Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಟೈಪ್1 ಮಧುಮೇಹಿಗಳಿಗೆ ವರದಾನವಾಗಿದೆ ಈ ಹೊಸ ಔಷಧ: ಮಧುಮೇಹ ಚಿಕಿತ್ಸೆಯಲ್ಲಿ ಗೇಮ್ ಚೇಜಿಂಗ್ ಆಗಲಿದೆ ಈ ಡ್ರಗ್
ವೈದ್ಯಕೀಯ ಜಗತ್ತಿನಿಂದ ಖುಷಿ ಸುದ್ದಿ ಬಂದಿದೆ. ಟೈಪ್ 1 ಮಧುಮೇಹ ಉಲ್ಪಣವಾಗುವುದನ್ನು ತಡೆಗಟ್ಟುವ 'ಗೇಮ್ ಚೆಂಜಿಂಗ್' ಔಷಧಿಗೆ ಯುಎಸ್‌ಎ ಔಷಧ ನಿಯಂತ್ರ ಮಂಡಳಿ ಒಪ್ಪಿಗೆ ಸೂಚಿಸಿದೆ.
ತಜ್ಞರ ಪ್ರಕಾರ ಟೆಪ್ಲಿಜುಂಬ್(teplizumab) ಮಧುಮೇಹಕ್ಕೆ ನೀಡುತ್ತಿರುವ ಔಷಧಿಗಳಲ್ಲಿ ಒಂದು ಹೊಸ ಭರವಸೆ ಮೂಡಿಸಿದೆ. ಇದರಿಂದಾಗಿ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡುವ ಬದಲಿಗೆ ಮೂಲಕ ಕಾರಣವೇನು ಎಂಬುವುದನ್ನು ಕಂಡು ಹಿಡಿಯಲಾಗುವುದು.

ಇದು ರೋಗ ನಿರೋಧಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಇನ್ಸುಲಿನ್ ಉತ್ಪತ್ತಿ ಮಾಡುವ ಮೇಧೋಜೀರಕ ಗ್ರಂಥಿ ಮೇಲೆ ದಾಳಿ ಮಾಡುವುದನ್ನು ತಡೆಯುತ್ತದೆ, ಇದರಿಂದ ಟೈಪ್ 1 ಮಧುಮೇಹವನ್ನು ತಡೆಗಟ್ಟಲು ಸಹಕಾರಿಯಾಗಿದೆ. ಈ ಔಷಧ ಬಳಸಲು ಅಮೆರಿಕದಲ್ಲಿ ಮಾತ್ರ ಒಪ್ಪಿಗೆ ಸಿಕ್ಕಿದ್ದು, ಉಳಿದ ರಾಷ್ಟ್ರಗಳಲ್ಲಿ ಅನುಮತಿ ಸಿಗಬೇಕಾಗಿದೆ.
ಟೈಪ್ 1 ಮಧುಮೇಹದ ತೀವ್ರತೆ
ವಿಶ್ವದಲ್ಲಿ 8.7 ಮಿಲಿಯನ್‌ಗಿಂತಲ ಅಧಿಕ ಜನರು ಟೈಪ್ 1 ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿಯೂ ತುಂಬಾ ಮಕ್ಕಳು ಟೈಪ್ 1 ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು ಕರ್ನಾಟಕದಲ್ಲಿಯೇ ಒಂದು ಲಕ್ಷಕ್ಕೂ ಅದಿಕ ಮಕ್ಕಳಲ್ಲಿ ಟೈಪ್ 1 ಮಧುಮೇಹದ ಸಮಸ್ಯೆಯಿದೆ.
ಟೈಪ್ 1 ಮಧುಮೇಹವೆಂದರೇನು?
ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ( ಬ್ಯಾಕ್ಟಿರಿಯಾ ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಇರುವ ವೈರಸ್) ತಪ್ಪಾಗಿ ಇನ್ಸುಲಿನ್ ಉತ್ಪತ್ತಿ ಮಾಡುವ ಅಂಗವಾದ ಮೇಧೋಜೀರಕ ಗ್ರಂಥಿಗಳ ಮೇಲೆ ದಾಳಿ ಮಾಡುತ್ತೆ.
ನಮ್ಮ ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಇನ್ಸುಲಿನ್ ಪಾತ್ರ ಪ್ರಮುಖವಾಗಿದೆ. ಸದ್ಯಕ್ಕೆ ರಕ್ತ ಪರೀಕ್ಷೆ ಮಾಡುವ ಮೂಲಕ ಶುಗರ್ ಎಷ್ಟಿದೆ ನೋಡಿ ಚಿಕಿತ್ಸೆ ನೀಡಲಾಗುತ್ತಿದೆ.
2019ರಲ್ಲಿಈ ಹೊಸ ಔಷಧವನ್ನು ಪ್ರಯೋಗ ಮಾಡಲಾಯಿತು, ಆಗ ಯಾರಲ್ಲಿ ಮಧುಮೇಹದ ಲಕ್ಷಣಗಳು ಅಧಿಕವಿತ್ತೋ ಅವರಲ್ಲಿ ನಿಧಾನಕ್ಕೆ ಆ ಲಕ್ಷಣಗಳು ಕಡಿಮೆಯಾದೆವು.
ತಜ್ಞರ ಪ್ರಕಾರ ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯವಾಗಿದೆ, ಅದರಲ್ಲೂ ಮಕ್ಕಳಿಗೆ ಪ್ರತಿದಿನ ಇನ್ಸುಲಿನ್ ಲಸಿಕೆ ನೀಡುವುದು ಕಷ್ಟವಾಗಿರುವುದರಿಂದ ಈ ಔಷಧ ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನವಾಗಿದೆ.
ಈ ಲಸಿಕೆಯಿಂದಾಗಿ ಜನರು ತಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವ ಮೂಲಕ ಹೆಚ್ಚು ಕಾಲ ಬದುಕಬಹುದಾಗಿದೆ. ಅಲ್ಲದೆ ರಕ್ತದಲ್ಲಿ ಅತ್ಯಧಿಕ ಸಕ್ಕರೆಯಂಶದಿಂದಾಗಿ ಕಿಡ್ನಿ ಹಾಗೂ ಕಣ್ಣಿಗೆ ತೊಂದರೆಯಾಗುತ್ತದೆ, ಇದನ್ನು ಕೂಡ ತಡೆಗಟ್ಟಬಹುದಾಗಿದೆ.
ಮಧುಮೇಹ ಎಂದರೇನು, ಎಷ್ಟು ವಿಧ?
ಮಧುಮೇಹ ಒಮ್ಮೆ ಬಂದರೆ ಅದನ್ನು ನಿಯಂತ್ರಣದಲ್ಲಿಡಬಹುದೇ ಹೊರತು, ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ. ಮಧುಮೇಹ ಎಂಬುವುದು ದೇಹದಲ್ಲಿ ಸಕ್ಕರೆಯಂಶ ನಿಗದಿತ ಪ್ರಮಾಣಕ್ಕಿಂತ (100 to 125 mg/dL)ಅಧಿಕವಿರುವುದು.
ಮಧುಮೇಹದಲ್ಲಿ 2 ವಿಧ
1. ಟೈಪ್ 1 ಮಧುಮೇಹ: ಇದರಲ್ಲಿ ರೋಗ ನಿರೋಧಕ ವ್ಯವಸ್ಥೆಯೇ ಮೇಧೋಜೀರಕ ಗ್ರಂಥಿ ಮೇಲೆ ದಾಳಿ ಮಾಡಿ ಇನ್ಸುಲಿನ್ ಉತ್ಪತ್ತಿ ಮೇಲೆ ಅಡ್ಡಪರಿಣಾಮ ಬೀರುವುದು.
2. ಟೈಪ್ 2 ಮಧುಮೇಹ: ಇವರಲ್ಲಿ ಮೇಧೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವುದಿಲ್ಲ, ಇದರಿಂದಾಗ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು.
ಟೈಪ್ 1 ಮಧುಮೇಹಗಿಂತ ಟೈಪ್ 1 ಮಧುಮೇಹ ಸಾಮಾನ್ಯವಾಗಿ ಕಂಡು ಬರುತ್ತಿರುವ ಕಾಯಿಲೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
