ಒಣ ಚರ್ಮದ ಆರೈಕೆಗೆ ಡಯೆಟ್ ಆಹಾರಗಳು

ಚಳಿಗಾಲವು ಉಳಿದೆಲ್ಲ ಕಾಲಗಳಿಗಿಂತ ಹೆಚ್ಚು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಕಾಲದಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆಯೆಂದರೆ ಒಣಚರ್ಮ. ನಾವು ಕೆಲವು ಆಹಾರಗಳನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು ಎಂದು ಹೇಳಲಾಗುತ್ತದೆ. ಆದಷ್ಟು ನೀರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಚರ್ಮವು ಮೃದುವಾಗಿರುತ್ತದೆ. ಸೊಪ್ಪು ಮತ್ತು ಅವಕಾಡೊ ಈ ರೀತಿಯ ಎರಡು ಮುಖ್ಯ ಆಹಾರಗಳು.

ಬೊಲ್ಡ್ ಸ್ಕೈ ಈ ರೀತಿಯ ಕೆಲವು ಆಹಾರಗಳನ್ನು ನಿಮ್ಮ ಡಯೆಟ್ ಪಟ್ಟಿಗೆ ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತದೆ. ನಿಮ್ಮ ಚರ್ಮವು ಸುಂದರವಾಗಿ ತನ್ನ ಹೊಳಪನ್ನು ಕಾಪಾಡಿಕೊಳ್ಳಬೇಕಾದರೆ ನೀವು ಈ ಡಯೆಟ್ ಪಾಲಿಸಿ. ಈ ಕೆಳಗೆ ನೀಡಿರುವ ಆಹಾರದ ಪಟ್ಟಿ ನಿಮಗೆ ನೆರವು ನೀಡುತ್ತದೆ. ಇವು ನಿಮ್ಮ ಮುಖವನ್ನು ಮೊಡವೆಗಳಿಂದ ಮುಕ್ತವಾಗಿರಿಸುತ್ತದೆ ಇದರೊಂದಿಗೆ ಇನ್ನೂ ಹಲವು ರೀತಿಯಲ್ಲಿ ಚರ್ಮದ ಆರೈಕೆ ಮಾಡುತ್ತದೆ.

ಮತ್ತೇಕೆ ತಡ ಈ ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯಿಂದ ಪಾರಾಗಲು ಈ ಡಯೆಟ್ ಪಾಲಿಸಿ.

ಒಣಚರ್ಮವನ್ನು ಗುಣಪಡಿಸುವ ಡಯೆಟ್

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ಪ್ರಮುಖವಾಗಿ ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ಈ ಎಣ್ಣೆಯಲ್ಲಿರುವ ಕೊಬ್ಬಿನಂಶ ನಿಮ್ಮ ಚರ್ಮಕ್ಕೆ ಒಳಗಿನಿಂದ ಆರೈಕೆ ಮಾಡುತ್ತದೆ.

ಜಾಸ್ಮಿನ್ ಟೀ

ಜಾಸ್ಮಿನ್ ಟೀ

ನಿಮ್ಮ ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ. ಇದು ವರ್ಷಪೂರ್ತಿ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

ಸಾಲಮೊನ್

ಸಾಲಮೊನ್

ನಿಮ್ಮ ಚರ್ಮಕ್ಕೆ ಅತ್ಯುತ್ತಮವಾದ ಆಹಾರ ಸಾಲಮೊನ್. ಈ ಮೂಳೆಗಳಿಲ್ಲದ ಮೀನನ್ನು ಚಳಿಗಾಲದಲ್ಲಿ ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕು.

ಸೌತೆಕಾಯಿ

ಸೌತೆಕಾಯಿ

ಹಸಿಯಾಗಿ ಸೌತೆಕಾಯಿಯನ್ನು ತಿನ್ನಿ. ಇದರಲ್ಲಿನ ಪೋಷಕಾಂಶಗಳು ಚರ್ಮಕ್ಕೆ ಮಾಯ್ಸಶ್ಚುರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮದ ಎಲಾಸ್ಟಿಸಿಟಿಯನ್ನು ಕಾಪಾಡುತ್ತದೆ.

ಸೆಲರಿ

ಸೆಲರಿ

ಇದರಲ್ಲಿ ಕೂಡ ಸಿಲಿಕ ಇರುತ್ತದೆ. ಇದನ್ನು ನಿಮ್ಮ ಚರ್ಮದ ಆರೈಕೆಯ ಡಯೆಟ್ ನಲ್ಲಿ ಸೇರಿಸಿಕೊಳ್ಳಿ.

ಹುರುಳಿ

ಹುರುಳಿ

ಇದರಲ್ಲಿ ಒಮೆಗ 3 ಫ್ಯಾಟಿ ಆಸಿಡ್ ಗಳಿರುತ್ತವೆ. ಇದು ಚಳಿಗಾಲದಲ್ಲಿ ನಿಮ್ಮ ಚರ್ಮ ಮತ್ತು ದೇಹವನ್ನು ಕಾಪಾಡುತ್ತದೆ.

ವಾಲ್ ನಟ್ಸ್

ವಾಲ್ ನಟ್ಸ್

ನಿಮ್ಮ ಚರ್ಮಕ್ಕೆ ಚಳಿಗಾಲದಲ್ಲಿ ಮಾಯ್ಸಿಶ್ಚುರೈಸರ್ ನ ಅವಶ್ಯಕತೆಯಿರುತ್ತದೆ. ವಾಲ್ ನಟ್ಸ್ ಇದನ್ನು ಚರ್ಮಕ್ಕೆ ಒದಗಿಸುತ್ತದೆ. ಆದ್ದರಿಂದ ಒಣಚರ್ಮದ ಆರೈಕೆಗಾಗಿ ಇದನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕು.

ಬ್ಲಾಕ್ ಕರೆಂಟ್

ಬ್ಲಾಕ್ ಕರೆಂಟ್

ಒಣ ಚರ್ಮದ ಆರೈಕೆಗೆ ನಿಸರ್ಗವು ನೀಡಿರುವ ಅತ್ಯುತ್ತಮ ಆಹಾರವಿದು. ಇವು ಕೊಲೆಗೆನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮಗ್ರಂಥಿಗಳ ಆರೈಕೆಗೆ ಅತ್ಯಗತ್ಯ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ತರಕಾರಿ ಎಣ್ಣೆಗೆ ಹೋಲಿಸಿದಲ್ಲಿ ಆಲಿವ್ ಎಣ್ಣೆಯಲ್ಲಿ ಹೆಚ್ಚು ಒಳ್ಳೆಯ ಕೊಬ್ಬು ಮತ್ತು ವಿಟಮಿನ್ ಇ ಇರುತ್ತದೆ. ಇದು ನಿಮ್ಮ ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಮಾಯ್ಸಿಶ್ಚುರೈಜರ್ ನಂತೆ ವರ್ತಿಸುತ್ತದೆ.

ಸ್ಪಿನಾಚ್

ಸ್ಪಿನಾಚ್

ಅಧ್ಯಯನಗಳ ಪ್ರಕಾರ ಸ್ಪಿನಾಚ್ ನಲ್ಲಿರುವ ಫೋಟೊಕೆಮಿಕಲ್ ಗಳು ಚರ್ಮದ ತೇವಾಂಶವನ್ನು ಕಾಪಾಡಿ ಆರೋಗ್ಯಕರವಾಗಿಡುತ್ತದೆ. ಖಾಲೆ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು.

ನಟ್ಸ್

ನಟ್ಸ್

ಚರ್ಮ ಬಿರುಕು ಬಿಡುವುದು, ಒರಟಾಗುವುದು ಮತ್ತು ಹೊಟ್ಟೆಳುವುದನ್ನು ತಪ್ಪಿಸಲು ನಟ್ಸ್ ದಿನವೂ ಬಳಸಿ.

ಟರ್ಕಿ

ಟರ್ಕಿ

ಇದೊಂದು ಸೀಸನಲ್ ಅಡುಗೆ. ಇದರಲ್ಲಿ ಜಿಂಕ್ ಹೆಚ್ಚಿರುತ್ತದೆ. ಇದು ಒಣಗಿದ ಮತ್ತು ಬಿರುಕುಬಿಟ್ಟ ಚರ್ಮಕ್ಕೆ ಬಹಳ ಒಳ್ಳೆಯದು.

ಕ್ಯಾರೆಟ್

ಕ್ಯಾರೆಟ್

ಇದರಲ್ಲಿ ವಿಟಮಿನ್ ಎ ಹೆಚ್ಚಿರುತ್ತದೆ. ಇದು ಒಣಗಿದ ಮತ್ತು ಬಿರುಕುಬಿಟ್ಟ ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ಚಳಿಗಾಲದಲ್ಲಿ ಪಾಲಿಸಬೇಕಾದ ಒಣ ಚರ್ಮ ನಿವಾರಣೆಯ ಡಯೆಟ್ ನಲ್ಲಿ ಇದನ್ನು ಬಳಸಲೇಬೇಕು.

Story first published: Thursday, December 19, 2013, 8:02 [IST]
X
Desktop Bottom Promotion