ಮಧುಮೇಹಿಗಳಿಗೆ ಪಾದಗಳ ಊತ ಕಡಿಮೆಗೊಳಿಸಿಕೊಳ್ಳಲು 7 ಟಿಪ್ಸ್

By Hema S

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಕಾಲು ಮತ್ತು ಪಾದಗಳಲ್ಲಿ ಕಂಡುಬರುವ ಊತವನ್ನು ಕುರಿತು ದೂರುತ್ತಿರುತ್ತಾರೆ. ಈ ತೊಂದರೆ ಕಾಣಿಸಿಕೊಳ್ಳಲು ಮುಖ್ಯಕಾರಣವೆಂದರೆ ಒತ್ತಡದಿಂದಾಗಿ ರಕ್ತನಾಳಗಳಲ್ಲಿ ಸರಿಯಾಗಿ ರಕ್ತಪರಿಚಲನೆ ಆಗದಿರುವುದು. ನಾಳಗಳು ಹಾನಿಗೊಳಗಾದಾಗ ದ್ರವಗಳು ಸುತ್ತಲ ಅಂಗಾಂಶಗಳೊಳಗೆ ಸೇರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಇನ್ನು ಡಯಾಬಿಟಿಸ್ ಕಾಯಿಲೆಗೆ ಗುಡ್ ಬೈ ಹೇಳಿ!

ಇದರಿಂದಾಗ ಊತವುಂಟಾಗುತ್ತದೆ. ಇದನ್ನು ಹೊರತುಪಡಿಸಿ ಇನ್ನೂ ಅನೇಕ ಕಾರಣಗಳು ಊತಕ್ಕೆ ಕಾರಣವಾಗಬಹುದು. ಆದ್ದರಿಂದ ಊತ ಕಂಡುಬಂದಾಗ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.
ರಕ್ತಪರಿಚಲನೆ ಸಮರ್ಪಕವಾಗಿ ನಡೆಯದೆ ಇರುವುದರಿಂದ ಮಧುಮೇಹಿಗಳಲ್ಲಿ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಡಯಾಪೆಡ್ನ ಶ್ರೀ ಭೂಷಣ್ ಹೆಮಡೆ ಅವರು ಹೇಳುವಂತೆ ‘ಮಧುಮೇಹಿಗಳಲ್ಲಿ ಪಾದಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯ. ಇವು ಬಹುಬೇಗ ಗಂಭೀರ ಪರಿಸ್ಥಿತಿಗೆ ತಿರುಗಬಹುದು'.

ಇವರು ಈ ಸಮಸ್ಯೆಗೆ ಸಂಬಂಧಿಸಿದ ಹಲವು ಚಿಕಿತ್ಸಾಲಯಗಳನ್ನು ಹೊಂದಿದ್ದಾರೆ. ಈ ಸಮಸ್ಯೆಯು ಸೋಂಕಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಪಾದಗಳಲ್ಲಿ ಹುಣ್ಣುಗಳು, ಗಾಯಗಳು ಕಾಣಿಸಿಕೊಳ್ಳುವುದರೊಂದಿಗೆ ಕೆಲವೊಮ್ಮೆ ಅಂಗ ವಿಕಲತೆಗೆ ಕೂಡ ಕಾರಣವಾಗುತ್ತದೆ. ಆದ್ದರಿಂದ ಸಣ್ಣ ಊತವಾದರೂ ಕೂಡ ನಿರ್ಲಕ್ಷ್ಯ ಮಾಡಬಾರದು. ಬಹಳಷ್ಟು ಸಂದರ್ಭಗಳಲ್ಲಿ ಊತ ಕಾಣಿಸಿಕೊಂಡ ತಕ್ಷಣ ನಮ್ಮ ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ

ನಿತ್ಯ ವ್ಯಾಯಾಮ ಮಾಡಿ:

ನಿತ್ಯ ವ್ಯಾಯಾಮ ಮಾಡಿ:

ಶ್ರೀ ಹೆಮಡೆಯವರು ಹೇಳುವಂತೆ ‘ ನಿಯಮಿತ ವ್ಯಾಯಾಮವು ನಿಮ್ಮ ಕಾಲು ಮತ್ತು ಕೈಗಳ ಮೂಳೆಗಳ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಇದು ನಿಮ್ಮ ಕಾಲಗಳಲ್ಲಿನ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಯಾವುದೇ ವ್ಯಾಯಾಮವನ್ನು ಆರಂಭಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಅವಶ್ಯ. ಯಾವುದೇ ರೀತಿಯ ಕಠಿಣ ವ್ಯಾಯಾಮವನ್ನು ಮಾಡದಿರುವುದು ಒಳಿತು. ಇಲ್ಲವಾದರೆ ಈ ವ್ಯಾಯಾಮದಿಂದಲೇ ಸಮಸ್ಯೆಗಳು ಹೆಚ್ಚಾಗುತ್ತದೆ.

ಕಾಲುಗಳನ್ನು ಎತ್ತರಿಸುವ ವ್ಯಾಯಾಮ:

ಕಾಲುಗಳನ್ನು ಎತ್ತರಿಸುವ ವ್ಯಾಯಾಮ:

ದಿಂಬಿನ ಸಹಾಯದಿಂದ ಕಾಲುಗಳನ್ನು 10-15 ನಿಮಿಷಗಳವರೆಗೆ ಎತ್ತಿ ಹಿಡಿಯುವುದರಿಂದ ಊತ ಕಡಿಮೆಯಾಗುತ್ತದೆ. ಹೀಗೆ ಕಾಲುಗಳನ್ನು ಎತ್ತರಿಸುವುದರಿಂದ ಸುತ್ತಲ ಅಂಗಾಂಶಗಳಲ್ಲಿ ಶೇಖರಗೊಂಡಿರುವ ದ್ರವವು ಒಣಗಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ.

ಕಂಪ್ರೆಶನ್ ಸ್ಟಾಕಿಂಗ್ಸ್ ಮತ್ತು ಬ್ಯಾಂಡೇಜ್ ಬಳಕೆ:

ಕಂಪ್ರೆಶನ್ ಸ್ಟಾಕಿಂಗ್ಸ್ ಮತ್ತು ಬ್ಯಾಂಡೇಜ್ ಬಳಕೆ:

ಮಧುಮೇಹಿಗಳ ಪಾದದ ಆರೈಕೆಗಾಗಿಯೇ ಈಗ ಹಲವು ಬಗೆಯ ಕಂಪ್ರೆಶನ್ ವಸ್ತುಗಳ ಲಭ್ಯವಿದೆ. ಇದು ಸಮಸ್ಯೆಯಿರುವ ಪ್ರದೇಶದಲ್ಲಿ ಒತ್ತಡ ಹಾಕಿ ಶೇಖರಿತ ದ್ರವವನ್ನು ತೆಗೆದುಹಾಕುತ್ತದೆ. ಹೊರಗಿನಿಂದ ಬೀಳುವ ರಕ್ತಪರಿಚಲನೆಯನ್ನು ಕೂಡ ಉತ್ತಮಗೊಳಿಸುತ್ತದೆ. Wu Sc ಮತ್ತವರ ಸಹೋದ್ಯೋಗಿಗಳ ಅಧ್ಯಯನವು ಈ ರೀತಿಯ ಕಂಪ್ರೆಸನ್ ಸಾಕ್ಸ್ಗಳು ಮಧುಮೇಹಿಗಳ ಸಮಸ್ಯೆ ನಿವಾರಣೆಯಾಗಿರುವುದನ್ನು ತೋರಿಸುತ್ತದೆ.

ಉಪ್ಪಿನ ಸೇವನೆ ಕಡಿಮೆಮಾಡಿ:

ಉಪ್ಪಿನ ಸೇವನೆ ಕಡಿಮೆಮಾಡಿ:

ಕೆಲವು ಪಥ್ಯಗಳು ಊತವನ್ನು ಕಡಿಮೆಗೊಳಿಸುವಲ್ಲಿ ಹೆಚ್ಚು ನೆರವು ನೀಡುತ್ತದೆ. ಮಧುಮೇಹಿಗಳು ಹೆಚ್ಚು ಉಪ್ಪನ್ನು ಸೇವಿಸಬಾರದು. ಸೋಡಿಯಂ ಕಡಿಮೆಯಿರುವ ಆಹಾರ ಸೇವಿಸುವುದು ಒಳ್ಳೆಯದು. ಏಕೆಂದರೆ ಇದು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಪಾದಗಳ ಊತವನ್ನು ಹೆಚ್ಚಿಸುತ್ತದೆ.

ಆರಾಮದಾಯಕ ಶೂಗಳನ್ನು ಧರಿಸಿ:

ಆರಾಮದಾಯಕ ಶೂಗಳನ್ನು ಧರಿಸಿ:

ಮಧುಮೇಹಿಗಳು ಹೆಚ್ಚು ಬಿಗಿಯಾದ ಶೂಗಳನ್ನು ಹಾಕಿಕೊಳ್ಳಬಾರದು. ತಮ್ಮ ಕಾಲಿನ ಸೈಜಿಗಿಂತ ಒಂಚೂರು ದೊಡ್ಡ ಶೂ ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ಪಾದ ಊದಿದಾಗ ಸಹ ರಕ್ತಪರಿಚಲನೆಗೆ ತೊಂದರೆಯಾಗುವುದಿಲ್ಲ. ಮಧುಮೇಹವಿರುವ ಮಹಿಳೆಯರು ಹೈಹೀಲ್ಡ್ ಶೂ ಅಥವ ಚಪ್ಪಲಿಗಳನ್ನು ಧರಿಸಬಾರದು. ಭೂಷಣ್ರವರು ಪೊಡಿಯಾಟ್ರಿಸ್ಟ್ಗಳ ಸಲಹೆ ಪಡೆದು ಪಾದರಕ್ಷೆಗಳನ್ನು ಕೊಂಡುಕೊಳ್ಳುವುದು ಉತ್ತಮ ಎಂದು ಹೇಳುತ್ತಾರೆ.

ಪಾದಗಳನ್ನು ಮಸಾಜ್ ಮಾಡಿ:

ಪಾದಗಳನ್ನು ಮಸಾಜ್ ಮಾಡಿ:

ಮಸಾಜ್ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದು ನೋವನ್ನು ಕಡಿಮೆಗೊಳಿಸುವುದಲ್ಲದೆ ಊತವನ್ನು ಕೂಡ ಕಡಿಮೆಗೊಳಿಸುತ್ತದೆ.

ನಿಮ್ಮ ಪೊಸ್ಚರ್/ಭಂಗಿಯ ಕಡೆ ಗಮನವಿರಲಿ:

ನಿಮ್ಮ ಪೊಸ್ಚರ್/ಭಂಗಿಯ ಕಡೆ ಗಮನವಿರಲಿ:

ಹೆಚ್ಚು ಹೊತ್ತು ನಿಂತಿರಬೇಡಿ ಅಥವ ಕುಳಿತಿರಬೇಡಿ. ಇದರಿಂದ ರಕ್ತಪರಿಚಲನೆ ಕಡಿಮೆಯಾಗಿ ಜೋಮು ಹಿಡಿಯುತ್ತದೆ. ಅದೇ ರೀತಿ ಕುಳಿತಾಗ ಕಾಲುಗಳನ್ನು ಒಂದರ ಮೇಲೆ ಮತ್ತೊಂದು ಹಾಕಿ ಅಥವ ಪಾದಗಳನ್ನು ಕ್ರಾಸ್ ಮಾಡಿ ಕುಳಿತುಕೊಳ್ಳುವುದು ಕೂಡ ಸರಿಯಲ್ಲ. ಇದು ಕೂಡ ರಕ್ತಪರಿಚಲನೆ ತೊಂದರೆ ಉಂಟುಮಾಡುತ್ತದೆ.

Story first published: Sunday, March 30, 2014, 20:04 [IST]
X
Desktop Bottom Promotion