Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನೀವು ನಿರ್ಲಕ್ಷಿಸಬಾರದ ಆರು ಲಿವರ್ (ಯಕೃತ್ತು)ಕಾಯಿಲೆಯ ಲಕ್ಷಣಗಳು
ನಮ್ಮ ದೇಹದ ಸುಮಾರು ೫೦೦ ಬೇರೆಬೇರೆ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಮುಖ್ಯ ಅಂಗ ಯಕೃತ್ (ಲಿವರ್).ಲಿವರ್ ಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ(ಅಲ್ಕೋಹಾಲ್, ಸಿಗರೇಟ್ ಅಥವಾ ಇನ್ನಿತರ ಕೆಟ್ಟ ಚಟಗಳಿಂದ)ಅದು ಇಡೀ ದೇಹದ ಆರೋಗ್ಯವನ್ನು ಹದಗೆಡಿಸಿಬಿಡುತ್ತದೆ.ಯಕೃತ್ ಕಾಯಿಲೆಯ ಕೆಲವು ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ.
ಇಂತಹ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಪರಿಹಾರ ತೆಗೆದುಕೊಳ್ಳುವುದು ಜೀವ ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸ.ಆದ್ದರಿಂದ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಒಳಿತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

ತಲೆಸುತ್ತುವಿಕೆ ಮತ್ತು ವಾಂತಿ:
ಸಾಕಷ್ಟು ಕಾಯಿಲೆಗಳಿಗೆ ವಾಂತಿ ಮತ್ತು ಸಲೆಸುತ್ತುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ.ತಲೆಸುತ್ತಿವಿಕೆ ಹೆಚ್ಚಿದಂತೆ ವಾಂತಿ ಜೊತೆಗೆ ಬೆವರುವಿಕೆ ಕಾಣಿಸಿಕೊಳ್ಳುತ್ತದೆ.ನೀವು ಸೇವಿಸಿದ ಆಹಾರ ಬಾಯಿಯ ಮೂಲಕ ಹೊರಬರುವುದರ ಜೊತೆಗೆ ಇದು ತುಂಬಾ ಸುಸ್ತು ಮಾಡಿಸಿಬಿಡುತ್ತದೆ.ಇಂತಹ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಹೋಗುವುದು ಸೂಕ್ತ.

ಹೊಟ್ಟೆ ಮೇಲ್ಬದಿಯ ಬಲಭಾಗದಲ್ಲಿ ನೋವು:
ಹೊಟ್ಟೆಯ ಬಲ ಮೇಲ್ಭಾಗದಲ್ಲಿ ನಿಮ್ಮ ಯಕೃತ್ ಇದೆ.ಈ ಭಾಗದಲ್ಲಿ ನಿಮಗೆ ನೋವು ಕಾಣಿಸಿಕೊಂಡರೆ ಅದು ಲಿವರ್ ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು ಆದ್ದರಿಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಅಜೀರ್ಣ:
ಜೀರ್ಣಕ್ರಿಯೆ ನಡೆಯಲು ಯಕೃತ್ ಪ್ರಮುಖ ಅಂಗವಾದ್ದರಿಂದ ಲಿವರ್ ಗೆ ಯಾವುದೇ ರೀತಿಯ ಹಾನಿಯಾದರೆ ಇದು ಜೀರ್ಣಕ್ರಿಯೆಯನ್ನು ಖಡಿತಗೊಳಿಸುತ್ತದೆ.ನಿಮಗೆ ಇಂತಹ ಸಮಯದಲ್ಲಿ ಊಟ ಮಾಡಲು ಆಗದಿರಬಹುದು ಅಥವಾ ಹೊಟ್ಟೆಯಲ್ಲಿ ಸುಡುವ ಅನುಭವವಾಗಬಹುದು.

ದುರ್ಬಲತೆ ಮತ್ತು ಸುಸ್ತು:
ದೇಹಕ್ಕೆ ಬೇಕಾದ ಖನಿಜಾಂಶಗಳು,ವಿಟಮಿನ್ ಇವುಗಳನ್ನು ಲಿವರ್ ಹೀರಿಕೊಳ್ಳುತ್ತದೆ.ಲಿವರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಇವುಗಳ ಕೊರತೆಯಿಂದಾಗಿ ಸುಸ್ತು ಮತ್ತು ದುರ್ಬಲತೆ ಕಾಣಿಸಿಕೊಳ್ಳಬಹುದು.

ತೂಕ ಕಳೆದುಕೊಳ್ಳುವಿಕೆ:
ಸಾಕಷ್ಟು ಬಾರಿ ಯಕೃತ್ ನ ರೋಗ ಜೀರ್ಣಕ್ರಿಯೆಯಾಗುವುದನ್ನು ನಿಲ್ಲಿಸಿದಾಗ ನಿಮಗೆ ಹಸಿವಾಗುವುದು ಕೂಡ ನಿಂತುಬಿಡಬಹುದು.ಈ ಕಾರಣಕ್ಕೆ ನೀವು ಅತಿಬೇಗ ತೂಕ ಕಳೆದುಕೊಳ್ಳಬಹುದು.

ಚರ್ಚ ಹಳದಿ ಬಣ್ಣ ಪಡೆಯುವುದು:
ಲಿವರ್ ಕ್ಯಾನ್ಸರ್ ರೋಗ ಬಂದರೆ ಚರ್ಮ ಮತ್ತು ಕಣ್ಣು ಹಳದಿ ಬಣ್ಣ ತಲುಪಿ ಕಾಮಾಲೆ ರೋಗ ಕಾಣಿಸಿಕೊಳ್ಳಬಹುದು.ಯಕೃತ್ ನ ರೋಗಗಳಿಂದ ದೇಹಕ್ಕೆ ಇತರ ಹಾನಿಯೂ ಆಗಬಹುದು ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಕಾಣುವುದು ಸೂಕ್ತ.
ಈ ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಂಡರೆ ಕಡೆಗಣಿಸದೆ ವೈದ್ಯರನ್ನು ಕಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.



Click it and Unblock the Notifications
