Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೆಳ್ಳಗಿದ್ದರೂ ಕಾಡಬಹುದು ಹೊಟ್ಟೆ ಬೊಜ್ಜು!
ಬೊಜ್ಜು ಹೊಟ್ಟೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ದಪ್ಪಗಿದ್ದವರಿಗೆ ಮಾತ್ರವಲ್ಲ ತೆಳ್ಳಗಿದ್ದವರಿಗೂ ಹೊಟ್ಟೆ ದಪ್ಪಗಾಗುತ್ತದೆ. ಬೊಜ್ಜು ಹೊಟ್ಟೆಯಲ್ಲಿ ಅನೇಕ ವಿಧಗಳಿವೆ. ಕೆಳಹೊಟ್ಟೆಯ ಬೊಜ್ಜು, ಮಡಿಕೆಯಂತಹ ಹೊಟ್ಟೆ, ಬೀರ್ ಹೊಟ್ಟೆ ಹೀಗೆ ಹೊಟ್ಟೆಯ ಬೊಜ್ಜನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ.
ಅಧಿಕ ಕ್ಯಾಲೋರಿಯ ಆಹಾರಗಳನ್ನು ತಿನ್ನುವುದರಿಂದ, ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಹೊಟ್ಟೆ ಬೊಜಿನ ಸಮಸ್ಯೆ ಉಂಟಾಗುವುದು. ದಿನದಲ್ಲಿ ಅರ್ಧ ಗಂಟೆ ನಿಯಮಿತ ವ್ಯಾಯಾಮ ಮಾಡುವವರಿಗೆ ಈ ಹೊಟ್ಟೆ ಬೊಜ್ಜಿನ ಸಮಸ್ಯೆ ಕಂಡು ಬರುವುದಿಲ್ಲ.

ಸಾಮಾನ್ಯವಾಗಿ ಸಣ್ಣಗಿದ್ದವರಿಗೆ ನನಗೆ ವ್ಯಾಯಾಮ ಅಗತ್ಯವಿಲ್ಲ, ಹೊಟ್ಟೆ ಬೊಜ್ಜಿನ ಸಮಸ್ಯೆ ಕಂಡು ಬರುವುದಿಲ್ಲ ಎಂಬ ಭಾವನೆ ಇರುತ್ತದೆ. ಹೊಟ್ಟೆ ಬೊಜ್ಜಿಗೂ, ದೇಹದ ತೂಕಕ್ಕೂ ಸಂಬಂಧವಿಲ್ಲ. ಬೊಜ್ಜು ಹೊಟ್ಟೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಬೊಜ್ಜು ಹೊಟ್ಟಯಿಂದ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗಿ ಕಾಯಿಲೆಗಳು ಶುರುವಾಗುವುದು.
ಇದು ದೇಹಕ್ಕೆ ಆಮ್ಲಜನಕ ಪೂರೈಕೆಗೆ ತಡೆಯೊಡ್ಡುತ್ತದೆ. ಹೊಟ್ಟೆಯನ್ನು ಹೋಗಲಾಡಿಸಬೇಕೆಂದು ಸರಿಯಾಗಿ ಊಟ ಮಾಡದೆ ಕಾಯಿಲೆ ಬೀಳುವ ಬದಲು ಚೆನ್ನಾಗಿ ತಿಂದು ವ್ಯಾಯಾಮ ಮಾಡಿದರೆ ಸಾಕು ಹೊಟ್ಟೆಯ ಬೊಜ್ಜು ಕರಗುವುದು.
ಬರೀ ಡಯಟ್ ಮಾಡಿ ದೇಹದ ತೂಕ ಕ್ಮಮಿ ಮಾಡಲು ಪ್ರಯತ್ನಿಸಿದರೆ ಹೃದ್ರೋಗದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಎಚ್ಚರ!
ಹೊಟ್ಟೆ ಬೊಜ್ಜು ಕರಗಿಸಲು ಮಾರ್ಗಗಳು
* ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡುವುದು
*ಧ್ಯಾನದ ಮುಖಾಂತರ ಮಾನಸಿಕ ಒತ್ತಡವನ್ನು ಹೊರದಬ್ಬುವುದು
* ಸಾಕಷ್ಟು ನೀರು ಕುಡಿದು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವುದು.
ಓಟ್ಸ್, ಗೋಧಿ, ಕೆಂಪಕ್ಕಿ ಅನ್ನ, ಹಸಿರು ತರಕಾರಿ ಇವುಗಳನ್ನು ಆಹಾರಕ್ರಮದಲ್ಲಿ ಶೇರಿಸಿದರೆ ಹೊಟ್ಟೆ ಬೊಜ್ಜಿನಿಂದ ಪಾರಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
