Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಮಧುಮೇಹಿಗಳು ಬಾಳೆಹಣ್ಣು ಸೇವಿಸಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?
ಮಧುಮೇಹ ಬಂದರೆ ಆಗ ಜೀವನವೇ ನರಕ ಎನ್ನುವಂತಾಗಿ ಬಿಡುವುದು. ಮನಸ್ಸಿಗೆ ಬೇಕಿದ್ದಂತೆ ಆಹಾರ ಸೇವನೆ ಮಾಡಲು ನಿರ್ಬಂಧಗಳು ಇರುವುದು. ಈ ಹಿನ್ನೆಲೆಯಲ್ಲಿ ಮಧುಮೇಹಿಗಳಿಗೆ ಹಣ್ಣುಗಳು ತಿನ್ನಬಹುದೇ ಎನ್ನುವ ಪ್ರಶ್ನೆಯು ಮೂಡುವುದು. ಕೆಲವರು ಹಣ್ಣುಗಳನ್ನು ತಿನ್ನಬಹುದು ಎಂದು ಹೇಳಿದರೆ, ಇನ್ನು ಕೆಲವರು ಮಧುಮೇಹಿಗಳು ಹಣ್ಣುಗಳ ಸೇವನೆ ಮಾಡಬಾರದು ಎಂದು ಹೇಳುವರು. ಆದರೆ ದಿನದಲ್ಲಿ ಎರಡು ಹಣ್ಣುಗಳನ್ನು ತಿನ್ನಬಹುದು ಎಂದು ಹೇಳಲಾಗುತ್ತದೆ.
ಅದರಲ್ಲೂ ಬಾಳೆಹಣ್ಣು ತುಂಬಾ ಆರೋಗ್ಯಕಾರಿ ಹಣ್ಣಾಗಿದ್ದು, ಇದು ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ನೀಡುವುದು. ಒಂದು ಮಧ್ಯಮ ಗಾತ್ರ ಬಾಳೆಹಣ್ಣಿನಲ್ಲಿ ದೈನಂದಿನ ಅಗತ್ಯತೆಗೆ ಬೇಕಾಗಿರುವ ಶೇ.8ರಷ್ಟು ಪೊಟಾಶಿಯಂ, ಖನಿಜಾಂಶವು ಇರುವುದು. ಇದು ರಕ್ತದೊತ್ತಡ ನಿಯಂತ್ರಣ ಮಾಡಲು ನೆರವಾಗುವುದು. ಇದು 2 ಗ್ರಾಂನಷ್ಟು ನಾರಿನಾಂಶ ಮತ್ತು 12 ಗ್ರಾಂನಷ್ಟು ವಿಟಮಿನ್ ಸಿ ಒದಗಿಸುವುದು. ಇದನ್ನು ನಿಮ್ಮ ಆಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಸೇರಿಸಿಕೊಳ್ಳುವ ತನಕ ಮತ್ತು ದಿನನಿತ್ಯದ ಊಟದಲ್ಲಿ ಅದರಲ್ಲಿನ ಕಾರ್ಬೋಹೈಡ್ರೇಟ್ಸ್ ಗಳನ್ನು ಗಮನಿಸುವ ತನಕ ಇದು ನಿಮ್ಮ ಆಹಾರ ಕ್ರಮದ ಭಾಗವಾಗಿ ಇರುವುದು.

ಕಾರ್ಬೋಹೈಡ್ರೇಟ್ಸ್ ಲೆಕ್ಕಾಚಾರ
ಮಧುಮೇಹ ಇರುವಂತಹ ಜನರು ಒಂದು ಮಧ್ಯಮ ಗಾತ್ರದ ಬಾಳೆಹಣ್ಣು ಸೇವಿಸಬಹುದು. ಈ ಬಾಳೆಹಣ್ಣು 6 ಇಂಚಿಗಿಂತ ದೊಡ್ಡದು ಇರಬಾರದು. ದೊಡ್ಡ ಗಾತ್ರದ ಬಾಳೆಹಣ್ಣಿನಲ್ಲಿ 19 ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುವುದು. ಇದು ಮಧುಮೇಹಿ ತನ್ನ ಆಹಾರ ಕ್ರಮದಲ್ಲಿ ಸೇವಿಸಬಹುದಾದ ಕಾರ್ಬೋಹೈಡ್ರೇಟ್ಸ್ ನ 1/3 ಭಾಗವಾಗಿದೆ.

ಗ್ಲೈಸೆಮಿಕ್ ಇಂಡೆಕ್ಸ್
ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವಂತಹ ಆಹಾರಗಳು ಗ್ಲೈಸೆಮಿಕ್ ಇಂಡೆಕ್ಸ್ ಅಧಿಕ ಇರುವ ಆಹಾರಕ್ಕಿಂತ ತುಂಬಾ ನಿಧಾನವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ತುಂಬಾ ಹಣ್ಣಾಗಿರುವ ಬಾಳೆಹಣ್ಣಿಗಿಂತ ಹಸಿರು ಬಣ್ಣವಿರುವಂತಹ ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದು. ನೀವು ಬಾಳೆಹಣ್ಣು ತಿನ್ನುತ್ತಿದ್ದರೆ ಆಗ ನೀವು ತುಂಬಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರದೊಂದಿಗೆ ಇದನ್ನು ಸೇವಿಸಬೇಕು. ನೀವು ಗ್ಲೈಸೆಮಿಕ್ ತುಂಬಾ ಕಡಿಮೆ ಇರುವ ಆಹಾರ ಮತ್ತು ಕಾರ್ಬೊಹೈಡ್ರೇಟ್ಸ್ ಇಲ್ಲದೆ ಇರುವ ಆಹಾರ ಸೇವನೆ ಮಾಡಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುವುದು ತಪ್ಪುವುದು. ಗ್ಲೈಸೆಮಿಕ್ ಕಡಿಮೆ ಇರುವ ಆಹಾರಗಳೆಂದರೆ ಬೀಜಗಳು, ಪಿಷ್ಠವಿಲ್ಲದೆ ತರಕಾರಿಗಳು ಮತ್ತು ಬೀನ್ಸ್ ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ. ಮಾಂಸ, ಮೀನು, ಕೋಳಿ ಮಾಂಸ, ಚೀಸ್ ಮತ್ತು ಮೊಟ್ಟೆಯಲ್ಲಿ ತುಂಬಾ ಕಡಿಮೆ ಕಾರ್ಬೋಹೈಡ್ರೇಟ್ಸ್ ಗಳು ಇವೆ. ತುಂಬಾ ಕಡಿಮೆ ಗ್ಲೈಸೆಮಿಕ್ ಹೊಂದಿರುವ ಕೆಲವೊಂದು ಹಣ್ಣುಗಳೆಂದರೆ ಹಸಿ ಸೇಬು, ಚೆರ್ರಿಗಳು ಮತ್ತು ಗ್ರೇಪ್ ಫ್ರೂಟ್. ಕಲ್ಲಂಗಡಿ ಮತ್ತು ಒಣ ಖರ್ಜೂರದಲ್ಲಿ ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇದೆ.

ನಿಮ್ಮ ತಟ್ಟೆ ತಯಾರಿಸಿ
ದ ಅಮೆರಿಕನ್ ಡಯಾಬಿಟಿಕ್ಸ್ ಅಸೋಸಿಯೇಶನ್ ಕ್ರಿಯೇಟ್ ಯುವರ್ ಪ್ಲೇಟ್ ವಿಧಾನವು ಕಾರ್ಬೊಹೈಡ್ರೇಟ್ಸ್ ಬಗ್ಗೆ ಚಿಂತೆ ಮಾಡದೆ ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ನೆರವಾಗಲಿದೆ. ಪಿಷ್ಠವಿಲ್ಲದೆ ಇರುವ ತರಕಾರಿಗಳಿಂದ ಅರ್ಧದಷ್ಟು ಪ್ಲೇಟ್ ನ್ನು ತುಂಬಬೇಕು, ಇನ್ನರ್ಧ ಭಾಗವನ್ನು ತೆಳು ಪ್ರೋಟೀನ್ ಮತ್ತು ಪಿಷ್ಠ ಆಹಾರದಿಂದ ತುಂಬಿ ಮತ್ತು ಒಂದು ಲೋಟ ಹಾಲು ಮತ್ತು ಸಣ್ಣ ತುಂಡು ಹಣ್ಣುಗಳನ್ನು ಸೇರಿಸಿಕೊಳ್ಳಿ. ಈ ವಿಧಾನವನ್ನು ಅನುಸರಿಸುವ ವೇಳೆ ಮಧ್ಯಮ ಗಾತ್ರದ ಬಾಳೆಹಣ್ಣನ್ನು ಬಳಸಿಕೊಳ್ಳಬಹುದು.

ಪರಿಶೀಲನೆಗಳು
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ದಿನವಿಡಿ ಒಂದು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್ ಗಳನ್ನು ಸೇವಿಸುತ್ತಾ ಇರಬೇಕು. ಇದು ಮಧುಮೇಹಿ ಒಂದು ದಿನಕ್ಕೆ ಸೇವಿಸಬಹುದಾದ ಕಾರ್ಬೋಹೈಡ್ರೇಟ್ಸ್ ನಷ್ಟು ಇರಬೇಕು. ಮಧುಮೇಹದಲ್ಲಿ ಕೇವಲ ಕಾರ್ಬೋಹೈಡ್ರೇಟ್ಸ್ ಮಾತ್ರ ಹೆಚ್ಚಾದರೆ ಆಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಒಮ್ಮೆಲೇ ಏರಿಕೆಯಾಗುವುದು. ಇದಕ್ಕಾಗಿ ಪ್ರೋಟೀನ್ ಮತ್ತು ಕೊಬ್ಬು ಕೂಡ ಸೇವಿಸಬೇಕು.



Click it and Unblock the Notifications