Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಒತ್ತಡವನ್ನು ಕಡಿಮೆ ಮಾಡುವ ಆಹಾರಗಳು ಇಲ್ಲಿದೆ ನೋಡಿ!
ಆಧುನಿಕ ಜೀವನ ಶೈಲಿಯೇ ಹಾಗೆ, ಅದು ತುಂಬಾ ವೇಗ ಹಾಗೂ ಒತ್ತಡದಿಂದ ಕೂಡಿರುತ್ತದೆ. ಹೆಚ್ಚಿನವರಿಗೆ ಇದರ ಪರಿಣಾಮದ ಬಗ್ಗೆ ತಿಳಿಯುವುದಿಲ್ಲ, ಹಲವಾರು ರೀತಿಯ ಅನಾರೋಗ್ಯಕ್ಕೆ ಇದು ಪ್ರಮುಖ ಕಾರಣವೆನ್ನಲಾಗುತ್ತಿದೆ. ನೀವು ಕೆಲಸ ಮಾಡುತ್ತಿರಲಿ, ಓದುತ್ತಿರಲಿ ಅಥವಾ ಏನೇ ಮಾಡದೆ ಹಾಗೆ ಇದ್ದರೂ ಪ್ರತೀ ದಿನ ಒತ್ತಡವೆನ್ನುವುದು ಇದ್ದೇ ಇರುತ್ತದೆ.
ಒತ್ತಡವು ನಮ್ಮ ಪ್ರತೀ ದಿನದ ಒಂದು ಭಾಗವಾಗಿಯೇ ಹೋಗಿದೆ. ಕೆಲವು ಸಲ ಇದನ್ನು ನಿಭಾಯಿಸಲು ನಾವು ಕಷ್ಟಪಡುತ್ತೇವೆ. ಕೆಲವೊಂದು ಆಹಾರಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಆರಾಮವಾಗಿರುವಂತೆ ಮಾಡುತ್ತದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಗರ್ಭಾವಸ್ಥೆಯಲ್ಲಿ ಒತ್ತಡ ನಿಯಂತ್ರಣ ಕೆಲ ಟಿಪ್ಸ್
ಅನಗತ್ಯ ಒತ್ತಡವು ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ನೀವು ತುಂಬಾ ಶಾಂತ ಹಾಗೂ ನಿಯಂತ್ರಣದಿಂದ ಇರಲು ಬಯಸಿದರೂ ಒಳಮನಸ್ಸು ಮಾತ್ರ ಯಾವುದಾದರೂ ವಿಷಯದ ಬಗ್ಗೆ ಚಿಂತಿಸುತ್ತಾ ಇರುವಾಗ ಒತ್ತಡ ಉಂಟಾಗುತ್ತದೆ. ಇದು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವುದೇ ಪರಿಣಾಮ ಬೀರದಿದ್ದರೂ ದೀರ್ಘಾವಧಿಗೆ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಒತ್ತಡ ಕಡಿಮೆ ಮಾಡುವಂತಹ ಆಹಾರ ತಿಂದು ಒತ್ತಡವನ್ನು ಕಡಿಮೆ ಮಾಡಿ.
ಒತ್ತಡವನ್ನು ನಿಭಾಯಿಸುವುದು ಹೇಗೆಂದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ನಮ್ಮ ಒತ್ತಡಕ್ಕೆ ಕಾರಣವೇನೆಂದು ತಿಳಿದಿರುತ್ತದೆ ಮತ್ತು ಶಾಂತವಾಗಿರಲು ದಾರಿಗಳು ತಿಳಿದಿರುತ್ತದೆ. ಆದರೆ ಕೆಲವರು ಒತ್ತಡದ ಪರಿಸ್ಥಿತಿಯಲ್ಲಿ ಜಂಕ್ ಫುಡ್ ಗೆ ಮೊರೆ ಹೋದರೆ ಮತ್ತೆ ಕೆಲವರು ಅತಿಯಾದ ವ್ಯಾಯಾಮ ಅಥವಾ ಇನ್ನೇನಾದರೂ ಮಾಡುತ್ತಾರೆ.

ಒತ್ತಡವನ್ನು ಹಾಲಿನೊಳಗೆ ಹಾಕಿ
ನೀವು ಹಾಲನ್ನು ಪ್ರೀತಿಸುವವರಾದರೆ ಆಗ ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಇದು ತುಂಬಾ ನೆರವಾಗುತ್ತದೆ. ವಿಟಮಿನ್ ಎ ಮತ್ತು ಡಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಹಾಲು ಒತ್ತಡ ಉಂಟುಮಾಡುವ ಫ್ರೀ ರೆಡಿಕಾಲ್ ವಿರುದ್ಧ ಹೋರಾಡುತ್ತದೆ.

ಡಾರ್ಕ್ ಚಾಕಲೇಟ್
ಬೊಜ್ಜು, ಒತ್ತಡ ಮತ್ತು ಖಿನ್ನತೆ ವಿರುದ್ಧ ಹೋರಾಡುವಂತಹ ಮೆಗ್ನೀಷಿಯಂನ್ನು ಹೊಂದಿರುವ ಡಾರ್ಕ್ ಚಾಕಲೇಟ್ ನಿಮ್ಮನ್ನು ಒತ್ತಡದಿಂದ ಹೊರತಂದು ಸಾಮಾನ್ಯವಾಗಿರುವಂತೆ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಒತ್ತಡ ಕಡಿಮೆ ಮಾಡಲು ನೀವು ದಿನದಲ್ಲಿ ಒಂದು ಔನ್ಸ್ ಡಾರ್ಕ್ ಚಾಕಲೇಟ್ ನ್ನು ಯಾವುದಾದರೂ ತಿಂಡಿ ಅಥವಾ ಹಾಲಿನೊಂದಿಗೆ ಸೇವಿಸಬಹುದು.

ಕಿತ್ತಳೆ
ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಎ, ಬಿ ಮತ್ತು ಸಿಯನ್ನು ಹೊಂದಿರುವ ಕಿತ್ತಳೆ ಫ್ರೀ ರಾಡಿಕಲ್ ವಿರುದ್ಧ ಹೋರಾಡಿ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಒತ್ತಡ ಮುಕ್ತರಾಗಿ ಆರಾಮವಾಗಿರಲು ಪ್ರತೀ ದಿನದ ಆಹಾರ ಕ್ರಮದಲ್ಲಿ ಕಿತ್ತಳೆ ಸೇರಿಸಿ.

ಧಾನ್ಯ/ಮುಸುಕಿನ ಜೋಳ
ಒಂದು ಪಿಂಗಾಣಿ ಅಕ್ಕಿ ಧಾನ್ಯ ಅಥವಾ ಮುಸುಕಿನ ಜೋಳವನ್ನು ಹಾಲಿನೊಂದಿಗೆ ತಿಂದರೆ ಅದು ಒತ್ತಡ ನಿಭಾಯಿಸಲು ನಿಮ್ಮ ದೇಹಕ್ಕೆ ನೆರವಾಗುತ್ತದೆ. ಫಾಲಿಕ್ ಆಮ್ಲಾ ಮತ್ತು ವಿಟಮಿನ್ ಬಿಯಿಂದ ತುಂಬಿರುವ ಇವು ಒತ್ತಡವನ್ನು ಕಡಿಮೆ ಮಾಡುವ ಆಹಾರಗಳು.

ಬೆರ್ರಿ ಹಣ್ಣುಗಳು
ಮೆಗ್ನೀಸಿಯಮ್ ಹಾಗೂ ಮ್ಯಾಂಗನೀಸ್ ನೊಂದಿಗೆ ವಿಟಮಿನ್ ಎ, ಇ ಹೊಂದಿರುವ ಬೆರ್ರಿ ಹಣ್ಣುಗಳು ಒತ್ತಡ ನಿವಾರಣೆಗೆ ಅತ್ಯುತ್ತಮ ಆಹಾರ. ನಿಯಮಿತವಾಗಿ ಬೆರ್ರಿ ಹಣ್ಣುಗಳ ಸೇವನೆಯಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ಅದು ಮನಸ್ಥಿತಿ ಬದಲಾವಣೆ ನಿಯಂತ್ರಿಸಿ ಒತ್ತಡದ ವಿರುದ್ಧ ಹೋರಾಡಲು ನೆರವಾಗುತ್ತದೆ.

ಪಾಲಕ
ಆರೋಗ್ಯಕರ ಹಸಿರು ತರಕಾರಿಗಳಾದ ಪಾಲಕ ತಿನ್ನುವುದರಿಂದ ಒತ್ತಡ ವಿರುದ್ಧ ಹೋರಾಡಬಹುದು. ವಿಟಮಿನ್ ಎ, ಸಿ ಹಾಗೂ ಇ, ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಹೊಂದಿರುವ ಇದು ಅನಗತ್ಯ ಒತ್ತಡ ನಿವಾರಣೆಗೆ ಅತ್ಯುತ್ತಮ ಆಹಾರ.

ಮೀನು
ಒಮೆಗಾ 3 ಕೊಬ್ಬಿನಾಮ್ಲ ಹೊಂದಿರುವ ಮೀನುಗಳಾದ ಸಾಲ್ಮನ್, ಟುನಾದಂತಹ ಮೀನುಗಳು ಒತ್ತಡದ ಮಟ್ಟ ನಿಯಂತ್ರಿಸಲು ನೆರವಾಗುತ್ತದೆ. ವಾರದಲ್ಲಿ ಒಂದೆರಡು ಸಲ ಇದನ್ನು ತಿನ್ನುವುದರಿಂದ ನೀವು ಆರಾಮವಾಗಿರಬಹುದು.
ಒತ್ತಡ ವಿರುದ್ಧ ಹೋರಾಡುವ ವಿಧಾನವನ್ನು ಕಂಡುಕೊಂಡರೆ ಯಾವಾಗಲೂ ಒಳ್ಳೆಯದು. ನೀವು ಈಗಾಗಲೇ ಆಹಾರ ಕ್ರಮ ಪಾಲಿಸುತ್ತಿದ್ದರೆ ಮತ್ತು ಇದರಲ್ಲಿ ಈ ಆಹಾರಗಳನ್ನು ಸೇರಿಸಿದ್ದರೆ ಆಗ ನೀವು ಒತ್ತಡದ ವಿರುದ್ಧ ಹೋರಾಡುತ್ತಿದ್ದೀರಿ. ಇಲ್ಲವಾದಲ್ಲಿ ಇಂದೇ ಆರಂಬಿಸಿ ಮತ್ತು ದೈನಂದಿನ ಜೀವನದಲ್ಲಿ ಸಮಸ್ಯೆ ಉಂಟುಮಾಡುವ ಅನಗತ್ಯ ಒತ್ತಡ ಮಟ್ಟವನ್ನು ನಿವಾರಿಸುವ ಆಹಾರ ಕ್ರಮ ಪಾಲಿಸಿ.



Click it and Unblock the Notifications
