Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಮತೂಕದ ಮೈಕಟ್ಟು ಪಡೆಯಲು ಮಹಿಳೆಯರಿಗೆ 8 ಟಿಪ್ಸ್
ಮದುವೆಯ ನಂತರ ಅಥವಾ ಮಗುವಾದ ನಂತರ ಹೆಚ್ಚಿನ ಮಹಿಳೆಯರು ದಪ್ಪಗಾಗುತ್ತಾರೆ. ತಮ್ಮ ಹಿಂದಿನ ಫೋಟೊ ನೋಡಿ ತೆಳ್ಳಗಾಗಿ ಎಷ್ಟೊಂದು ಚೆನ್ನಾಗಿದ್ದೆ ಎಂದು ಅಂದುಕೊಳ್ಳುತ್ತಾರೆ. ಮದುವೆಯಾದ ಮೇಲೆ ದಪ್ಪಗಾದರೆ ತೆಳ್ಳಗಾಗಲು ಹೆಚ್ಚಿನವರು ಪ್ರಯತ್ನಿಸುವುದಿಲ್ಲ, ಮದುವೆಯಾಗಿದೆ ದಪ್ಪಗಾದರೆ ಇನ್ನೇನು? ಎಂದು ಸುಮ್ಮೆನಿದ್ದು ಬಿಡುತ್ತಾರೆ.
ಆದರೆ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯ. ಬರೀ ಸೌಂದರ್ಯಕ್ಕಾಗಿ ಮಾತ್ರವಲ್ಲ, ದೇಹದ ಾರೋಗ್ಯವನ್ನು ಕಾಪಾಡಲು ಕೂಡ. ಏಕೆಂದರೆ ತೂಕ ಹೆಚ್ಚಾದರೆ ಕಾಯಿಲೆಗಳು ಪ್ರಾರಂಭವಾಗುತ್ತದೆ. ಇಲ್ಲಿ ನಾವು ಕೆಲವು ಹಣ್ಣುಗಳ ಬಗ್ಗೆ ಹೇಳಿದ್ದೇವೆ. ಅವುಗಳನ್ನು ತಿನ್ನುವುದರಿಂದ ಸಮತೂಕವನ್ನು ಕಾಪಾಡಿಕೊಳ್ಳಬಹುದು.

ದ್ರಾಕ್ಷಿ
ಬೆಳಗ್ಗೆ ಕಪ್ಪು ದ್ರಾಕ್ಷಿಯ ಜ್ಯೂಸ್ ಕುಡಿಯುವುದರಿಂದ ಅಥವಾ ದ್ರಾಕ್ಷಿಯನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುವುದನ್ನು ತಡೆಯಬಹುದು.

ಗೋಧಿ
ಅನ್ನದ ಬದಲು ಗೋಧಿ ಆಹಾರವನ್ನು ಹೆಚ್ಚಾಗಿ ಸೇವಿಸಿಬೇಕು. ರಾತ್ರಿ ಲಘು ಆಹಾರ ಸೇವಿಸಬೇಕು. ರಾತ್ರಿಗೆ ಚಪಾತಿ ಒಳ್ಳೆಯದು.

ಕೆಂಪು ಮೆಣಸು
ಅಡುಗೆಯಲ್ಲಿ ಕೆಂಪು ಮೆಣಸು, ಕರಿ ಮೆಣಸನ್ನು ಬಳಸಿದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗುತ್ತದೆ.

ರಾಸ್ ಬೆರ್ರಿ
ರಾಸ್ ಬೆರ್ರಿ ಜೀರ್ಣಕ್ರಿಯೆ ನಿಧಾನಕ್ಕೆ ಆಗುವಂತೆ ಮಾಡುವುದರಿಂದ ಬೇಗನೆ ಹೊಟ್ಟೆ ಹಸಿಯುವುದಿಲ್ಲ ಹಾಗೂ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ.

ನಟ್ಸ್
ಏನಾದರೂ ಸ್ನ್ಯಾಕ್ಸ್ ತಿನ್ನಬೇಕೆನಿಸಿದರೆ ನಟ್ಸ್ ತಿನ್ನಿ ಕುರುಕಲು ತಿಂಡಿಗಳು ಬಾಯಿಗೆ ರುಚಿ ಕೊಟ್ಟರೂ ನಿಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ.

ಕಿತ್ತಳೆ
ಕಿತ್ತಳೆ ತುಂಬಾ ಒಳ್ಳೆಯದು. ಬೆಳಗ್ಗೆ ಎದ್ದು ಒಂದು ಕಿತ್ತಳೆ ತಿನ್ನುವುದು ಅಥವಾ ಕಿತ್ತಳೆ ಜ್ಯೂಸ್ ಕುಡಿಯುವುದು ಮಾಡಿದರೆ ದೇಹದ ತೂಕ ಹೆಚ್ಚಾಗುವುದಿಲ್ಲ ಅಲ್ಲದೆ ಈ ಹಣ್ಣು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

ಸ್ಟ್ರಾಬರಿ ಮತ್ತು ಇತರ ಬೆರ್ರಿ
ಸ್ಟ್ರಾಬರಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಹಾಗೂ ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ನಿಂಬೆ ಹಣ್ಣು
ಊಟದ ನಂತರ ನಿಂಬೆ ಪಾನಕ ಕುಡಿಯಿರಿ. ಇದರಿಂದ ದೇಹಕ್ಕೂ ಒಳ್ಳೆಯದು ತೂಕವೂ ಹೆಚ್ಚಾಗುವುದಿಲ್ಲ.



Click it and Unblock the Notifications
