ಕೈ ನೋವು ನಿವಾರಣೆಗೆ 6 ಮನೆಮದ್ದುಗಳು

By Poornima Heggade

ಅನಾರೋಗ್ಯ ಎಂದರೆ ಏಳಲಾರದ ಯಾವುದೋ ಕಾಯಿಲೆಯೇ ಆಗಿರಬೇಕೆಂದಿಲ್ಲ, ನಮ್ಮ ದೈನಂದಿನ ಕೆಲಸಗಳನ್ನು ಸರಿಯಾಗಿ ಮಾಡಲಾಗದ ಯಾವುದಾದರೂ ಸಣ್ಣ ಕಿರಿ ಕಿರಿ ಇದ್ದರೂ ಅದೂ ಅನಾರೋಗ್ಯವೇ. ಹೀಗೆ ಏನಾದರೂ ಸಣ್ಣ ಪುಟ್ಟ ನೀವು ಅಥವಾ ಬಾಧೆ ನಿಮ್ಮನ್ನು ಪಿಡಿಸಿದಾಗಷ್ಟೇ ನಿಮಗೆ ಅನ್ನಿಸುತ್ತದೆ ಆರೋಗ್ಯವೇ ಭಾಗ್ಯ ಎಂದು.

ಹೀಗೆಯೇ ಬಹಳ ಮಂದಿಯನ್ನು ಸತಾಯಿಸುವ ಒಂದು ಅನಾರೋಗ್ಯವೇ ಕೈ ಯ ಹಾಗೂ ಭುಜದ ಗಂಟು ನೋವು. ಇದನ್ನೇ ವೈದ್ಯಕೀಯವಾಗಿ ಆರ್ಥರೈಟಿಸ್ ಎನ್ನುತ್ತಾರೆ. ನಮ್ಮ ಮೂಳೆಗಳು ಒಂದು ಇನ್ನೊಂದನ್ನು ತಗುಲಿದಾಗ ಆಗುವ ನೋವು ಅನ್ನುವುದು ಇದರ ವ್ಯಾಖ್ಯಾನ.

ಕೆಲವೊಮ್ಮೆ ಆರ್ಥರೈಟಿಸ್ ಬಹಳ ತೊಂದರೆ ಕೊಡದಿದ್ದರೆ ಮತ್ತೂ ಕೆಲವರಿಗೆ ಇದು ಬಹಳ ತೀವ್ರವಾಗಿರುತ್ತದೆ. ಹೀಗೆ ಇದು ಬಹಳ ದಿನಗಳವರೆಗೆ ನಿಮ್ಮ ಬೆನ್ನು ಬಿಡದೇ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉಚಿತ. ಅಲ್ಲಿಯತನಕ ಇದನ್ನು ಗುಣಪಡಿಸಲು ಮನೆಯಲ್ಲೇ ಮಾಡಬಹುದಾದ ಕೆಲವು ಗೃಹೋಪಾಯಗಳನ್ನು ಮಾಡಿ ನೋಡಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಲೂ ಜ್ಯೂಸಿನಲ್ಲಿರುವ ಸತ್ವಗಳ ಸತ್ಯಾಂಶಗಳೇನು?

ಅಂತಹ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ಒಮ್ಮೆ ನೋಡಿ:

1.ಹೆಚ್ಚಿನ ತೂಕ

1.ಹೆಚ್ಚಿನ ತೂಕ

ಹೆಚ್ಚಾದ ದೇಹ ತೂಕ ನಮ್ಮ ಸ್ನಾಯುಗಳ ನೋವಿಗೆ ಹಾಗೂ ಕೀಲುಗಳ ಬೇನೆಗೆ ಕಾರಣ. ತೂಕ ಹೆಚ್ಚಾದಂತೆ ನಮ್ಮ ಸ್ನಾಯುಗಳು ಬೇಗನೆ ಸವೆಯುತ್ತವೆ. ಇದು ನೋವನ್ನು ಜಾಸ್ತಿ ಮಾಡುತ್ತದೆ. ಸ್ವಲ್ಪ ತೂಕವನ್ನು ಕಡಿಮೆ ಮಾಡಿಕೊಂಡರೆ ನೋವು ಒಮ್ಮೆಗೆ ಉಪಶಮನ ಆಗುತ್ತದೆ. ಆದರೆ ತೂಕ ಕಡಿಮೆ ಮಾಡಲೇ ಬೇಕೆಂದು ನಿಮ್ಮ ಮೇಲೆ ಬಹಳ ಒತ್ತಡವನ್ನು ಹಾಕಿಕೊಳ್ಳಬೇಡಿ. ಸಾಮಾನ್ಯವಾದ ವ್ಯಾಯಾಮ ಹಾಗೂ ಆಹಾರ ನಿಯಂತ್ರಣವಷ್ಟೇ ಸಾಕು.

2.ತ್ವರಿತ ವ್ಯಾಯಾಮ

2.ತ್ವರಿತ ವ್ಯಾಯಾಮ

ನಿಮ್ಮ ನೋವು ಬೇಗನೇ ಮಾಯವಾಗಬೇಕು ಎಂದಾದರೆ ಕೆಲವು ಸಣ್ಣ ವ್ಯಾಯಾಮಗಳಿವೆ ಅವನ್ನು ನೀವು ಮಾಡಿದ ಕೂಡಲೆ ನಿಮ್ಮ ನೋವು ಮಾಯವಾಗುತ್ತದೆ. ಇವು ಸಾಮಾನ್ಯವಾಗಿ ಸ್ಟ್ರೆಚಿಂಗ್ ವ್ಯಾಯಾಮಗಳು ಇವು ಸ್ನಾಯುಗಳಲ್ಲಿನ ಒತ್ತಡವನ್ನು ನಿವಾರಿಸುತ್ತವೆ. ಮಣಿಕಟ್ಟನ್ನು ವೃತ್ತಾಕಾರವಾಗಿ ಸುತ್ತುವುದು ಅವುಗಳಲ್ಲಿ ಒಂದು. ಇವು ಬಹಳ ಸುಲಭವಾದ ವ್ಯಾಯಾಮಗಳು ಹಾಗೂ ಯಾವುದೇ ಇತರ ಸಲಕರಣೆಗಳ ಅಗತ್ಯ ಇಲ್ಲ.

3.ನೋವು ನಿವಾರಕ ಜೆಲ್ ಹಾಗೂ ಕ್ರೀಮ್ ಗಳು

3.ನೋವು ನಿವಾರಕ ಜೆಲ್ ಹಾಗೂ ಕ್ರೀಮ್ ಗಳು

ಮೆಂಥಾಲ್ ಯುಕ್ತ ಕ್ರೀಮ್ ಹಾಗೂ ಜೆಲ್ ಗಳು ನಿಮ್ಮ ಆರ್ಥರೈಟಿಸ್ ನೋವಿನ ಮೇಲೆ ಬಹಳ ಉತ್ತಮ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ನಿಮಗೆ ಸರಿಹೊಂದುವ ಕ್ರೀಮ್ ಅನ್ನು ಆಯ್ಕೆ ಮಾಡು ಹಾಗೂ ಹಚ್ಚಿಕೊಳ್ಳಿ. ಸಾಮಾನ್ಯವಾಗಿ ಇಂತಹ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಇವು ಬಹಳ ಮಟ್ಟಿಗೆ ನಿಮ್ಮ ಕೈ ಹಾಗೂ ಬೆರಳುಗಳ ನೋವನ್ನು ಕಡಿಮೆ ಮಾಡುತ್ತದೆ.

4.ಮಸಾಜ್

4.ಮಸಾಜ್

ಮಿನರಲ್ ತೈಲದಿಂದ ಮಸಾಜ್ ಮಾಡುವುದು ಸಂಧಿವಾತ, ಕೈ ಬೆರಳುಗಳ ನೋವುಗಳಿಗೆ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ. ತೈಲ ಮಸಾಜ್ ನೋವು ಮತ್ತು ಉರಿಯನ್ನು ಸಹ ಶಮನಗೊಳಿಸುತ್ತದೆ. ನಿಯಮಿತವಾಗಿ ಮಸಾಜ್ ಮಾಡುವುದರಿಂದ ಕ್ರಮೇಣ ನೋವು ಕಡಿಮೆಯಾಗುತ್ತದೆ. ತಾಳೆ ಎಣ್ಣೆ, ಆಲಿವ್ ತೈಲ ಮತ್ತು ಕೊಬ್ಬರಿ ಎಣ್ಣೆ ಹಾಗೂ ಇತರ ಖನಿಜ ತೈಲಗಳನ್ನು ಈ ಉದ್ದೇಶಕ್ಕಾಗಿ ಬಳಸಬಹುದು. ಬಿಸಿ ಎಣ್ಣೆ ಮಸಾಜ್ ಸಂಧಿವಾತದ ನೋವಿಗೆ ಪರಿಹಾರ ಒದಗಿಸಲು ತುಂಬಾ ಒಳ್ಳೆಯದು. ವಿಶೇಷ ಮಸಾಲೆಗಳನ್ನು ಬೆರೆಸಿದ ಹದವಾಗಿ ತೈಲಗಳು ಕೂಡ ಸಂಧಿವಾತ ನೋವು ಕಡಿಮೆ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ.

5.ಶುಂಠಿ ರಸ

5.ಶುಂಠಿ ರಸ

ಶುಂಠಿ ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದೆ. ಶುಂಠಿ ರಸ ದೈನಂದಿನ ಆಹಾರದ ಜೊತೆಗೆ ಸೇವಿಸುವುದರಿಂದ ಸಂಧಿವಾತದ ನೋವು ಕಡಿಮೆ ಮಾಡಲು ಸಹಕಾರಿ. ಶುಂಠಿ ಜಂಟಿ ನೋವು ಮತ್ತು ಸ್ನಾಯು ನೋವು ಕಡಿಮೆ ಅನುಕೂಲಕರ. ಶುಂಠಿ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಶುಂಠಿ ರಸ ಕೈಗಳು ಮತ್ತು ಬೆರಳುಗಳ ಸಂಧಿವಾತ ನೋವು ನಿವಾರಿಸಲು ಗೃಹಾಧಾರಿತ ಪರಿಹಾರ.

6.ಸ್ಟ್ರೀಮ್ ಚಿಕಿತ್ಸೆ

6.ಸ್ಟ್ರೀಮ್ ಚಿಕಿತ್ಸೆ

ನೋವಿನಿಂದ ತ್ವರಿತ ಪರಿಹಾರಕ್ಕಾಗಿ, ಹಬೆ ಸ್ನಾನ ಅಥವಾ ನಿಮ್ಮ ಕೈಗಳಿಗೆ ಬಿಸಿ ಹಬೆ/ನೀರಿನ ಬ್ಯಾಗ್ ಬಳಸಿ. ಬಿಸಿ ಆವಿ ಅಥವಾ ಬಿಸಿ ನೀರಿನ ಬ್ಯಾಗ್ ಸಂಧಿವಾತ ನೋವಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ಇದು ಆರ್ಥರೈಟಿಸ್ ನೋವನ್ನು ಉಪಶಮನ ಮಾಡುವ ಸುಲಭವಾದ ಮನೆಯಲ್ಲೇ ತಯಾರಿಸಬಹುದುದಾದ ಪರಿಹಾರಗಳಲ್ಲಿ ಒಂದಾಗಿದೆ. ನೀವು ಯಾವುದೇ ಹಾನಿಯಾಗದಂತೆ ನಿಯಮಿತವಾಗಿ ಈ ವಿಧಾನವನ್ನು ಬಳಸಬಹುದು.

X
Desktop Bottom Promotion