Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾತ್ರೆ ಸೇವಿಸಿದರೆ ಹೆಚ್ಚಬಹುದಾ ದೇಹದ ತೂಕ?

ಏಕೆಂದರೆ ಕೆಲವೊಂದು ನೋವು ನಿವಾರಕ ಮಾತ್ರೆಗಳಲ್ಲಿ ಟ್ರೈ ಸೈಕ್ಲಿಕ್ ಆಂಟಿ ಡಿಪ್ರಸೆಂಟ್, ಮೋನೊಮೈನ್ ಆಕ್ಸಿಡೇಸ್ ಇನ್ ಹಿಬಿಟರ್ಸ್ ಈ ಅಂಶಗಳಿದ್ದರೆ ದೇಹದ ತೂಕ ಹೆಚ್ಚಾಗುವುದು.
ಕೆಲವೊಂದು ಮಾತ್ರೆಗಳು ಅಂದರೆ ಗರ್ಭ ನಿರೋಧಕ ಮಾತ್ರೆ, ನಿದ್ದೆ ಮಾತ್ರೆ ಹೀಗೆ ಪ್ರತಿನಿತ್ಯ ಮಾತ್ರೆ ಸೇವಿಸುವವರಿಗೆ ಆ ಮಾತ್ರೆಗಳು ದೇಹದ ತೂಕ ಹೆಚ್ಚಸಬಹುದೇ ಎಂಬ ಸಂಶಯವಿರುತ್ತದೆ. ಅಂತಹ ಸಂಶಯವನ್ನು ನಿವಾರಿಸಲು ಮುಂದೆ ಓದಿ.
1. ಗರ್ಭ ನಿರೋಧಕ ಮಾತ್ರೆ: ಅನೇಕ ಜನ ಗರ್ಭನಿರೋಧಕ ಮಾತ್ರೆಯನ್ನು ಸೇವಿಸುತ್ತಾರೆ. ಅಂತಹವರಿಗೆ ಇದು ದೇಹದ ತೂಕವನ್ನು ಹೆಚ್ಚಿಸಬಹುದೇ ಎಂಬ ಸಂಶಯವಿರುತ್ತದೆ. ಆದರೆ ಗರ್ಭ ನಿರೋಧಕ ಮಾತ್ರೆಗಳು ದೇಹದ ತೂಕ ಹೆಚ್ಚಿಸುತ್ತದೆ ಎಂದು ಇನ್ನೂ ಸಾಬೀತು ಆಗಿಲ್ಲ.
2. ನಿದ್ದೆ ಮಾತ್ರೆ: ಮೊದಲು ದೊರೆಯುತ್ತಿದ್ದ ಮಾತ್ರೆಗೆ ಹೋಲಿಸಿದರೆ ಈಗ ಮೆಡಿಕಲ್ ನಲ್ಲಿ ದೊರೆಯವ ಮಾತ್ರೆಗಳಿಗೆ ಅಡ್ಡ ಪರಿಣಾಮ ಕಡಿಮೆ. ಆದರೆ ಇದರಲ್ಲಿರುವ ಮೆಲೋಡೋನಿನ್ ಡ್ರಗ್ಸ್ ದೇಹದ ತೂಕ ಹೆಚ್ಚು ಮಾಡುತ್ತದೆ. ಆದ್ದರಿಂದ ನಿದ್ದೆ ಮಾತ್ರೆ ಸೇವಿಸುವ ಬದಲು ಧ್ಯಾನ ಮತ್ತು ನಿದ್ದೆ ಬರಲು ಇತರ ನೈಸರ್ಗಿಕ ವಿಧಾನವನ್ನು ಬಳಸುವುದು ಒಳ್ಳೆಯದು.
3. ಮೈಗ್ರೇನ್ ಮಾತ್ರೆ: ಮೈಗ್ರೇನ್ ಗೆ ಚಿಕಿತ್ಸೆ ತೆಗೆದುಕೊಳ್ಳುವವರು ದೇಹದ ತೂಕ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಅದರೆ ಮೈಗ್ರೇನ್ ದೇಹದ ತೂಕವನ್ನು ಕಡಿಮೆ ಮಾಡುವುದು. ಆದ್ದರಿಂದ ದೇಹದ ತೂಕ ಕಡಿಮೆ ಮಾಡಲು ಮಾತ್ರೆಯನ್ನು ಸೇವಿಸಬೇಡಿ. ಹೀಗೆ ಸೇವಿಸಿದರೆ ಅದು ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
4. ಸ್ಟಿರೋಯ್ಡ್: ಸ್ಟಿರೋಯ್ಡ್ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ದೇಹ ಗುಣ ಭಿನ್ನವಾಗಿರುತ್ತದೆ. ಅವರ ದೇಹ ಗುಣಕ್ಕೆ ಅನುಸಾರವಾಗಿ ಈ ಮಾತ್ರೆ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
5. ಕ್ಲೋರೋಪ್ರೊಮೈಡ್: ಈ ಅಂಶವಿರುವ ಮಾತ್ರೆ ಸೇವಿಸಿದರೆ ಕೆಲವರು ದಪ್ಪಗಾದರೆ ಮತ್ತೆ ಕೆಲವರ ದೇಹದ ತೂಕ ಹೆಚ್ಚಾಗುವುದಿಲ್ಲ.ಈ ಮಾತ್ರೆಯನ್ನು ವೈದ್ಯರ ಸಲಹೆ ಮೇರೆಗೆ ನೀಡಲಾಗುವುದು. ಇದು ಸೇವಿಸುವಾಗ ಆರೋಗ್ಯಕರ ಆಹಾರಕ್ರಮ ಪಾಲಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
