ಮಧುಮೇಹಿಗಳೇ ನಿಮ್ಮ ಕಾಲುಗಳ ಬಗ್ಗೆ ಎಚ್ಚರವಿರಲಿ

ಮಧುಮೇಹಿಗಳಲ್ಲಿ ಕಾಲಿನ ಅಥವಾ ಪಾದಗಳ ತೊಂದರೆ ಕಂಡು ಬರುವುದು ಸಹಜ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಕಾಲನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಬರುತ್ತದೆ. ಪಾದಗಳಲ್ಲಿ ಕಂಡುಬರುವ ಸಣ್ಣ ಪುಟ್ಟ ಗಾಯಗಳೂ ಸಹ ಮುಂದೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ಆದ್ದರಿಂದ ಈ ಕುರಿತು ನಿಗಾವಹಿಸಬೇಕಾಗಿರುವುದು ಅವಶ್ಯಕ.

ಮಧುಮೇಹಿಗಳು ತಮ್ಮ ಪಾದಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ:

1. ನಿಮ್ಮ ಕಾಲಿನ ಚರ್ಮ ಮೆದುವಾಗಿರುವಂತೆ ತಂಪಾದ ಲೋಷನ್ ಅಥವಾ ಕ್ರೀಂ ಹಚ್ಚಿರಿ.

2. ತರಚುಗಾಯ, ಕಾಲಿನ ಗಾಯಗಳನ್ನು ಉದಾಸೀನ ಮಾಡಿದರೆ ತೀವ್ರವಾದ ತೊಂದರೆಗಳು ಅನುಭವಿಸಬೇಕಾಗಬಹುದು. ಯಾವ ಸಣ್ಣಪುಟ್ಟ ಗಾಯಗಳಾದರೂ ಅಲಕ್ಷ್ಯ ಮಾಡಬೇಡಿ. ಸೊಳ್ಳೆ ಕಚ್ಚಿ ನೆವೆಯಾದರೂ ಉಗುರಿನಿಂದ ಕೆರೆದು ಗಾಯಮಾಡಿಕೊಳ್ಳದೆ ಎಚ್ಚರಿಕೆಯಿಂದಿರಿ.

3. ಪಾದಗಳ ನೋವು ಆದಾಗ ವೈದ್ಯರು ಬಿಸಿ ನೀರಿನಲ್ಲಿ ಪಾದಗಳನ್ನಿಡಿ ಎಂದು ಸೂಚಿಸಬಹುದು. ಆದರೆ ತುಂಬಾ ಬಿಸಿಯಾದ ನೀರಿನಲ್ಲಿ ಕಾಲಿಡಬೇಡಿ. ಉಗುರು ಬೆಚ್ಚಗಿನ ನೀರು ಸಾಕು. ಕೇವಲ 5 ನಿಮಿಷ ಕಾಲನ್ನು ನೀರಿನಲ್ಲಿ ಅದ್ದಿ ನಂತರ ಮೆತ್ತಗಿನ ಬಟ್ಟೆಯಿಂದ ಒರೆಸಿಬಿಡಿ.

4. ಹೆಚ್ಚು ಗಡುಸಾ ಸೋಪನ್ನು ಉಪಯೋಗಿಸದೆ ಸೌಮ್ಯವಾದ ಸೋಪನ್ನು ಬಳಸಿ.

5. ಕಾಲಿನ ಬೆರಳುಗಳ ಮಧ್ಯ ಭಾಗವನ್ನು ಚೊಕ್ಕಟ ಮಾಡಿ, ನಯವಾದ ಬಟ್ಟೆಯಿಂದ ಒರೆಸಿ. ಬೆರಳು ಸಂದುಗಳ ಬಗ್ಗೆ ಅಸಡ್ಡೆ ತೋರದೆ ಎಚ್ಚರವಹಿಸಿ.

7. ಕಾಲಿನಲ್ಲಿ ಆಣಿಗಳಿದ್ದರೆ, ನರೋಲಿಗಳಿದ್ದರೆ ಅವುಗಳನ್ನು ತೆಗೆಸಬೇಡಿ ಅಥವಾ ಇದಕ್ಕೆ ಯಾವ ರಾಸಾಯನಿಕ ಪದಾರ್ಥವನ್ನು ಹಚ್ಚಬೇಡಿ.

8. ಕಾಲಿನಲ್ಲಿ ಗಾಯವಾಗಿ ಅದು ಎರಡು ಮೂರು ದಿನಗಳಲ್ಲಿ ಮಾಯುವ ಸೂಚನೆ ಕಂಡುಬರದಿದ್ದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

9. ನಿಮ್ಮ ಪಾದಗಳು ಯಾವ ಹವಾ ಬದಲಾವಣೆಗಳಲ್ಲಿಯೂ ಬಿಸಿಯಾಗಿಯೇ ಇರಬೇಕು. ಕಾಲಿಗೆ ಕಾಲು ಚೀಲಗಳನ್ನು ಹಾಕಿಕೊಂಡು ಬೆಚ್ಚಗೆ ಇಟ್ಟುಕೊಳ್ಳಬೇಕು.

10. ಕಾಲಿನ ಚರ್ಮದ ಬಿರುಕು-ಕತ್ತರಿಸಿರುವುದು-ಕೆರೆಯುವುದು-ಗುಳ್ಳೆಗಳೇಳುವುದು-ಹುಣ್ಣುಗಳು-ಬಣ್ಣ ಬದಲಾವಣೆಗಳಾಗುವುದನ್ನು ಪರೀಕ್ಷಿಸುತ್ತಿರಬೇಕು. ಅವುಗಳು ಕಂಡುಬಂದೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

11. ಬರಿಯ ಕಾಲಲ್ಲಿ ನಡೆಯಬೇಡಿ. ನಿಮ್ಮ ಕಾಲಿಗೆ ಸರಿ ಹೊಂದುವ, ಸಡಿಲವಾದ ಚಪ್ಪಲಿಯನ್ನು ಉಪಯೋಗಿಸಿ. ಅದು ಬಿಗಿಯಾದರೆ ರಕ್ತ ಚಲನೆ ಕುಂಠಿತವಾಗುತ್ತದೆ. ಬೂಟ್ಸ್ ಅಥವಾ ಚಪ್ಪಲಿಯ ಒಳಭಾಗದಲ್ಲಿ ಒರಟಾದ ಚುಚ್ಚುಚ ಭಾಗಗಳಿದ್ದರೆ ಪರೀಕ್ಷಿಸಿ. ಬೆವರು ಹೀರುವ ಕಾಲು ಚೀಲ ಉಪಯೋಗಿಸುವುದು ಉತ್ತಮ. ಹತ್ತಿಯಿಂದ ಮಾಡಿದ ಕಾಲು ಚೀಲ ಅನುಕೂಲ. ನೈಲಾನ್ ಅಷ್ಟು ಉತ್ತಮವಲ್ಲ.

12. ಮಧುಮೇಹ ರೋಗಿಗಳಿಗೆ ಒಂದು ಸಣ್ಣ ಗಾಯವಾದರೂ ಮಾಯುವುದು ಬಹಳ ದಿನಗಳು ಬೇಕಾಗುತ್ತದೆ. ಹೆಚ್ಚು ಮುತುವರ್ಜಿ ವಹಿಸಬೇಕಾಗುತ್ತದೆ. ನರಗಳಿಗೆ ಪೆಟ್ಟಾಗಿದ್ದರೆ ನೋವೇ ಗೊತ್ತಾಗುವುದಿಲ್ಲ. ತರಚುಗಾಯ, ಕತ್ತರಿಸಿದ ಗಾಯಗಳು ಮಾಯಲು ಅವಕಾಶವಿಲ್ಲದಾಗ ದೊಡ್ಡ ಗಾಯವಾಗುತ್ತದೆ.

ಬೆವರಿನಲ್ಲಿ ಗ್ಲೂಕೋಸ್ ಸಕ್ಕರೆ ಇರುವುದರಿಂದ ಸೂಕ್ಷ್ಮ ವಿಷಕ್ರಿಮಿಗಳು ಬೆಳೆಯಲು ಉತ್ತಮ ವಾತಾವರಣವಾಗುತ್ತದೆ. ಎಲ್ಲಕ್ಕೂ ಕಾಲಿಗೆ ಸಮರ್ಪಕವಾಗಿ ರಕ್ತ ಹರಿಯದಿರುವುದೇ ಕಾರಣ. ಆದ್ದರಿಂದ ತಕ್ಷಣ ಎಚ್ಚರಿಕೆ ವಹಿಸಿ ಗುಣಪಡಿಸಿಕೊಳ್ಳಬೇಕು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Diabetes and Foot Care | How to take care of your foot? | ಮಧುಮೇಹ ಮತ್ತು ಪಾದದ ರಕ್ಷಣೆ | ಮಧುಮೇಹಿಗಳ ಪಾದದ ರಕ್ಷಣೆ ಹೇಗೆ?

Problem with feet is very common in case of uncontrolled Diabetes. Regular foot care is very important. Infection can spread very quickly by foot and can give rise to general sepsis. It is important to seek expert opinion as soon as you see some problems. Take a look at the tips to avoid foot problem.
Story first published: Thursday, August 25, 2011, 11:56 [IST]
X
Desktop Bottom Promotion