Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲಕ್ಕೆ ದೇಹವನ್ನು ಬೆಚ್ಚಗಿಡುವ ಉತ್ತಮ ಆಹಾರ ಪದಾರ್ಥಗಳು
ಅತಿಯಾದ ಚಳಿಯನ್ನು ತಡೆಯಲು ಚಳಿಗಾಲದಲ್ಲಿ ಜನರು ಸಾಕಷ್ಟು ಎಚ್ಚರಿಕೆವಹಿಸಬೇಕಾಗುತ್ತದೆ. ಚಳಿಗಾಲಕ್ಕೆ ತಕ್ಕ ಬಟ್ಟೆಗಳ ಜೊತೆಗೆ ಈ ಸಮಯದಲ್ಲಿ ಸೂಕ್ತ ಆಹಾರವನ್ನು ತೆಗೆದುಕೊಳ್ಳುವುದು ಕೂಡ ಮುಖ್ಯ.ಚಳಿಗಾಲದಲ್ಲಿ ಸಾಕಷ್ಟು ಜನರಿಗೆ ರಕ್ತದೊತ್ತಡ ಕಡಿಮೆ ಆಗಿಬಿಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ರಕ್ತದ ph ಪ್ರಮಾಣ ಹೆಚ್ಚು ಆಮ್ಲೀಯ ಆಗುವ ಸಂಭವವಿರುತ್ತದೆ. ಆಗ ಹೆಚ್ಚು ಸ್ವೆಟರ್ ಗಳನ್ನು ಬಳಸಿ ಬೆಚ್ಚಗಿರಲು ಪ್ರಯತ್ನಿಸಬಹುದು ಆದರೆ ಕೇವಲ ಸ್ವೆಟರ್ ತೊಟ್ಟು ಬೆಚ್ಚಗಿರುವುದು ಪರಿಹಾರವಲ್ಲ.ಇಂತಹ ಸಂದರ್ಭದಲ್ಲಿ ದೇಹದ ಒಳಗಿನಿಂದ ಬಿಸಿಯಾಗಿರುವುದು ಕೂಡ ಮುಖ್ಯ.
ದೇಹದ ಒಳಗಿನಿಂದ ಕೂಡ ಬೆಚ್ಚಗಾಗುವಂತೆ ಮಾಡುವ ಆಹಾರವನ್ನು ಸೇವಿಸುವುದರಿಂದ ಚಳಿಗಾಲ ನಿಮಗೆ ಸುಖಕರವಾಗಿರಬಹುದು.ಚಳಿಗಾಲದಲ್ಲಿ ಈ ಸೂಕ್ತ ಆಹಾರವನ್ನು ಸೇವಿಸುವುದರಿಂದ ನಿಮಗೆ ಬೆಚ್ಚಗಿನ ಅನುಭವವಾಗುತ್ತದೆ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಅಡುಗೆಯಲ್ಲಿ ಬಳಸಬೇಕಾದ ಕೆಲವು ಪದಾರ್ಥಗಳು:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು

ಬೆಳ್ಳುಳ್ಳಿ:
ಹೆಚ್ಚು ಕೊಲೆಸ್ಟ್ರಾಲ್ ಹೊಂದಿದ ವ್ಯಕ್ತಿ ಬೆಳ್ಳುಳ್ಳಿಯನ್ನು ಸಾಕಷ್ಟು ಬಳಸಬೇಕು ಎಂದು ವೈದ್ಯರು ಹೇಳುತ್ತಾರೆ.ಇದರ ಇನ್ನೊಂದು ಉಪಯೋಗವೆಂದರೆ ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ. ಚಳಿಗಾಲದಲ್ಲಿ ಫ್ಲೂ ಮತ್ತು ಕೆಮ್ಮು ಹೆಚ್ಚುವ ಸಂಭವವಿರುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯ ಗುಣಗಳಿರುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯದಿಂದ ಬರುವ ಸಾಕಷ್ಟು ಕಾಯಿಲೆಯಿಂದ ದೂರವಿರುವಂತೆ ಬೆಳ್ಳುಳ್ಳಿ ಮಾಡುತ್ತದೆ.ನಿಮಗೆ ಚಳಿಗಾಲದಲ್ಲಿ ಗಂಟಲು ಕೆರೆತ ಆರಂಭವಾದರೆ ತಕ್ಷಣ ೨ -೩ ಬೆಳ್ಳುಳ್ಳಿ ರಸ ಹೀರುವುದರಿಂದ ಗಂಟಲು ಕೆರೆತ ಹೋಗಲಾಡಿಸಬಹುದು.

ಜೇನುತುಪ್ಪ :
ನಿಮಗೆ ಚಳಿಗಾಲದಲ್ಲಿ ತಂಡಿ ಅಥವಾ ಕೆಮ್ಮು ಆರಂಭವಾದರೆ ಮನೆಯಲ್ಲಿ ಅಜ್ಜಿ ಜೇನುತುಪ್ಪ ತಿನ್ನಲು ಹೇಳಬಹುದು.ಇದು ಕೆಮ್ಮನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನ.ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಬಳಸುವುದರಿಂದ ಬರಬಹುದಾದ ಸಣ್ಣ ಪುಟ್ಟ ರೋಗದಿಂದ ದೂರವಿರಬಹುದು.ಸಕ್ಕರೆ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಚಳಿಗಾಲದಲ್ಲಿ ಸಕ್ಕರೆಯ ಬದಲು ಹೆಚ್ಚು ಜೇನುತುಪ್ಪ ಬಳಸುವುದರಿಂದ ಅರೋಗ್ಯಕರವಾಗಿರಬಹುದು. ಜೇನುತುಪ್ಪ ಬಳಸುವುದರಿಂದ ಹೆಚ್ಚಿನ ಕ್ಯಾಲೋರಿ ತಗ್ಗಿಸಬಹುದು ಮತ್ತು ಬೆಚ್ಚಗಿರಬಹುದು.

ಶುಂಟಿ:
ಭಾರತೀಯರ ಅಡುಗೆಮನೆಯಲ್ಲಿ ಶುಂಟಿ ಇದ್ದೇ ಇರುತ್ತದೆ ಇದು ಖಾದ್ಯದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇಷ್ಟೇ ಅಲ್ಲ ಚಳಿಗಾಲದಲ್ಲಿ ಇದನ್ನು ಬಳಸುವುದರಿಂದ ದೇಹದ ಒಳಗಿನಿಂದ ಕೂಡ ನೀವು ಬೆಚ್ಚಗಿರುವಂತೆ ಮಾಡುತ್ತದೆ. ಶುಂಟಿಯಲ್ಲಿರುವ ತರ್ಮೊಜೆನಿಕ್,ಜಿನ್ಜೆರಾಲ್ ಮತ್ತು ಶೋಗಾಲ್ ಗುಣಗಳು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತವೆ.ಚಳಿಗಾಲದಲ್ಲಿ ಒಣಗಿದ ಅಥವಾ ಹಸಿ ಶುಂಟಿಯನ್ನು ಉಪ್ಪಿನ ಜೊತೆ ತಿನ್ನುವುದರಿಂದ ಚಯಾಪಚಯ ಕ್ರಿಯೆಯನ್ನು ಕೂಡ ಹೆಚ್ಚಿಸುತ್ತದೆ.ದೇಹವನ್ನು ಬೆಚ್ಚಗಿಡಲು ಶುಂಟಿ ಟೀಯನ್ನು ಕೂಡ ಕುಡಿಯಬಹುದು.

ದಾಲ್ಚಿನ್ನಿ ಚಕ್ಕೆ :
ಭಾರತೀಯ ಅಡುಗೆ ಮನೆಗಳಲ್ಲಿ ದೊರೆಯುವ ಇನ್ನೊಂದು ಸಂಬಾರ ಪದಾರ್ಥವೆಂದರೆ ದಾಲ್ಚಿನ್ನಿ ಚಕ್ಕೆ. ಚಳಿಗಾಲದಲ್ಲಿ ಚಳಿಯನ್ನು ತಡೆದು ದೇಹವನ್ನು ಬೆಚ್ಚಗಿಡುವ ಗುಣ ಇದರಲ್ಲಿದೆ.ನೀವು ಅಡುಗೆಯಲ್ಲಿ ದಾಲ್ಚಿನ್ನಿ ಮೊಗ್ಗು ಮತ್ತು ಚಕ್ಕೆಯನ್ನು ಚಳಿಗಾಲದಲ್ಲಿ ಬಳಸಬಹುದು.ಕೆಲವರು ಟೀ ಮತ್ತು ಕಾಫಿ ಗೆ ಕೂಡ ಈ ಚಕ್ಕೆಯನ್ನು ಬಳಸುತ್ತಾರೆ.

ನಟ್ಸ್ :
ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ನಟ್ಸ್ ದೊರೆಯುತ್ತದೆ. ವಾಲ್ನಟ್,ಶೇಂಗ,ಬಾದಾಮಿ ಇವುಗಳೆಲ್ಲ ವಿಟಮಿನ್ ಮತ್ತು ಫೈಬರ್ ಜೊತೆಗೆ ದೇಹಕ್ಕೆ ಶಾಖ ಹೆಚ್ಚಿಸಲು ಸಹಕಾರಿಯಾಗಿದೆ.



Click it and Unblock the Notifications








