Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಟೈಪ್ 2 ಮಧುಮೇಹ ಪುರುಷರು ಹಾಗೂ ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಮಾರಕ!
ಮನುಷ್ಯನ ದೇಹವು ಸಂಪೂರ್ಣವಾಗಿ ಆರೋಗ್ಯವಾಗಿರಬೇಕೆಂದರೆ ಆತನ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಆರೋಗ್ಯವು ಚೆನ್ನಾಗಿರಬೇಕು. ಈ ಮೂರು ಅಂಶಗಳು ವ್ಯಕ್ತಿಯೊಬ್ಬನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ಕೆಲವೊಂದು ಸಲ ಈ ಮೂರರಲ್ಲಿ ಒಂದು ಅಂಶವು ಸರಿಯಾಗಿರುವುದೇ ಇಲ್ಲ. ಅದರಲ್ಲೂ ಲೈಂಗಿಕ ಆರೋಗ್ಯವು ಚೆನ್ನಾಗಿರದೆ ಇದ್ದರೆ ಆಗ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಕೆಲವೊಂದು ಅನಾರೋಗ್ಯಗಳು ಅದರಲ್ಲೂ ದೀರ್ಘಕಾಲಿಕ ಅನಾರೋಗ್ಯಗಳು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುವಂತಹ ಸಾಧ್ಯತೆಗಳು ಇವೆ.

ಅದಾಗ್ಯೂ, ಲೈಂಗಿಕ ಆರೋಗ್ಯ ಮತ್ತು ಲೈಂಗಿಕತೆಯು ಗುಣಮಟ್ಟದ ಜೀವನ ನಡೆಸುವಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುವುದು. ಟೈಪ್ 2 ಮಧುಮೇಹ ಹೊಂದಿರುವಂತಹ ವ್ಯಕ್ತಿಗಳಿಗೆ ಕೂಡ ಲೈಂಗಿಕಾಸಕ್ತಿ ಎನ್ನುವುದು ಇರುತ್ತದೆ. ಆದರೆ ಕೆಲವೊಂದು ಸಲ ಲೈಂಗಿಕ ಆರೋಗ್ಯದ ಮೇಲೆ ಮಧುಮೇಹವು ಪರಿಣಾಮ ಬೀರುವುದು. ಮಧುಮೇಹದಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಲೈಂಗಿಕ ಸಮಸ್ಯೆಗಳನ್ನು ಪತ್ತೆ ಮಾಡಿಕೊಂಡು ಅದನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಟೈಪ್ 2 ಮಧುಮೇಹವು ಪುರುಷರು ಹಾಗೂ ಮಹಿಳೆಯರಿಗೆ ಲೈಂಗಿಕ ಸಮಸ್ಯೆ ಉಂಟು ಮಾಡುವುದು.

ಲೈಂಗಿಕ ಆರೋಗ್ಯವು ಪುರುಷರು ಹಾಗೂ ಮಹಿಳೆಯರ ಮೇಲೆ ಪರಿಣಾಮಗಳು
ಟೈಪ್ 2 ಮಧುಮೇಹ ಇರುವಂತಹ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯೆಂದರೆ ಅವರಲ್ಲಿ ಕಾಮಾಸಕ್ತಿ ಕಡಿಮೆಯಾಗುವುದು. ಕಾಮಾಸಕ್ತಿಗಾಗಿ ಹಾತೊರೆಯುತ್ತಲಿದ್ದರೆ ಮತ್ತು ಟೈಪ್ 2 ಮಧುಮೇಹ ಬರುವ ಮೊದಲು ಸಂತೃಪ್ತಿಯ ಲೈಂಗಿಕ ಜೀವನ ಹೊಂದಿದ್ದರೆ ಆಗ ಈ ಪರಿಸ್ಥಿತಿಯು ತುಂಬಾ ಹತಾಶೆ ಉಂಟು ಮಾಡುವುದು.
ಟೈಪ್ 2 ಮಧುಮೇಹಿಗಳಲ್ಲಿ ಕಂಡುಬರುವಂತಹ ಕಾಮಾಸಕ್ತಿ ಕುಂದುವಿಕೆಗೆ ಕಾರಣಗಳು
ಅಧಿಕ ರಕ್ತದೊತ್ತಡ ಅಥವಾ ಖಿನ್ನತೆಗೆ ತೆಗೆದುಕೊಳ್ಳುವ ಔಷಧಿಗಳ ಅಡ್ಡಪರಿಣಾಮ
*ಶಕ್ತಿಯ ಕೊರತೆ
*ಖಿನ್ನತೆ
*ಹಾರ್ಮೋನು ವೈಪರಿತ್ಯ
*ಒತ್ತಡ, ಆತಂಕ ಮತ್ತು ಸಂಬಂಧದ ಸಮಸ್ಯೆ

ಮಧುಮೇಹ ನರರೋಗ
ಮಧುಮೇಹ ನರರೋಗ ಎನ್ನುವುದು ಮಧುಮೇಹಕ್ಕೆ ಸಂಬಂಧಿಸಿದ ಒಂದು ರೀತಿಯಲ್ಲಿ ನರಕ್ಕೆ ಆಗುವ ಹಾನಿಯಾಗಿರುವುದು. ಇದರಿಂದ ಲೈಂಗಿಕ ಸಮಸ್ಯೆಗಳು ಕಾಡಬಹುದು. ಮರಗಟ್ಟುವಿಕೆ, ನೋವು ಅಥವಾ ಜನನೇಂದ್ರಿಯದ ಭಾಗದಲ್ಲಿ ಭಾವನೆಗಳ ಕೊರತೆಯು ಕಾಡಬಹುದು. ಇದನ್ನು ನಾವು ನಿಮಿರು ದೌರ್ಬಲ್ಯವೆಂದು ಕರೆಯಬಹುದು.
ನರರೋಗದಿಂದಾಗಿ ಪರಾಕಾಷ್ಠೆ ತಲುಪಲು ಕಷ್ಟವಾಗಬಹುದು ಅಥವಾ ಲೈಂಗಿಕ ಉತ್ತೇಜನದ ಭಾವನೆ ಪಡೆಯಲು ತುಂಬಾ ಕಠಿಣವಾಗಬಹುದು. ಇದರಿಂದಾಗಿ ಸೆಕ್ಸ್ ಎನ್ನುವುದು ತುಂಬಾ ನೋವಿನ ಹಾಗೂ ಆನಂದಿಸಲು ಸಾಧ್ಯವಾಗದೆ ಇರಬಹುದು.

ಸಂಬಂಧದ ಚಿಂತೆ
ಸಂಗಾತಿ ಜತೆಗೆ ಲೈಂಗಿಕ ವಿಚಾರಗಳ ಬಗ್ಗೆ ಸಂವಹನ ನಡೆಸುವುದು ಅತೀ ಅಗತ್ಯವಾಗಿರುವುದು. ಸಂವಹನ ಕೊರತೆಯಿಂದಾಗಿ ಲೈಂಗಿಕ ಮತ್ತು ಅನ್ಯೋನ್ಯತೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಆರೋಗ್ಯ ಪರಿಸ್ಥಿತಿಯಿಂದಾಗಿ ದಂಪತಿಯು ತಮ್ಮ ಲೈಂಗಿಕ ಸಂಬಂಧವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಬಹುದು. ಕೆಲವೊಂದು ಸಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಅದರ ಬಗ್ಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುವುದು ತುಂಬಾ ಸುಲಭ ಎಂದು ನಮಗನಿಸುವುದು.

ಲೈಂಗಿಕ ಆರೋಗ್ಯ ಸಮಸ್ಯೆಯು ಪುರುಷರಿಗೆ ನಿಶ್ಚಿತ
ಮಧುಮೇಹದಿಂದ ಬಳಲುತ್ತಾ ಇರುವಂತಹ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಲೈಂಗಿಕ ಸಮಸ್ಯೆಯೆಂದರೆ ನಿಮಿರು ದೌರ್ಬಲ್ಯ. ನಿಮಿರು ದೌರ್ಬಲ್ಯದ ಬಗ್ಗೆ ಪರೀಕ್ಷೆ ಮಾಡಲು ಪುರುಷರು ತೆರಳುವ ವೇಳೆ ಮಧುಮೇಹವು ಪತ್ತೆಯಾಗುವುದು. ಸ್ಖಲನದ ತನಕ ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ವಿಫಲವಾಗುವ ಕಾರಣದಿಂದಾಗಿ ನರಗಳು, ಸ್ನಾಯುಗಳು ಮತ್ತು ನಾಳೀಯ ರಚನೆಗಳ ಮೇಲೆ ಹಾನಿಯಾಗಬಹುದು. ಮಧುಮೇಹವನ್ನು ಹೊಂದಿರುವ ಅರ್ಧದಷ್ಟು ಪುರುಷರಲ್ಲಿ ನಿಮಿರು ದೌರ್ಬಲ್ಯವು ಕಾಣಿಸಿಕೊಳ್ಳುವುದು ಎಂದು ಕ್ಲೆವೆಲ್ಯಾಂಡ್ ಕ್ಲಿನಿಕ್ ಹೇಳಿದೆ. ಕೆಲವೊಂದು ರೀತಿಯ ಔಷಧಿಗಳ ಅಡ್ಡಪರಿಣಾಮದಿಂದಾಗಿ ಟೆಸ್ಟೊಸ್ಟೆರಾನ್ ಮಟ್ಟದಲ್ಲಿ ಏರುಪೇರಾಗಿ ನಿಮಿರು ದೌರ್ಬಲ್ಯ ಉಂಟಾಗಬಹುದು. ಮಧುಮೇಹದೊಂದಿಗೆ ಬರುವಂತಹ ಇತರ ಕೆಲವೊಂದು ಸಮಸ್ಯೆಗಳು ಕೂಡ ನಿಮಿರು ದೌರ್ಬಲ್ಯಕ್ಕೆ ಕಾರಣವಾಗುವುದು.

ಸ್ಖಲನ ಹಿಮ್ಮುಖವಾಗುವುದು
ಟೈಪ್ 2 ಮಧುಮೇಹ ಹೊಂದಿರುವ ಪುರುಷರಲ್ಲಿ ಕಾಣಿಸಿಕೊಳ್ಳುವಂತಹ ಲೈಂಗಿಕ ಸಮಸ್ಯೆ ಎಂದರೆ ಅದು ಸ್ಖಲನ ಹಿಮ್ಮುಖವಾಗುವುದು. ಈ ವೇಳೆ ವೀರ್ಯವು ಶಿಶ್ನದೊಳಗೆ ಬರುವ ಬದಲು ಮೂತ್ರನಾಳಗಳಿಗೆ ಹೋಗುವುದು. ಆಂತರಿಕ ಸ್ಪಿಂಚರ್ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ಇಂತಹ ಸಮಸ್ಯೆ ಬರುವುದು. ಈ ಸ್ನಾಯುಗಳು ದೇಹದಲ್ಲಿ ಹಾದಿಯನ್ನು ತೆರೆಯುವ ಹಾಗೂ ಮುಚ್ಚುವ ಕೆಲಸವನ್ನು ಮಾಡುತ್ತದೆ. ಅತ್ಯಧಿಕ ಮಟ್ಟದ ಗ್ಲೂಕೋಸ್ ನಿಂದಾಗಿ ಸ್ನಾಯುಗಳಿಗೆ ತೀವ್ರ ರೀತಿಯಲ್ಲಿ ಹಾನಿಯಾಗುವುದು. ಈ ಕಾರಣದಿಂದಾಗಿ ಸ್ಖಲನವು ಹಿಮ್ಮುಖವಾಗುವುದು.

ಮಹಿಳೆಯರಿಗೆ ನಿರ್ದಿಷ್ಟವಾಗಿರುವ ಲೈಂಗಿಕ ಆರೋಗ್ಯ ಸಮಸ್ಯೆಗಳು
ಟೈಪ್ 2 ಮಧುಮೇಹ ಹೊಂದಿರುವಂತಹ ಮಹಿಳೆಯರಲ್ಲಿ ಸಾಮಾಣ್ಯವಾಗಿ ಕಾಡುವಂತಹ ಲೈಂಗಿಕ ಸಮಸ್ಯೆಯೆಂದರೆ ಅದು ಯೋನಿ ಒಣಗುವಿಕೆ. ಹಾರ್ಮೊನುಗಳಲ್ಲಿನ ಬದಲಾವಣೆ ಅಥವಾ ಜನನೇಂದ್ರಿಯಗಳಿಗೆ ಸರಿಯಾಗಿ ರಕ್ತ ಸಂಚಾರ ಆಗದೆ ಇರುವ ಕಾರಣದಿಂದ ಹೀಗೆ ಆಗಬಹುದು.
ಮಧುಮೇಹ ಹೊಂದಿರುವಂತಹ ಮಹಿಳೆಯರಿಗೆ ಯೋನಿಯ ಸೋಂಕು ಮತ್ತು ಉರಿಯೂತ ಕಾಡುವಂತಹ ಸಾಧ್ಯತೆಯು ಅತ್ಯಧಿಕವಾಗಿರುವುದು. ಈ ಎರಡು ಕಾರಣಗಳಿಂದಾಗಿ ಸೆಕ್ಸ್ ತುಂಬಾ ನೋವುಂಟು ಮಾಡುವುದು. ಮೂತ್ರಕೋಶದಲ್ಲಿನ ನರಗಳ ಹಾನಿಯಿಂದ ಸೆಕ್ಸ್ ವೇಳೆ ಅಸ್ಥಿರತೆ ಉಂಟು ಮಾಡುವುದು.
ಮಧುಮೇಹ ಹೊಂದಿರುವಂತಹ ಮಹಿಳೆಯರಿಗೆ ಪದೇ ಪದೇ ಮೂತ್ರಕೋಶದ ಸೋಂಕಿನ ಸಮಸ್ಯೆಯು ಕಾಡುವುದು. ಇದರಿಂದ ಸೆಕ್ಸ್ ತುಂಬಾ ನೋವು ಹಾಗೂ ಆನಂದವಿಲ್ಲದಂತೆ ಮಾಡಬಹುದು.

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಟೈಪ್ 2 ಮಧುಮೇಹ ತಡೆಯಿರಿ
ಟೈಪ್ 2 ಮಧುಮೇಹದೊಂದಿಗೆ ಕಾಣಿಸಿಕೊಳ್ಳುವಂತಹ ಲೈಂಗಿಕ ಸಮಸ್ಯೆಗಳು ತುಂಬಾ ಹತಾಶೆ ಹಾಗೂ ಆತಂಕ ಉಂಟು ಮಾಡುವುದು. ಯಾವುದೇ ಬೇರೆ ವಿಧಾನ ಅಥವಾ ಹೊಂದಾಣಿಕೆ ಮಾಡಿಕೊಳ್ಳುವ ಬದಲು ಲೈಂಗಿಕ ಆಕಾಂಕ್ಷೆಗಳನ್ನು ಬಿಟ್ಟುಬಿಡುವುದು ಸುಲಭವೆಂದು ನಿಮಗೆ ಅನಿಸಬಹುದು. ಅದಾಗ್ಯೂ, ಟೈಪ್ 2 ಮಧುಮೇಹ ಇದ್ದರೂ ನಿಮಗೆ ತುಂಬಾ ಆರೋಗ್ಯಕರ ಹಾಗೂ ಚಟುವಟಿಕೆಯ ಲೈಂಗಿಕ ಜೀವನ ಸಾಗಿಸಬಹುದು. ಜೀವನಶೈಲಿ ಬದಲಾವಣೆ, ಔಷಧಿ ಮತ್ತು ನಿಮ್ಮ ಸಂಗಾತಿ ಜತೆಗೆ ಸರಿಯಾದ ರೀತಿಯಲ್ಲಿ ಸಂವಹನ ನಡೆಸುವ ಮೂಲಕ ನೀವು ಕೆಲವೊಂದು ದಾರಿಗಳನ್ನು ಕಂಡುಕೊಳ್ಳಬಹುದಾಗಿದೆ.

ದಿನದ ಬೇರೆ ಯಾವುದೇ ಸಮಯದಲ್ಲಿ ಪ್ರಯತ್ನಿಸಿ
ಶಕ್ತಿ ಕಡಿಮೆಯಿದ್ದಾಗ ಮತ್ತು ನಿಶ್ಯಕ್ತಿಯು ಸಮಸ್ಯೆಯಾದಾಗ ದಿನದ ಬೇರೆ ಯಾವುದೇ ಸಮಯದಲ್ಲಿ ನೀವು ಸೆಕ್ಸ್ ನ್ನು ಪ್ರಯತ್ನಿಸಬಹುದು. ದಿನದ ಯಾವುದೇ ಅವಧಿಯಲ್ಲಿ ನಿಮ್ಮ ಶಕ್ತಿಯು ಯಾವುದೇ ಇದ್ದಾಗ ಇದನ್ನು ಪ್ರಯತ್ನಿಸಿ. ರಾತ್ರಿಯ ಸಮಯವು ಯಾವಾಗಲೂ ಸರಿಯಾದ ಸಮಯವಾಗಿರಲ್ಲ. ದಿನಪೂರ್ತಿ ದುಡಿದ ಬಳಿಕ ಮಧುಮೇಹದಿಂದಾಗಿ ಮತ್ತಷ್ಟು ನಿಶ್ಯಕ್ತಿಯು ಕಾಡುವುದು. ಇದರಿಂದ ಸೆಕ್ಸ್ ಗೆ ಬೇಕಾಗಿರುವ ಶಕ್ತಿಯು ಇರದು. ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆ ಸೆಕ್ಸ್ ಪ್ರಯತ್ನಿಸಿ. ನೀವು ಪ್ರಯೋಗ ಮಾಡಿದರೆ ಅದು ನಿಮಗೆ ಅತ್ಯುತ್ತಮ ಲಾಭ ತಂದುಕೊಡುವುದು.

ಒಣಗುವುದನ್ನು ನಿವಾರಣೆ ಮಾಡಲು ಲ್ಯೂಬ್ರಿಕೆಂಟ್ ಬಳಸಿ
ಯೋನಿ ಒಣಗುವ ಸಮಸ್ಯೆ ನಿವಾರಣೆ ಮಾಡಲು ನೀವು ಲ್ಯೂಬ್ರಿಕೆಂಟ್ ಬಳಸಿಕೊಳ್ಳಿ. ನೀರಿನಾಂಶ ಇರುವಂತಹ ಲ್ಯೂಬ್ರಿಕೆಂಟ್ ತುಂಬಾ ಒಳ್ಳೆಯದು ಮತ್ತು ಹಲವಾರು ರೀತಿಯ ಬ್ರಾಂಡ್ ಗಳಲ್ಲಿ ಇದು ಲಭ್ಯವಿದೆ. ಹೆಚ್ಚು ಲ್ಯುಬ್ರಿಕೆಂಟ್ ಹಾಕಿಕೊಳ್ಳಲು ಸೆಕ್ಸ್ ಮಧ್ಯದಲ್ಲಿ ನಿಲ್ಲಿಸಲು ಹಿಂಜರಿಯಬೇಡಿ.



Click it and Unblock the Notifications











