Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಟೊಮೇಟೊ ಆರೋಗ್ಯಕಾರಿ ತರಕಾರಿ ಹೇಗೆ?
ತಾಜಾ ಹಣ್ಣುಗಳು ತರಕಾರಿಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳನ್ನು ಹಸಿಯಾಗಿ ಅಥವಾ ಸಲಾಡ್, ಜ್ಯೂಸ್ ರೂಪದಲ್ಲಿ ಸೇವಿಸುವುದು ನಮ್ಮ ಆಹಾರ ಕ್ರಮದಲ್ಲಿ ಸೇರಿರಲೇಬೇಕು. ಇಂದು ನಾವು ಇಲ್ಲಿ ಒಂದು ಆರೋಗ್ಯಕಾರಿ ತರಕಾರಿ ಹಣ್ಣಾದ ಟೊಮೇಟೊದ ವಿಶೇಷತೆಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅರಶಿನದ ಆರೋಗ್ಯಕಾರಿ ಪ್ರಯೋಜನಗಳು
ನಿಮ್ಮ ಸುಂದರ ತ್ವಚೆಗಾಗಿ, ಮೂಳೆಗಳ ಅಭಿವೃದ್ಧಿಗಾಗಿ ಟೊಮೇಟೊ ಸಹಕಾರಿಯಾಗಿದೆ. ತೂಕ ಇಳಿಕೆಯಲ್ಲೂ ಇದು ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ ಎಂಬುದು ಸಾಬೀತಾಗಿದ್ದು ವಿಟಮಿನ್ ಮಿನರಲ್ಸ್ ಯುಕ್ತವಾಗಿದೆ.
ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಇದನ್ನು ಹಸಿಯಾಗಿ ತಿಂದಷ್ಟು ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.ಬಹುರೂಪಿ ಪ್ರಯೋಜನದ ಟೋಮೇಟೋದ ಬಗೆಗೆ ಮತ್ತಷ್ಟು ಮಾಹಿತಿ ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾರೆಟ್ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?

ಸುಂದರ ತ್ವಚೆಗಾಗಿ ಟೊಮೇಟೊ:
ಫೇಶಿಯಲ್ ಕ್ಲೀನರ್‌ನಂತೆ ಕೆಲವೆಡೆಗಳಲ್ಲಿ ಬಳಸಲಾಗುವ ಲೈಕೋಪನ್ ಟೊಮೇಟೊದಲ್ಲಿ ಹೇರಳವಾಗಿದೆ. ಮುಖದ ಅಂದಕ್ಕಾಗಿ ಟೊಮೇಟೊವನ್ನು ನೀವು ಬಳಸುತ್ತಿರುವಿರಿ ಎಂದರೆ 8 ರಿಂದ 12 ಟೊಮೇಟೊಗಳ ಅವಶ್ಯಕತೆ ನಿಮಗಿದೆ. ಟೊಮೇಟೊದ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ನಿಮ್ಮ ಮುಖದ ಮೇಲಿಡಿ. 10 ನಿಮಿಷಗಳಷ್ಟು ಕಾಲ ಟೊಮೇಟೊ ತಿರುಳು ನಿಮ್ಮ ಮುಖದಲ್ಲಿರಲಿ ನಂತರ ತೊಳೆಯಿರಿ. ಇದು ಮುಖವನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಮೂಳೆಗಳ ಅಭಿವೃದ್ಧಿಗಾಗಿ:
ಇದರಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಅಂಶ ಮೂಳೆಗಳನ್ನು ಅಭಿವೃದ್ಧಿಗೊಳಿಸಿ ಅವನ್ನು ದೃಢಗೊಳಿಸುತ್ತದೆ. ಮೂಳೆ ಮುರಿತ ಮೊದಲಾದ ಸಮಸ್ಯೆಯನ್ನು ಟೊಮೇಟೊದಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಹೋಗಲಾಡಿಸುತ್ತದೆ.

ಉತ್ಕರ್ಷಣ ಶಕ್ತಿಯನ್ನು ಒದಗಿಸುತ್ತದೆ:
ಟೊಮೇಟೊದಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಬೇಟಾ ಕ್ಯಾರೊಟೀನ್‌ನೊಂದಿಗೆ ಸಮ್ಮಿಶ್ರಗೊಂಡು ರಕ್ತದಲ್ಲಿನ ವಿನಾಶಕಾರಿ ಮುಕ್ತ ರೇಡಿಕಲ್ಸ್‌ನೊಂದಿಗೆ ಉತ್ಕರ್ಷಣದಂತೆ ಕಾರ್ಯನಿರ್ವಹಿಸುತ್ತದೆ. ಹಸಿ ಟೊಮೇಟೊವನ್ನು ತಿಂದಷ್ಟು ನಿಮ್ಮಲ್ಲಿ ಬೇಟಾ ವಿಟಮಿನ್ ಅಂಶ ಜಾಸ್ತಿಯಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಟೊಮೇಟೊವನ್ನು ಬೇಯಿಸಿದಂತೆ ಈ ಅಂಶ ಕಡಿಮೆಯಾಗುತ್ತದೆ.

ನಿಮ್ಮ ಹೃದಯಕ್ಕೆ ಉತ್ತಮವಾದುದು:
ಟೊಮೇಟೊದಲ್ಲಿರುವ ವಿಟಮಿನ್ ಬಿ ಮತ್ತು ಪೊಟ್ಯಾಶಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಇಳಿಸುತ್ತದೆ. ಆದ್ದರಿಂದ ನಿಮ್ಮ ನಿಯಮಿತ ನಿಯಂತ್ರಿತ ಆಹಾರದಲ್ಲಿ ಟೊಮೇಟೊವನ್ನು ಬಳಸುವುದು ಪರಿಣಾಮಕಾರಿಯಾಗಿ ಹೃದಯಾಘಾತಗಳನ್ನು ಕಡಿಮೆ ಮಾಡುತ್ತದೆ.

ನಿಮ್ಮ ಕೂದಲಿಗೆ ಅತ್ಯುತ್ತಮ:
ಟೊಮೇಟೊದಲ್ಲಿರುವ ವಿಟಮಿನ್ ಎ ಅಂಶ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಸುದೃಢವಾಗಿ ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಎ ನಿಮ್ಮ ಕಣ್ಣುಗಳು, ತ್ವಚೆ ಮತ್ತು ಹಲ್ಲಿಗೆ ಕೂಡ ಉತ್ತಮವಾದುದು.

ನಿಮ್ಮ ಕಿಡ್ನಿಗಾಗಿ ಟೊಮೇಟೊ:
ಬೀಜವನ್ನು ಹೊರತುಪಡಿಸಿ ಟೊಮೇಟೊವನ್ನು ನಿಮ್ಮ ಆಹಾರದಲ್ಲಿ ಬಳಸುವುದು ಕಿಡ್ನಿ ಕಲ್ಲಿನ ಅಪಾಯವನ್ನು ಕಡಿಮೆ ಮಾಡಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.

ನಿಮ್ಮ ಕಣ್ಣುಗಳಿಗಾಗಿ:
ಇದರಲ್ಲಿರುವ ವಿಟಮಿನ್ ಎ ಅಂಶ ದೃಷ್ಟಿಯನ್ನು ಚುರುಕಾಗಿಸುತ್ತದೆ. ಟೊಮೇಟೊವನ್ನು ನಿಯಮಿತವಾಗಿ ಬಳಸುವುದು ಇರುಳುಗುರುಡುತನವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.

ಮಧುಮೇಹಿಗಳಿಗೆ ದಿವ್ಯೌಷಧ:
ಟೊಮೇಟೊದಲ್ಲಿರುವ ಮೌಲ್ಯಯುತ ಮಿನರಲ್ ಕ್ರೋಮಿಯಂ ಆಗಿದ್ದು ಮಧುಮೇಹಿಗಳಿಗೆ ತಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಉಪಯೋಗಕಾರಿಯಾಗಿದೆ.



Click it and Unblock the Notifications
