Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಣ್ಣಗಾಗಲು ನಡೆಯುವ ವಿಧಾನವೇ ಬೇರೆ...
ಹೆಚ್ಚಿನವರು ಸಣ್ಣಗಾಗಲು ನಡೆಯುವ ವ್ಯಾಯಾಮವನ್ನು ಮಾಡುತ್ತಾರೆ. ಆದರೆ ನಡೆಯುವುದರಿಂದ ದೇಹದ ತೂಕ ಹೆಚ್ಚಾಗದಂತೆ ತಡೆಯಬಹುದೇ ಹೊರತು ಬೇಗನೆ ತೂಕ ಕಡಿಮೆಯಾಗಲು ಸಾಧ್ಯವಿಲ್ಲ. ಬೇಗನೆ ದೇಹದ ತೂಕ ಕಡಿಮೆಯಾಗಬೇಕೆಂದು ಬಯಸುವವರು ಓಡುವ, ಈಜುವ ವ್ಯಾಯಾಮವನ್ನು ಮಾಡಬೇಕು. ಮಿತಿಯಲ್ಲಿ ತಿನ್ನುವುದು ಹಾಗೂ ಜೋರಾಗಿ ನಡೆಯುವ ವ್ಯಾಯಾಮದಿಂದ ಸ್ವಲ್ಪ ಮಟ್ಟಿಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಓಡುವುದಕ್ಕೆ ಸಾಧ್ಯವಿಲ್ಲ ಆದರೆ ಪ್ರತಿದಿನ ನಡೆಯುವ ವ್ಯಾಯಾಮ ಮಾಡಿ ದೇಹದ ಬೊಜ್ಜು ಕರಗಿಸುತ್ತೇನೆ ಎಂದು ಬಯಸುವವರು ಬರೀ ಪಾರ್ಕ್ ಸುತ್ತ ಸುತ್ತಿದರೆ ಸಾಲದು, ಸಣ್ಣಗಾಗಲು ನಡೆಯುವ ವ್ಯಾಯಾಮದಲ್ಲಿ ಕೆಲವೊಂದು ವಿಧಾನಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಸಣ್ಣಗಾಗಲು ಸಾಧ್ಯ, ಇಲ್ಲದಿದ್ದರೆ ನಡೆಯುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು ಅಷ್ಟೇ. ಆದ್ದರಿಂದ ಸಣ್ಣಗಾಗಲು ನಡೆಯುವ ವ್ಯಾಯಾಮ ಹೇಗಿರಬೇಕೆಂದು ನೋಡೋಣ ಬನ್ನಿ:

1. ಒಬ್ಬರೇ ನಡೆಯಿರಿ: ಸ್ನೇಹಿತರ ಜೊತೆ ಗುಂಪು ಕಟ್ಟಿಕೊಂಡು ನಡೆಯುವುದು ಮಾಡಬೇಡಿ. ಈ ರೀತಿ ಗುಂಪು ಕಟ್ಟಿಕೊಂಡು ನಡೆದರೆ ಮಾತನಾಡುತ್ತಾ ನಡಿಗೆ ನಿಧಾನವಾಗುತ್ತದೆ, ಇದರಿಂದಾಗಿ ಪ್ರಯೋಜನ ದೊರೆಯುವುದಿಲ್ಲ. ಆದ್ದರಿಂದ ಒಬ್ಬರೇ ನಡೆಯಿರಿ.
2. ವೇಗದ ನಡಿಗೆ: ಸಣ್ಣಗಾಗಲುವೇಗವಾಗಿ ನಡೆಯಬೇಕು. ಹೀಗೆ ನಡೆಯುವಾಗ ಸುಸ್ತು ಆದರೂ ಸ್ವಲ್ಪ ನಿಧಾನ ಮಾಡಿ ನಂತರ ಪುನಃ ನಡಿಗೆ ವೇಗವನ್ನು ಹೆಚ್ಚಿಸಿ. ಈ ರೀತಿ ವೇಗವಾಗಿ ನಡಿದರೆ ಕ್ಯಾಲೋರಿ ಬೇಗನೆ ನಡೆಯುತ್ತದೆ.
3. ಹತ್ತಿ-ಇಳಿಯುವಂತಹ ಪ್ರದೇಶ: ಸಮತಟ್ಟಾದ ಪ್ರದೇಶಗಳಲ್ಲಿ ನಡೆಯುವುದಕ್ಕಿಂತ ಹತ್ತಿ, ಇಳಿಯುವಂತಹ ಪ್ರದೇಶದಲ್ಲಿ ನಡೆದರೆ ದೇಹಕ್ಕೆ ಸುಂದರ ಆಕಾರ ದೊರೆಯುತ್ತದೆ ಹಾಗೂ ಬೇಗನೆ ಸಣ್ಣಗಾಗಬಹುದು.
4. ಪ್ರತಿದಿನ ನಡೆಯಬೇಕು: ಎರಡು ದಿನ ನಡೆದು ನಂತರ ಸೋಮಾರಿತತನ ಬಂದು ನಡೆಯದೆ ಇರಬಾರದು. ನಡೆಯುವ ವ್ಯಾಯಾಮ ಪ್ರಾರಂಭಿಸಿದರೆ ಪ್ರತಿದಿನ ತಪ್ಪದೆ ಮಾಡಿ. ಈ ರೀತಿ ಮಾಡಿದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.
5. ವಾಕಿಂಗ್ ಡಯಟ್: ವಾಕಿಂಗ್ ಡಯಟ್ ಅಂದರೆ ನಡುಗೆಯ ಜೊತೆಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ತುಂಬಾ ಕ್ಯಾಲೋರಿ ಇರುವ ಅಹಾರ ತಿಂದು ನಂತರ ನಡೆದರೆ ಅಷ್ಟೇನು ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಹಾರಕ್ರಮದ ಬಗ್ಗೆ ಎಚ್ಚರಿಕೆವಹಿಸಬೇಕು.
6. ಬೀಚ್ ನಲ್ಲಿ ನಡೆಯುವುದು: ಸಮುದ್ರ ತೀರದಲ್ಲಿ ಮರಳಿರುವುದರಿಂದ ನಡೆಯುವುದು ಕಷ್ಟ, ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆದ್ದರಿಂದ ಬೀಚ್ ನಲ್ಲಿ ನಡೆಯುವುದರಿಂದ ದೇಹದ ತೂಕವನ್ನು ಅತೀ ಶೀಘ್ರವೇ ಕರಗಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
