Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹದಿಹರೆಯದವರೇ ಮಧುಮೇಹದ ಅಪಾಯ ತಿಳಿಯಿರಿ!
ಮಧುಮೇಹ ದೇಹಕ್ಕೆ ಒಂದು ಸಲ ಒಗ್ಗಿಕೊಂಡರೆ ಅದನ್ನು ಹೊರಗೆ ಓಡಿಸುವುದು ತುಂಬಾ ಕಷ್ಟ. ಇದನ್ನು ನಿಧಾನವಾಗಿ ಕೊಲ್ಲುವ ರೋಗವೆಂದೇ ಕರೆಯಬಹುದು. ಯಾಕೆಂದರೆ ಇದು ನಿಧಾನವಾಗಿ ನಿಮ್ಮ ದೇಹದ ಒಂದೊಂದೇ ಅಂಗವನ್ನು ನಿಷ್ಕ್ರೀಯವಾಗಿಸುತ್ತದೆ. ಮಧುಮೇಹದ ಬಗ್ಗೆ ನಾವು ಎಚ್ಚರಿಕೆ ವಹಿಸದಿದ್ದರೆ ಅದು ಪ್ರಾಣಾಂತಿಕ ರೋಗವಾಗಬಹುದು.
ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೆ ಇರುವುದು ಅಥವಾ ಇನ್ಸುಲಿನ್ ಅನ್ನು ದೇಹವು ಉಪಯೋಗಿಸಿಕೊಳ್ಳಲು ವಿಫಲವಾಗುವುದಕ್ಕೆ ಡಯಾಬಿಟಿಸ್ ಯಾನೆ ಮಧುಮೇಹ ಎನ್ನುತ್ತಾರೆ. ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

ಒಂದನೇ ವರ್ಗದ ಡಯಾಬಿಟಿಸ್ (ಟೈಪ್ 1) ಇದ್ದರೆ ಅಂತವರು ಇನ್ಸುಲಿನ್ ಚುಚ್ಚಿಕೊಳ್ಳಬೇಕು. ಎರಡನೇ ಹಂತದ ಡಯಾಬಿಟಿಸ್ ಇದ್ದರೆ ಆಗ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಬಹುದಾಗಿದೆ. ವಂಶವಾಹಿನಿಯಾಗಿ ಬರುವಂತಹ ಮಧುಮೇಹ ಇಂದಿನ ದಿನಗಳಲ್ಲಿ ಹದಿಹರೆಯದವರಲ್ಲೂ ಕಾಣಸಿಗುತ್ತಿದೆ. ಕುಟುಂಬದಲ್ಲಿ ಯಾರಿಗಾದರೂ ಡಯಾಬಿಟಿಸ್ ಇದ್ದರೆ ಹದಿಹರೆಯದವರಿಗೂ ಇದು ಬರುವ ಸಾಧ್ಯತೆ ಇರುತ್ತದೆ. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?
ಹದಿಹರೆಯದವರಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ ಅದು ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಯಾಕೆಂದರೆ ಹದಿಹರೆಯದವರು ಆಹಾರದಲ್ಲಿ ನಿಯಂತ್ರಣ ಮಾಡುವುದು ಕಷ್ಟ. ಲೆಕ್ಕವಿಲ್ಲದಷ್ಟು ಸಕ್ಕರೆಯನ್ನು ಸೇವಿಸುತ್ತಾ ಇರುತ್ತಾರೆ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ ಹದಿಹರೆಯದವರಲ್ಲಿ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.
ಹದಿಹರೆಯದವರಲ್ಲಿ ಸಮಸ್ಯೆ ಪತ್ತೆಯಾದ ಬಳಿಕ ಕುಟುಂಬದವರು ತುಂಬಾ ಎಚ್ಚರಿಕೆ ವಹಿಸಿಕೊಳ್ಳುವುದು ಮುಖ್ಯ. ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಮಧುಮೇಹದಿಂದ ಉಂಟಾಗುವ ಅಪಾಯದ ಬಗ್ಗೆ ಮುಂದಕ್ಕೆ ಓದಿಕೊಳ್ಳಿ. ಟೈಪ್-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ
ಬೊಜ್ಜು
ಮಧುಮೇಹವು ಬೊಜ್ಜನ್ನು ಉಂಟುಮಾಡುವುದಿಲ್ಲ. ನಿಮಗೆ ಮಧುಮೇಹವಿದ್ದು, ಬೊಜ್ಜು ಬೆಳೆಸಿಕೊಂಡಿದ್ದರೆ ಇದು ಕಳವಳಕಾರಿ. ಮಧುಮೇಹದ ರೋಗಿಯಾಗಿ ನೀವು ತುಂಬಾ ನಿಶ್ಯಕ್ತಿ, ಆಯಾಸದಿಂದ ಬಳಲುತ್ತೀರಿ. ನಿಯಮಿತವಾಗಿ ವ್ಯಾಯಾಮ ಮಾಡದೆ ಇದ್ದರೆ ಆಗ ಈ ಸಮಸ್ಯೆ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಯಿಂದ ನಿಮ್ಮ ಬೊಜ್ಜನ್ನು ಇಳಿಸಬಹುದು.
ಕಿಡ್ನಿ ವೈಫಲ್ಯ
ಸಣ್ಣ ವಯಸ್ಸಿನಲ್ಲಿ ಮಧುಮೇಹಕ್ಕೆ ತುತ್ತಾಗುವವರು ಕಿಡ್ನಿ ವೈಫಲ್ಯಕ್ಕೆ ಒಳಗಾಗುವುದು ಹೆಚ್ಚು. ಮಧುಮೇಹವಿದ್ದರೆ ಆಗ ನಿಮ್ಮ ಕಿಡ್ನಿಗಳ ಸ್ವಚ್ಛಗೊಳಿಸುವ ಕಾರ್ಯ ತುಂಬಾ ಕಠಿಣವಾಗುತ್ತದೆ ಮತ್ತು ಇದರಿಂದ ಕಿಡ್ನಿ ವೈಫಲ್ಯವಾಗುತ್ತದೆ. ಇದರ ಬಗ್ಗೆ ತುಂಬಾ ಎಚ್ಚರಿಕೆ ಅಗತ್ಯ.
ಹೃದಯಾಘಾತ
ಹೃದಯದ ರಕ್ತನಾಳಗಳಲ್ಲಿ ಅಧಿಕ ಸಕ್ಕರೆಯಂಶ ಶೇಖರಣೆಯಾಗಿ ಅದರಿಂದ ರಕ್ತನಾಳದ ಗೋಡೆಗಳು ದಪ್ಪವಾಗುತ್ತದೆ. ಇದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗದೆ ಹೃದಯಾಘಾತವಾಗಬಹುದು. ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಈ ಅಪಾಯ ಕಟ್ಟಿಟ್ಟಬುತ್ತಿ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು
ದೃಷ್ಟಿ ಸಮಸ್ಯೆ
ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಈ ಸಮಸ್ಯೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಮಧುಮೇಹದಿಂದಾಗಿ ರೆಟಿನಾದ ರಕ್ತನಾಳಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಣ್ಣಿನ ಪೊರೆ ಅಥವಾ ಗ್ಲುಕೋಮಾದ ಸಮಸ್ಯೆಯಾಗಬಹುದು.
ಖಿನ್ನತೆ
ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಆಗ ಅವರಿಗೆ ಸಾಮಾನ್ಯ ಜೀವನ ಸಾಗಿಸಲು ತುಂಬಾ ಕಷ್ಟವಾಗುತ್ತದೆ. ಅವರು ಹೆಚ್ಚಿನ ಸಮಯವನ್ನು ಔಷಧಿ ಹಾಗೂ ಇಂಜೆಕ್ಷನ್ ನಲ್ಲಿ ಕಳೆಯುತ್ತಾರೆ. ಇದರಿಂದ ಅವರು ಖಿನ್ನತೆಗೆ ಒಳಗಾಗುತ್ತಾರೆ. ಈ ವೇಳೆ ಪೋಷಕರು ಕೌನ್ಸಿಲರ್ ಮೊರೆ ಹೋಗಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.
ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಎದುರಿಸುವ ಅಪಾಯಗಳನ್ನು ನೀವು ತಿಳಿದುಕೊಂಡಿದ್ದೀರಿ. ಸರಿಯಾದ ಜೀವನ ಶೈಲಿಯನ್ನು ಅನುಸರಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಪಾಯವನ್ನು ಎದುರಿಸಿ ಮಧುಮೇಹವನ್ನು ಗೆದ್ದು ನಗೆ ಬೀರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




