Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಧುಮೇಹಕ್ಕೆ ತಡೆ ಹಾಕುವ ಆರೋಗ್ಯಕರ ಜೀವನಶೈಲಿ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನಾವು ತಿನ್ನುವ ಆಹಾರ ಯಾವ ರೀತಿಯದ್ದು ಎಂಬುದನ್ನು ಆಧರಿಸಿ ರೋಗಗಳು ನಮ್ಮನ್ನು ಕಾಡುತ್ತವೆ. ಆರೋಗ್ಯಪೂರ್ಣ ಆಹಾರಗಳನ್ನು ನಾವು ಸೇವಿಸುತ್ತೇವೆ ಎಂದಾದಲ್ಲಿ ನಮ್ಮ ಶರೀರದೊಂದಿಗೆ ನಾವು ಕೂಡ ಸ್ವಾಸ್ಥ್ಯದಿಂದ ಇರುತ್ತೇವೆ. ಅದುವೇ ಅನಾರೋಗ್ಯಕರ ಆಹಾರವನ್ನು ನಾವು ಸೇವಿಸಿದಲ್ಲಿ ರೋಗಗಳು ನಮ್ಮನ್ನು ಮುತ್ತಿಕೊಂಡು ನಮ್ಮನ್ನು ಕುಕ್ಕಿ ತಿನ್ನುತ್ತವೆ. ಮೊದಲೆಲ್ಲಾ ವಯಸ್ಸಾದಂತೆ ಕಾಣಿಸಿಕೊಳ್ಳುತ್ತಿದ್ದ ರೋಗಗಳು ಈಗೀಗ ಎಳೆತನದಲ್ಲೇ ದಾಳಿ ಮಾಡಲು ಆರಂಭಿಸಿವೆ. ಅಂತಹುದರಲ್ಲಿ ಪ್ರಧಾನವಾಗಿರುವುದೇ ಮಧುಮೇಹವಾಗಿದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
ಎಲ್ಲಾ ರೋಗಗಳಿಗೂ ದೊಡ್ಡಪ್ಪನಂತಿರುವ ಸಕ್ಕರೆ ಕಾಯಿಲೆ ಇಲ್ಲವೇ ಮಧುಮೇಹ ಅನಾರೋಗ್ಯಕರ ಜೀವನ ಶೈಲಿಯ ಕೊಡುಗೆ ಎಂದೆನಿಸಿದೆ. ಬೆಳಗ್ಗಿನ ತಿಂಡಿಯನ್ನು ತ್ಯಜಿಸಿ ಮಧ್ಯಾಹ್ನ ಹೊಟ್ಟೆತುಂಬಾ ಊಟಮಾಡುವುದು, ಪಿಜ್ಜಾದಂತಹ ಅನಾರೋಗ್ಯಕರ ಆಹಾರವನ್ನು ಅತಿಯಾಗಿ ಸೇವಿಸುವುದು, ಸಾಫ್ಟ್ ಡ್ರಿಂಕ್ಸ್‌ಗಳಂತಹ ಬೊಜ್ಜಿನ ಶೇಖರಣೆಯ ಸೇವನೆ, ಮದ್ಯಪಾನ, ಧೂಮಪಾನದ ದಾಸರಾಗಿರುವುದು, ವ್ಯಾಯಾಮ ಮಾಡದೇ ಬರಿಯೆ ಕೂತು ತಿನ್ನುವ ಸಂಪ್ರದಾಯ ಮಧುಮೇಹದಂತಹ ಕಾಯಿಲೆಗೆ ರಹದಾರಿಯಾಗಿದೆ. ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ನಿಮ್ಮ ಅನಾರೋಗ್ಯಕರ ಜೀವನ ಶೈಲಿಯಿಂದ ನಿಮ್ಮನ್ನು ಕಾಡುವ ರೋಗಗಳೀಗೂ ಬರಗಾಲವಿರುವುದಿಲ್ಲ. ಇನ್ನು ಮಧುಮೇಹ ಬರುವುದಕ್ಕೂ ಮುನ್ನ ಎರಡನೇ ವಿಧದ ಮಧುಮೇಹ (ಟೈಪ್ ಟು ಡಯಾಬಿಟೀಸ್) ಸ್ಥೂಲಕಾಯ, ಬೊಜ್ಜು ನಿಮ್ಮನ್ನು ಹಿಂಡಿಹಿಪ್ಪೆ ಮಾಡಬಹುದು. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?
ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸುವುದಾಗಿದೆ. ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಇಲ್ಲಿ ನಾವು ನೀಡುವ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಎಂತಹ ಪ್ರಬಲ ರೋಗವನ್ನೂ ನಿಮಗೆ ಬುಡಸಮೇತ ನಾಶಮಾಡಬಹುದಾಗಿದೆ...

ಅನ್ನದ ಬದಲಿಗೆ..
ಸಂಸ್ಕರಿಸಿದ ಧಾನ್ಯಗಳು ಆರೋಗ್ಯಕ್ಕೆ ಹಾನಿಕರ. ಆದರೆ ದುರಾದೃಷ್ಟವಶಾತ್ ಭಾರತೀಯರಿಗೆ ಬಿಳಿ ಅಕ್ಕಿ ಅನ್ನವೇ ಮೂಲಭೂತ ಆಹಾರವಾಗಿದೆ. ಇದರ ಬದಲಿಗೆ ಕೆಂಪಕ್ಕಿ ಅನ್ನವನ್ನು ಆರಿಸಿಕೊಳ್ಳಿ ಅಂತೆಯೇ ಕಂದು ಬ್ರೆಡ್ ಮಧುಮೇಹವನ್ನು ದೂರವಿರಿಸಲು ಸಹಕಾರಿಯಾಗಿದೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದು
ಹೆಚ್ಚು ಸಮಯದವರೆಗೆ ನಾವು ಕುಳಿತುಕೊಂಡು ಕೆಲಸ ಮಾಡುವುದು ನಮ್ಮ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸ ಬೊಜ್ಜನ್ನು ಉಂಟುಮಾಡುತ್ತದೆ. ಮಧುಮೇಹವನ್ನು ನಿವಾರಿಸಲು ಬೊಜ್ಜು ಕೂಡ ಕಾರಣವಾಗಿದೆ ಆದ್ದರಿಂದ ದೈಹಿಕ ಚಟುವಟಿಕೆಗಳಿಗೆ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಿ ಮತ್ತು ದೇಹದ ಕೊಬ್ಬನ್ನು ಕನಿಷ್ಠಗೊಳಿಸಿ.

ಸಕ್ಕರೆ ಪದಾರ್ಥಗಳನ್ನು ಸೇವಿಸದಿರಿ
ಹಬ್ಬ ಹರಿದಿನಗಳು ಸಮೀಪವಾದಂತೆ ಸಿಹಿತಿನಿಸುಗಳಿಗೆ ಆದ್ಯತೆ ಹೆಚ್ಚು. ಸಿಹಿ ತಿನ್ನದೇ ಅದನ್ನು ನಿಯಂತ್ರಣದಲ್ಲಿರಿಸುವುದು ತುಸು ಕಷ್ಟದ ಕೆಲಸವೇ. ಮಧುಮೇಹವನ್ನು ದೂರವಿರಿಸಲು, ಸಕ್ಕರೆ ತಿನಿಸುಗಳ ಸೇವೆನೆಯನ್ನು ಆದಷ್ಟು ಕಡಿಮೆ ಮಾಡಿ ಅಂತೆಯೇ ಕೃತಕ ಸಕ್ಕರೆಯ ಆಹಾರ ಪದಾರ್ಥಗಳನ್ನು ತ್ಯಜಿಸಿ.

ಆಹಾರದ ಪ್ರಮಾಣ
ಹೆಚ್ಚು ಪ್ರಮಾಣದ ಆಹಾರದ ಸೇವನೆಯು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಗಂಟೆಗೊಮ್ಮೆ ಸಣ್ಣ ಊಟವನ್ನು ನಿಮ್ಮದಾಗಿಸಿಕೊಳ್ಳಿ.

ಹಾಲು
ಹಾಲು ಪೋಷಕಾಂಶ ಮತ್ತು ಕಾರ್ಬೊಹೈಡ್ರೇಟ್ಸ್ ಎರಡನ್ನೂ ಒಳಗೊಂಡಿದೆ. ದಿನದಲ್ಲಿ ಎರಡು ಕಪ್‌ಗಳಷ್ಟು ಹಾಲು ಕುಡಿಯುವುದು ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.

ಫೈಬರ್ ಪ್ರಮಾಣ ಅಧಿಕವಿರಲಿ
ಎಲೆಗಳುಳ್ಳ ತರಕಾರಿಗಳು, ಬೀನ್ಸ್, ಮೊಳಕೆಯೊಡೆದ ಧಾನ್ಯಗಳು, ಅವರೆಕಾಳು ಆರೋಗ್ಯಕರವಾಗಿರುತ್ತವೆ. ಅವುಗಳಲ್ಲಿ ನಾರಿನಂಶ ಇದ್ದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತವೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಂತೆಯೇ ನಾರುಳ್ಳ ತರಕಾರಿಗಳು ನಿಮ್ಮ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.

ಮುಂಜಾಗ್ರತಾ ಕ್ರಮಗಳು
ಹಿಂದಿನ ದಿನ ನೆನೆಸಿಟ್ಟ ಬಾದಾಮಿಯನ್ನು ಮರುದಿನ ಸೇವಿಸಿ. ಅಂತೆಯೇ ಮೆಂತ್ಯ ನೆನೆಸಿಟ್ಟ ನೀರನ್ನು ಸೇವಿಸುವುದೂ ಮಧುಮೇಹಕ್ಕೆ ಉತ್ತಮ ಪರಿಹಾರವಾಗಿದೆ. ಬೆಳಗ್ಗಿನ ಹೊತ್ತು ಟೊಮೇಟೊ ರಸಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಬೆರೆಸಿ ಸೇವಿಸಿ. ಹೀಗೆ ಮೊದಲಾದ ಸರಳ ಹಂತಗಳು ಮಧುಮೇಹವನ್ನು ತಡೆಗಟ್ಟಲು ಸಹಕಾರಿಯಾಗಿದೆ.

60:20:20 ಪದ್ಧತಿ ಅನುಸರಿಸಿ
ನಿಮ್ಮ ಆಹಾರದಲ್ಲಿ 80% ಕಾರ್ಬೊಹೈಡ್ರೇಟ್ಸ್‌ಗಳಿದ್ದರೆ ಬರಿಯ 20%ಪೋಷಕಾಂಶಗಳಿರುತ್ತವೆ. ಹಾಗಿದ್ದರೆ ಇದನ್ನು ಬದಲಾಯಿಸಿಕೊಳ್ಳಿ. 60% ಕಾರ್ಬೊಹೈಡ್ರೇಟ್ಸ್, 20% ಪೋಷಕಾಂಶಗಳು ಮತ್ತು 20% ಕೊಬ್ಬು ನೀವು ಸೇವಿಸುವ ಆಹಾರದಲ್ಲಿರಲಿ. ನಿಮ್ಮ ಚಟುವಟಿಕಾ ಹಂತಗಳಿಗೆ ನಿಮ್ಮ ಕ್ಯಾಲೊರಿಗಳನ್ನು ಹೊಂದಿಸಿಕೊಳ್ಳಿ.



Click it and Unblock the Notifications











