Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಫಿಟ್ ನೆಸ್ ಬಯಸುವವರು ಮಾಡಬಾರದ ಮಿಸ್ಟೇಕ್ ಗಳು
ಫಿಟ್ ನೆಸ್ ಇರುವ ಶರೀರ ನಮ್ಮದಾಗಿರಬೇಕೆಂಬ ಆಸೆ ಪ್ರತಿಯೊಬ್ಬ ಮಹಿಳೆಯರಲ್ಲೂ ಇರುತ್ತದೆ. ಆದರೆ ಕೆಲ ಮಹಿಳೆಯರು ಕೆಲವೊಂದು ಫಿಟ್ ನೆಸ್ ಮಿಸ್ಟೇಕ್ ಮಾಡುತ್ತಾರೆ. ಆದ್ದರಿಂದ ತಾವು ಬಯಸಿದಂತಹ ದೇಹ ಪಡೆಯಲು ವಿಫಲರಾಗುತ್ತಾರೆ.
ಈ ಮಿಸ್ಟೇಕ್ ಗಳು ಆಗುವುದು ನಾವು ಮಾಡುತ್ತಿರುವುದು ಸರಿಯೇ, ತಪ್ಪೇ ಎಂದು ತಿಳಿಯದಿದ್ದರೆ. ವ್ಯಾಯಾಮ ಮತ್ತು ಕೊಬ್ಬಿನಂಶದ ಆಹಾರವನ್ನು ದುರ ಮಾಡಿದರೆ ತೂಕ ಕಮ್ಮಿಯಾಗುತ್ತದೆ ಎಂದು ಗೊತ್ತಿರುತ್ತದೆ. ಆದರೆ ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು, ಆಹಾರ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿರುವುದಿಲ್ಲ, ಆದ್ದರಿಂದಲೇ ಫಿಟ್ ನೆಸ್ ಪಡೆಯಲು ವಿಫಲರಾಗುತ್ತಾರೆ.
ಆದ್ದರಿಂದ ಫಿಟ್ ನೆಸ್ ದೇಹ ನಿಮ್ಮದಾಗಿಸಿಕೊಳ್ಳಲು ಈ ಮಿಸ್ಟೇಕ್ ಗಳಿಂದ ದೂರವಿರಿ:

ಮಿಸ್ಟೇಕ್ 1: ಪೋಷಕಾಂಶಗಳ ಬಗ್ಗೆ ಗಮನ ಕೊಡದಿರುವುದು
ಮೈ ತೂಕ ಕಮ್ಮಿಯಾಗಬೇಕು, ಆದರೆ ಫಿಟ್ ನೆಸ್ ಬೇಕು ಎಂದು ಬಯಸುವುದಾದರೆ ಪೋಷಕಾಂಶಗಳತ್ತ ಗಮನ ಕೊಡಿ. ವ್ಯಾಯಾಮ ಮಾಡಿ, ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ತಿಂದರೆ ದೇಹದ ತೂಕ ಕಮ್ಮಿ ಮಾಡಲು ಸಾಧ್ಯವಿಲ್ಲ, ವ್ಯಾಯಾಮ ಮಾಡಿ, ಸ್ವಲ್ಪವೂ ಕ್ಯಾಲೋರಿ ತೆಗೆದುಕೊಳ್ಳದಿದ್ದರೆ ದೇಹ ಸೊರಗುವುದು. ಅಲ್ಲದೆ ಕ್ಯಾಲೋರಿ ಇರುವ ಆಹಾರಗಳನ್ನು ಯಾವ ಹೊತ್ತಿನಲ್ಲಿ ತೆಗೆದುಕೊಳ್ಳಬೇಕು ಅನ್ನುವುದನ್ನು ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ಮಿಸ್ಟೇಕ್ 2: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಬೇಗನೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ ಎಂದು ಈ ರೀತಿ ಮಾಡಿದರೆ. ಖಾಲಿ ಹೊಟ್ಟೆಯಲ್ಲಿ ಮಾಡಿದರೆ ತುಂಬಾ ಹೊತ್ತು ವ್ಯಾಯಾಮ ಮಾಡಲು ಶಕ್ತಿ ಇರುವುದಿಲ್ಲ, ಆದ್ದರಿಂದ ವ್ಯಾಯಾಮಕ್ಕೆ ಮೊದಲು ಒಂದು ಗ್ಲಾಸ್ ನೀರು ಅಥವಾ ಜ್ಯೂಸ್ ಕುಡಿದ ಬಳಿಕ ವ್ಯಾಯಾಮ ಮಾಡುವುದು ಒಳ್ಳೆಯದು.

ಮಿಸ್ಟೇಕ್ 3
ಮಿಸ್ಟೇಕ್ 3: ವ್ಯಾಯಾಮದ ಬಳಿಕ ದೇಹದಲ್ಲಿ ಶಕ್ತಿ ಇರುವಂತೆ ನೋಡಿಕೊಳ್ಳಬೇಕು
ವ್ಯಾಯಾಮ ಮಾಡಿದ ಬಳಿಕ ದೇಹಕ್ಕೆ ಶಕ್ತಿ ತುಂಬುವ ಆಹಾರಗಳನ್ನು ತಿನ್ನಿ. ಇಲ್ಲಿ ಹೇಳಿರುವುದು ಶಕ್ತಿ ತುಂಬುವ ಆಹಾರದ ಬಗ್ಗೆ, ಬೊಜ್ಜು ತುಂಬುವ ಆಹಾರಗಳ ಬಗೆ ಅಲ್ಲ.

ಮಿಸ್ಟೇಕ್ 4
ಮಿಸ್ಟೇಕ್ 4:ಒಂದು ಅಥವಾ ಎರಡು ಹೊತ್ತು ಆಹಾರ ತಿನ್ನದಿರುವುದು
ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ ದೇಹದ ಆರೋಗ್ಯ ಹಾಳಾಗುವುದು, ಆದ್ದರಿಂದ ಆಹಾರ ತಿನ್ನದೆ ಸಣ್ಣಗಾಗುವ ಸಾಹಸಕ್ಕೆ ಕೈ ಹಾಕಬೇಡಿ. ದಿನದಲ್ಲಿ 4-5 ಬಾರಿ ತಿನ್ನಿ, ಆದರೆ ಸ್ವಲ್ಪ-ಸ್ವಲ್ಪ ತಿನ್ನಿ, ಫಿಟ್ ನೆಸ್ ಇರುವ ದೇಹ ನಿಮ್ಮದಾಗುವುದು.

ಮಿಸ್ಟೇಕ್ 5: ಭಾರ ಎತ್ತುವಾಗ ಎಚ್ಚರ
ಫಿಟ್ ನೆಸ್ ಗಾಗಿ ಭಾರ ಎತ್ತುವ ವ್ಯಾಯಾಮ ಮಾಡುವಾಗ ಮೂಳೆಗಳ ಮೇಲೆ ಬಲ ಬಿದ್ದು fractures ಆಗುವ ಸಾಧ್ಯತೆ ಇದೆ. ಆದ್ದರಿಂದ ಭಾರ ಎತ್ತುವ ವ್ಯಾಯಾಮವನ್ನು ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡಿ.

ಮಿಸ್ಟೇಕ್ 6: ಅತೀ ಕಡಿಮೆ ಭಾರ ಎತ್ತುವುದು
ಹೆಚ್ಚು ಭಾರ ಎತ್ತಿದರೆ ಮೂಳೆ ಮುರಿಯಬಹುದೆಂದು ಕೆಲವರು ಅತೀ ಕಡಿಮೆ ಭಾರವಿರುವ ಸಾಧನಗಳಿಂದ ವ್ಯಾಯಾಮ ಮಾಡುವುದರಿಂದ ಏನೂ ಪ್ರಯೋಜವಿಲ್ಲ ಅನ್ನುವುದು ನೆನಪಿರಲಿ.

ಮಿಸ್ಟೇಕ್ 7:
ನಿಮ್ಮ ವ್ಯಾಯಾಮವನ್ನು ಯಾವ ಅಂಶವೂ ಹಾಳು ಮಾಡದಿರಲಿ
ವ್ಯಾಯಾಮ ಮೈ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದ ನಿಮ್ಮ ವ್ಯಾಯಾಮ ಮಾಡುವುದನ್ನು ಒಂದು ಕಷ್ಟದ ಕೆಲಸವೆಂದು ಭಾವಿಸದೆ ಅದು ನಿಮ್ಮ ಆಸಕ್ತಿಯ ವಿಷಯನ್ನಾಗಿ ತೆಗೆದುಕೊಂಡರೆ ವ್ಯಾಯಾಮವನ್ನು ಮಿಸ್ ಮಾಡದೆ ನಿಯಮಿತವಾಗಿ ಮಾಡುವಿರಿ.



Click it and Unblock the Notifications
