊಪಮಿನ್, ನೊರಪಿನೆಪ್ರಿನ್ ಇವುಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳು ನಿಮಗೆ ಸಂತೋಷವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಯಾವುದೇ ವ್ಯಾಯಾಮ ಮಾಡುವುದು ಇಷ್ಟವಿಲ್ಲದಿದ್ದರೆ ಒಂದು ವಾಕಿಂಗ್ ಹೋಗಿಬನ್ನಿ ಅದು ಕೂಡ ನಿಮ್ಮ ಸಂತೋಷ ಹೆಚ್ಚಿಸಬಹುದು.

ಕಡಿಮೆ ಒತ್ತಡ
ಆನ್‌ಲೈನ್ ವೋಟಿನಲ್ಲಿ ತಿಳಿದ ಪ್ರಕಾರ ಕೇವಲ ೧೪ ರಷ್ಟು ಜನ ಒತ್ತಡದ ವಿರುದ್ಧ ಹೋರಾಡಲು ವ್ಯಾಯಾಮದ ಮೊರೆ ಹೋಗುತ್ತಾರೆ.ನೀವು ಒಳ್ಳೆಯ ಫೀಲಿಂಗ್ ತರಿಸಿಕೊಳ್ಳಲು ಸಾಕಷ್ಟು ಗಂಟೆ ವ್ಯಾಯಾಮ ಮಾಡಬೇಕು ಎಂದೇನಿಲ್ಲ ಕೇವಲ ಐದು ನಿಮಿಷಗಳು ಸಾಕು.ಕಡಿಮೆ ಯಿಂದ ಮಧ್ಯಮವಾಗಿರುವ ವ್ಯಾಯಾಮಗಳು ಒತ್ತಡ ನಿವಾರಿಸಲು ಸಹಕಾರಿ. ರನ್ನರ್ಸ್ ವರ್ಲ್ಡ್ ನಲ್ಲಿ ಹಾಕಿರುವ ಲೇಖನದಲ್ಲಿ ವ್ಯಾಯಾಮಗಳು ಹೇಗೆ ಆಘಾತಕಾರಿ ಒತ್ತಡದಿಂದ ಹೊರಬರುವಂತೆ ಮಾಡುತ್ತದೆ ಎಂಬುದರ ಬಗ್ಗೆ ಇತ್ತೀಚಿಗೆ ವರದಿ ಮಾಡಿದ್ದರು. ವಾಕಿಂಗ್, ರನ್ನಿಂಗ್ ಮತ್ತು ಜಾಗಿಂಗ್ ನಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಮಾನಸಿಕ ಸ್ಥಿತಿಸ್ಥಾಪಕತ್ವ
ನೀವು ದೈಹಿಕ ವ್ಯಾಯಾಮವನ್ನು ಅಧಿಕವಾಗಿ ಮಾಡಿದಂತೆ ನೀವು ಮಾನಸಿಕವಾಗಿ ಕಠಿಣವಾಗುತ್ತಾ ಹೋಗುತ್ತೀರಿ. ಹೀಗೆ ನೀವು ಮಾನಸಿಕವಾಗಿ ಕಠಿಣವಾದಾಗ ಹೆಚ್ಚು ಒತ್ತಡ ಸಹಿಸಿಕೊಳ್ಳುವ ಶಕ್ತಿ ನಿಮ್ಮದಾಗುತ್ತದೆ. ಕೆಲವು ಜನರಿಗೆ ಅಭಿವೃದ್ಧಿ ಹೊಂದಲು ಈ ಮಾನಸಿಕ ಸ್ಥಿತಿಸ್ಥಾಪಕತ್ವ ಸಹಾಯಕ. ನೀವು ಈ ರೀತಿ ಮಾಡುವುದರಿಂದ ನಿಮ್ಮ ಗುರಿಯನ್ನು ಬೇಗ ಮುಟ್ಟುತ್ತೀರಿ ಮತ್ತು ಮುಂದೇನು ಮಾಡಬೇಕು ಎಂಬುದನ್ನು ಯೋಚಿಸುತ್ತೀರಿ. ಜನರು ಈ ರೀತಿ ಗುರಿ ಸೇರಲು ರನ್ನಿಂಗ್, ಸೈಕ್ಲಿಂಗ್ ಇನ್ನು ಮುಂತಾದ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಈ ರೀತಿ ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವುದರಿಂದ ನೀವು ಜೀವನದಲ್ಲಿ ಮುನ್ನುಗ್ಗಬಹುದು. ಏನು ಬಂದರೂ ಎದುರಿಸುವ ಶಕ್ತಿ ಇರುತ್ತದೆ.

ಜೀವನ ಸುಲಭ ಎನ್ನಿಸುತ್ತದೆ
ನೀವು ನಿಮ್ಮ ದಿನವನ್ನು ಆರೋಗ್ಯಯುತವಾಗಿ ಕಳೆದರೆ ಕ್ಷೇಮವಲ್ಲವೆ ?ತರಕಾರಿ ತರುವುದು, ಮಕ್ಕಳನ್ನು ಬೆಳೆಸುವುದು,ಮನೆಯನ್ನು ಸುಸ್ಥಿತಿಯಲ್ಲಿಡುವುದು ಇವುಗಳು ಸುಲಭವಾಗಿಬಿಟ್ಟರೆ ನೀವೆಷ್ಟು ಸಂತೋಷವಾಗಿರಬಲ್ಲಿರಿ ಅಲ್ಲವೇ ? ವ್ಯಾಯಾಮದಿಂದ ಇದು ಸಾಧ್ಯ.ನಿಮ್ಮ ಹೃದಯದ ಅರೋಗ್ಯ,ದೇಹದ ಶಕ್ತಿ ಇವುಗಳನ್ನು ಹೆಚ್ಚಿಸಿಕೊಳ್ಳಿ ಆಗ ಎಲ್ಲವೂ ಸುಲಭವಾಗುತ್ತದೆ.

ಸುಧಾರಿತ ಇಮ್ಯೂನ್ ಸಿಸ್ಟಮ್
ವ್ಯಾಯಾಮಗಳು ಸಾಕಷ್ಟು ರೀತಿಯಲ್ಲಿ ನಿಮ್ಮ ಇಮ್ಯೂನಿಟಿಯನ್ನು (ಪ್ರತಿರಕ್ಷಣಾ ವ್ಯವಸ್ಥೆಯನ್ನು) ಸುಧಾರಿಸುತ್ತದೆ. ಶ್ವಾಸಕೋಶದಿಂದ ಬ್ಯಾಕ್ಟೀರಿಯವನ್ನು ಹೊರಹಾಕಲು ವ್ಯಾಯಾಮ ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹದ ತ್ಯಾಜ್ಯವನ್ನು ಹೊರಹಾಕಲು ಗುದದ್ವಾರವನ್ನು ಚಟುವಟಿಕೆ ಹೆಚ್ಚಿಸಿ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ನಿಮ್ಮ ರಕ್ತ ಹೆಚ್ಚು ಪಂಪ್ ಆದಾಗ ರೋಗ ನಿರೋಧಕ ಅಂಶ ಬಿಳಿ ರಕ್ತಕಣಗಳ ಮೂಲಕ ದೇಹಕ್ಕೆ ಹರಿಯುತ್ತದೆ. ಇವುಗಳು ನಿಮಗೆ ಅನಾರೋಗ್ಯವಾಗುವುದನ್ನು ಪತ್ತೆ ಹಚ್ಚುತ್ತವೆ. ನೀವು ವ್ಯಾಯಾಮ ಮಾಡಿದಾಗ ಒತ್ತಡಕ್ಕೆ ಸಂಬಂಧಪಟ್ಟ ಹಾರ್ಮೋನುಗಳು ಕಡಿಮೆಯಾಗುತ್ತಾ ಬರುತ್ತದೆ. ಒತ್ತಡ ಎಂಬುದು ಕೇವಲ ಮಾನಸಿಕವಾಗಿಯಲ್ಲ, ದೈಹಿಕವಾಗಿ ಕೂಡ ಸಂಭವಿಸಬಹುದು, ವ್ಯಾಯಾಮ ಮಾಡುವುದರಿಂದ ಇದನ್ನು ತಡೆಯಬಹುದು.

ಜೀವನವನ್ನು ಸಂತೋಷವಾಗಿ ಕಳೆಯಲು ಪ್ರಯತ್ನಿಸಿ
ನೀವು ಏನು ಬೇಕಾದರೂ ಮಾಡಲು ತಯಾರಿದ್ದೀರಾ ಎಂದಾಗ ಸಂತೋಷ ತಾನಾಗಿಯೇ ಬರುತ್ತದೆ. ನೀವು ನಿಮ್ಮ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರೊಂದಿಗೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ತಯಾರಿದ್ದೀರಿ ಎಂದಾಗ ಜೀವನ ಸುಂದರವೆನಿಸುತ್ತದೆ. ನೀವು ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದು ಮುಂದು ನೋಡಬೇಕಾಗಿಯೇ ಇಲ್ಲ ಎಂದಾಗ ಅದೇ ಸಂತೋಷ. ಜೀವನವನ್ನು ಸಂತೋಷಯುತವಾಗಿ ಕಳೆಯಿರಿ.

ಆರೋಗ್ಯಕರ ತಾರುಣ್ಯ
ವ್ಯಾಯಾಮ ನಿಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕ. ನಿಮಗೆ ವಯಸ್ಸಾಗುತ್ತಾ ಹೋದಂತೆ ವ್ಯಾಯಾಮವಿಲ್ಲದೆ ತೂಕ ಕಾಪಾಡಿಕೊಳ್ಳುವುದು ಕಷ್ಟವಾಗಿಬಿಡುತ್ತದೆ.ನಿಮ್ಮ ಬೆನ್ನೆಲುಬಿನಲ್ಲಿ ಚಲನಶೀಲತೆ ಕಾಪಾಡಿಕೊಳ್ಳಲು ವ್ಯಾಯಾಮದಿಂದ ಸಾಧ್ಯವಾಗುತ್ತದೆ. ನಿಮ್ಮ ಬೆನ್ನೆಲುಬು ಸರಿಯಾಗಿದ್ದಲ್ಲಿ ನೀವು ಚಲನಶೀಲರಾಗಿರಬಹುದು. ಇದರಿಂದ ವಯಸ್ಸಾದಂತೆ ಆರಾಮವಾಗಿರಲು ಸಹಾಯಕವಾಗುತ್ತದೆ

ಒಳ್ಳೆಯ ನಿದ್ದೆ
ನೀವು ಮಲಗಿದಾಗ ನಿಮ್ಮ ದೇಹದ ಉಷ್ಣಾಂಶ ಕುಗ್ಗುತ್ತದೆ ಇದು ನಿಮಗೆ ನಿದ್ದೆ ಬರಲು ಸಹಾಯಕವಾಗುತ್ತದೆ. ಮಲಗುವ ಆರು ಗಂಟೆ ಮೊದಲು ೨೦ -೩೦ ನಿಮಿಷ ವ್ಯಾಯಾಮ ಮಾಡುವುದರಿಂದ ಉಷ್ಣಾಂಶ ಕಡಿಮೆಯಾಗಿ ನಿದ್ರೆ ಆವರಿಸಲು ಸಹಾಯಕವಾಗುತ್ತದೆ.

ಶಕ್ತಿ ಹೆಚ್ಚಿಸುತ್ತದೆ
ವ್ಯಾಯಮಾದ ನಂತರ ಸ್ವಲ್ಪ ಸುಸ್ತು ಎನಿಸಿದರೂ ಕೂಡ ಇದು ನಿಮಗೆ ಸಾಕಷ್ಟು ಶಕ್ತಿ ನೀಡುತ್ತದೆ. ಈ ಶಕ್ತಿ ನಿಮಗೆ ಇಡೀ ದಿನ ಲವಲವಿಕೆಯಿಂದಿರಲು ಸಹಕರಿಸುತ್ತದೆ.

ಖಿನ್ನತೆ ಮತ್ತು ಆತಂಕ ಕಡಿಮೆ ಮಾಡುತ್ತದೆ
ಚಟುವಟಿಕೆಯಿಂದ ಕೂಡಿದ ಜನರಿಗಿಂತ ಚಟುವಟಿಕೆಯಿಲ್ಲದ ಜನರು ಹೆಚ್ಚು ಖಿನ್ನತೆ ಅನುಭವಿಸುತ್ತಾರೆ ಎನ್ನಲಾಗುತ್ತದೆ.ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಮನಶ್ಯಾಸ್ತ್ರಜ್ಞ ಜೇಮ್ಸ್ ಬ್ಲೂಮೆಂತಾಲ್ ಹೇಳುವಂತೆ ವ್ಯಾಯಮನ್ನು ಅರ್ಧಕ್ಕೆ ಬಿಟ್ಟುಬಿಡುವವರು ವ್ಯಾಯಾಮ ಮಾಡಿಕೊಂಡು ಬರುವವರಿಗಿಂತ ಹೆಚ್ಚು ಖಿನ್ನತೆ ಅನುಭವಿಸುತ್ತಾರೆ ಎನ್ನುತ್ತಾರೆ.ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದು ಮಾತ್ರವಲ್ಲ ಅದನ್ನು ಮರುಕಳಿಸದಂತೆ ಕೂಡ ನೋಡಿಕೊಳ್ಳುತ್ತದೆ. ಆದ್ದರಿಂದ ಪ್ರತಿದಿನ ವ್ಯಾಯಮ ಮಾಡಿ.ಐದು ನಿಮಿಷ ವಾಕ್ ಮಾಡಿ,ಯೋಗ ಮಾಡಿ.ಸಂತೋಷವಾಗಿರಿ.



Click it and Unblock the Notifications
