Latest Updates
-
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ಮಧುಮೇಹ ರೋಗಿಗಳಿಗೆ ಇಲ್ಲಿದೆ ನೋಡಿ ಬೊಂಬಾಟ್ 'ಸಿಹಿ' ಸುದ್ದಿ!
ಸ್ವಾತಂತ್ರ ಪೂರ್ವದಲ್ಲಿ ಭಾರತೀಯರಿಗೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎಂದರೆ ಏನೆಂದೇ ತಿಳಿದಿರಲಿಲ್ಲ. ಆಗ ಭಾರತದಲ್ಲಿದ್ದ ಬ್ರಿಟಿಷರು ಸಕ್ಕರೆಯಿಲ್ಲದ ಚಹಾ ಟೀ ಸೇವಿಸುವುದನ್ನು ನೋಡಿ ಅವರಿಗೆ ಸಕ್ಕರೆ ಕಾಯಿಲೆ ಇರುವುದೆಂದು ತಿಳಿದ ಬಳಿಕ ಈ ಕಾಯಿಲೆಯನ್ನು ಪರಂಗಿಯವರ ಕಾಯಿಲೆ ಎಂದು ಕರೆಯಲು ತೊಡಗಿದರು. ಆದರೆ ಇಂದು ಭಾರತದಲ್ಲಿಯೂ ಈ ವ್ಯಾಧಿ ವ್ಯಾಪಕವಾಗಿ ಹರಡಿದೆ.
ಮಧುಮೇಹ ಬರಲು ಸ್ಪಷ್ಟವಾದ ಕಾರಣಗಳಿಲ್ಲ. ಆದರೆ ಬಹುತೇಕ ಜನರು ತಿಳಿದುಕೊಂಡಂತೆ ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ. ನಾವು ಆಹಾರದಲ್ಲಿ ಸೇವಿಸಿದ ಸಕ್ಕರೆಯನ್ನು ಅರಗಿಸಿಕೊಳ್ಳಲು ನಮಗೆ ಇನ್ಸುಲಿನ್ ಎಂಬ ಪೋಶಕಾಂಶದ ಅಗತ್ಯವಿದೆ. ಈ ಪೋಷಕಾಂಶವನ್ನು ನಮ್ಮ ಮೇದೋಜೀರಕ (pancreas) ಉತ್ಪಾದಿಸುತ್ತದೆ.
ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆಯಾಗದೇ ಇದ್ದರೆ ಆದಕ್ಕೆ ಮೊದಲ ವಿಧದ (Type-1) ಮಧುಮೇಹ ಎಂದು ಕರೆಯುತ್ತಾರೆ. ವ್ಯತಿರಿಕ್ತವಾಗಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿಯೂ ಸಕ್ಕರೆಯನ್ನು ಕರಗಿಸಲು ಅಸಮರ್ಥವಾದರೆ ಇದಕ್ಕೆ ಎರಡನೇ ವಿಧದ (Type-2) ಮಧುಮೇಹ ಎಂದು ಕರೆಯುತ್ತಾರೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು
ಸಕ್ಕರೆ ಕಾಯಿಲೆ ಬಂದ ಬಳಿಕ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುತ್ತಲೇ ಇರಬೇಕು. ಪ್ರತಿ ತಪಾಸಣೆಗೂ ಅನಿವಾರ್ಯವಾಗಿ ಸೂಚಿ ಚುಚ್ಚುವ ಮೂಲಕ, ಪ್ರತಿಬಾರಿಯೂ ಇನ್ಸುಲಿನ್ ಅನ್ನು ಸಿರಿಂಜಿನ ಮೂಲಕ ದೇಹದಲ್ಲಿ ತೂರಿಸಿಕೊಳ್ಳಬೇಕಾದಾಗ ನೋವು ಅನುಭವಿಸಲೇಬೇಕು. ತಪಾಸಣೆಯಲ್ಲಿ ಕಂಡುಬರುವ ವಿವರಗಳನ್ನುನನುಸರಿಸಿ ವೈದ್ಯರು ನೀಡುವ ಔಷಧಿಗಳನ್ನು ಸೇವಿಸುತ್ತಲೇ ಇರಬೇಕು. ಆದರೆ ಆಯುರ್ವೇದದಲ್ಲಿ ಇದೇ ಔಷಧಿಗಳನ್ನು ನೈಸರ್ಗಿಕವಾಗಿ ಪಡೆಯುವ, ತನ್ಮೂಲಕ ಮಧುಮೇಹವನ್ನು ಹತೋಟಿಯಲ್ಲಿಟ್ಟುಕೊಳ್ಳುವ ಹಲವು ಗಿಡಮೂಲಿಕೆಗಳನ್ನು ಸಲಹೆ ಮಾಡಲಾಗಿದೆ. ಅದರಲ್ಲಿ ಹಲವು ನಮ್ಮ ಅಡುಗೆಮನೆಯಲ್ಲಿಯೇ ಇವೆ. ಸುಲಭ, ಆದರೆ ಪರಿಣಾಮಕಾರಿಯಾದ ಈ ವಿಧಾನಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ.
ಹಾಗಲಕಾಯಿ

ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಮಧುಮೇಹಕ್ಕೆ ಅತ್ಯಂತ ಉಪಯುಕ್ತವಾದ ಆಹಾರವಾಗಿದೆ. ಆದರೆ ಇದನ್ನು ಬೇಯಿಸಿ ತಿನ್ನುವುದಲ್ಲ, ಹಸಿಯಾಗಿ, ಸಿಪ್ಪೆ ಮತ್ತು ಬೀಜಗಳ ಸಹಿತ ತಿನ್ನುವುದು! ಹೌದು, ಹಸಿಯಾಗಿಯೇ ಎಷ್ಟೇ ಕಹಿಯಾದರೂ ಕಚಕಚನೇ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬಂದಿರುವುದು ಸಾಬೀತಾಗಿರುವ ಸತ್ಯ. ಮೊದಮೊದಲಿಗೆ ಕಹಿ ಎನಿಸುವ ಇದರ ರುಚಿ ಕ್ರಮೇಣ ಒಗ್ಗಿಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಕರಾವಳಿಯ ಬ್ಯಾರಿ ಜನಾಂಗದವರಲ್ಲಿ ಹಾಗಲಕಾಯಿ ಹಸಿಯಾಗಿ ತಿನ್ನುವ ಸ್ಪರ್ಧೆಯೇ ಇದೆ! ಇಲ್ಲಿ ಸ್ಪರ್ಧಿಗಳು ಬಾಳೆಹಣ್ಣು ತಿಂದಂತೆ ಹಾಗಲಕಾಯಿಯನ್ನು ಕಚಕಚನೇ ಅಗಿದು ನುಂಗಿ ನೀರು ಕುಡಿಯುತ್ತಾರೆ. ಈ ಸ್ಪರ್ಧಿಗಳಲ್ಲಿ ಮಧುಮೇಹ ಇಲ್ಲದೇ ಇರುವುದು, ಅಥವಾ ತುಂಬಾ ತಡವಾದ ವಯಸ್ಸಿನಲ್ಲಿ ಕಂಡುಬಂದಿರುವುದು ಹಾಗಲಕಾಯಿಯ ಮಹತ್ವವನ್ನು ಸಾರುತ್ತದೆ. ಹಾಗಲಕಾಯಿ ಎರಡೂ ವಿಧದ ಮಧುಮೇಹದ ನಿಯಂತ್ರಣಕ್ಕೆ ಸೂಕ್ತವಾಗಿದೆ. ಈಗಾಗಲೇ ಮಧುಮೇಹ ನಿಯಂತ್ರಣದಲ್ಲಿದ್ದರೆ ಕಹಿ ನಿವಾರಿಸಿದ ಹಾಗಲಕಾಯಿಯ ಪಲ್ಯವನ್ನು ಸೇವಿಸುವುದರಿಂದ ನಿಯಂತ್ರಣವನ್ನು ಕಾಯ್ದಿರಿಸಿಕೊಳ್ಳಬಹುದು.
ಹೀರೇಕಾಯಿ
ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ. ಎಚ್ಚರ: ರಕ್ತದೊತ್ತಡ ಅಧಿಕವಾಗುತ್ತಿದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು!
ಕರಿಬೇವಿನ ಎಲೆ
ಮಧುಮೇಹಕ್ಕೆ ಕಹಿಬೇವಿನ ಎಲೆಗಳೂ ಉತ್ತಮ ಫಲಿತಾಂಶ ನೀಡುತ್ತವೆ. ಮೇದೋಜೀರಕದ ಜೀವಕೋಶಗಳು ಸವೆದು ಮತ್ತೆ ಹುಟ್ಟದೇ ಇರುವುದರಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಕರಿಬೇವಿನಲ್ಲಿರುವ ಪೋಷಕಾಂಶಗಳು ಸವೆದ ಜೀವಕೋಶಗಳು ಮತ್ತೆ ಹುಟ್ಟಲು ಸಹಕರಿಸುವುದರಿಂದ ಇನ್ಸುಲಿನ್ ಉತ್ಪಾದನೆ ಯಥಾಪ್ರಕಾರ ಉಳಿದು ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಡುಗೆಗೆ ಉಪಯೋಗಿಸುವ ಕರಿಬೇವು ಮೊದಲ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ.
ಈ ಎಲೆಗಳು ಅತ್ಯಂತ ಕಹಿಯಾಗಿರುವುದರಿಂದ ನೇರವಾಗಿ ತಿನ್ನಲು ಕಷ್ಟಕರವಾಗಿದೆ. ಬದಲಿಗೆ ಕಹಿಬೇವಿನ ಬೀಜಗಳನ್ನು ಮತ್ತು ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದು ಉತ್ತಮ. ಈ ಔಷಧಿಗಳು ಆಯುರ್ವೇದ ಔಷಧಿಯಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುತ್ತದೆ. ಇದರ ಸೇವನೆಯಿಂದ ರಕ್ತನಾಳಗಳು ಹಿಗ್ಗಿ ನರಗಳ ಒಳಗಣ ವಿಸ್ತಾರ ಹೆಚ್ಚುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದನ್ನು ಸಾಧಿಸಲು ರಕ್ತದಲ್ಲಿ ಕೃತಕವಾಗಿ hypo-glycemic ಔಷಧಿಗಳನ್ನು (ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಹೆಚ್ಚುವ ಸಕ್ಕರೆಯ ಪ್ರಮಾಣ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಪಡೆದುಕೊಳ್ಳುವ ಸಮಯವನ್ನು ಕಡಿಮೆಗೊಳಿಸುವ ಔಷಧಿಗಳು) ನೀಡುವುದರಿಂದ ತಪ್ಪಿಸಿದಂತಾಗುತ್ತದೆ. ಪರಿಣಾಮವಾಗಿ ಮಧುಮೇಹ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ. ಇದು ಎರಡನೇ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ.
ಲೋಳೆಸರ
ಲೋಳೆಸರದ ರಸದ ಸೇವನೆಯಿಂದಲೂ ಮಧುಮೇಹ ನಿಯಂತ್ರಣಕ್ಕೆ ಬಂದಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ನಮ್ಮ ರಕ್ತದಲ್ಲಿ ವಿವಿಧ ಪೋಷಕಾಂಶಗಳ ಆಗರವಿದೆ. ಇವನ್ನು ಒಟ್ಟಾರೆಯಾಗಿ ಲಿಪಿಡ್ ಗಳೆಂದು ಕರೆಯುತ್ತಾರೆ (ಕೊಲೆಸ್ಟ್ರಾಲ್, ಕೊಬ್ಬು, ಸ್ಟೆರಾಲ್, ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳಾದ ವಿಟಮಿನ್ ಎ, ಡಿ, ಇ ಮತ್ತು ಕೆ, ವಿವಿಧ ಗ್ಲಿಸರೈಡ್ ಗಳು, ಫಾಸ್ಪೋಲಿಪಿಡ್ಸ್ ಮೊದಲಾದವು) ಇದರಲ್ಲಿ ವಿಶೇಷವಾಗಿ ವಿಟಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಮಧುಮೇಹಿಗಳ ಶರೀರದಲ್ಲಿ ಚಿಕ್ಕ ಗಾಯವಾದರೂ ಮಾಗಲು ತುಂಬಾ ಸಮಯ ತಗಲಲು ವಿಟಮಿನ್ ಕೆ ಕೊರತೆ ಕಾರಣವಾಗಿದೆ. ಲೋಳೆಸರದ ನಿಯಮಿತ ಸೇವನೆಯಿಂದ ವಿಟಮಿನ್ ಕೆ ಅಗತ್ಯಪ್ರಮಾಣದಲ್ಲಿ ಉತ್ಪತ್ತಿಯಾಗಿ ಗಾಯಗಳು ಬೇಗನೇ ಮಾಗಲು ನೆರವಾಗುತ್ತದೆ. ಒಂದು ವೇಳೆ ಗಾಯ ಮಾಗದೇ ಇದ್ದರೆ ಆ ಭಾಗ ಕೊಳೆಯಲು ಪ್ರಾರಂಭವಾಗಿ ಗ್ಯಾಂಗ್ರೀನ್ ಗೆ ತಿರುಗುತ್ತದೆ.
ಈ ಸ್ಥಿತಿ ತಲುಪಿದ ಬಳಿಕ ಬಾಧೆಗೊಳಗಾದ ಅಂಗವನ್ನು ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ. ಲೋಳೆಸರದ ಸೇವನೆಯಿಂದ ಈ ಸ್ಥಿತಿಗೆ ಬರುವುದನ್ನು ತಪ್ಪಿಸಿದಂತಾಗುತ್ತದೆ. ಇದಕ್ಕಾಗಿ ಲೋಳೆಸರದ ರಸವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಸೇರಿಸಿ ವಾರಕ್ಕೆ ಎರಡರಿಂದ ಮೂರು ಲೋಟ ಕುಡಿಯುತ್ತಿರುವುದು ಹಿತಕರವಾಗಿದೆ. ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!
ಮೆಂತೆಕಾಳುಗಳು
ಮೆಂತೆಕಾಳುಗಳನ್ನು ಆಹಾರದ ಮೂಲಕ ಸೇವಿಸುತ್ತಾ ಬರುವುದರಿಂದ ಮೇದೋಜೀರಕ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಮರ್ಥವಾಗುತ್ತದೆ. ಇದರಲ್ಲಿರುವ ವಿವಿಧ ಆಲ್ಕಲಾಯ್ಡುಗಳು ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಕಡಿಮೆಗೊಳಿಸಿ ಜೀವಕೋಶಗಳು ಕಾರ್ಬೋಹೈಡ್ರೇಟುಗಳನ್ನು ಪಡೆಯುವ ಗತಿಯನ್ನು ನಿಧಾನವಾಗಿಸುತ್ತದೆ. ಇದು ಮೊದಲ ವಿಧದ ಮಧುಮೇಹಕ್ಕೆ ಸೂಕ್ತವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















