Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೊಜ್ಜು ಹೊಟ್ಟೆ ಕರಗಿಸುವ ಐದು ಗಿಡಮೂಲಿಕೆಗಳು
ಹಳ್ಳಿಯಲ್ಲಿರುವವರಿಗಿಂತ ಪಟ್ಟಣದಲ್ಲಿರುವವರಲ್ಲಿ ಬೊಜ್ಜು ಹೊಟ್ಟೆ ಹೆಚ್ಚಾಗಿ ಕಂಡು ಬರುತ್ತದೆ. ಕಾರಣ ಇಷ್ಟೆ ಹಳ್ಳಿಗಳಲ್ಲಿ ಒಂದು ಕಡೆ ಕೂತು ಮಾಡುವ ಕೆಲಸಕ್ಕಿಂತ ತೋಟ-ಗದ್ದೆ ಅಂತ ಓಡಾಡಿಕ್ಕೊಂಡು ಇರುವುದರಿಂದ ಮೈಗೆ ಸ್ವಲ್ಪ ವ್ಯಾಯಾಮ ದೊರೆಯುತ್ತದೆ. ಆದರೆ ನಗರದ ದೊಡ್ಡ-ದೊಡ್ಡ ಕಂಪನಿಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಕೂತುಕೊಂಡು ಮಾಡುವ ಕೆಲಸ ಆಗಿರುತ್ತದೆ. ಹೆಚ್ಚು ನಡೆದಾಡುವುದಿಲ್ಲ. ಎರಡನೇ ಮಹಡಿಗೆ ಹೋಗುವುದಾದರೆ ಲಿಫ್ಟ್ ಬಳಸಿ ಹೋಗುತ್ತಾರೆ. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಹೆಚ್ಚಿನವರಲ್ಲಿ ಇರುವುದಿಲ್ಲ. ಇವುಗಳ ಪರಿಣಾಮ ಹೊಟ್ಟೆ ಮೇಲೆ ಬೀಳುತ್ತದೆ. ಬೊಜ್ಜು ಹೊಟ್ಟೆ ಬರಲಾರಂಭಿಸುತ್ತದೆ. ನಿಧಾನಕ್ಕೆ ಕೊಲೆಸ್ಟ್ರಾಲ್ , ಡಯಾಬಿಟಿಸ್ ನಂತಹ ಕಾಯಿಲೆಗಳು ಬರುತ್ತವೆ.
ಆದ್ದರಿಂದ ಬೊಜ್ಜು ಹೊಟ್ಟೆ ಬರಲು ಅವಕಾಶ ಕೊಡಬಾರದು. ಒಂದು ವೇಳೆ ಬಂದಿದ್ದರೂ ಅದನ್ನು ಕರಗಿಸುವುದು ಒಳ್ಳೆಯದು. ಆದರೆ ಹೊಟ್ಟೆಯ ಬೊಜ್ಜು ಕರಗಿಸಲು ಇನ್ನಿತರ ಮಾರ್ಗ ಉಪಯೋಗಿಸಿಕೊಳ್ಳುವುದಕ್ಕಿಂತ ಈ ನೈಸರ್ಗಿಕ ಮಾರ್ಗವನ್ನು ಬಳಸಿಕೊಳ್ಳುವುದು ಹೆಚ್ಚು ಸೂಕ್ತ. ಈ ಕೆಳಗಿನ ಗಿಡಮೂಲಿಕೆಗಳು ಹೊಟ್ಟೆಯ ಬೊಜ್ಜ ಕರಗಿಸಿ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ:

ಗೋಧಿ ಹುಲ್ಲು:
ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

ಶುಂಠಿ:
ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿರುವ ಶುಂಠಿ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್ ನೆಸ್ ಕಾಪಾಡಿಕೊಳ್ಳಬಹುದು.

ಕೆಂಪು ಮೆಣಸಿನಕಾಯಿ:
ಕೆಂಪು ಮೆಣಸಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದಲ್ಲದೆ ದೇಹದಲ್ಲಿ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಬೊಜ್ಜು ಕರಗಿಸುವಲ್ಲಿಯೂ ಹೆಚ್ಚು ಶಕ್ತಿಯುತವಾಗಿರುವ ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸಬೇಕು. ಇಲ್ಲವೆಂದರೆ ಹೊಟ್ಟೆಯಲ್ಲಿ ಉರಿಯೂ ಉಂಟಾಗುತ್ತದೆ.

ಕಹಿ ಹುಳಿ ಅಥವಾ ಕಹಿ ನಿಂಬೆಹಣ್ಣು:
ಕಹಿ ಕಿತ್ತಳೆ ನೈಸರ್ಗಿಕವಾಗಿ ದೇಹದ ತೂಕ ಇಳಿಸುತ್ತದೆ. ಇದು ದೇಹದ ಅನೇಕ ಭಾಗದಲ್ಲಿ ಅಧಿಕವಾಗಿ ತುಂಬಿಕೊಂಡ ಬೊಜ್ಜನ್ನು ಕ್ರಮೇಣ ಕರಗಿಸುತ್ತದೆ. ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೂ ಕಹಿ ಕಿತ್ತಳೆ ಸೇವನೆ ಒಳ್ಳೆಯದು. ಪಿತ್ತ ನಿವಾರಿಸುತ್ತದೆ.

ಗ್ರೀನ್ ಟೀ:
ಗ್ರೀನ್ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಪರಿಣಾಮಕಾರಿಯಾಗಿ ಸಾಧ್ಯವಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿದರೆ ಟೀಯಲ್ಲಿನ ಆಂಟಿಯಾಕ್ಸಿಡಂಟ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.



Click it and Unblock the Notifications
