Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಟಮ್ಮಿಕರಗಿಸಲು ಇಲ್ಲಿದೆ ಸುಲಭದ ಟ್ರಿಕ್ಸ್
ಬೆಳಗ್ಗೆ ಎದ್ದು ಗಡಿ ಬಿಡಿಯಲ್ಲಿ ಆಫೀಸ್ ಗೆ ಓಡುವುದು ಆಯ್ತು. ಬೆಳಗ್ಗೆ ಎದ್ದು ವ್ಯಾಯಾಮ ಮಾಡೋಣ ಅಂತ ರಾತ್ರಿ ಯೋಚನೆ ಮಾಡಿ ಮಲಗಿರುತ್ತೇವೆ. ಆದರೆ ಬೆಳಗ್ಗೆ ಏಳಲು ಉದಾಸೀನ, "ಅಯ್ಯೋ ಯಾರಪ್ಪಾ ಇಷ್ಟು ಬೇಗ ಏಳುತ್ತಾರೆ, ಸ್ವಲ್ಪ ಮಲಗುವ, ಸಂಜೆ ಮಾಡಿದರಾಯ್ತು" ಅಂತ ಯೋಚನೆ ಮಾಡಿ ಲೇಟಾಗಿ ಎದ್ದು ಗಡಿ ಬಿಡಿಯಲ್ಲಿ ಆಫೀಸ್ ಗೆ ಓಡಿ ಬರುತ್ತೇವೆ. ಆಫೀಸ್ ನಲ್ಲೂ ಬಂದು ಬೆಳಗಿನಿಂದ ಸಂಜೆವರೆಗೆ ಕೂತು ಮಾಡುವ ಕೆಲಸ. ಸಂಜೆ ಸುಸ್ತಾಗಿದ್ದೇನೆ ನಂಗೆ ಈಗ ವ್ಯಾಯಾಮ ಮಾಡಲು ಆಗಲ್ಲ, ನಾಳೆ ಮಾಡುವ" ಈ ರೀತಿ ನಮ್ಮಲ್ಲಿ ಅನೇಕರು ವ್ಯಾಯಾಮ ಮಾಡಲು ದಿನವನ್ನು ಮುಂದೂಡುತ್ತಾ ಇರುತ್ತೇವೆ.
ಇನ್ನು ಬಾಯಿ ಚಪಲಕ್ಕೆ ಕುರುಕಲು ತಿಂಡಿಗಳೇ ಬೇಕು. ಸ್ವಲ್ಪ ದಿನಗಳಲ್ಲಿ ಹೊಟ್ಟೆ ಬೊಜ್ಜು ಬಂದಿರುತ್ತದೆ. ಆಗ ಹೇಗಪ್ಪಾ ಇದನ್ನು ಕರಗಿಸುವುದು ಎಂದು ಒದ್ದಾಡುತ್ತೇವೆ ಅಲ್ಲವೇ? ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಹೊಟ್ಟೆ ಬೊಜ್ಜಿನ ಬಗ್ಗೆ ಚಿಂತಿಸಬೇಕಾಗಿಲ್ಲ.

ಸಮಯದ ಮ್ಯಾಜಿಕ್
ಪ್ರೋಟೀನ್ ಇರುವ ಸ್ನಾಕ್ಸ್ ಅನ್ನು ಸಂಜೆ 3-4 ಗಂಟೆ ಹೊತ್ತಿಗೆ ತಿನ್ನಬೇಕು. ಇದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು. ಸಕ್ಕರೆ ಅಂಶ ಕಡಿಮೆ ಇದ್ದರೆ ಇನ್ಸುಲಿನ್ ಕಡಿಮೆಯಾಗುತ್ತದೆ. ಇನ್ಸುಲಿನ್ ಕಡಿಮೆಯಾದರೆ ಸೊಂಟದ ಸುತ್ತ ಕೊಬ್ಬಿನಂಶ ಸಂಗ್ರಹವಾಗುತ್ತದೆ. ಆದ್ದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸ್ವಲ್ಪ -ಸ್ವಲ್ಪ ಆಹಾರನ್ನು 3-4 ಗಂಟೆಗಳ ಬಿಡುವಿನಲ್ಲಿ ತಿನ್ನಬೇಕು. ಈ ರೀತಿ ಮಾಡಿದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚು-ಕಡಿಮೆಯಾಗದೆ ಸರಿಯಾದ ರೀತಿಯಲ್ಲಿರುತ್ತದೆ.

ಬಾಲ್ ವ್ಯಾಯಾಮ
ಬಾಲ್ ಅನ್ನ ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಮಲಗಬೇಕು. ಈಗ ಬಾಲ್ ಅನ್ನು ತಲೆಯ ಹತ್ತಿರ ಹಿಡಿದು ನಿಧಾನಕ್ಕೆ ಅದನ್ನು ಎದೆ ಭಾಗಕ್ಕೆ, ನಂತರ ಸೊಂಟಕ್ಕೆ ನಂತರ ಕಾಲಿನವರೆಗೆ ತಂದು ಅದನ್ನು ಪಾದಗಳ ನಡುವಿನಲ್ಲಿಟ್ಟು ನಂತರ ತೆಗೆದು ತಲೆ ಹತ್ತಿರ ಹಿಡಿದು ಪುನಃ ಇದೇ ರೀತಿ ಮಾಡಿ. ಈ ರೀತಿ ದಿನಾ 3-4 ಬಾರಿ ಮಾಡಿದರೆ ಸಾಕು ಹೊಟ್ಟೆಯ ಬೊಜ್ಜು ಕರಗುವುದು.

ಜೀರೋ ಗ್ರಾಂ ಆಫ್ ಶುಗರ್
ಜೀರೋ ಗ್ರಾಂ ಆಫ್ ಶುಗರ್ ಅನ್ನು ಟೀ , ಕಾಫಿಗೆ ಬಳಸುವುದರಿಂದ, ಸಕ್ಕರೆಯಂಶ ಇಲ್ಲದ ತಿಂಡಿ ತಿನ್ನುವುದರಿಂದ, ಕರಿದ ಪದಾರ್ಥಗಳಿಂದ ದೂರವಿರುವುದರಿಂದ ಕೂಡ ಬೊಜ್ಜು ಹೊಟ್ಟೆ ಬರುವುದನ್ನು ತಡೆಯಬಹುದು.

ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿ
ಆಹಾರವನ್ನು ಚೆನ್ನಾಗಿ ಜಗಿದು ತಿಂದರೆ ಜೀರ್ಣಕ್ರಿಯೆ ಸುಲಭವಾಗುವುದು ಹಾಗೂ ಹೊಟ್ಟೆ ಗ್ಯಾಸ್ ನ ಸಮಸ್ಯೆ ಉಂಟಾಗುವುದಿಲ್ಲ.

ಉಪ್ಪು
ಕಡಿಮೆ ಸೋಡಿಯಂ ಇರುವ ಉಪ್ಪನ್ನು ಬಳಸಿ, ಸಲಾಡ್ ಗಳಲ್ಲಿ ಉಪ್ಪಿನ ಬದಲು ಸೋಯಾ ಸಾಸ್ ಬಳಸಿದರೆ ಹೊಟ್ಟೆಯಲ್ಲಿ ಬೊಜ್ಜು ಶೇಖರವಾಗುವುದು ಕಡಿಮೆಯಾಗುತ್ತದೆ.

ಮಿತವಾದ ಆಹಾರ
ಹೊಟ್ಟೆ ಕರಗಬೇಕೆಂದು ಕೊಬ್ಬಿನ ಆಹಾರ ಬಿಟ್ಟು ಪ್ರೊಟೀನ್ ಆಹಾರ ತಿನ್ನಲಾರಂಭಿಸುತ್ತಾರೆ. ಪ್ರೊಟೀನ್ ಆಹಾರವನ್ನು ಮಿತವಾಗಿ ತಿನ್ನಿ. ಆಹಾರವನ್ನು ಮಿತಿ ಮೀರಿ ತಿಂದರೆ ದಪ್ಪ ಕಮ್ಮಿಯಾಗಲು ಸಾಧ್ಯವಿಲ್ಲ.



Click it and Unblock the Notifications
