Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಚಳಿಗಾಲಕ್ಕೆ ಮಕ್ಕಳಿಗೆ ಫೈಬರ್ ಯುಕ್ತ ಆಹಾರಗಳು
ಚಳಿಗಾಲದಲ್ಲಿ ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಇದರೊಂದಿಗೆ ನೀವು ಸೇವಿಸಬೇಕಾದ ಮತ್ತೊಂದು ಮುಖ್ಯ ಪೌಷ್ಟಿಕಾಂಶ ಫೈಬರ್. ಮಕ್ಕಳ ಆಹಾರದಲ್ಲಿ ಇವೆಲ್ಲವೂ ಸಮತೋಲನದಲ್ಲಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಇದರಿಂದ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ಫೈಬರ್ ಹೆಚ್ಚಿರುವ ಆಹಾರವನ್ನು ಮಕ್ಕಳಿಗೆ ನೀಡುವುದರಿಂದ ನಿಮ್ಮ ಮಗು ಆರೋಗ್ಯವಾಗಿದ್ದು ಎಲ್ಲ ರೀತಿಯ ರೋಗಗಳಿಂದ ದೂರವುಳಿಯುತ್ತದೆ. 5 ವರ್ಷ ಮೇಲ್ಪಟ್ಟ ಮಕ್ಕಳು ಕೆಳಗೆ ಕೊಟ್ಟಿರುವ ಆಹಾರಗಳಲ್ಲಿ ಕನಿಷ್ಠ ಮೂರನ್ನಾದರೂ ದಿನವೂ ಸೇವಿಸಬೇಕು.
ಪರಿಣತರ ಪ್ರಕಾರ ಮಕ್ಕಳು ಈ ಆಹಾರಗಳನ್ನು ಸೇವಿಸುವುದರಿಂದ ಅವರು ಹೆಚ್ಚು ಚಟುವಟಿಕೆಯಿಂದಿರುತ್ತಾರೆ. ಚಳಿಗಾಲದಲ್ಲಿ ಹವಾಮಾನದ ಕಾರಣದಿಂದ ಮಕ್ಕಳು ನೀರಸವಾಗಿರುವುದನ್ನು ನೋಡಬಹುದು.
ನಾವಿಲ್ಲಿ ಕೊಟ್ಟಿರುವ ಫೈಬರ್ ಹೆಚ್ಚಿರುವ ಆಹಾರಗಳನ್ನು ನೋಡಿ. ಇವುಗಳನ್ನು ಮಕ್ಕಳು ಕೂಡ ಇಷ್ಟಪಡುತ್ತಾರೆ. ಯಾಕೆಂದರೆ ಅವು ಸಿಹಿಯಾಗಿ ರುಚಿಕರವಾಗಿರುತ್ತದೆ.
ಮಕ್ಕಳಿಗಾಗಿ ಫೈಬರ್ ಹೆಚ್ಚಿರುವ ಆಹಾರಗಳು:

ಜೋಳ
ಜೋಳದ ಪ್ರತಿ ಕಾಳಿನಲ್ಲೂ ಸುಮಾರು 2 ಗ್ರಾಂ ಫೈಬರ್ ಇರುತ್ತದೆ. ವಾರಕ್ಕೊಮ್ಮೆಯಾದರೂ ನಿಮ್ಮ ಮಗುವಿಗೆ ಇದನ್ನು ನೀಡಿ.

ಅಲಸಂದಿ ಕಾಳು
ಚಳಿಗಾಲದಲ್ಲಿ ಬಳಸಬಹುದಾದ ಅತ್ಯುತ್ತಮ ತರಕಾರಿಯಿದು. ಇದರಲ್ಲಿ ಫೈಬರ್ ಹೆಚ್ಚಿದ್ದು ಮಕ್ಕಳಿಗೆ ಬಹಳ ಒಳ್ಳೆಯದು.

ಅವಕ್ಯಾಡೊ
ಒಂದು ಅವಕ್ಯಾಡೊವಿನಲ್ಲಿ ಸುಮಾರು 3 ಗ್ರಾಂ ಫೈಬರ್ ಇರುತ್ತದೆ. ಇದು ನಿಮ್ಮನ್ನು ಆರೋಗ್ಯವಾಗಿಡಲು ಸಾಕಷ್ಟಾಯಿತು.

ಕುಚ್ಚಲಕ್ಕಿ
ಭಾರತದಲ್ಲಿ ಅಕ್ಕಿ ಮುಖ್ಯ ಆಹಾರವಾಗುವುದರಿಂದ ಮಕ್ಕಳಿಗೆ ಇದು ಇಷ್ಟವಾಗುತ್ತದೆ. ಇದನ್ನು ಒಮ್ಮೆ ತಿಂದರೆ ಇದರಲ್ಲಿ ಸುಮಾರು 5 ಗ್ರಾಂನಷ್ಟು ಫೈಬರ್ ಇರುತ್ತದೆ. ಇದು ಪಚನಕ್ರಿಯೆಗೆ ಮತ್ತು ಶಕ್ತಿ ಒದಗಿಸಲು ಹೆಚ್ಚು ಸಹಕಾರಿ.

ಪಾಸ್ತಾ
ಯಾವ ಮಗುವಿಗೆ ಪಾಸ್ತಾ ಇಷ್ಟವಾಗುವುದಿಲ್ಲ ಹೇಳಿ. ಯಾವ ಸಮಯದಲ್ಲಿ ಬೇಕಾದರೂ ಅವರು ಪಾಸ್ತಾ ತಿನ್ನಲು ಸಿದ್ಧ. ಇದರಲ್ಲಿ ಕೂಡ ಫೈಬರ್ ಹೆಚ್ಚಿದ್ದು ಮಕ್ಕಳಿಗೆ ಒಳ್ಳೆಯದು.

ಬ್ರೆಡ್
ಬ್ರೆಡ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಮಕ್ಕಳಿಗೆ ಇಷ್ಟವಾಗುವಂತೆ ಮಾಡುವ ಒಂದು ವಿಧಾನವೆಂದರೆ ಅವರಿಷ್ಟದ ಜಾಮನ್ನು ಹಚ್ಚಿಕೊಡುವುದು. ಅಥವ ಸ್ಯಾಂಡ್ ವಿಚ್ ತಯಾರಿಸಿ ಕೊಡಿ.

ಕಾಳುಗಳು
ಮಕ್ಕಳಿಗೆ ದಿನಕ್ಕೊಂದು ಬಾರಿಯಾದರೂ ಕಾಳುಗಳನ್ನು ನೀಡುವುದು ಒಳ್ಳೆಯದು. ಚಳಿಗಾಲದಲ್ಲಿ ಅಗತ್ಯವಾಗಿರುವ ಫೈಬರ್ ಅಂಶವನ್ನು ಅವರಿಗೆ ಇದು ಒದಗಿಸುತ್ತದೆ.

ಪಿಯರ್
ಇದು ಚಳಿಗಾಲದ ಹಣ್ಣಲ್ಲ. ಆದರೆ ಇದರ ಉಪ್ಪಿನ ಕಾಯಿ ಸಿಕ್ಕರೂ ಮಕ್ಕಳಿಗೆ ಕೊಡಿ.

ತಾವರೆದಂಟು
ಇದು ಮಕ್ಕಳಿಗೆ ಅಷ್ಟು ಇಷ್ಟವಾಗುವುದಿಲ್ಲ. ಆದರೂ ಮಕ್ಕಳಿಗೆ ಇದನ್ನು ನೀಡುವುದು ಒಳ್ಳೆಯದು.

ಓಟ್ಸ್
ಈಗ ಹಲವು ರೀತಿಯ ಓಟ್ಸ್ ಸಿಗುತ್ತದೆ. ಇದು ಚಳಿಗಾಲದಲ್ಲಿ ಹೊಟ್ಟೆಯ ಸಮಸ್ಯೆಗಳಿಂದ ಮಕ್ಕಳನ್ನು ದೂರವಿಡುತ್ತದೆ.

ರಾಸ್ ಬೆರ್ರಿ
ಮಕ್ಕಳಿಗೆ ಇದನ್ನು ಕೊಡುವುದರಿಂದ ಇದು ಸುಮಾರು 6 ಗ್ರಾಂನಷ್ಟು ಫೈಬರ್ ಅನ್ನು ದೇಹಕ್ಕೆ ಒದಗಿಸುತ್ತದೆ.

ಬಟಾಣಿ ಕಾಳು
ಚಳಿಗಾಲದಲ್ಲಿ ಬಟಾಣಿ ಬಳಸಿದ ಊಟವನ್ನು ಮಾಡುವುದರಿಂದ ದೇಹದ ರೋಗನಿರೋಧಕಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದು.

ಬ್ರೊಕೊಲಿ
ಇದು ಕೂಡ ಮಕ್ಕಳಿಗೆ ಹೆಚ್ಚು ಇಷ್ಟವಾಗುವುದಿಲ್ಲ. ಆದರೆ ಇದನ್ನು ಬಳಸಿ ಚೆಂದದ ಅಡುಗೆ ಮಾಡಿ ಮಕ್ಕಳಿಗೆ ತಿನ್ನಿಸುವುದು ಒಳ್ಳೆಯದು.

ಸೇಬು
ದಿನವೂ ಒಂದು ಸೇಬನ್ನು ತಿನ್ನುವುದರಿಂದ ವೈದ್ಯರಿಂದ ದೂರವುಳಿಯಬಹುದು. ಮಕ್ಕಳು ಇದನ್ನು ಇಷ್ಟಪಡುವುದರಿಂದ ಚಳಿಗಾಲದಲ್ಲಿ ಮಕ್ಕಳಿಗೆ ಇದನ್ನು ನೀಡುವುದು ಒಳ್ಳೆಯದು.

ಎಲೆಕೋಸು
ಹೆಚ್ಚು ಮಕ್ಕಳಿಗೆ ಕೋಸಿನ ರುಚಿ ಇಷ್ಟವಾಗುವುದಿಲ್ಲ. ಆದರೆ ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಅಣಬೆ
ಮಕ್ಕಳು ಅಣಬೆ ತಿನ್ನಲು ಇಷ್ಟಪಡುತ್ತಾರೆ. ಶೀತದ ಕಾಲದಲ್ಲಿ ಫೈಬರ್ ಹೆಚ್ಚಿರುವ ಈ ಆಹಾರದ ಬಳಕೆ ಒಳ್ಳೆಯದು.



Click it and Unblock the Notifications











