Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಮಧುಮೇಹಿಗಳಿಗೆ ಟಿಪ್ಸ್: ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯಲು ಏನು ಮಾಡಬೇಕು?
ವರ್ಷಾಂತ್ಯದ ತಿಂಗಳು ಡಿಸೆಂಬರ್ ಪೂರ್ತಿ ಕ್ರಿಸ್‌ಮಸ್ ಹವಾ ಇರುತ್ತೆ. ಶಾಪಿಂಗ್, ಕ್ರಿಸ್‌ಮಸ್ ಡೆಕೊರೇಷನ್, ಪಾರ್ಟಿ, ಗಿಫ್ಟ್, ಫ್ಯಾಮಿಲಿಟ್ರಿಪ್, ಫ್ರೆಂಡ್ಸ್ ಜೊತೆ ಟ್ರಿಪ್, ವಿವಿಧ ರೀತಿಯ ಕ್ರಿಸ್‌ಮಸ್ ತಿನಿಸುಗಳು ಡಿಸೆಂಬರ್ ತಿಂಗಳು ಸಂಭ್ರಮದ ತಿಂಗಳಾಗಿರುತ್ತೆ.

ಎಲ್ಲವೂ ಕಣ್ಣಮುಂದೆ ರಂಗು ರಂಗಾಗಿ ಕಾಣೋವಾಗ ಬಾಯಿಚಪಲ ತೀರಿಸಿಕೊಳ್ಳೋದಿಕ್ಕೆ ಸ್ವಲ್ಪ ಸ್ವಲ್ಪವೇ ಎಲ್ಲವೂ ನಮ್ಮ ಹೊಟ್ಟೆಯೊಳಗೆ ಹೋಗೋದು ಗೊತ್ತಾಗೋದೇ ಇಲ್ಲ. ಡಯಾಬಿಟೀಸ್ ಇರೋರು ಕೂಡಾ, ವರ್ಷಕ್ಕೊಂದೇ ಬಾರಿ ತಾನೇ ಕ್ರಿಸ್‌ಮಸ್ ಬರೋದು, ಹೀಗೆ ತಿನ್ನೋಕಾಗೋದು ಎಂದು ಚಪ್ಪರಿಸಿ ತಿಂದು ವರ್ಷಾಂತ್ಯದಲ್ಲಿ ಬ್ಲಡ್‌ಶುಗರ್ ಹೆಚ್ಚಾಗಿ ಮಲಗಿ ಬಿಡಬಹುದು.
ಆದರೆ ಮಧುಮೇಹಿಗಳೇ ನೀವು ಈ ಕೆಳಗೆ ವಿವಿರಿಸಿರುವ ಟಿಪ್ಸ್‌ಗಳನ್ನು ಫಾಲೋಮಾಡಿದರೆ ಕ್ರಿಸ್‌ಮಸ್ ಹಾಲಿಡೇಸ್‌ನ ಎಂಜಾಯ್ ಮಾಡಬಹುದು.
1. ಮುಂಚಿತವಾಗಿ ಯೋಜನೆ ಹಾಕಿಕೊಳ್ಳಿ
ಕ್ರಿಸ್‌ಮಸ್ ತಿಂಗಳಲ್ಲಿ ಫ್ರೆಂಡ್ಸ್, ಫ್ಯಾಮಿಲಿ ವಿಸಿಟ್ ಅಂತೂ ಇದ್ದೇ ಇರುತ್ತದೆ. ಈ ಪಾರ್ಟಿಗಳ್ಲಿ ತಿನ್ನೋದಿಕ್ಕಂತೂ ಭರ್ಜರಿಯಾಗೇ ಇರುತ್ತೆ. ಹಾಗಂತ ನೀವು ಎಲ್ಲವನ್ನೂ ತಟ್ಟೆಗೆ ಹಾಕೊಕೊಳ್ಳೋದಿಕ್ಕೆ ಹೋಗಬೇಡಿ. ಕುಟುಂಬದೊಂದಿಗೆ ಹೊರಗೆ ಹೋಗುವ ಮೊದಲು ಆರೋಗ್ಯಕರವಾದ ಏನನ್ನು ತಿನ್ನಬಹುದು ಎನ್ನುವುದನ್ನು ನೀವೇ ಡಿಸೈಡ್ ಮಾಡಿಕೊಳ್ಳಿ. ಬಾಯಿರುಚಿಗಾಗಿ ಎಲ್ಲವನ್ನೂ ತಿನ್ನುವುದನ್ನು ಹಾಗೂ ಕಣ್ಣಿಗೆ ಕಾಣಿಸಿದ ಎಲ್ಲವನ್ನೂ ತಿನ್ನಬೇಕೆನ್ನುವ ಚಪಲವನ್ನು ಈ ಮೂಲಕ ತಡೆಯಬಹುದು.
2. ಆರೋಗ್ಯಕರ ಕೊಬ್ಬಿನ ಸೇವನೆಯೊಂದಿಗೆ ದಿನವನ್ನು ಆರಂಭಿಸಿ
ಪ್ರತಿದಿನ ಸೇವಿಸುವ ಆಹಾರದಲ್ಲಿ ಸಕ್ಕರೆಯಂಶವನ್ನು ಸಮತೋಲನಗೊಳಿಸಲು ನಿಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬಿನ ಅಗತ್ಯವಿರುತ್ತದೆ. ಹಾಗಾಗಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಓಟ್‌ಮೀಲ್ ಅಥವಾ ಯೋಗರ್ಟ್‌ನೊಂದಿಗೆ ಒಣಹಣ್ಣು, ಬೀಜಗಳು, ಬಟರ್‌ಫ್ರೂಟ್ ಅಥವಾ ತೆಂಗಿನಕಾಯಿ ಚೂರುಗಳನ್ನು ಸೇರಿಸಿ ಸೇವಿಸಿ.
3. ತಿನ್ನುವ ಆಹಾರದ ಪ್ರಮಾಣದ ಬಗ್ಗೆ ಗಮನವಿರಲಿ
ಕ್ರಿಸ್‌ಮಸ್ ಪಾರ್ಟಿಯಲ್ಲಿ ಕುಕೀಸ್, ಕೇಕ್, ಪೈ ಇದ್ದೇ ಇರುತ್ತೆ. ಎಲ್ಲರೂ ದೊಡ್ಡ ದೊಡ್ಡ ಸ್ಲೈಸ್ ತಟ್ಟೆಗೆ ಹಾಕುತ್ತಿದ್ದಾರೆಂದು ನೀವು ಅಷ್ಟು ಪ್ರಮಾಣದಲ್ಲಿ ತಿನ್ನೋದಿಕ್ಕೆ ಹೋಗಬೇಡಿ. ಸ್ನೇಹಿತರು ಅಥವಾ ಕುಟುಂಬದವರು ಫೋರ್ಸ್ ಮಾಡಿದರೂ ದಾಕ್ಷಿಣ್ಯಕ್ಕೆ ಚೂರು ಬಾಯಿಗೆ ಹಾಕಿಕೊಳ್ಳಿ. ಆದರೆ ತಿನ್ನುವ ಪ್ರಮಾಣದ ಬಗ್ಗೆ ಮರೆಯಬೇಡಿ.
4. ಅಲ್ಕೋಹಾಲ್ ಸೇವನೆ ಮಿತಿಗೊಳಿಸಿ
ಕ್ರಿಸ್‌ಮಸ್ ಪಾರ್ಟಿ ಎಂದರೆ ಆಲ್ಕೋಹಾಲ್ ಇದ್ದೇ ಇರುತ್ತೆ. ಆಲ್ಕೋಹಾಲ್‌ನಲ್ಲಿ ಕಾರ್ಬೋಹೈಡ್ರೇಟ್ಸ್ ಇದ್ದು ಇದು ರಕ್ತದಲ್ಲಿನ ಸಕ್ಕರೆಯಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ದಿನಕ್ಕೆ ಒಂದು ಪೆಗ್‌ಗಷ್ಟೇ ಮಿತಿಗೊಳಿಸಲು ಪ್ರಯತ್ನಿಸಿ. ನೀವು ಪಾರ್ಟಿಯಲ್ಲಿ ಕುಡಿಯಲೇಬೇಕೆಂದಲ್ಲಿ ನಿಂಬೆರಸದೊಂದಿಗೆ ನೀತು ಅಥವಾ ಸೆಲ್ಟ್ಜರ್ ಬೆರೆಸಿ ಕುಡಿಯಿರಿ.
5. ಹೆಚ್ಚು ನೀರು ಕುಡಿಯಿರಿ
ನೀರು ದೇಹದಲ್ಲಿನ ನೈಸರ್ಗಿಕ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯಮಾಡುತ್ತೆ. ಇಷ್ಟು ಮಾತ್ರವಲ್ಲ ಕ್ರೇವಿಂಗ್ಸ್ ಕಡಿಮೆ ಮಾಡಲು ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯಲೂ ಸಗಾಯ ಮಾಡುತ್ತದೆ. ವಿಶೇಷವಾಗಿ ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತುಂಬಾ ಕಡಿಮೆಯೂ ಮಾಡದು ಹಾಗೂ ಹೆಚ್ಚು ಏರಿಕೆಯಾಗದಂತೆಯೂ ತಡೆಯಲು ಸಹಾಯ ಮಾಡುತ್ತೆ.
6. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನಗೊಳಿಸಲು ವಾಕ್ ಮಾಡಿ
ವಾಕಿಂಗ್ ನಿಮ್ಮ ದೇಹದ ಆರೋಗ್ಯಕ್ಕೂ ಉತ್ತಮ ಮಾತ್ರವಲ್ಲ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲೂ ಸಹಕಾರಿ. ಸಾಧ್ಯವಾದಾಗಲೆಲ್ಲಾ ಹೊರಗೆ ವಾಕ್ ಹೋಗಿ. ಚುರುಕಾದ ನಡಿಗೆಯು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ. ಹಾಗೂ ಕ್ರಿಸ್‌ಮಸ್ ಹಾಲಿಡೇಸ್‌ನಲ್ಲೂ ನೀವು ಎನರ್ಜಿಟಿಕ್ ಆಗಿರಲು ಸಹಾಯ ಮಾಡುತ್ತದೆ.
7. ಹೆಚ್ಚು ನಿದ್ದೆ ಮಾಡಿ
ಕ್ರಿಸ್‌ಮಸ್ ಟೈಮ್‌ನಲ್ಲಿ ಕುಟುಂಬದವರೊಂದಿಗೆ ಮಾತನಾಡಿಕೊಂಡು ಸಮಯ ಕಳೆಯುವುದು, ಮೂವಿ ನೋಡುವುದು ಅಥವಾ ತಡರಾತ್ರಿಯವರೆಗೆ ಗೇಮ್ ಆಡೋದು ಇದ್ದೇ ಇರುತ್ತದೆ. ಆದರೆ ತಡವಾಗಿ ಮಲಗೋದರಿಂದ ಬೆಳಗ್ಗೆ ಬೇಗ ಏಳುವುದು ಸಾಧ್ಯವಾಗದೇ ಇರಬಹುದು. ಬೇಗ ಎದ್ದರೂ ಕೂಡ ಅರ್ಧಬಂರ್ಧ ನಿದ್ದೆಯ ಜೊತೆಗೆ ಒಂಥರಾ ಸುಸ್ತಿನ ಅನುಭವ ನಿಮ್ಮ ಇಡೀ ದಿನವನ್ನು ಹಾಳು ಮಾಡಬಹುದು. ಹಬ್ಬದ ಮಸ್ತಿಯೊಂದಿಗೆ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿಯನ್ನೂ ನೀಡುವುದನ್ನು ಮರೆಯಬೇಡಿ. ಈ ಕೆಲವು ಟಿಪ್ಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರದಿಂದ ಆಚರಿಸಿ, ಅದೇ ಜೋಶ್ ಹೊಸ ವರ್ಷಕ್ಕೂ ಇರುವಂತೆ ನೋಡಿಕೊಳ್ಳಲು ನಿಮ್ಮ ಸಕ್ಕರೆಯ ಪ್ರಮಾಣದ ಬಗ್ಗೆ ಗಮನ ವಹಿಸುವುದನ್ನು ಮರೆಯಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

