Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ರಹದಾರಿ
ಬಾಲ್ಯದ ಆಟ ಆ ಸೈಕಲೋಟ ಇನ್ನು ಮರೆತಿಲ್ಲ. ನಿಜ ಸೈಕಲ್ ಹೊಡೆಯಲು ಕಲಿತ ಆ ದಿನಗಳು ಮರೆಯಲಾಗದ ಸವಿ ಸವಿ ನೆನಪು. ಆದರೆ ಈ ವೇಗದ ಜಮಾನದಲ್ಲಿ ಸೈಕಲ್ ಗೆಲ್ಲಿ ಜಾಗ ಅಂತೀರಾ? ಮಾಡ್ಕೊಬೇಕು ಸ್ವಾಮಿ ಸಮಯ ಮಾಡ್ಕೊಬೇಕು. ಯಾಕೆ ಅಂತೀರಾ ಸೈಕಲ್ ಹೊಡೆಯೋದರಿಂದ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವ ಆರೋಗ್ಯ ಮತ್ತು ಪರಿಸರದ ಕಾಳಜಿಯಿಂದಾಗಿ ಸೈಕಲ್ ಗಳು ಮತ್ತೆ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಸಹ ಕೆಲವು ಪ್ರದೇಶಗಳಲ್ಲಿ ಸೈಕಲ್ ಪಥಗಳನ್ನು ನಿರ್ಮಿಸುವ ಪ್ರಯತ್ನ ಮಾಡಿದೆ. ಸೈಕಲ್ ಪರಿಸರ ಸ್ನೇಹಿ, ಆರೋಗ್ಯ ಮಿತ್ರ ಮತ್ತು ಮಿತವ್ಯಯಕಾರಿ. ಇದನ್ನು ವರ್ಷದ ಎಲ್ಲ ಕಾಲಗಳಲ್ಲೂ ಬಳಸಬಹುದು. ಇದರ ನಿರ್ವಹಣೆ ಸಹ ತುಂಬ ಸುಲಭ.
ಈಗ ಸೈಕಲ್ ಬಳಕೆಯಿಂದ ನಮಗೆ ಯಾವ ರೀತಿಯ ಪ್ರಯೋಜನಗಳಿದೆ ಅಂತ ತಿಳಿದುಕೊಳ್ಳೋಣ. ಸೈಕಲಿಂಗ್ ನಿಮ್ಮ ಇಡೀ ದೇಹಕ್ಕೆ ವ್ಯಾಯಾಮ ಒದಗಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ. ರಕ್ತಪರಿಚಲನೆಯನ್ನು ಹೆಚ್ಚಿಸುತ್ತೆ, ನಿಮ್ಮ ಮಾಂಸಖಂಡಗಳನ್ನು ಹುರಿಗೊಳಿಸುತ್ತದೆ. ದೇಹದ ತೂಕ ಇಳಿಸುವಲ್ಲಿ ಪರಿಣಾಮಕಾರಿ. ಮುಖ್ಯವಾಗಿ ಹೃದಯ ಸಂಬಂಧಿ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತೆ.
ನಿಮಗೆ ಗೊತ್ತಾ ಸೈಕಲ್ ಸವಾರಿಯಿಂದ ಮನಸಿನ ಸ್ವಾಸ್ಥ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ನಿಮಗೆ ಬೇಸರವಾಗಿದ್ದಾಗ, ಕೋಪ ಬಂದಾಗ, ಖಿನ್ನತೆ ಕಾಡಿದಾಗ ಸೈಕಲ್ ತುಳಿದು ನೋಡಿ. ನಿಮ್ಮ ಮನಸ್ಸು ತಾನೇ ತಾನಾಗಿ ಪ್ರಶಾಂತತೆಯನ್ನು ಗಳಿಸಿಕೊಳ್ಳುತ್ತದೆ. ಇದು ನಿಮ್ಮ ಮನಸ್ಸು ಸದಾ ಉಲ್ಲಾಸದಿಂದಿರುವಂತೆ ನೋಡಿಕೊಳ್ಳುತ್ತದೆ.
ಬನ್ನಿ ಸೈಕಲ್ ಸವಾರಿಯಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ:

ಹೃದಯದ ಆರೋಗ್ಯ
ಸೈಕಲಿಂಗ್ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾದ ಅತ್ಯುತ್ತಮ ವ್ಯಾಯಾಮ. ಇದು ಹೃದಯದ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ಸುಲಭ ವ್ಯಾಯಾಮ
ಹೆಚ್ಚು ಸಮಯವನ್ನು ಬೇಡದ ಸುಲಭ ವ್ಯಾಯಾಮವಿದು. ನಿಮ್ಮ ಹಾದಿಯ ಪಯಣವೇ ನಿಮ್ಮ ವ್ಯಾಯಾಮ,

ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ
ನಿಮ್ಮ ಕಾಲು ಮತ್ತು ಕೆಳಹೊಟ್ಟೆಯ ಸ್ನಾಯುಗಳನ್ನು ಬಲಗೊಳಿಸುವುದರೊಂದಿಗೆ ಹುರಿಗೊಳಿಸಿ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.

ತೂಕ ಕಡಿಮೆ ಮಾಡಲು ಸಹಕಾರಿ
ಸೈಕಲಿಂಗ್ ಹೆಚ್ಚು ಜನಪ್ರಿಯಗೊಳ್ಳಲು ಇದು ಮುಖ್ಯ ಕಾರಣ. ಸೈಕಲ್ ತುಳಿಯಲು ನೀವು ಹಾಕುವ ಒತ್ತಡದಿಂದಾಗಿ ಹೆಚ್ಚುವರಿಕ್ಯಾಲೋರಿಗಳು ಉರಿದುಹೋಗುತ್ತದೆ. ಅದರಲ್ಲೂ ಮುಖ್ಯವಾಗಿ ತೊಡೆ, ಕಾಲು ಮತ್ತು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಕರಗಿಸಲು ಸಹಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸೈಕಲಿಂಗ್ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಯಾವುದೇ ಸಂದರ್ಭದಲ್ಲೂ ಮನಸ್ಸನ್ನು ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ.

ಹೃದಯನಾಳಗಳ ಆರೋಗ್ಯಕ್ಕೆ ಸಹಕಾರಿ
ಸೈಕಲಿಂಗ್ ಹೃದಯನಾಳಗಳ ಆರೋಗ್ಯವನ್ನು ಶೇ.3-7ರಷ್ಟು ಹೆಚ್ಚಿಸುತ್ತದೆ. ಸೈಕಲ್ ತುಳಿದಾಗ ನಿಮಗೆ ಆಯಾಸವೆನಿಸಬಹುದು. ಉಸಿರಾಟದ ವೇಗ ಹೆಚ್ಚಬಹುದು. ಇದರಿಂದ ನೀವು ತೆಗೆದುಕೊಳ್ಳುವ ಆಮ್ಲಜನಕದ ಪ್ರಮಾಣ ಹೆಚ್ಚಿ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಒತ್ತಡ ನಿರ್ವಹಣೆಗೆ ಸಹಕಾರಿ
ನಿಮ್ಮ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಲು ಇದೊಂದು ಸುಲಭದ ದಾರಿ. ಇದು ನಿಮ್ಮ
ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ.

ಕಾಲುಗಳಿಗೆ ಶಕ್ತಿಯೊಂದಿಗೆ ಸೌಂದರ್ಯ
ನಿಮ್ಮ ಮೀನಖಂಡಗಳಲ್ಲಿನ ಕೊಬ್ಬನ್ನು ಕರಗಿಸಿ ಕಾಲನ್ನು ತಿದ್ದಿತೀಡಲು ಇದು ಸಹಕಾರಿ. ಮಾಟವಾದ ಕಾಲುಗಳನ್ನು ನಿಮ್ಮದಾಗಿಸಿಕೊಳ್ಳಲು ಸೈಕಲಿಂಗ್ ಅಭ್ಯಾಸ ಮಾಡಿ.



Click it and Unblock the Notifications