Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ವ್ಯಾಯಾಮಕ್ಕೆ ಮುನ್ನ ಈ ಆಹಾರ ತಿನ್ನಿ
ಜಿಮ್ ಗೆ ಹೋಗಬೇಕು, ಫಿಟ್ ಆಗಿರಬೇಕು' ಎನ್ನುವ ಮಂತ್ರವನ್ನು ಹೆಚ್ಚಿನ ಯುವ ಪೀಳಿಗೆಯರು ಪಾಲಿಸುತ್ತಿದ್ದಾರೆ. ಆದರೆ ಜಿಮ್ ಗೆ ಹೋಗುವಾಗ ಅಥವಾ ವ್ಯಾಯಾಮ ಮಾಡುವಾಗ ಅವರು ಅನುಸರಿಸುತ್ತಿರುವ ಕ್ರಮ ಮಾತ್ರ ಹೆಚ್ಚಿನ ಭಾರಿ ಆರೋಗ್ಯಕರವಾಗಿರುವುದಿಲ್ಲ. ಯಾವುದೇ ಸರಿಯಾದ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳದೇ ವ್ಯಾಯಾಮ ಮಾಡಲು ತೊಡಗುತ್ತಾರೆ.
ಜಿಮ್ ಗೆ ಹೋಗುವಾಗ ಆಹಾರ ತಿಂದು ಹೋಗಬಾರದು, ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕು ಅಂದರೆ ಮಾತ್ರ ಬೊಜ್ಜು ಕರಗಿಸಲು ಸಾಧ್ಯ ಎಂಬ ತಪ್ಪು ಕಲ್ಪನೆ ಹಲವರಲ್ಲಿ ಇರುತ್ತದೆ. ಜಿಮ್ ಗೆ ಹೋಗಿ ಒಂದು ಗಂಟೆ ವರ್ಕ್ ಔಟ್ ಮಾಡಿದಾಗ ಹೊಟ್ಟೆ ಹಸಿವು ತಡೆಯಲಾಗುವುದಿಲ್ಲ, ಆಗ ಸ್ವಲ್ಪ ಮಿತಿ ಮೀರಿಯೇ ತಿಂದು ಬಿಡುತ್ತೇವೆ.
ಅಲ್ಲದೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಲು ಪ್ರಾರಂಭಿಸಿದಾಗ ಬೇಗನೆ ಹೊಟ್ಟೆ ಹಸಿವು ಪ್ರಾರಂಭವಾದರೆ, ಒಂದು ಗಂಟೆ ವ್ಯಾಯಾಮ ಮಾಡಲು ಶಕ್ತಿಯಾದರೂ ಎಲ್ಲಿಂದ? 15 ನಿಮಿಷದಲ್ಲಿಯೇ ಸುಸ್ತಾಗಿ ಬಿಡುತ್ತೀರಿ. ಆದ್ದರಿಂದ ವ್ಯಾಯಾಮದ ಮೊದಲು ನಿಮ್ಮ ದೇಹಕ್ಕೆ ಚೈತನ್ಯ ತುಂಬುವ ಈ ಕೆಳಗಿನ ಆಹಾರಗಳನ್ನು ತೆಗೆದುಕೊಂಡು ವ್ಯಾಯಾಮ ಮಾಡುವುದು ಒಳ್ಳೆಯದು, ಏನಂತೀರಿ?

ಕಾಫಿ
ವರ್ಕ್ ಔಟ್ ಮಾಡುವ ಮುಂಚೆ ಒಂದು ಕಪ್ ಕಾಫಿ ಹೀರುವುದು ಒಳ್ಳೆಯದೇ. ಕಾಫಿ ವ್ಯಾಯಾಮ ಮಾಡಲು ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ. ಬ್ಲ್ಯಾಕ್ ಕಾಫಿ ಅಥವಾ ಹಾಲು ಹಾಕಿದ ಕಾಫಿಯಲ್ಲಿ ನಿಮಗೆ ಯಾವುದು ಪ್ರಿಯವೋ ಅದನ್ನು ಕುಡಿಯಿರಿ.

ಶುಂಠಿ ಟೀ
ವರ್ಕ್ ಔಟ್ ಮಾಡುವಾಗ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಹಾಗಾದರೆ ಶುಂಠಿ ಹಾಕಿ ತಯಾರಿಸಿದ ಟೀ ಕುಡಿಯುವುದು ಅಥವಾ ಒಂದು ತುಂಡು ಶುಂಠಿಯನ್ನು ಜಗಿಯುವುದು ಒಳ್ಳೆಯದು. ಶುಂಠಿ ಸ್ನಾಯು ನೋವನ್ನು ಕಮ್ಮಿ ಮಾಡುತ್ತದೆ.

ಸೇಬು
ವ್ಯಾಯಾಮ ಮಾಡುವ 10 ನಿಮಿಷ ಮುಂಚೆ ಒಂದು ಸೇಬನ್ನು ಬೇಕಾದರೆ ತಿನ್ನಬಹುದು.

ಚೆರ್ರಿ ಜ್ಯೂಸ್
ಒಂದು ಲೋಟ ಚೆರ್ರಿ ಜ್ಯೂಸ್ ಕುಡಿದರೆ ವರ್ಕ್ ಔಟ್ ಮಾಡುವಾಗ ಬೇಗನೆ ದಣಿವು ಆಗುವುದಿಲ್ಲ.

ಬೀಟ್ ರೂಟ್ ಜ್ಯೂಸ್
ಬೀಟ್ ರೂಟ್ ನಲ್ಲಿರುವ ಬೀಟಾ ಕೆರೋಟಿನ್ ಹೊಟ್ಟೆಯನ್ನು ಸೇರಿದರೆ ಗ್ಲೂಕೋಸ್ ನಂತೆ ಕಾರ್ಯನಿರ್ವಹಿಸುತ್ತದೆ.

ಓಟ್ಸ್
ಸ್ವಲ್ಪ ಓಟ್ಸ್ ಅನ್ನು ಬೇಕಾದರೆ ವ್ಯಾಯಾಮ ಮಾಡುವ ಅರ್ಧಗಂಟೆಯ ಮುಂಚೆ ತಿನ್ನಬಹುದು.

ಮೊಳಕೆ ಬರಿಸಿದ ಕಾಳುಗಳು
ಕಾಳುಗಳನ್ನು ಮೊಳಕೆ ಬರಿಸಿ ಅದರಿಂದ ಸಲಾಡ್ ತಯಾರಿಸಿ ಕೂಡ ತಿನ್ನಬಹುದು. ಮೊಳಕೆ ಬರಿಸಿದ ಕಾಳುಗಳನ್ನು ತಿಂದರೆ, ಆಹಾರವನ್ನು ಮಿತಿಯಲ್ಲಿ ತಿನ್ನಬಹುದು.

ಹಣ್ಣುಗಳ ಜ್ಯೂಸ್
ನಿಂಬೆ ಪಾನೀಯ, ಆಪಲ್ ಜ್ಯೂಸ್, ಆರೇಂಜ್ ಜ್ಯೂಸ್ ಈ ರೀತಿಯ ಜ್ಯೂಸ್ ಗಳು ವ್ಯಾಯಾಮದ ಮೊದಲು ತೆಗೆದುಕೊಳ್ಳಬಹುದಾದ ಬೆಸ್ಟ್ ಆಹಾರಗಳಾಗಿವೆ.



Click it and Unblock the Notifications
