ಪ್ರಾಣಾಯಾಮದ ಆರೋಗ್ಯ ಲಾಭಗಳು

By Hemanth P

ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಯೋಗದ ಜನನವಾಗಿತ್ತು ಮತ್ತು ಇದು ಮನುಷ್ಯನ ಮನಸ್ಸು, ದೇಹ ಮತ್ತು ಆತ್ಮಕ್ಕೆ ಒಳ್ಳೆಯದೆಂದು ವಿಶ್ವದೆಲ್ಲೆಡೆಯ ಜನರು ಒಪ್ಪಿಕೊಂಡಿದ್ದಾರೆ. ಯೋಗದಲ್ಲಿ ಹಲವಾರು ರೀತಿಯ ರೋಗಗಳನ್ನು ನಿವಾರಿಸುವ ಮತ್ತು ತಡೆಗಟ್ಟುವ ಶಕ್ತಿಯಿದೆ. ಇದೇ ವೇಳೆ ಅದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಪ್ರಾಣಾಯಾಮ ಯೋಗದ ಒಂದು ಅಂಗ. ಇದರಲ್ಲಿ ಉಸಿರಾಟ ಮತ್ತು ವಿಶ್ರಾಂತಿಗಿಂತ ಹೆಚ್ಚಿನ ಲಾಭವಿದೆ.

ಪ್ರಾಣಾಯಾಮ ಎನ್ನುವುದು ಪ್ರಾಣ' ಮತ್ತು ಆಯಾಮ'ದ ಸಂಗಮ. ಪ್ರಾಣವೆಂದರೆ ಶಕ್ತಿ ಮತ್ತು ಆಯಾಮವೆಂದರೆ ನಿಯಂತ್ರಣವೆಂದರ್ಥ. ಪ್ರಾಣಾಯಾಮವು ಒಳಬರುವ ಮತ್ತು ಹೊರಹೋಗುವ ಉಸಿರಾಟವನ್ನು ಅದರ ಧಾರಣಶಕ್ತಿಗೆ ಅನುಗುಣವಾಗಿ ನಿಯಂತ್ರಿಸುವುದು. ಪ್ರಾಣಾಯಾಮದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಪ್ರಾಣಾಯಾಮ ಮಾಡುವುದು ಹೇಗೆ?

ಬೇರೆ ಯಾವುದರಿಂದಲೂ ಇದನ್ನು ಪಡೆಯಲು ಸಾಧ್ಯವಿಲ್ಲ. ಈ ಉಸಿರಾಟದ ತಂತ್ರವು ನಿಮ್ಮ ಸಂಪೂರ್ಣ ಆರೋಗ್ಯವನ್ನು ಸುಧಾರಿಸುತ್ತದೆ. ದೈಹಿಕ ಹಾಗೂ ಮಾನಸಿಕ ಸಮತೋಲನ ಸಹಿತ ಪ್ರಾಣಾಯಾಮದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ.

Health Benefits Of Pranayama

ಪ್ರಾಣಾಯಾಮ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಾಣಾಯಾಮದ ಎಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬೇಕಾದರೆ ಸೂರ್ಯಮೂಡುವ ವೇಳೆ ಇದನ್ನು ಅಭ್ಯಾಸ ಮಾಡಬೇಕು. ಪ್ರಾಣಾಯಾಮ ಮಾಡುವಾಗ ಸರಿಯಾದ ತಂತ್ರವನ್ನು ಅನುಸರಿಸುವುದು ತುಂಬಾ ಮುಖ್ಯ.

ಪ್ರಾಣಾಯಾಮ ಪ್ರಯತ್ನಿಸುವ ಮೊದಲು ನೀವು ವೃತ್ತಿಪರ ಯೋಗ ತರಬೇತುದಾರರ ಸಲಹೆ ಪಡೆಯಬೇಕು. ಪ್ರಾಣಾಯಾಮದ ಕೆಲವೊಂದು ಆರೋಗ್ಯ ಲಾಭಗಳನ್ನು ಇಲ್ಲಿ ನೀಡಲಾಗಿದೆ.

ಶ್ವಾಸಕೋಶದ ಕಾರ್ಯಚಟುವಟಿಕೆ
ಇದು ಪ್ರಾಣಾಯಾಮದ ಅತ್ಯಂತ ಪ್ರಾಮುಖ್ಯ ಆರೋಗ್ಯ ಲಾಭ. ಪ್ರಾಣಾಯಾಮದಲ್ಲಿ ಉಸಿರಾಟದ ತಂತ್ರಗಳು ಇರುವುದರಿಂದ ಅದು ಶ್ವಾಸಕೋಶ ಒಳ್ಳೆಯ ರೀತಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಇರುವವರಿಗೆ ಇದು ತುಂಬಾ ಲಾಭಕಾರಿ.

ತೂಕ ಕಡಿಮೆ ಮಾಡುವುದು
ಪ್ರಾಣಾಯಾಮದ ಆರೋಗ್ಯ ಲಾಭ ಕೇವಲ ನಿಮ್ಮ ದೇಹದ ಒಳಗಿನ ಅಂಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಾಯಾಮವು ನಿಮ್ಮ ದೇಹದ ತೂಕ ಕೂಡ ಕಡಿಮೆ ಮಾಡುತ್ತದೆ ಎನ್ನುವುದು ಶುಭಸುದ್ದಿ. ನಿಯಮಿತವಾಗಿ ಪ್ರಾಣಾಯಾಮ ಅಭ್ಯಾಸ ಮಾಡಿ ಮತ್ತು ಪರಿಣಾಮ ನಿಮಗೆ ತಿಳಿಯಲಿದೆ.

ವಿಷಕಾರಿ ಅಂಶ ಹೊರಹಾಕುತ್ತದೆ
ಪ್ರಾಣಾಯಾಮವು ನಮ್ಮ ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಯೋಗದಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಪ್ರಾಣಾಯಾಮ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಖಿನ್ನತೆ ನಿವಾರಿಸುತ್ತದೆ
ಪ್ರಾಣಾಯಾಮದ ಆರೋಗ್ಯ ಲಾಭವು ಮಾನಸಿಕ ಬಲಕ್ಕೂ ವ್ಯಾಪಿಸಿದೆ. ನಿಯಮಿತವಾಗಿ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಖಿನ್ನತೆ ಮತ್ತು ಆತಂಕ ದೂರ ಮಾಡಬಹುದು. ವೃತ್ತಿಪರ ತರಬೇತುದಾರರಿಂದ ಕಲಿತ ಬಳಿಕ ಪ್ರಾಣಾಯಾಮ ಅಭ್ಯಾಸ ಮಾಡಿ.

ಮೂಗಿನ ಕಿರಿಕಿರಿ ತಪ್ಪಿಸುತ್ತದೆ
ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಉಸಿರುಕಟ್ಟಿಕೊಳ್ಳುವ ಮೂಗಿನ ಸಮಸ್ಯೆಯನ್ನು ಎದುರಿಸಬಹುದು. ಮೂಗಿನಲ್ಲಿ ಉಸಿರಾಟ ಸರಿಯಾಗುವಂತೆ ಮಾಡುವುದು ಪ್ರಾಣಾಯಾಮದ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

ಪ್ರತಿರೋಧಕ ವ್ಯವಸ್ಥೆ ಬಲಪಡಿಸುತ್ತದೆ
ನಿಮ್ಮ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಲು ಹಲವಾರು ವಿಧಾನಗಳನ್ನು ಪ್ರಯತ್ನಿಸಿದ್ದೀರಾ? ಹಾಗಾದರೆ ಈಗ ಪ್ರಾಣಾಯಾಮ ಪ್ರಯತ್ನಿಸುವ ಸಮಯ ಬಂದಿದೆ. ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಪ್ರಾಣಾಯಾಮದ ಅತಿ ಮುಖ್ಯ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

ಜೀರ್ಣಾಂಗ ಸಮಸ್ಯೆ ನಿವಾರಿಸುತ್ತದೆ
ಸರಿಯಾದ ಆರೋಗ್ಯ ಅಭ್ಯಾಸ ಪಾಲಿಸದಿರುವುದೇ ನಮ್ಮ ಆರೋಗ್ಯದಲ್ಲಿ ಅತೀ ಹೆಚ್ಚು ಸಮಸ್ಯೆ ಉಂಟುಮಾಡುತ್ತದೆ. ಪ್ರಾಣಾಯಾಮ ಮತ್ತು ಇತರ ಕೆಲವೊಂದು ಆಸನಗಳಿಂದ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಬಗೆಹರಿಸಬಹುದು. ನಿಮಗೆ ಜೀರ್ಣಾಂಗ ವ್ಯವಸ್ಥೆ ಸಮಸ್ಯೆಯಿದ್ದರೆ ನಿಯಮಿತವಾಗಿ ಪ್ರಾಣಾಯಾಮ ಮಾಡಿ.

ಹೃದಯದ ಆರೋಗ್ಯ ಸುಧಾರಿಸುತ್ತದೆ
ಪ್ರಾಣಾಯಾಮದ ತಂತ್ರಗಳಾದ ಅನುಲೊಮ್ ವಿಲೊಮ್ ಮತ್ತು ಭಸ್ತ್ರಿಕಾ ದೇಹದಲ್ಲಿ ಹೃದಯದ ಚಟುವಟಿಕೆಗೆ ತುಂಬಾ ನೆರವಾಗುತ್ತದೆ. ಇದು ರಕ್ತಪರಿಚಲನೆ ಮತ್ತು ರಕ್ತದಲ್ಲಿ ಆಮ್ಲಜನಕ ಸಾಗಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಮಾನಸಿಕ ಏಕಾಗ್ರತೆ ಹೆಚ್ಚಳ
ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಪ್ರಾಣಾಯಾಮ ಅತ್ಯುತ್ತಮ ವಿಧಾನ. ಇದು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಮಾನಸಿಕ ಏಕಾಗ್ರತೆ ಪ್ರಾಣಾಯಾಮದ ಅತೀ ಮುಖ್ಯ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

ಸೈನುಟಿಸ್ ವಿರುದ್ಧ ಹೋರಾಡುತ್ತದೆ
ಸೈನುಟಿಸ್ ಗೆ ಚಿಕಿತ್ಸೆ ನೀಡುವುದು ಪ್ರಾಣಾಯಾಮದ ಅತೀ ಮುಖ್ಯ ಆರೋಗ್ಯ ಲಾಭಗಳಲ್ಲಿ ಒಂದು. ಪ್ರಾಣಾಯಾಮದ ಒಂದು ತಂತ್ರವಾಗಿರುವ ಭಸ್ತ್ರಿಕಾವನ್ನು ಅಭ್ಯಾಸ ಮಾಡುವುದರಿಂದ ಸೈನುಟಿಸ್ ನಿವಾರಿಸಬಹುದು ಅಥವಾ ತಡೆಗಟ್ಟಬಹುದು. ಇದನ್ನು ಪ್ರಯತ್ನಿಸಿ ಮತ್ತು ವ್ಯತ್ಯಾಸ ಗಮನಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Friday, January 10, 2014, 19:02 [IST]
X
Desktop Bottom Promotion