Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಪುರುಷರಿಗೆ ಮಧುಮೇಹ ರೋಗ ಬಂದರೆ, ಅಪಾಯ ಕಟ್ಟಿಟ್ಟ ಬುತ್ತಿ!!
ಮಧುಮೇಹ ಎನ್ನುವ ಸಮಸ್ಯೆಯು ವಿಶ್ವದೆಲ್ಲೆಡೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಾ ಇದೆ. ಮಧುಮೇಹವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರನ್ನೂ ಕಾಡಲು ಆರಂಭಿಸಿದೆ. ಹದಿಹರೆಯದಿಂದ ಹಿಡಿದ ವಯೋವೃದ್ಧರ ತನಕ ಮಧುಮೇಹವು ತುಂಬಾ ಅಪಾಯಕಾರಿಯಾಗಿ ಹಾಸುಹೊಕ್ಕಿದೆ. ಜೀವನ ಶೈಲಿ, ಆಹಾರ ಕ್ರಮ ಮತ್ತು ವಂಶವಾಹಿನಿಯಿಂದ ಮಧುಮೇಹವು ಕಾಣಿಸಿಕೊಳ್ಳುವುದು.
ಅದೇ ಪುರುಷರಲ್ಲಿ ಮಧುಮೇಹ ಕಾಣಿಸಿಕೊಂಡರೆ ಅದು ಫಲವತ್ತತೆ ಮೇಲೆ ಪರಿಣಾಮ ಬೀರುವುದು. ಮಧುಮೇಹದಿಂದ ವೀರ್ಯದ ಗಣತಿ ಹಾಗೂ ಇತರ ಕೆಲವೊಂದು ಸಮಸ್ಯೆಗಳು ಭಾದಿಸಬಹುದು. ಭಾರತದಲ್ಲಿ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ಪ್ರತಿ ಐದು ಪುರುಷರಲ್ಲಿ ಒಬ್ಬ ಮಧುಮೇಹದಿಂದ ಬಳಲುತ್ತಾ ಇದ್ದಾನೆ. ಇದು ಖಂಡಿತವಾಗಿಯೂ ತುಂಬಾ ಚಿಂತೆಗೀಡು ಮಾಡುವ ವಿಚಾರ ಮತ್ತು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವಂತಹ ಮಧುಮೇಹದ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಿದೆ....

ಪುರುಷರ ಫಲವತ್ತತೆ ಮೇಲೆ ಮಧುಮೇಹ ಪ್ರಭಾವ ಬೀರುವುದೇ?
ಮಧುಮೇಹದಿಂದ ಬಳಲುತ್ತಾ ಇರುವಂತಹ ಪುರುಷರು ವೀರ್ಯ ಅಪೊಪ್ಟೋಸಿಸ್ ಎಂಬ ಸಮಸ್ಯೆಗೆ ಸಿಲುಕಲಿದ್ದಾರೆ. ಇದರಿಂದ ಡಿಎನ್ ಎಯಲ್ಲಿ ವಿಘಟನೆ ಉಂಟಾಗಲಿದೆ.

ಇದರಿಂದ ಗರ್ಭಪಾತವಾಗುವುದೇ?
ಇಂತಹ ಡಿಎನ್ ಎಯೊಂದಿಗೆ ಒಂದು ವೇಳೆ ಗರ್ಭ ನಿಂತರೂ ಅದು ಗರ್ಭಪಾತಕ್ಕೆ ಕಾರಣವಾಗಬಹುದು.

ವೈವಾಹಿಕ ಜೀವನದ ಮೇಲೆ ಮಧುಮೇಹದ ಪರಿಣಾಮವೇನು?
ಮಧುಮೇಹಿಗಳು ಕಾಮಕೂಟದಲ್ಲಿ ಮೊದಲಿನಷ್ಟು ಚಟುವಟಿಕೆಯಿಂದ ಪಾಲ್ಗೊಳ್ಳಲು ಸಾಧ್ಯವಾಗದೇ ಇರಬಹುದು. ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಹಾಗೂ ಉದ್ರೇಕತೆಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಸಾಧ್ಯವಾಗದೆಯೂ ಹೋಗಬಹುದು.

ವೈವಾಹಿಕ ಜೀವನದ ಮೇಲೆ ಮಧುಮೇಹದ ಪರಿಣಾಮವೇನು?
ಮಧುಮೇಹದಿಂದ ಆಕ್ಸಿಡೇಟಿವ್ ಒತ್ತಡ ಉಂಟಾಗುವುದು. ಇದರಿಂದ ವೀರ್ಯದಲ್ಲಿರುವ ಡಿಎನ್‌ಎಯು ವಿಘಟನೆಯಾಗಬಹುದು.

ಮೊದಲ ಹಂತದ ಮಧುಮೇಹ ಅಥವಾ ಎರಡನೇ ಹಂತದ ಮಧುಮೇಹ?
ಮೊದಲ ಹಂತದ ಮಧುಮೇಹದಿಂದ ಬಳಲುವ ವ್ಯಕ್ತಿಯ ಡಿಎನ್ ಎಗೆ ಹಾನಿಯಾಗುವ ಸಾಧ್ಯತೆಯು ತುಂಬಾ ಹೆಚ್ಚಿರುವುದು. ಇಂತಹ ಜನರಲ್ಲಿ ವೀರ್ಯದ ಪ್ರಮಾಣವು ಕಡಿಮೆಯಾಗಿರುವುದು.

ಸಂಶೋಧನೆಗಳು ಇದನ್ನು ಹೇಗೆ ಪತ್ತೆ ಮಾಡಿವೆ?
ಇತ್ತೀಚೆಗೆ ನಡೆಸಿರುವ ಅಧ್ಯಯನದಲ್ಲಿ ಮಧುಮೇಹವಿರುವ ಪುರುಷರು ಮತ್ತು ಸಾಮಾನ್ಯವಾಗಿರುವ ಪುರುಷರ ಮೇಲೆ ಸಂಶೋಧನೆ ನಡೆಸಲಾಯಿತು. ಇವರೆಲ್ಲರ ವಯಸ್ಸು 25-45ರ ಹರೆಯವಾಗಿತ್ತು. ಸಾಮಾನ್ಯ ಪುರುಷರಿಗೆ ಹೋಲಿಸಿದರೆ ಮಧುಮೇಹ ಇರುವಂತಹ ವ್ಯಕ್ತಿಗಳಲ್ಲಿ ಡಿಎನ್ಎ ಅಪಾಯವು ಹೆಚ್ಚಾಗಿರುವುದು ಕಂಡು ಬಂದಿದೆ.

ಇದನ್ನು ಸಂಶೋಧಕರು ಕಂಡುಕೊಂಡಿದ್ದಾದರೂ ಹೇಗೆ?
ಇತ್ತೀಚಿನ ಸಂಶೋಧನೆಯೊಂದರಲ್ಲಿ ಸಾಮಾನ್ಯ ಜೀವನ ನಡೆಸುತ್ತಿರುವ 25-45 ವರ್ಷ ವಯಸ್ಸಿನ ಮಧುಮೇಹಿ ಪುರುಷರ ಆರೋಗ್ಯವನ್ನು ಅಭ್ಯಸಿಸಲಾಗಿತ್ತು. ಮಧುಮೇಹಿಗಳಲ್ಲಿ ಈ ಬಗೆಯ ವಿರೂಪ ಡಿ ಎನ್ ಎ ಇರುವ ವೀರ್ಯಾಣುಗಳು ಮಧುಮೇಹಿಗಳಲ್ಲಿಯೇ ಕಂಡುಬಂದಿತ್ತು.

ಅಂತಿಮ ತೀರ್ಮಾನ
ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ ಈ ಬಗ್ಗೆ ಅಧೀರರಾಗುವ ಅಗತ್ಯವೇನೂ ಇಲ್ಲ. ಮೊದಲು ಸ್ಕ್ರೀನ್ ಟೆಸ್ಟ್ ಎಂಬ ಪರೀಕ್ಷೆಗೆ ಒಳಗಾಗಿ ನಿಮ್ಮ ವೀರ್ಯಾಣುಗಳು ಫಲವತ್ತಾಗಿವೆಯೇ ಇಲ್ಲವೇ ಎಂದು ಕಂಡುಕೊಳ್ಳಿ. ಈಗ ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದು ಈ ಪರಿಸ್ಥಿತಿಯನ್ನು ಸರಿಪಡಿಸಲು ಕೆಲವಾರು ಔಷಧಿಗಳು ಲಭ್ಯವಿವೆ. ವೈದ್ಯರು ನಿಮ್ಮ ಆರೋಗ್ಯದ ಮಾಹಿತಿಯನ್ನು ಆಧರಿಸಿ ಸೂಕ್ತ ಔಷಧಿಯನ್ನು ಸೂಚಿಸಬಲ್ಲರು. ಇದರಿಂದ ಖಂಡಿತಾ ಸಾಮಾನ್ಯ ಜೀವನ ಹಾಗೂ ಸುಖಕರ ದಾಂಪತ್ಯ ನಡೆಸಲು ಸಾಧ್ಯ.



Click it and Unblock the Notifications