Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಮಧುಮೇಹಿಗಳು ಪಾಲಿಸಲೇಬೇಕಾದ 12 ನಿಯಮಗಳು

1. ವ್ಯಾಯಾಮ: ವ್ಯಾಯಾಮ ಮಾಡಿದರೆ ರಕ್ತ ಸಂಚಾರ ಸರಿಯಾಗಿ ನಡೆಯುವುದು ಮತ್ತು ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡಲು ಸಹಾಯಕಾರಿಯಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
2. ಸಿಹಿ ಮುಟ್ಟಬಾರದು: ಆದಷ್ಟು ಸಿಹಿ ಪದಾರ್ಥಗಳಿಂದ ದೂರವಿರಬೇಕು. ಅಪರೂಪಕ್ಕೆ ಒಮ್ಮೆ ಸಿಹಿ ತಿಂದರೆ ಏನೂ ಆಗುವುದಿಲ್ಲ. ಆದರೆ ತುಂಬಾ ಸಿಹಿ ಇರುವ ಪದಾರ್ಥಗಳನ್ನು ತಿನ್ನಲು ಹೋಗಬಾರದು. ತುಂಬಾ ಸಿಹಿ ಇರುವ ಹಣ್ಣುಗಳನ್ನು ತಿನ್ನಲು ಕೂಡ ಹೋಗಬಾರದು.
3. ನಾರಿನಂಶ: ನಾರಿನಂಶ ಇರುವ ಆಹಾರ ಪದಾರ್ಥಗಳಿಗೆ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಇದೆ. ಆದ್ದರಿಂದ ಆಹಾರಕ್ರಮದಲ್ಲಿ ನಾರಿನಂಶ ಅಧಿಕ ಇರುವ ಆಹಾರ ಪದಾರ್ಥಗಳನ್ನು ತಪ್ಪದೆ ಸೇರಿಸಬೇಕು.
4. ಹಣ್ಣು ಮತ್ತು ತರಕಾರಿಗಳು: ಕಬ್ಬಿಣದಂಶ, ತಾಮ್ರದಂಶ, ಪೊಟಾಷ್ಯಿಯಂ, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶವಿರುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು. ಸಿಟ್ರಸ್ ಅಂಶವಿರುವ ಹಣ್ಣು ಮತ್ತು ತರಕಾರಿಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು.
5. ಗ್ರೀನ್ ಟೀ: ಸಕ್ಕರೆ ಹಾಕದೆ ಗ್ರೀನ್ ಟೀ ಕುಡಿಯುವುದರಿಂದ ದೇಹದ ಬೊಜ್ಜು ಕಡಿಮೆಯಾಗುತ್ತದೆ ಮತ್ತು ಮಧುಮೇಹ ನಿಯಂತ್ರಣದಲ್ಲಿಡುತ್ತದೆ.
6. ಕಾಫಿ: ತುಂಬಾ ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಕಾಫಿಯನ್ನು ಮಿತಿಯಲ್ಲಿ ಕುಡಿದರೆ ಮಧುಮೇಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
7. ಸ್ವಲ್ಪ ಊಟವನ್ನು ಅಧಿಕ ಬಾರಿ ತಿನ್ನಬೇಕು: ಮಧುಮೇಹ ಇರುವವರು ಊಟವನ್ನು ಹೊಟ್ಟೆ ತುಂಬಾ 3 ಬಾರಿ ತಿನ್ನುವ ಬದಲು, ಅದೇ ಊಟವನ್ನು 6 ಭಾಗಗಳಾಗಿ ಮಾಡಿ 6 ಬಾರಿ ತಿನ್ನಬೇಕು. ಸ್ವಲ್ಪ -ಸ್ವಲ್ಪ ಆಹಾರ ತಿಂದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದನ್ನು ತಪ್ಪಿಸಬಹುದು.
8. ಚಕ್ಕೆ ಮತ್ತು ಲವಂಗ: ಚಕ್ಕೆ ಮತ್ತು ಲವಂಗವನ್ನು ಮಸಾಲೆ ಪದಾರ್ಥದಲ್ಲಿ ಸೇರಿಸಿ ಅಡುಗೆ ಮಾಡುವುದು ಒಳ್ಳೆಯದು.
9. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು: ಒತ್ತಡ ಹೆಚ್ಚಾದಂತೆ ಮಧುಮೇಹ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಒತ್ತಡವನ್ನು ನಿಯಂತ್ರಣದಲ್ಲಿಡಬೇಕು. ಯೋಗ, ಪ್ರಾಣಾಯಾಮ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
10. ಆಹಾರ: ಕಾರ್ಬೋಹೈಡ್ರೇಟ್ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು. ನಾನ್ ವೆಜ್ ತಿನ್ನುವವರಾದರೆ ಕೊಬ್ಬಿನಂಶ ಕಡಿಮೆ ಇರುವ ಮಾಂಸಾಹಾರ ತಿನ್ನಬೇಕು. ಅಲ್ಲದೆ ಕೊಬ್ಬಿನ ಪದಾರ್ಥಗಳನ್ನು ತಿನ್ನಲು ಹೋಗಬಾರದು.
11. ಉಪ್ಪು ಮತ್ತು ನೀರು: ತುಂಬಾ ಉಪ್ಪಿನ ಆಹಾರ ತಿನ್ನಬಾರದು. ಹೆಚ್ಚು ಪ್ರಮಾಣದ ಉಪ್ಪು ಡಯಾಬಿಟಿಸ್ 2 ಕಾಯಿಲೆಗೆ ಕಾರಣವಾಗಿದೆ. ಆದ್ದರಿಂದ ಉಪ್ಪನ್ನು ಮಿತಿಯಲ್ಲಿ ತಿನ್ನಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು.
12. ವಿನಿಗರ್ ಮತ್ತು ಸೋಯಾ: ವಿನಿಗರ್ ದೇಹದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಕರಗಿಸುತ್ತದೆ. ಆದ್ದರಿಂದ ಸಕ್ಕರೆ ಅಂಶ ಕಡಿಮೆಯಾಗಲು ಮಾಡಲು ಸಹಕಾರಿಯಾಗಿದೆ. ಊಟಕ್ಕೆ ಮುಂಚೆ ಒಂದು ಚಮಚ ಆಪಲ್ ಸೈಡರ್ ವಿನಿಗರ್ (apple cider vinegar) ಅನ್ನು ನೀರಿನಲ್ಲಿ ಕಲೆಸಿ ಕುಡಿದು ಅರ್ಧ ಗಂಟೆಯ ಬಳಿಕ ಊಟ ಮಾಡಿದರೆ ಒಳ್ಳೆಯದು. ಸೋಯಾ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಈ ಮೇಲಿನ ವಿಧಾನಗಳನ್ನು ಪಾಲಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications