Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೀನಟ್ ಬಟರ್ ನ ಆರೋಗ್ಯಕಾರಿ ಪ್ರಯೋಜನಗಳು
ಪೀನಟ್ ಬಟರ್ ನ ಆರೋಗ್ಯಕಾರಿ ಗುಣಗಳು ಹಲವಿವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅದನ್ನು ಪಕ್ಕಕ್ಕೆ ಸರಿಸಿಬಿಡುತ್ತೇವೆ. ಹಲವು ಮಂದಿ ತಂದೆ ತಾಯಂದಿರು ಇದನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಎಂದು ಮಕ್ಕಳಿಗೆ ಕೊಡುವುದಿಲ್ಲ.
ಮಕ್ಕಳು ಇದನ್ನು ತಿನ್ನಲು ಇಷ್ಟಪಟ್ಟರೂ ತಂದೆತಾಯಿಗಳು ಅವರಿಗೆ ಕೊಡುವುದಿಲ್ಲ. ನಾವಿಂದು ಪೀನಟ್ ಬಟರ್ ನಲ್ಲಿನ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದು ನಿಮ್ಮ ಅಭಿಪ್ರಾಯವನ್ನು ಬದಲಿಸಬಹುದು. ಪೀನಟ್ ಬಟರ್ ನಲ್ಲಿನ ಬಹಳ ಮುಖ್ಯವಾದ ಕಡಲೆ ಕಾಯಿಯಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ.
ಅದರಲ್ಲೂ ಮಕ್ಕಳಿಗೆ ಪೀನಟ್ ಬಟರ್ ನೀಡುವುದರಿಂದ ದೇಹಕ್ಕೆ ಪುಷ್ಟಿಯನ್ನು ಒದಗಿಸಿದಂತಾಗುತ್ತದೆ. ಮಕ್ಕಳಿಗೆ ಶಕ್ತಿಯನ್ನು ಒದಗಿಸುವುದಲ್ಲದೆ ಇನ್ನೂ ಹಲವು ರೀತಿಯಲ್ಲಿ ಇದು ಪ್ರಯೋಜನಕಾರಿ.
ಇಲ್ಲಿ ಕೆಲವು ಪಿನಟ್ ಬಟರ್ ನ ಆರೋಗ್ಯಕಾರಿ ಪ್ರಯೋಜನಗಳನ್ನು ಪಟ್ಟಿಮಾಡಿದ್ದೇವೆ. ಇವುಗಳ ಕಡೆ ಗಮನಹರಿಸಿ. ನಿಮ್ಮ ಮಗು ಇದನ್ನು ತಿನ್ನಲು ಇಷ್ಟಪಟ್ಟರೆ ಖಂಡಿತವಾಗಿ ಇದನ್ನು ಕೊಡಿಸಿ. ನಿಮ್ಮ ಮಗು ಇದನ್ನು ಹಲವು ರೀತಿಯಲ್ಲಿ ತಿನ್ನಬಹುದು.
ಪಿನಟ್ ಬಟರ್ ನ ಆರೋಗ್ಯಕಾರಿ ಪ್ರಯೋಜನಗಳು

ಮಲಬದ್ಧತೆ
ಪಿನಟ್ ಬಟರ್ ನ ಬಹಳ ಮುಖ್ಯವಾದ ಪ್ರಯೋಜನವೆಂದರೆ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಮಗುವಿಗೆ ಈ ಸಮಸ್ಯೆಯಿದ್ದಲ್ಲಿ ಪಿನಟ್ ಬಟರ್ ಸ್ಯಾಂಡ್ ವಿಚ್ ಕೊಟ್ಟು ನೋಡಿ ಸಮಸ್ಯೆ ಸುಲಭದಲ್ಲಿ ಪರಿಹಾರವಾಗುತ್ತದೆ.

ಎನರ್ಜಿ ಹೆಚ್ಚಿಸುತ್ತದೆ
ಶಾಲೆಗೆ ಹೋಗುವ ಮಗುವಿಗೆ ಹೆಚ್ಚಿನ ಶಕ್ತಿ ಬೇಕು. ನಿಮ್ಮ ಮಗುವಿಗೆ ಪಿನಟ್ ಬಟರ್ ಈ ಶಕ್ತಿಯನ್ನು ಒದಗಿಸುತ್ತದೆ. ಬೆಳಗ್ಗೆ ಇದನ್ನು ತಿನ್ನುವುದರಿಂದ ನಿಮ್ಮ ಮಗು ಇಡೀ ದಿನ ಎನರ್ಜಿಟಿಕ್ ಆಗಿರುತ್ತದೆ.

ಕಣ್ಣದೃಷ್ಟಿಯನ್ನು ಉತ್ತಮಗೊಳಿಸುತ್ತದೆ
ಇಂದಿನ ದಿನಗಳಲ್ಲಿ ಹಲವು ಮಂದಿ ಮಕ್ಕಳು ಕನ್ನಡಕ ಹಾಕಿಕೊಳ್ಳುತ್ತಾರೆ. ಪಿನಟ್ ಬಟರ್ ನಲ್ಲಿ ಪ್ರೊಟಿನ್ ಹೆಚ್ಚಿರುವುದರಿಂದ ಇದು ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದು ನಿಧಾನ ಪ್ರಕ್ರಿಯೆ ಆದರೆ ಇದು ದೋಷವನ್ನು ಗುಣಪಡಿಸುತ್ತದೆ.

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
ಪಿನಟ್ ಬಟರ್ ನಲ್ಲಿ ಕ್ಯಾಲ್ಸಿಯಂ ಕೂಡ ಹೆಚ್ಚಿರುತ್ತದೆ. ಇದು ಮಕ್ಕಳ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.

ನೆನಪಿನಶಕ್ತಿಯನ್ನು ಹೆಚ್ಚಿಸುತ್ತದೆ
ನಿಮ್ಮ ಮಗುವಿಗೆ ಇದನ್ನು ನೀಡುವುದರಿಂದ ಮಗುವಿನ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮೆದುಳಿಗೆ ಉತ್ತಮವಾದ ಆಹಾರಗಳ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ. ಇದನ್ನು ಮಗುವಿಗೆ ನೀಡುವುದು ಒಳ್ಳೆಯದು.

ಹಸಿವನ್ನು ಹೆಚ್ಚಿಸುತ್ತದೆ
ಮಗುವಿನ ಹಸಿವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ. ಕಡಿಮೆ ತಿನ್ನುವ ಮಕ್ಕಳಿಗೆ ಇದನ್ನು ನೀಡುವುದು ಒಳ್ಳೆಯದು.

ತೂಕ ಹೆಚ್ಚಿಸುತ್ತದೆ
ನಿಮ್ಮ ಮಗು ತೂಕ ಕಮ್ಮಿಯಿದೆಯೆ? ಪಿನಟ್ ಬಟರ್ ನಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು ತೂಕ ಹೆಚ್ಚಾಗಲು ನೆರವು ನೀಡುತ್ತದೆ. ಆದರೆ ಇದನ್ನು ಹೆಚ್ಚು ತಿನ್ನಲು ನೀಡುವುದು ಒಳ್ಳೆಯದಲ್ಲ.

ಪೋಷಣೆ
ಇದರ ಅತ್ಯುತ್ತಮ ಪ್ರಯೋಜನವೆಂದರೆ ಮಕ್ಕಳಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಕಾರ್ಬೊಹೈಡ್ರೆಟ್ ಗಳು ಹೆಚ್ಚಿದ್ದು ಮಕ್ಕಳಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ.

ಹೊಟ್ಟೆ ಸಮಸ್ಯೆಗಳಿಗೆ ಪರಿಹಾರ
ಹೊಟ್ಟೆನೋವು, ಭೇದಿ ಮೊದಲಾದ ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಮಕ್ಕಳಿಗೆ ಈ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ. ಪಿನಟ್ ಬಟರ್ ಇವುಗಳನ್ನು ಗುಣಪಡಿಸಲು ನೆರವು ನೀಡುತ್ತದೆ.

ಏಕಾಗ್ರತೆ
ಬೆಳಗ್ಗೆ ಮಕ್ಕಳು ಪಿನಟ್ ಬಟರ್ ತಿನ್ನುವುದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ.



Click it and Unblock the Notifications