Latest Updates
-
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ!
ಕುಂಬಳಕಾಯಿ ಪ್ರೀತಿಸಲು, ಹಾಗೂ ತಿನ್ನಲು 9 ಕಾರಣಗಳು
ಅಮೆರಿಕಾದಲ್ಲಿ ಸಾಂಪ್ರದಾಯಿಕ ಅಡುಗೆಯಲ್ಲಿ ಕುಂಬಳಕಾಯಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಒಣಗಿಸಿ, ಶೇಖರಿಸಿ ಚಳಿಗಾಲದಲ್ಲಿ ಆಹಾರದ ಕೊರತೆಯಿರುವಾಗ ಬಳಸುತ್ತಾರೆ. ಕಡೆಗಣಿಸಲ್ಪಟ್ಟಿರುವ ಈ ಸೂಪರ್ ಫುಡ್ ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಲು ಕೆಲವೊಂದು ಕಾರಣಗಳಿವೆ.
ಕುಂಬಳಕಾಯಿ ಬೀಜದಲ್ಲಿರುವ ಅದ್ಭುತ ಗುಣಗಳ
ಕುಂಬಳಕಾಯಿಯನ್ನು ಪ್ರೀತಿಸಲು ಮತ್ತು ತಿನ್ನಲು ಇಲ್ಲಿ 9 ಕಾರಣಗಳಿವೆ.

1. ಇದರಲ್ಲಿ ಉನ್ನತ ಮಟ್ಟ ಸಂಕೀರ್ಣ ಕಾಬ್ರೋಹೈಡ್ರೇಟ್ಸ್(ಒಳ್ಳೆಯ ಕಾರ್ಬ್) ಇದ್ದು, ಇದು ದೇಹಕ್ಕೆ ಶಕ್ತಿ ನೀಡುತ್ತದೆ.
2. ಇದರಲ್ಲಿನ ನಾರಿನಾಂಶವು ಕರುಳಿನ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಒಂದು ಕಪ್ ಕುಂಬಳಕಾಯಿಯಲ್ಲಿ ಮೂರು ಗ್ರಾಂ ನಾರಿನಾಂಶವಿದೆ.
3. ಇದರಲ್ಲಿನ ಉನ್ನತ ಮಟ್ಟದ ನಾರಿನಾಂಶವು ತೂಕ ಕಳಕೊಳ್ಳಲು ನೆರವಾಗುತ್ತದೆ. ಅತಿಯಾದ ತೂಕ ಇರುವವರು ಇದನ್ನು ಆಹಾರ ಕ್ರಮದಲ್ಲಿ ಅಳವಡಿಸಿದರೆ ತೂಕ ಇಳಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ.
4. ಇದರ ಕಿತ್ತಳೆ ಬಣ್ಣದಲ್ಲಿ ಉನ್ನತ ಮಟ್ಟದ ಬೀಟಾ ಕ್ಯಾರೋಟಿನ್ ಅಂಶ ಹೊಂದಿದೆ. ಬೀಟಾ ಕ್ಯಾರೋಟಿನ್ ವಿಟಮಿನ್ ಎ ಯ ಮುನ್ಸೂಚಕ. ಇದು ಆರೋಗ್ಯಕರ ಪ್ರತಿರಕ್ಷಣೆ ಮತ್ತು ದೃಷ್ಟಿಗೆ ಅತೀ ಮುಖ್ಯ.
5. ಚರ್ಮದ ಚಿಕಿತ್ಸೆ, ಸೂರ್ಯನ ವಿಕಿರಣಗಳಿಂದ ರಕ್ಷಣೆ ಮತ್ತು ಮಸುಕಾಗುವ ಚರ್ಮಕ್ಕೆ ಸಹಾಯ ಮಾಡುತ್ತದೆ.
ಅಜೀರ್ಣ ಸಮಸ್ಯೆ ನಿವಾರಣೆಗೆ ಸೂಕ್ತ ಸಲಹೆಗಳು
6. ಕುಂಬಳಕಾಯಿಯಲ್ಲಿರುವ ಬಿಟಾ ಕ್ಯಾರೋಟಿನ್ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡುತ್ತದೆ. ಉನ್ನತ ಮಟ್ಟದ ಬಿಟಾ ಕ್ಯಾರೋಟಿನ್ ನನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಸ್ತನ, ಜನನಾಂಗ, ಶ್ವಾಸಕೋಶ, ಗರ್ಭಕಂಠ ಮತ್ತು ಚರ್ಮದ ಕ್ಯಾನ್ಸರ್ ನಂತಹ ಕೆಲವೊಂದು ಕ್ಯಾನ್ಸರ್ ಗಳ ಅಪಾಯ ಕಡಿಮೆ ಮಾಡುತ್ತದೆ.
7. ವರ್ಕ್ ಔಟ್ ಬಳಿಕ ಕುಂಬಳಕಾಯಿ ಎಲೆಕ್ಟ್ರೋಲೈಟ್ ಸಮತೋಲನಕ್ಕೆ ನೆರವಾಗುತ್ತದೆ. ಇದರಲ್ಲಿ ಬಾಳೆಹಣ್ಣಿಗಿಂತ ಹೆಚ್ಚಿನ ಪೊಟಾಶಿಯಂ ಇದೆ.(ಕುಂಬಳಕಾಯಿಯಲ್ಲಿ 564 ಮಿ.ಗ್ರಾಂ. ಪೊಟಾಶಿಯಂ ಮತ್ತು ಬಾಳೆಹಣ್ಣಿನಲ್ಲಿ 422 ಮಿ.ಗ್ರಾಂ ಪೊಟಾಶಿಯಂ ಇದೆ)
8. ಇದು ಶೀತ ಮತ್ತು ಜ್ವರ ಓಡಿಸಲು ನೆರವಾಗುತ್ತದೆ. ಒಂದು ಕಪ್ ಬೇಯಿಸಿದ ಕುಂಬಳಕಾಯಿಯಲ್ಲಿ 11 ಮಿ.ಗ್ರಾ. ವಿಟಮಿನ್ ಸಿ. ಇದೆ. ಕೆಲವೊಂದು ವಿವಾದಾತ್ಮಕ ವರದಿಗಳು ವಿಟಮಿನ್ ಸಿಯ ಸೋಂಕು ವಿರೋಧಿ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿವೆ. ಆದರೆ ಕೆಲವೊಂದು ಸಂಶೋಧನೆಗಳು ವಿಟಮಿನ್ ಸಿ ರೋಗನಿರೋಧಕ ಉತ್ತೇಜಿಸುವ ಗುಣಗಳನ್ನು ಹೊಂದಿದೆ ಎಂದು ಹೇಳಿವೆ.
9. ಕುಂಬಳಕಾಯಿಯಲ್ಲಿರುವ ಬಿಟಾ ಕ್ಯಾರೋಟಿನ್ ದೇಹದಲ್ಲಿನ ರೋಗನಿರೋಧಕ ಆರೋಗ್ಯ ಉತ್ತೇಜಿಸುತ್ತದೆ. ಎಚ್ಐವಿಯಿಂದ ಬಳಲುತ್ತಿರುವ ಜನರಲ್ಲಿ ನಡೆಸಿದ ಅಧ್ಯಯನದಂತೆ ಬಿಟಾ ಕ್ಯಾರೋಟಿನ್ ಸೇವನೆ ಮಾಡುವವರಲ್ಲಿ ಸೋಂಕಿನ ಅಪಾಯ ಕಡಿಮೆಯಾಗಿದೆ ಎಂದು ಪತ್ತೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
