Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ನೀರಿನಲ್ಲಿ ವ್ಯಾಯಾಮ ಮಾಡುವುದರ 7 ಪ್ರಯೋಜನ

1. ಇದು ದೇಹವನ್ನು ತಂಪಾಗಿ ಹಾಗೂ ಬೆಚ್ಚಗೆ ಇಡುವುದು: ಬೇಸಿಗೆಯಲ್ಲಿ ನೀರಿನಲ್ಲಿ ವ್ಯಾಯಾಮ ಮಾಡಿದರೆ ಅದು ದೇಹವನ್ನು ತಂಪಾಗಿ ಇಡುವುದು, ಅದೇ ಚಳಿಗಾಲದಲ್ಲಿ ವ್ಯಾಯಾಮ ಮಾಡಿದರೆ ದೇಹ ಚೆಚ್ಚಗೆ ಆಗುತ್ತದೆ. ಅಲ್ಲದೆ ವಿದ್ಯುತ್ ನಿಂದ ಈಜು ಕೊಳದ ನೀರನ್ನು ಬೆಚ್ಚಗೆ ಇಡುವ ಸೌಲಭ್ಯ ಕೂಡ ಇದೆ.
2. ಅತಿ ಬೇಗನೆ ತೂಕ ಕಡಿಮೆಯಾಗುವುದು: ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿರುವ ಕ್ಯಾಲೋರಿ ಬೇಗನೆ ಕರುಗುತ್ತದೆ ಎಂದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.
3. ಬೆವರು ಬರುವುದಿಲ್ಲ: ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದಾಗ ಸುರಿಯುವ ಬೆವರು ಒರೆಸುವುದು ಒಂದು ಕೆಲಸವಾಗಿರುತ್ತದೆ. ಬೆವರು ಬರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ನೀರಿನಲ್ಲಿ ವ್ಯಾಯಾಮ ಮಾಡುವಾಗ ಬೆವರು ಬರುವುದು ಗೊತ್ತಾಗುವುದಿಲ್ಲ. ಅಲ್ಲದೆ ವ್ಯಾಯಾಮದ ನಂತರ ದಣಿದವರಂತೆ ಕಾಣಿಸಿಕೊಳ್ಳದೆ, ಆಗ ತಾನೆ ಸ್ನಾನ ಮಾಡಿ ಬಂದ ತಾಜಾತನ ಮತ್ತು ಹುರುಪು ಇರುವುದು.
4.ಸ್ನಾಯುಗಳು ಬಲವಾಗುತ್ತವೆ: ನೀರಿನಲ್ಲಿ ಕೈ ಮತ್ತು ಕಾಲುಗಳ ಸಹಾಯದಿಂದ ದೇಹ ನೀರಿನಲ್ಲಿ ಮುಳಗದಂತೆ ತಡೆಯಲಾಗುವುದು. ಈ ರೀತಿಯ ವ್ಯಾಯಾಮ ಕೈ ಮತ್ತು ಸ್ನಾಯುಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ.
5. ಗಾಯಗಳಿಂದ ಮುಕ್ತಿ: ಜಿಮ್ ನಲ್ಲಿ ಭಾರವನ್ನು ಎತ್ತುವಾಗ ಕೈ ಕಾಲುಗಳಿಗೆ ಗಾಯವಾಗುವ ಸಾಧ್ಯತೆ ಇದೆ. ಆದರೆ ನೀರಿನಲ್ಲಿ ಈ ರೀತಿ ಗಾಯವಾಗುವ ಸಾಧ್ಯತೆ ಇಲ್ಲ. ವ್ಯಾಯಾಮ ಮಾಡುವಾಗ ಸೊಂಟದವರೆಗೆ ನೀರಿರುವ ಕೊಳದಲ್ಲಿ ಮಾಡಬೇಕು, ಅಧಿಕ ನೀರಿರುವ ಕೊಳ ಸುರಕ್ಷತೆ ಅಲ್ಲ.
6.ಏಕಾಗ್ರತೆ: ನೀರಿನಲ್ಲಿ ಬಾಲ್ ಪಾಯಿಂಟ್ ವ್ಯಾಯಾಮ ಮಾಡುವುದರಿಂದ ಏಕಾಗ್ರತೆ ಸಾಮರ್ಥ್ಯ ಹೆಚ್ಚಾಗುತ್ತದೆ.
7. ಆರೋಗ್ಯ: ಮೊಣ ಕಾಲು ಅಥವಾ ಕೈ ನೋವು ಇರುವವರು, ಹೃದಯದ ಸಂಬಂಧಿ ತೊ0ದರೆ ಇರುವವರು ಕೂಡ ಆಳ ಕಡಿಮೆ ಇರುವ ಕೊಳದಲ್ಲಿ ನೀರಿನಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
