Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಿಜ್ಜಾ ತಿಂದರೂ ದಪ್ಪಗಾಗದಿರಲು ಸರಳ ಸೂತ್ರ!

ವಾರಪೂರ್ತಿ ಡಯಟ್ ಮಾಡಿ ನಂತರ ವೀಕೆಂಡ್ ನಲ್ಲಿ ಒಂದು ದಿನ ತಾನೆ ಎಂದು ಪಿಜ್ಜಾ ತಿಂದು ಬಿಡುತ್ತೇವೆ. ಪಿಜ್ಜಾ ಮಾತ್ರಕ್ಕೆ ನಿಲ್ಲಿಸುವುದಿಲ್ಲ, ಕೋಕ್, ಐಸ್ ಕ್ರೀಮ್ ಅಂತ ಹೊಟ್ಟೆಗೆ ಇಳಿಸುತ್ತೇವೆ. ಅಲ್ಲಿಗೆ ಒಂದು ವಾರದ ಡಯಟ್ ನಿಷ್ಪ್ರಯೋಜಕವಾಗಿ ಬಿಡುತ್ತದೆ.
ಚಿಂತೆ ಮಾಡಬೇಡಿ, ಪಿಜ್ಜಾ ತಿಂದರೂ ದೇಹದ ತೂಕ ಹೆಚ್ಚಾಗದಿರಲು ಈ ಕೆಳಗಿನ ಸೂತ್ರಗಳನ್ನು ಪಾಲಿಸಿ. ಈ ಸೂತ್ರ ನೆನೆಪಿಡಲು ಸುಲಭ.
ಈ ಸೂತ್ರಕ್ಕೆ ಬೇಕಾದ ವಸ್ತುಗಳು
ಒಂದು ಸೇಬು ಮತ್ತು ಒಂದು ಸಾಧಾರಣ ಗಾತ್ರದ ಲೋಟ ನನೀರು ಇಟ್ಟುಕೊಳ್ಳಬೇಕು. ನಂತರ ಈ ಕೆಳಗಿನಂತೆ ಮಾಡಿ
ವಿಧಾನ 1: ಪಿಜ್ಜಾ ತಿನ್ನುವ 15-20 ನಿಮಿಷ ಮೊದಲು ಸಾಧಾರಣ ಗಾತ್ರದ ಸೇಬು ತಿನ್ನಬೇಕು. ಇದನ್ನು ಪಿಜ್ಜಾ ಸೆಂಟರ್ ಗೆ ಹೋಗುವ ದಾರಿಯಲ್ಲಿ ಗಾಡಿಯಲ್ಲಿ ಹೋಗುವಾಗ ತಿಂದುಕೊಂಡು ಹೋದರೂ ಸಾಕು. (ಕುಡಿದು ಗಾಡಿ ಓಡಿಸಿದರೆ ತಪ್ಪು, ಸೇಬು ತಿನ್ನುತ್ತಾ ಗಾಡಿ ಹೋಡಿಸಬಹುದಲ್ವಾ?)
ವಿಧಾನ 2: ನಂತರ ಪಿಜ್ಜಾ ಸೆಂಟರ್ ಹೋಗಿ ಪಿಜ್ಜಾಕ್ಕೆ ಆರ್ಡರ್ ಕೊಡುವಾಗ ಒಂದು ನೀರಿನ ಬಾಟಲಿ ಕೂಡ ಕೊಂಡುಕೊಳ್ಳಿ, ನಂತರ ಪಿಜ್ಜಾ ಬಂದ ನಂತರ ಒಂದೊಂದು ತುಂಡು ತಿನ್ನುವಾಗಲೂ ಒಂದು ಲೋಟ ನೀರು ಕುಡಿಯಿರಿ, ನಾಲ್ಕು ಪೀಸ್ ಪಿಜ್ಜಾ ತಿಂದರೆ ನಾಲ್ಕು ಗ್ಲಾಸ್ ನೀರು ಕುಡಿಯಬೇಕು . ಈ ರೀತಿ ಮಾಡಿದ್ದೇ ಆದರೆ ಒಳ್ಳೆಯ ಪ್ರಯೋಜನವನ್ನು ಕಾಣಬಹುದು.
ಇದಲ್ಲದೆ ಈ ಕೆಳಗಿನ ಸಲಹೆಗಳನ್ನು ಕೂಡ ಪಾಲಿಸಬಹುದು:
ಮನೆಯಲ್ಲಿ ಪಿಜ್ಜಾ ತಂದು ತಿನ್ನುವುದಾದರೆ ಒಂದು ತುಂಡು ತಿಂದು ನಂತರ ಒಂದು ಲೋಟ ನೀರು ಕುಡಿದು ಸ್ವಲ್ಪ ಮನೆ ಕೆಲಸ ಮಾಡಿ ಅಥವಾ ಸ್ವಲ್ಪ ಹೊತ್ತು ಓಡಾಡಿ ನಂತರ ತಿನ್ನಿ. ಈ ಮಾಡಿದರೆ ಪಿಜ್ಜಾ ಸ್ವಲ್ಪ ತಿಂದರೂ ಸಾಕಾಗುವುದು.
ಸಲಹೆ: ಒಂದು ವೇಳೆ ನಿಮಗೆ ಪಿಜ್ಜಾ ತುಂಬಾ ಇಷ್ಟವಿದ್ದರೂ ಒಂದು ಪಿಜ್ಜಾ ಒಬ್ಬರೇ ತಿನ್ನಬೇಡಿ , ಸ್ನೇಹಿತರ ಜೊತೆ ಹೋಗಿ, 2 ಪೀಸ್ ಗಿಂತ ಅಧಿಕ ಪಿಜ್ಜಾ ತಿನ್ನಲು ಹೋಗಬೇಡಿ. ಏಕೆಂದರೆ ಸಮತೂಕದ ಮೈಕಟ್ಟಿಗೆ 2000 ಕ್ಯಾಲೋರಿ ಮಾತ್ರ ತಿನ್ನಬೇಕು. ಆದರೆ ಚೀಸ್ ಹಾಕಿ ತಯಾರಿಸಿದ ಪಿಜ್ಜಾದಲ್ಲಿ 5000 ಕ್ಯಾಲೋರಿ ಇರುತ್ತದೆ.
ಪಿಜ್ಜಾ ತಿಂದ ಮೇಲೆ ಆ ದಿನ ಇತರ ಆಹಾರಗಳನ್ನು ಸೇವಿಸುವಾಗ ಕ್ಯಾಲೋರಿ ಕಡಿಮೆ ಇರುವ ಆಹಾರ ತಿನ್ನಿ. ಈ ರೀತಿ ಮಾಡಿದರೆ ಪಿಜ್ಜಾ ತಿಂದರೂ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
