Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ದೇಹವನ್ನು ತೆಳ್ಳಗಾಗಿಸುವ ಮನೆ ಮದ್ದುಗಳಿವು
ದೇಹದ ತೂಕ ಕಮ್ಮಿ ಮಾಡುವುದು ಮತ್ತು ದೇಹದಲ್ಲಿರುವ ಕಲ್ಮಶವನ್ನು ಹೊರ ಹಾಕುವುದು ಎರಡು ಬೇರೆ-ಬೇರೆಯಾದ ಕಾನ್ಸೆಪ್ಟ್. ಜಂಕ್ ಫುಡ್ಸ್ ಒಳ್ಳೆಯದಲ್ಲಾ ಎಂದು ಗೊತ್ತಿದ್ದೂ ಅದನ್ನು ನೋಡುವಾಗ ಆಸೆ ತಡೆಯಲಾರದೆ ತಿನ್ನುತ್ತೇವೆ. ಅದರ ಪ್ರಭಾವ ನಮ್ಮ ದೇಹದ ಮೇಲೆ ಕಾಣಲಾರಂಭಿಸುತ್ತದೆ. ಕೊಬ್ಬಿನಂಶ ದೇಹದಲ್ಲಿ ಸಂಗ್ರಹವಾಗಿ ದೇಹದ ತೂಕ ಹೆಚ್ಚಾಗುವುದು.
ದೇಹದಲ್ಲಿರುವ ಬೇಡದ ಕೊಬ್ಬಿನಂಶ ಮತ್ತು ಕಲ್ಮಶಗಳನ್ನು ಕೆಲವು ಮನೆ ಮದ್ದಿನ ಮುಖಾಂತರ ಹೊರ ಹಾಕಬಹುದು. ಇದು ದೇಹವನ್ನು ಶುದ್ಧ ಮಾಡುವುದರ ಜೊತೆ ಅಧಿಕ ಕೊಬ್ಬಿನಂಶವನ್ನು ಕರಗಿಸುವುದು. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಒದಿ:

ನಿಂಬೆ ರಸವನ್ನು ಬಿಸಿ ನೀರಿನ ಜೊತೆ ಹಾಕಿ ಕುಡಿಯುವುದು
ಪ್ರತೀದಿನ ಬೆಳಗ್ಗೆ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ ಕುಡಿಯಬೇಕು. ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದರ ಜೊತೆಗೆ, ಅಧಿಕ ಕೊಬ್ಬಿನಂಶ ಕಡಿಮೆಯಾಗುವುದು, ತ್ವಚೆಯ ಕಾಂತಿ ಹೆಚ್ಚುವುದು.

ಗ್ರೀನ್ ಟೀ
ಗ್ರೀನ್ ಟೀಯಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಕ್ಕರೆ ಹಾಕಿ ಕುಡಿಯದಿರುವುದು ಒಳ್ಳೆಯದು. ಸಕ್ಕರೆ ಬದಲು ಜೇನು ಹಾಕಿ, ಸ್ವಲ್ಪ ನಿಂಬೆ ರಸ ಹಿಂಡಿದರೆ ಗ್ರೀನ್ ಟೀ ಕುಡಿಯಲು ರುಚಿಕರವಾಗಿರುತ್ತದೆ.

ಸೋರೆಕಾಯಿ ಜ್ಯೂಸ್
ದೇಹದ ತೂಕ ಕಮ್ಮಿಯಾಗಬೇಕೆಂದು ಬಯಸುವವರು ಸೋರೆಕಾಯಿ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಅಧಿಕ ತೂಕವನ್ನು ಕಮ್ಮಿ ಮಾಡಿ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಕೂಡ ತೂಕ ಇಳಿಸುವಲ್ಲಿ ತುಂಬಾ ಸಹಕಾರಿ. ಒಂದು ಚಮಚ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ. ಈ ರೀತಿ ದಿನದಲ್ಲಿ ಎರಡು ಬಾರಿ ಕುಡಿಯುತ್ತಾ ಬಂದರೆ ಅಧಿಕ ತೂಕದಿಂದ ಸಾಮಾನ್ಯ ತೂಕಕ್ಕೆ ಬರಲು ಕೆಲವೇ ತಿಂಗಳು ಸಾಕು.

ಬೆರ್ರಿ ಜ್ಯೂಸ್
ಯಾವುದೇ ಬೆರ್ರಿ ಜ್ಯೂಸ್ ಆಗಿರಲಿ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಬೆರ್ರಿ ಫ್ರೂಟ್ ಡಯಟ್ ಮಾಡಿ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು.

ಮೇಪಲ್ ಸಿರಪ್ ಮತ್ತು ನೀರು (Maple Syrup)
ಮೇಪಲ್ ಸಿರಪ್ ಅನ್ನು ಬಿಸಿ ನೀರಿನಲ್ಲಿ ಕರಗಿಸಿ ಕುಡಿದರೆ ದೇಹದ ತೂಕ ಕಮ್ಮಿಯಾಗುವುದು. ಮೇಪಲ್ ಸಿರಪ್ ಬೆಂಗಳೂರಿನಲ್ಲಿ ಬ್ರಿಗೇಡ್ , ಜಯಾನಗರದಲ್ಲಿರುವ ನೀಲ್ ಗಿರೀಸ್ ನಲ್ಲಿ ಅಥವಾ ಕಮರ್ಷೀಯಲ್ ಸ್ಟ್ರೀಟ್ ನಲ್ಲಿರುವ ಡಾಲರ್ ಸ್ಟೋರ್ ನಲ್ಲಿ ಕೇಳಿ ನೋಡಿ ಸಿಗಬಹುದು.

ಬೇಯಿಸಿದ ಆಪಲ್
ಆಪಲ್ ಅನ್ನು ಹಾಗೇ ತಿನ್ನುವುದಕ್ಕಿಂತ ಬೇಯಿಸಿ ತಿಂದರೆ ತುಂಬಾ ಒಳ್ಳೆಯದು. ಅಲ್ಲದೆ ಬೇಯಿಸಿದ ಸೇಬು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ದೇಹದ ತೂಕವನ್ನು ಕಮ್ಮಿ ಮಾಡುವಲ್ಲಿ ಸಹಕಾರಿಯಾಗಿದೆ.

ಕರಿ ಮೆಣಸಿನ ಪುಡಿ ಮತ್ತು ಶುಂಠಿ
ಸ್ವಲ್ಪ ಕರಿ ಮೆಣಸು ಮತ್ತು ಶುಂಠಿಯನ್ನು ಪುಡಿ ಮಾಡಿ ತಿಂದರೆ ಇವುಗಳು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ದೇಹದ ತೂಕವನ್ನು ಕಮ್ಮಿ ಮಾಡುವಲ್ಲಿ ಸಹಕಾರಿಯಾಗಿದೆ.



Click it and Unblock the Notifications