Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡಲು ನೈಸರ್ಗಿಕ ವಿಧಾನಗಳು
ರಕ್ತದ ಒತ್ತಡವನ್ನು ಸುಸ್ಥಿತಿಯಲ್ಲಿಡಲು ಮುಖ್ಯವಾಗಿ ನಮ್ಮ ಮಾನಸಿಕ ಒತ್ತಡವನ್ನು ಹತೋಟಿಯಲ್ಲಿಡಬೇಕು. ಈ ಸಮಯದಲ್ಲಿ ಮೆದುಳಿಗೆ ಹೆಚ್ಚಿನ ರಕ್ತಸಂಚಾರ ಅಗತ್ಯವಿರುವುದರಿಂದ ಹಾಗೂ ಇತರ ಅಂಗಗಳಿಗೆ ರಕ್ತಪೂರೈಕೆಯಲ್ಲಿ ವ್ಯತ್ಯಯ ಮಾಡಲು ಸಾಧ್ಯವಿಲ್ಲದಿರುವುದರಿಂದ ಹೃದಯಕ್ಕೆ ಅನಿವಾರ್ಯವಾಗಿ ಹೆಚ್ಚಿನ ಒತ್ತಡ ಬೀಳುತ್ತದೆ. ಮಾನಸಿಕ ಒತ್ತಡವನ್ನು ಹತೋಟಿಯಲ್ಲಿಡಲು ಹಲವು ವಿಧಾನಗಳಿವೆ. ಕೇವಲ ಬಯಸುವುದರಿಂದ ಒತ್ತಡ ಕಡಿಮೆಯಾಗುವುದಿಲ್ಲ. ಇಲ್ಲಿ ವಿವರಿಸಲಾಗಿರುವ ಸುಲಭ ವಿಧಾನಾಗಳಿಂದ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು.
ನಿಯಮಿತವಾಗಿ ವ್ಯಾಯಾಮ ಮಾಡಿ

ನಿಮ್ಮ ದಿನಚರಿ ಎಷ್ಟೇ ಬಿಗಿಯಾಗಿದ್ದರೂ ನಿಮಗಾಗಿ ದಿನದ ಕೊಂಚ ಸಮಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಒಂದು ವೇಳೆ ಸಮಯ ನೀಡದೇ ಇದ್ದರೆ ಮುಂದೊಂದು ದಿನ ನಿಮ್ಮ ಆರೋಗ್ಯ ನಿಮಗೆ ಸಮಯವನ್ನೇ ನೀಡದು. ಪ್ರತಿದಿನ ಸಾಧ್ಯವಾಗದಿದ್ದರೆ ವಾರಕ್ಕೆ ಐದು ದಿನವಾದರೂ ವ್ಯಾಯಾಮ ಮಾಡಿ. ಈ ಅವಧಿ ಪ್ರತಿದಿನ ಒಂದೇ ರೀತಿ ಇರಲಿ. ಒಂಟಿಯಾಗಿದ್ದಾಗ ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ?
ತೂಕ ಏರುವುದನ್ನು ತಪ್ಪಿಸಿ
ಆಗಾಗ ತೂಕ ನೋಡಿಕೊಳ್ಳಿ. ಏರುತ್ತಿರುವ ತೂಕಕ್ಕೆ ಅನಿಯಮಿತ ಊಟ, ಅತಿಹೆಚ್ಚಿನ ಪೌಷ್ಟಿಕ ಆಹಾರ ಸೇವನೆ, ಹೆಚ್ಚಿನ ಸಿದ್ಧ ಆಹಾರಗಳ ಸೇವನೆ ಮೊದಲಾದವು ಕಾರಣಗಳಾಗಿವೆ. ಸಾಧ್ಯವಾದಷ್ಟು ತೂಕವನ್ನು ಕಡಿಮೆಗೊಳಿಸಲು ಯತ್ನಿಸಿ.
ಸಮತೋಲನ ಆಹಾರ ಸೇವಿಸಿ
ನಿಮ್ಮ ದಿನದ ಆಹಾರ ಒಂದು ಸಮತೋಲನದಲ್ಲಿರಲಿ. ಮುಂಜಾನೆ ಲಘು ಉಪಾಹಾರ, ಮಧ್ಯಾಹ್ನ ಸಾಮಾನ್ಯ ಪ್ರಮಾಣದ ಊಟ ಹಾಗೂ ಕಡಿಮೆ ಪ್ರಮಾಣದ ರಾತ್ರಿಯೂಟ ಸೇವಿಸಿ. ನಿಮ್ಮ ಆಹಾರದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟು, ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಿರಲಿ.
ಅಗತ್ಯಕ್ಕಿಂತ ಹೆಚ್ಚು ಮದ್ಯಪಾನ ಬೇಡ
ಮದ್ಯಪಾನ ಬೇಡಬೇ ಬೇಡ. ಒಂದು ವೇಳೆ ಸಂಪೂರ್ಣವಾಗಿ ತ್ಯಜಿಸಲಾರದಷ್ಟು ವ್ಯಸನಿಯಾಗಿದ್ದರೆ ಕನಿಷ್ಟ ಪ್ರಮಾಣವನ್ನು ಮಾತ್ರ ಸೇವಿಸಿ. ಪುರುಷರು ಒಂದರಿಂದ ಎರಡು ಪೆಗ್ ಮತ್ತು ಮಹಿಳೆಯರು ಗರಿಷ್ಟ ಒಂದು ಪೆಗ್ ಮಾತ್ರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
ಧೂಮಪಾನ ತ್ಯಜಿಸಿ
ಧೂಮಪಾನ ಯಾವತ್ತಿಗೂ ಹಾನಿಕಾರಕವೇ. ಇದರ ಹೊಗೆಯಿಂದ ಸೇದುವವರ ಜೊತೆ ಅಕ್ಕಪಕ್ಕದವರೂ ಬಾಧಿಗೊಳಗಾಗುತ್ತಾರೆ. ಇದರಿಂದ ಶ್ವಾಸಕೋಶಗಳಿಗೆ ಹಾನಿಯುಂಟಾಗುವುದು ಮಾತ್ರವಲ್ಲ, ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಶ್ವಾಸಕೋಶಗಳು ಅಮ್ಲಜನಕವನ್ನು ಪೂರೈಸಲಾರದುದರಿಂದ ಹೃದಯ ಇರುವ ರಕ್ತವನ್ನೇ ಶೀಘ್ರವಾಗಿ ಬೇರೆ ಬೇರೆಡೆ ಕಳಿಸಬೇಕಾಗುತ್ತದೆ. ಇದು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ.



Click it and Unblock the Notifications




