Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ತೂಕ ಇಳಿಕೆಗೆ ಮೆಂತೆ ಬೀಜ ಹೇಗೇ ಸೇವಿಸಿದರೆ ಒಳ್ಳೆಯದು?
ಈ ಲೇಖನವನ್ನು ಫಿಟ್‌ನೆಸ್ ಎಕ್ಸ್‌ಪರ್ಟ್ ಮಹಿಮಾ ಸೇತಿಯಾ ನೀಡಿರುವ ಸಲಹೆ ಆಧರಿಸಿ ನೀಡಲಾಗಿದೆ.
ಮೈ ತೂಕ ಕಡಿಮೆ ಮಾಡಬೇಕು, ಬೊಜ್ಜು ಮೈ ಕರಗಿಸಿ ಆಕರ್ಷಕ ಮೈ ಕಟ್ಟು ಪಡೆಯಬೇಕೆಂದರೆ ಆರೋಗ್ಯಕರ ಆಹಾರಕ್ರಮದ ಜೊತೆಗೆ ವ್ಯಾಯಾಮ ಮಾಡಬೇಕು ಹಾಗೂ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಆದರೆ ಇವೆಲ್ಲದರ ಜೊತೆಗೆ ಕೆಲವೊಂದು ಸಪ್ಲಿಮೆಂಟ್ ಕೂಡ ನಿಮ್ಮ ಇಚ್ಛೆ ನೆರವೇರಲು ಸಹಕಾರಿಯಾಗಿವೆ. ನೀವು ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಮೆಂತೆ ಬಳಸಿ ತೂಕ ಕಡಿಮೆ ಮಾಡುವುದು ಹೇಗೆ ಎಂದು ಇಲ್ಲಿ ಹೇಳಿದ್ದೇವೆ.
ಮೆಂತೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಎಂದು ಎಲ್ಲರಿಗೂ ಗೊತ್ತು. ಇದನ್ನು ಔಷಧಿಯಲ್ಲಿ, ಮನೆಮದ್ದಾಗಿ, ಕೂದಲಿನ ಆರೈಕೆಗೆ, ಆಹಾರದ ರುಚಿ ಹೆಚ್ಚಿಸಲು ಹೀಗೆ ಹಲವಾರು ಬಗೆಯಲ್ಲಿ ಬಳಸುತ್ತೇವೆ.
ಮೆಂತೆಯಲ್ಲಿ ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ರಂಜಕ ಮುಂತಾದ ಅಂಶವಿದ್ದು ಸಕ್ಕರೆ ಕಾಯಿಲೆ ಕೂಡ ನಿಯಂತ್ರಣದಲ್ಲಿಡುತ್ತದೆ. ನೀವು ತೂಕ ಇಳಿಕೆಗೆ ಮೆಂತೆ ಬಳಸುವುದಾದರೆ ಹೇಗೆ ಬಳಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂದು ಹೇಳಿದ್ದೇವೆ ನೋಡಿ:

1. ಮೆಂತೆ ಹೇಗೆ ತಿನ್ನಬೇಕು?
ಸಾಮಾನ್ಯವಾಗಿ ಭಾರತೀಯ ಆಹಾರ ಪದ್ಧತಿಯಲ್ಲಿ ಅಡುಗೆ ಮಾಡುವಾಗ ಮೆಂತೆ ಬಳಸುತ್ತೇವೆ ಅಲ್ವಾ? ಆದರೆ ಇದನ್ನು ಕೆಲವು ಗಂಟೆಗಳ ಕಾಲ ನೆನೆ ಹಾಕಿ ತಿಂದರೆ ತುಂಬಾ ಪ್ರಯೋಜನ.
ಮೆಂತೆ ಕಾಳು ಏಕೆ ನೆನೆ ಹಾಕಬೇಕು?
ಮೆಂತೆಯನ್ನು ಕೆಲ ಗಂಟೆಗಳ ಕಾಲ ನೆನೆ ಹಾಕುವುದರಿಂದ ಅದರ ಪೋಷಾಂಶಗಳನ್ನು ಶರೀರ ಸುಲಭದಲ್ಲಿ ಹೀರಿಕೊಳ್ಳುತ್ತದೆ. ನೆನೆ ಹಾಕಿದ ಮೆಂತೆ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ತೂಕ ಇಳಿಕೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.

2. ಮೆಂತೆಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದರಿಂದ ಪ್ರಮುಖ ಪ್ರಯೋಜನಗಳು
ಇತರ ಗಿಡಮೂಲಿಕೆಗಳ ಹಾಗೆ ಮೆಂತೆ ನೀರು ಕೂಡ ತುಂಬಾ ಪ್ರಯೋಜನಕಾರಿ, ಮೆಂತೆಯನ್ನು ನೆನೆಹಾಕಿ ತಿನ್ನುವುದರಿಂದ ಕಬ್ಬಿಣದಂಶ, ಮೆಗ್ನಿಷ್ಯಿಯಂ, ಸತು, ವಿಟಮಿನ್ ಬಿ 6, ಪ್ರೊಟೀನ್, ನಾರಿನಂಶ ಹೀಗೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಮೆಂತೆ ನೆನೆಹಾಕಿ ತಿನ್ನುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳೆಂದರೆ
ಜೀರ್ಣಕ್ರಿಯೆಗೆ ಒಳ್ಳೆಯದು
ಇದು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇದು ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ತಡೆಗಟ್ಟುತ್ತದೆ. ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅವರು ಮೆಂತೆ ಸ್ವಲ್ಪ ನೆನೆ ಹಾಕಿ ತಿನ್ನುವುದು ಒಳ್ಳೆಯದು. ಅಲ್ಲದೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ.

3. ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಮಧುಮೇಹಿಗಳು ಮೆಂತೆ ನೆನೆ ಹಾಕಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ದಿನದಲ್ಲಿ 5ಗ್ರಾಂ ಮೆಂತೆ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು.
ಮುಟ್ಟಿನ ನೋವು ಕಡಿಮೆ ಮಾಡುತ್ತದೆ
ಮುಟ್ಟಿನ ಸಮಯದಲ್ಲಿ ಕೆಲವರಿಗೆ ಅಸಾಧ್ಯವಾದ ನೋವು ಉಂಟಾಗುತ್ತದೆ. ಕಿಬ್ಬೊಟ್ಟೆ ನೋವು ಎರಡು ದಿನಗಳವರೆಗೆ ಇರುತ್ತದೆ. ಈ ಸಮಸ್ಯೆ ಇರುವವರು 1800-2700ಮಿಗ್ರಾಂನಷ್ಟು ಮೆಂತೆ ಪುಡಿಯನ್ನು ನೀರಿನಲ್ಲಿ ಹಾಕಿ ಕಲೆಸಿ ಮೂರು ಹೊತ್ತು ಕುಡಿದರೆ ನೋವು ಕಡಿಮೆಯಾಗುವುದು.

4. ತ್ವಚೆ ಹಾಗೂ ಕೂದಲಿನ ಆರೋಗ್ಯ
ತ್ವಚೆಗೆ ಒಳ್ಳೆಯದು: ಇದು ರಕ್ತವನ್ನು ಶುದ್ಧೀಕರಿಸುವುದರಿಮದ ತ್ವಚೆಯ ಆರೋಗ್ಯ ಹೆಚ್ಚುವುದು.
ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
ಇನ್ನು ಕೂದಲಿನ ಆರೈಕೆಯಲ್ಲಿ ಮೆಂತೆ ಅತ್ಯಂತ ಪರಿಣಾಮಕಾರಿಯಾಗಿದ್ದು ಇದನ್ನು ಹಿಂದಿನ ಕಾಲದಿಂದಲೂ ಬಳಸುತ್ತಿದ್ದಾರೆ. ಇದನ್ನು ತಲೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ಮಾತ್ರವಲ್ಲ ತಲೆಹೊಟ್ಟು, ನೆರೆಕೂದಲು, ಕೂದಲು ಒರಟಾಗುವುದು, ಕೂದಲು ಉದುರುವುದು ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

5. ತೂಕ ಇಳಿಕೆ ಮಾಡುತ್ತದೆ
ರಾತ್ರಿ ಮೆಂತೆಯನ್ನು ನೆನೆಹಾಕಿ ಬೆಳಗ್ಗೆ ಆ ನೀರು ಕುಡಿದು ಮೆಂತೆಯನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯುವುದು. ತೂಕ ಇಳಿಕೆಗೆ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವುದು ಅವಶ್ಯಕ.
ಅಲ್ಲದೆ ಕೊಬ್ಬಿನಂಶ ತಿನ್ನುವ ಪ್ರಮಾಣವೂ ಕಡಿಮೆಯಾಗುವುದು. ಮೆಂತೆ ತಿನ್ನುವುದರಿಂದ ಕ್ರಮೇಣ ದೇಹದ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುವುದು.
ಮೆಂತೆಯನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು?
ದಿನದಲ್ಲಿ ಒಂದು ಚಮಚದಷ್ಟು ಮೆಂತೆ ತೆಗೆದುಕೊಂಡರೆ ಸಾಕು.

6. ಯಾರು ಸೇವಿಸಬಾರದು?
ಗರ್ಭಿಣಿಯರು ಮೆಂತೆ ಸೇವಿಸಿದರೆ ಗರ್ಭಪಾತವಾಗುವ ಸಾಧ್ಯತೆ ಇರುವುದರಿಂದ ಸೇವಿಸಬೇಡಿ, ಅಲ್ಲದೆ ಗರ್ಭಿಣಿಯರು ಮೆಂತೆ ತಿನ್ನುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಕೂಡ ಬರಬಹುದು. ಆದ್ದರಿಂದ ಮೆಂತೆ ಸೇವಿಸಬೇಡಿ. ಹೆರಿಗೆಯ ಬಳಕೆ ಮೆಂತೆ ಸೇವನೆ ಒಳ್ಳೆಯದು.
ಸೂಚನೆ: ಇಲ್ಲಿ ನೀಡಿರುವ ಸಲಹೆಗಳು ನಿಮ್ಮ ತಿಳುವಳಿಕೆಗೆ ಅಷ್ಟೇ, ಆದ್ದರಿಂದ ಮಧುಮೇಹ ನಿಯಂತ್ರಣಕ್ಕೆ, ತೂಕ ಇಳಿಕೆಗೆ ಮೆಂತೆ ಸೇವಿಸುವುದಾದರೆ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ, ಏಕೆಂದರೆ ಇತರ ಸಮಸ್ಯೆಗಳಿದ್ದರೆ ವೈದ್ಯರು ನಿಮ್ಮ ಸೂಕ್ತ ಸಲಹೆ ನೀಡುತ್ತಾರೆ.



Click it and Unblock the Notifications











