Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಮಧುಮೇಹದಿಂದ ಬದಲಾಯ್ತು ಕಪಿಲ್ ದೇವ್ ಜೀವನ, ಮಧುಮೇಹ ಬಂದಿದ್ದೇ ಒಳ್ಳೆದಾಯ್ತು ಎಂದು ಕ್ರಿಕೆಟ್ ಲೆಜೆಂಡ್ ಹೇಳಿದ್ದೇಕೆ?
ಮಧುಮೇಹವಿದೆ ಎಂದು ತಿಳಿದ ತಕ್ಷಣ ದೊಡ್ಡ ಕಾಯಿಲೆ ಬಂದಂತೆ ಆತಂಕ ಪಡುವವರೇ ಅಧಿಕ. ಅಯ್ಯೋ ನನಗೆ ಮಧುಮೇಹವಿದೆ, ಒಂದು ಒಳ್ಳೆಯ ಆಹಾರ ತಿನ್ನೋಕೆ ಆಗಲ್ಲ, ನನ್ನ ಆರೋಗ್ಯ ಸರಿಯಿಲ್ಲ ಎಂದೆಲ್ಲಾ ಭಾವಿಸಿ ತಮ್ಮ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಾರೆ. ಆದರೆ ಮಾಜಿ ಕ್ರಿಕೆಟ್ ಆಟಗಾರ ಕಪಿಲ್‌ದೇವ್ ಮಧುಮೇಹ ಬಂದ ಮೇಲೆ ನನ್ನ ಜೀವನ ಒಳ್ಳೆಯ ರೀತಿಯಲ್ಲಿ ಬದಲಾಯ್ತು ಎಂದಿದ್ದಾರೆ.

ಅವರು ಏಕೆ ಹಾಗೆ ಹೇಳಿದರು, ಮಧುಮೇಹ ಬಂದ ಮೇಲೆ ಅವರ ದೇಹದಲ್ಲಾದ ಆರೋಗ್ಯಕರ ಬದಲಾವಣೆಗಳೇನು ನೋಡೋಣ ಬನ್ನಿ:
ಮಧುಮೇಹವಿದೆ ಎಂದು ತಿಳಿದ ಬಳಿಕ ಶಿಸ್ತಿನ ಜೀವನಕ್ಕೆ ಮರಳಿದ ಕಪಿಲ್ ದೇವ್
"ಒಂದು ವೇಳೆ ನನಗೆ ಮಧುಮೇಹ ಬಾರದೇ ಹೋಗಿದ್ದರೆ ನಾನು ಕಾಡು ಮನುಷ್ಯನ ರೀತಿ ಇರುತ್ತಿದ್ದೆ. ತುಂಬಾ ತಿನ್ನುವ , ಕುಡಿಯುವ ಮೂಲಕ ನನ್ನ ದೇಹವನ್ನು ಹಾಳು ಮಾಡಿದ್ದೆ, ಆರೋಗ್ಯಕರವಾಗಿರಬೇಕೆಂದರೆ ಶಿಸ್ತು ತುಂಬಾನೇ ಮುಖ್ಯ ಅಂತಾರೆ ಕಪಿಲ್‌ದೇವ್.
ಮಧುಮೇಹದಿಂದಾಗಿ ಆರೋಗ್ಯಕರ ಜೀವನಶೈಲಿ
ಮಧುಮೇಹದ ಬಳಿಕ ಕಪಿಲ್‌ದೇವ್ ಅವರ ದಿನಚರಿಯೇ ಬದಲಾಗಿದೆ. ಕೆಲವೊಮ್ಮೆ ಬೆಳಗ್ಗೆ ಎದ್ದು ವ್ಯಾಯಾಮ ಮಾಡಲು ಉದಾಸೀನವಾಗುತ್ತೆ, ಆದರೂ ತಪ್ಪದೆ ವ್ಯಾಯಾಮ ಮಾಡುತ್ತಾರೆ ಹಾಗೂ ಆರೋಗ್ಯಕರ ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡುತ್ತಿದ್ದಾರೆ.
ಸಕ್ಕರೆಯಂಶ ನಿಯಂತ್ರಣಕ್ಕೆ ಪ್ಯಾಚಸ್ ಬಳಕೆ
ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಪ್ಯಾಚಸ್ ಬಳಸುತ್ತಿದ್ದಾರೆ, ಇದು ಅಡ್ವಾನ್ಸ್ ಔಷಧವಾಗಿದೆ, ಇದರಿಂದಾಗಿ ಮಧುಮೇಹಿಗಳು ಸಹಜ ಜೀವನ ನಡೆಸಲು ತುಂಬಾನೇ ಅನುಕೂಲಕರವಾಗಿದೆ. ದೇಹದಲ್ಲಿ ಸಕ್ಕರೆಯಂಶ ಅಧಿಕವಾದಾಗ ಇನ್ಸುಲಿನ್ ಚುಚ್ಚುಮದ್ದು ಬದಲಿಗೆ ಪ್ಯಾಚಸ್ ಬಳಸಿದರೆ ಸಾಕು.
ಜ್ಞಾನವೇ ಶಕ್ತಿ, ನನಗೀಗ ನನ್ನ ದೇಹ ಹೇಗೆ ಕಾರ್ಯನಿವರ್ಹಿಸುತ್ತಿದೆ ಎಂಬುವುದು ಚೆನ್ನಾಗಿ ಗೊತ್ತಿದೆ ಅಂತಾರೆ ಕಪಿಲ್ ದೇವ್.
ಮಧುಮೇಹಿಗಳಲ್ಲಿ ಹೆಚ್ಚಾಗುತ್ತಿದೆ ಖಿನ್ನತೆ
ಮಧುಮೇಹ ಬಂದಾಗ ಅದನ್ನು ನಿಯಂತ್ರಣದಲ್ಲಿಟ್ಟರೆ ಸಹಜ ಜೀವನ ನಡೆಸಲು ಯಾವುದೇ ತೊಂದರೆಯಿಲ್ಲ, ಆದರೆ ಎಷ್ಟೋ ಜನರು ತಮಗೆ ದೊಡ್ಡ ಕಾಯಿಲೆ ಬಂದಂತೆ ಭಾವಿಸುತ್ತಾರೆ, ಅಲ್ಲದೆ ಈ ಕಾರಣಗಳಿಂದಲೇ ಖಿನ್ನತೆಗೆ ಜಾರುವವರ ಸಂಖ್ಯೆ ಅಧಿಕವಾಗಿದೆ.
ಮಧುಮೇಹಿಗಳಿಗೆ ಮಾದರಿಯಾಗಿದ್ದಾರೆ ಕಪಿಲ್ ದೇವ್
ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ತಮ್ಮ ಜೀವನ ಶೈಲಿ, ಉತ್ಸಾಹದ ಮೂಲಕ ಇತರ ಮಧುಮೇಹಿಗಳಿಗೆ ಮಾದರಿಯಾಗಿದ್ದಾರೆ. ಎಲ್ಲರು ಮಧುಮೇಹ ಬಂದು ನಮ್ಮ ಆರೋಗ್ಯ ಹಾಳಾಯಿತು ಎಂದು ಹೇಳುವಾಗ ಇವರು ಮಧುಮೇಹ ಬಂದು ನನ್ನ ಆರೋಗ್ಯ ಉತ್ತಮವಾಯಿತು ಎಂದು ಹೇಳಿದ್ದಾರೆ.
ಹೌದು ಯಾವುದೇ ವಿಷಯವನ್ನು ಪಾಸಿಟಿವ್ ಆಗಿ ತೆಗೆದುಕೊಂಡರೆ ಒಳ್ಳೆಯದೇ ಆಗುತ್ತದೆ. ಮಧುಮೇಹ ಬಂದಾಗ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು, ಅದಕ್ಕಾಗಿ ಆಹಾರಕ್ರಮ ಚೆನ್ನಾಗಿರಬೇಕು, ವ್ಯಾಯಾಮ ಮಾಡಬೇಕು. ಇದರಿಂದ ಆರೋಗ್ಯಕ್ಕೆ ಒಳ್ಳೆಯದೇ.
ಆದ್ದರಿಂದ ಮಧುಮೇಹಿಗಳೇ ನೆಗೆಟಿವ್ ಚಿಂತೆ ಬಿಡಿ ಕಪಿಲ್ ದೇವ್ ರೀತಿ ಪಾಸಿಟಿವ್ ಆಗಿ ಚಿಂತಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
