Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೊಟ್ಟೆ ಕರಗಬೇಕೆಂದರೆ ಈ ರೀತಿ ಮಾಡಲೇಬೇಕು
ಹೆಚ್ಚಿನವರು ಶ್ರಮಪಟ್ಟು ಮೈ ತೂಕ ಇಳಿಸಿಕೊಂಡಿರುತ್ತಾರೆ, ಆದರೆ ಹೊಟ್ಟೆಯ ಬೊಜ್ಜು ಮಾತ್ರ ಕರಗಿರುವುದಿಲ್ಲ. ಇದನ್ನು ಕರಗಿಸುವುದು ಹೇಗೆ ಅನ್ನುವುದೇ ಅವರ ದೊಡ್ಡ ಸಮಸ್ಯೆಯಾಗಿರುತ್ತದೆ. ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗಲು ಕೆಲವೊಂದು ವ್ಯಾಯಾಮಗಳಿವೆ, ಅವುಗಳ ಮೂಲಕ ಕರಗಿಸಬಹುದು.
ಇಲ್ಲಿ ನಾವು ಹೊಟ್ಟೆಯನ್ನು ಕರಗಿಸಿ, ಸಮತಟ್ಟಾಗಿಸುವ ಕೆಲವು ಕ್ರಂಚಸ್ ವ್ಯಾಯಾಮದ ಬಗ್ಗೆ ಹೇಳಿದ್ದೇವೆ ನೋಡಿ:
ಸೂಚನೆ: ಇಲ್ಲಿ ಹೇಳಿರುವ ಎಲ್ಲಾಕ್ರಂಚಸ್ ಮಾಡುವ ಮುಂಚೆ ಪರಿಣಿತರ ಸಲಹೆ ಪಡೆದು ನಂತರ ಮಾಡಿ, ಹೊಟ್ಟೆ ಬೇಗನೆ ಕರಗಲು ಈ ಕ್ರಂಚಸ್ ವ್ಯಾಯಾಮ ನಿಮಗೆ ಸಹಾಯ ಮಾಡುತ್ತದೆ.

ರೆಗ್ಯೂಲರ್ ಕ್ರಂಚಸ್
ಈ ಕ್ರಂಚಸ್ ಮಾಡುವುದು ಸುಲಭ. ಕಾಲುಗಳನ್ನು ನೀಡಿ ಮಲಗಿ, ನಂತರ ಕಾಲನ್ನು ಮಡಚಿ ಇಡಿ, ಈಗ ಕೈಗಳನ್ನು ತಲೆಯ ಹಿಂಭಾಗಕ್ಕೆ ಹಿಡಿದು ಚಿತ್ರದಲ್ಲಿ ತೋರಿಸಿದಂತೆ ಹೊಟ್ಟೆಯನ್ನು ಮಂಡಿಗೆ ತಾಗಿಸಿ, ಈ ರೀತಿ ಪ್ರತೀದಿನ ಮಾಡಿದರೆ ಸಾಕು ಹೊಟ್ಟೆ ಬೊಜ್ಜು ಕರಗುವುದು.

ಟ್ವಿಸ್ಟಡ್ಡ್ ಕ್ರಂಚಸ್
ಈ ಕ್ರಂಚಸ್ ನಿಮ್ಮ ಹೊಟ್ಟೆಯ ಮಾತ್ರವಲ್ಲ, ಸೊಂಟದ ಸುತ್ತಲಿನ ಬೊಜ್ಜನ್ನು ಕರಗಿಸುತ್ತದೆ.

ಬೈಸೈಕಲ್ ಕ್ರಂಚಸ್
ಈ ಕ್ರಂಚಸ್ ವ್ಯಾಯಾಮ ಕಾಲುಗಳ ಸ್ನಾಯುಗಳಿಗೆ ಬಲವನ್ನು ತುಂಬುವುದು, ತೊಡೆ ದಪ್ಪವಾಗಿದ್ದರೆ ಕರಗುವುದು, ಹೊಟ್ಟೆಯೂ ಕರಗುವುದು.

ಡಬಲ್ ಕ್ರಂಚಸ್
ಈ ಡಬಲ್ ಕ್ರಂಚಸ್ ಮೊದಲಿಗೆ ಮಾಡುವುದು ಸ್ವಲ್ಪ ಕಷ್ಟ, ಅಭ್ಯಾಸವಾದಂತೆ ಸಲೀಸಾಗಿ ಮಾಡಬಹುದು. ಇದು ಹೊಟ್ಟೆ ಬೊಜ್ಜನ್ನು ಬೇಗನೆ ಕರಗಿಸುತ್ತದೆ.

ವರ್ಟಿಕಲ್ ಲೆಗ್ ಕ್ರಂಚಸ್
ಚಿತ್ರದಲ್ಲಿ ತೋರಿಸಿದಂತೆ ಕ್ರಂಚಸ್ ಮಾಡಿಯೂ ಹೊಟ್ಟೆಯ ಬೊಜ್ಜು ಕರಗಿಸಬಹುದು.

Oblique ಕ್ರಂಚಸ್
ಒಂದು ಬದಿಗೆ ಮಲಗಿ, ಒಂದು ಕೈಯನ್ನು ರೆಸ್ಟ್ ನಲ್ಲಿಟ್ಟು, ಮತ್ತೊಂದು ಕೈಯಿಂದ ತಲೆಗೆ ಸಪೋರ್ಟ್ ಕೊಟ್ಟು ದೇಹವನ್ನು ಎತ್ತಬೇಕು. ಈ ರೀತಿಯ ವ್ಯಾಯಾಮ ದೇಹಕ್ಕೆ ಪರ್ಫೆಕ್ಟ್ ಶೇಪ್ ನೀಡುವುದು.

ರೈಸಿಡ್ ಕ್ರಂಚಸ್ (Raised Crunches)
ಈ ಕ್ರಂಚಸ್ ಮಾಡುವುದು ಹೇಗೆ ಎಂದು ನಿಮ್ಮ ಜಿಮ್ ಮಾಸ್ಟರ್ ನ ಸಲಹೆ ಪಡೆದು ಕೇಳಿ. ಇದು ಕೂಡ ಹೊಟ್ಟೆ ಕರಗಲು ಸಹಾಯ ಮಾಡುತ್ತದೆ.

ರಿವರ್ಸ್ ಕ್ರಂಚಸ್
ಈ ಕ್ರಂಚಸ್ ಮೇಲೆ ಹೊಟ್ಟೆಯನ್ನು ಕರಗಿಸಲು ಸಹಾಯ ಮಾಡುತ್ತದೆ. ಇಲ್ಲಿ ಹೇಳಿರುವ ಎಲ್ಲಾ ಕ್ರಂಚಸ್ ಮಾಡುವ ಮುಂಚೆ ಪರಿಣಿತರ ಸಲಹೆ ಪಡೆದು ನಂತರ ಮಾಡಿ, ಹೊಟ್ಟೆ ಬೇಗನೆ ಕರಗಲು ಈ ಕ್ರಂಚಸ್ ವ್ಯಾಯಾಮ ನಿಮಗೆ ಸಹಾಯ ಮಾಡುತ್ತದೆ.



Click it and Unblock the Notifications
