Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದೇಹದಲ್ಲಿರುವ ಬೊಜ್ಜನ್ನು ಕರಗಿಸುವ ಆಹಾರಗಳಿವು
ಒಂದು ಕಡೆ ಕೂತು ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಬೇಗನೆ ಕಂಡು ಬರುತ್ತದೆ. ಓಡಾಡುತ್ತಾ, ದೈಹಿಕ ಕೆಲಸ ಮಾಡುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ಕೂತು ಕೆಲಸ ಮಾಡುವವರು ಪ್ರತೀದಿನ ಅರ್ಧ ಗಂಟೆ ವ್ಯಾಯಾಮ ಮಾಡಿದರೆ ಸಾಕು, ಆದರೆ ಕೆಲವರು ಪುರುಸೊತ್ತು ಇಲ್ಲ ಎಂದು ಮಾಡದಿದ್ದರೆ , ಮತ್ತೆ ಕೆಲವರು ಸೋಮಾರಿತನದಿಂದ ಮಾಡುವುದಿಲ್ಲ.
ಇನ್ನು ಆಹಾರಕ್ರಮದ ಬಗ್ಗೆಯಂತೂ ಹೆಚ್ಚಿನವರು ಗಮನ ಹರಿಸುವುದೇ ಇಲ್ಲ. ಪಿಜ್ಜಾ, ಬರ್ಗರ್ ನ ಪ್ರೇಮಿಗಳಾಗಿ ಬಿಟ್ಟಿರುತ್ತಾರೆ. ಇವೆಲ್ಲದರ ಪರಿಣಾಮ ಮೈ ತೂಕ ಹೆಚ್ಚಾಗಿ ಅನೇಕ ಸಮಸ್ಯೆಗಳು ಕಂಡು ಬರುವುದು.
ಸಮತೂಕ ಮೈ ಕಟ್ಟಿಗೆ ಊಟ, ತಿಂಡಿ ಬಿಡಬೇಕಾಗಿಲ್ಲ. ಆರೋಗ್ಯಕರ ಆಹಾರಗಳನ್ನು ರುಚಿಕರವಾಗಿ ಮಾಡಿ ಮಿತಿಯಲ್ಲಿ ತಿಂದರೆ ಸಾಕು. ಕೆಲವೊಂದು ಆಹಾರಗಳು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ. ಬನ್ನಿ ಆ ಆಹಾರಗಳಾವುವು ಎಂದು ನೋಡೋಣ.

ಮೊಟ್ಟೆ
ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ಪ್ರೊಟೀನ್ ಅಂಶವಿದೆ. ಬೆಳಗ್ಗೆ ಒಂದು ಮೊಟ್ಟೆ ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಓಟ್ಸ್
ಓಟ್ಸ್ ನಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ತಿನ್ನಲೂ ರುಚಿಕರವಾಗಿರುತ್ತದೆ.

ಸೇಬು
ಸೇಬಿನಲ್ಲಿ antiuoxidants ಮತ್ತು ಖನಿಜಾಂಶಗಳು ಅಧಿಕವಿದೆ. ಇದರಲ್ಲಿರುವ ಪೆಕ್ಟಿನ್ ಅಂಶ ದೇಹದಲ್ಲಿ ಹೆಚ್ಚು ಕೊಬ್ಬಿನಂಶ ಸಂಗ್ರಹವಾಗಲು ಬಿಡುವುದಿಲ್ಲ.

ಮೆಣಸು
ಮೆಣಸು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಕೊಬ್ಬನ್ನು ಕರಗಿಸುತ್ತದೆ.

ಬೆಳ್ಳುಳ್ಳಿ
ದಿನಾ ಬೆಳಗ್ಗೆ 1-2 ಎಸಳು ಹಸಿ ಬೆಳ್ಳುಳ್ಳಿ ತಿನ್ನಿ, ದೇಹದ ತೂಕ ಕಮ್ಮಿಯಾಗುವುದು, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ದವಸ ಧಾನ್ಯಗಳು
ದವಸ ಧಾನ್ಯಗಳಿಂದ ರುಚಿಕರವಾದ ಅಡುಗೆ ಮಾಡಿ ದಪ್ಪಗಾಗುತ್ತೇವೆ ಎಂಬ ಭಯವಿಲ್ಲದೆ ತಿನ್ನಬಹುದು.

ಸಿಟ್ರಸ್ ಆಹಾರ
ಪ್ರತೀದಿನ ಸಿಟ್ರಸ್ ಆಹಾರವನ್ನು ತಿನ್ನಿ. ಇವುಗಳು ಕೊಬ್ಬನ್ನು ಕರಗಿಸಲು ಮಾತ್ರವಲ್ಲ ಜೀರ್ಣಕ್ರಿಯೆಗೆ, ಕೂದಲಿನ ಆರೋಗ್ಯಕ್ಕೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಮೀನು
ಮೀನನ್ನು ಫ್ರೈ ಮಾಡಿ ತಿನ್ನಬೇಡಿ. ಸಾರು ಅಥವಾ ಗ್ರಿಲ್ಡ್ ಮಾಡಿ ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು.

ನಟ್ಸ್
ಕುರುಕಲು ತಿಂಡಿ ತಿನ್ನುವ ಬದಲು ನಟ್ಸ್ ತಿನ್ನಿ. ಇವು ಸಮತೂಕದ ಮೈ ಕಟ್ಟು ಪಡೆಲು ಸಹಾಯ ಮಾಡುತ್ತದೆ.

ಜೇನು
ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಕುಡಿದರೆ ಮೈ ತೂಕ ಕಮ್ಮಿಯಾಗುವುದು.

ಟೊಮೆಟೊ
ಪ್ರತೀದಿನ ಟೊಮೆಟೊ ಜ್ಯೂಸ್ ಕುಡಿಯಿರಿ, ಇದರಿಂದ ಹೊಟ್ಟೆಯೂ ತುಂಬುವುದು, ದೇಹದಲ್ಲಿರುವ ಬೊಜ್ಜು ಕೂಡ ಕರಗುವುದು.

ಗ್ರೀನ್ ಟೀ
ದಿನಾ ಒಂದು ಲೋಟ ಗ್ರೀನ್ ಟೀ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಮೈ ತೂಕ ಕಮ್ಮಿಯಾಗುವುದು, ಇದು ಹೊಟ್ಟೆಯ ಬೊಜ್ಜನ್ನು ಬೇಗನೆ ಕರಗಿಸುತ್ತದೆ.



Click it and Unblock the Notifications
