Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಕಾಸುರನಂತೆ ತಿನ್ನುವವರಿಗೆ ಕೆಲವು ಸಲಹೆಗಳು

ಬಕಾಸುರನಂತೆ ತಿನ್ನುವುದನ್ನು ನಿಯಂತ್ರಿಸಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ದಿನಕ್ಕೆ ಹಲವು ಬಾರಿ ಸಿಕ್ಕ ಸಿಕ್ಕ ಆಹಾರಗಳನ್ನು ಹೊಟ್ಟೆಗಿಳಿಸುತ್ತಾರೆ. ಅತ್ಯಧಿಕ ತಿನ್ನುವ ಚಾಳಿಯಿಂದ ಪಾರಾಗಲು ಇಲ್ಲೊಂದಿಷ್ಟು ಸಲಹೆಗಳಿವೆ.
* ನಿಧಾನವಾಗಿ ತಿನ್ನಿ. ಇದರಿಂದ ಬೊಜ್ಜು ಬರುವ ಸಾಧ್ಯತೆ ಕಡಿಮೆ. ಹೊಟ್ಟೆ ತುಂಬಿತು, ಸಾಕು ತೃಪ್ತಿಯಾಯ್ತು ಎಂದು ಸಪುರ ವ್ಯಕ್ತಿಗಳ ಮಿದುಳಿಗೆ ಅರಿವಾಗಲು 15 ನಿಮಿಷ ಬೇಕಾಗುತ್ತದೆ. ಆದರೆ ಇದು ಬೊಜ್ಜಿದ್ದವರಿಗೆ ತಿಳಿಯಲು 20-25 ನಿಮಿಷ ಬೇಕಾಗುತ್ತದೆ. ಹೀಗಾಗಿ ನಿಧಾನವಾಗಿ ತಿನ್ನುವ ಮೂಲಕ ಅಧಿಕ ತಿನ್ನುವ ಚಾಳಿಯನ್ನು ಹತೋಟಿಗೆ ತರಲು ಸಾಧ್ಯವಿದೆ.
* ಊಟಕ್ಕೆ ಮುನ್ನ ಎರಡು ಗ್ಲಾಸ್ ನೀರು ಕುಡಿಯಿರಿ. ಇದರಿಂದ ಹೊಟ್ಟೆ ಸ್ವಲ್ಪ ತುಂಬುತ್ತದೆ. ಹಸಿವು ಕಡಿಮೆಯಾಗುತ್ತದೆ. ಜಾಸ್ತಿ ಊಟ ಮಾಡುವುದು ಬೇಡವೆಂದು ಎನಿಸುತ್ತದೆ.
* ಊಟಕ್ಕೊಂದು ವೇಳಾಪಟ್ಟಿ ತಯಾರಿಸಿ. ಸಮಯದ ಪರಿವೆಯಿಲ್ಲದೇ ತಿನ್ನಬೇಡಿ.
* ಎಣ್ಣೆ, ಕೊಬ್ಬು ಅಧಿಕವಿರುವ ಆಹಾರ ತ್ಯಜಿಸಿ.
* ಮುಂಜಾನೆಯ ಉಪಹಾರ ತಪ್ಪಿಸಬೇಡಿ. ಮುಂಜಾನೆ ಬ್ರೇಕ್ ಫಾಸ್ಟ್ ತ್ಯಜಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮುಂಜಾನೆ ಗಡದ್ದಾಗಿ ತಿನ್ನಿ.
* ವೆನಿಲ್ಲಾ ಎಸೆನ್ಸ್: ಸ್ವಲ್ಪ ಪ್ರಮಾಣದಲ್ಲಿ ವೆನಿಲ್ಲಾ ಸಾರ ಸೇವಿಸುವುದರಿಂದ ಎರಡು ಪ್ರಯೋಜನವಿದೆ. ಅದರ ಪರಿಮಳ ಸುವಾಸಿತವಾಗಿಡುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ.
ಈ ಸಲಹೆಗಳನ್ನು ಪಾಲಿಸಿದರೆ ಅತ್ಯಧಿಕ ತಿನ್ನುವ ಚಾಳಿ ಕಡಿಮೆಯಾಗುತ್ತದೆ. ಬೊಜ್ಜು, ರಕ್ತದೊತ್ತಡ, ಡಯಾಬಿಟಿಸ್ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
