Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳಿಗೆ ಗುಳಿಗೆ ನುಂಗುವುದಕ್ಕೆ ಟಿಪ್ಸ್

ತೊಂದರೆ ಏನಿಲ್ಲ. ವಿವಿಧ ಕಾರಣಕ್ಕೆ ನೀಡಿದ ಗುಳಿಗೆಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದ್ದು, ಕೆಲವು ಕಡಿಮೆ ಪ್ರಮಾಣದ್ದು ಇರುತ್ತವೆ. ಪದ್ಧತಿಯಂತೆ ಹೆಚ್ಚು ಗಾತ್ರದ ಮಾತ್ರೆಗಳನ್ನು ತೆಗೆದುಕೊಂಡು ನಂತರ ಕಡಿಮೆ ಗ್ರಾಂ ಲೆಕ್ಕದ ಮಾತ್ರಗಳನ್ನು ಸೇವಿಸಲಾಗುತ್ತದೆ. ಆದರೆ, ಈ ನಡುವೆ ಎಲ್ಲಾ ಮಾತ್ರೆಗಳನ್ನು ಆರಂಭದಿಂದಲೇ ಒಟ್ಟಿಗೆ ತೆಗೆದುಕೊಳ್ಳಲು ಹೇಳಲಾಗುತ್ತದೆ.
ಈ ರೀತಿ ಸೇವನೆಯಿಂದ ಸೈಡ್ ಎಫೆಕ್ಟ್ ಏನಾದ್ರೂ ಆಗುತ್ತಾ?
ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಔಷಧಿಗಳಿಂದ ಸೈಡ್ ಎಫೆಕ್ಟ್ ಆಗುವ ಭಯ ಇದ್ದೇ ಇರುತ್ತದೆ. ಡಯಾಬಿಟಿಸ್ ಮಾತ್ರೆಗಳಿಂದ ಕೂಡಾ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳಾಗಬಹುದು. ಆದರೆ, ಮಾತ್ರೆ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳಬೇಕಾದ್ದು ಅವಶ್ಯ. ಯಾವುದೇ ಮಾತ್ರೆ ನಿಮ್ಮ ದೇಹಕ್ಕೆ ಒಗ್ಗದಿದ್ದರೆ, ವೈದ್ಯರ ಸಲಹೆ ಪಡೆದು, ಮಾತ್ರೆ ಸೇವನೆ ನಿಲ್ಲಿಸಬಹುದು. ಮಲಬದ್ಧತೆ, ಬೇಧಿ, ಅಧಿಕ ತೇಗು ಮುಂತಾದ ಉಂಟು ಮಾಡುವ Metformin ಗುಂಪಿನ ಮಾತ್ರೆಗಳ ಡೋಸೆಜ್ ಹೆಚ್ಚು ಕಮ್ಮಿ ಮಾಡುವುದರ ಮೂಲಕ ಸೈಡ್ ಎಫೆಕ್ಟ್ ತಡೆಗಟ್ಟಬಹುದು. ಆರಂಭದಲ್ಲಿ ಈ ಮಾತ್ರೆಗಳನ್ನು ಕಡಿಮೆ ಡೋಸೆಜ್ ನಲ್ಲಿ ತೆಗೆದುಕೊಂಡು ದೇಹಕ್ಕೆ ಒಗ್ಗಿದ ಮೇಲೆ ಡೋಸೆಜ್ ಹೆಚ್ಚಿಸಬಹುದು.
ಮಾತ್ರೆ ಚಿಕಿತ್ಸೆ ಆರಂಭಿಸಿದ ಮೇಲೆ, ಜೀವನಪೂರ್ತಿಮಾತ್ರೆ ಸೇವಿಸಬೇಕೆ?
ಇದು ನಿಮಗಿರುವ ಡಯಾಬಿಟಿಸ್ ಟೈಪ್ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮ ಡಯಾಬಿಟಿಸ್ ನಿಯಂತ್ರಣದಲ್ಲಿದ್ದರೆ, ನೀವು ಸಮತೋಲನ ಆಹಾರದ ಮೂಲಕ ಇನ್ಸುಲಿನ್ ನಿಯಂತ್ರಿಸಬಹುದು. ಹಾಗಾದರೆ, ಆಹಾರದ ಮೂಲಕವೇ ಏಕೆ ಸಕ್ಕರೆ ಕಾಯಿಲೆ ನಿಯಂತ್ರಿಸಬಾರದು. ಆಹಾರದ ಮೂಲಕ ಡಯಾಬಿಟಿಸ್ ನಿಯಂತ್ರಣದಲ್ಲಿಡಬಹುದಾದರೂ, ಕಾಲಕಳೆದಂತೆ ಮಾತ್ರೆ, ಇನ್ಸುಲಿನ್ ಚುಚ್ಚುಮದ್ದಿನ ಅವಶ್ಯಕತೆ ಬೀಳುತ್ತದೆ. ಆ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಮಾತ್ರೆ ಮೂಲಕ ನಿಯಂತ್ರಣಕ್ಕೆ ಒಳಪಡಲು ನಿಮ್ಮ ದೇಹ ಸ್ಪಂದಿಸದೇ ಇರಬಹುದು. ಸಾಮಾನ್ಯವಾಗಿ ಕಾಲಕಳೆದಂತೆ ಟೈಪ್ 2 ಡಯಾಬಿಟಿಸ್ ದೇಹವನ್ನು ಹಿಂಡತೊಡಗುತ್ತದೆ.
ಆರಂಭದಿಂದಲೇ ಮಾತ್ರೆ ಚಿಕಿತ್ಸೆ ಪಡೆಯುತ್ತಿದ್ದೇನ, ಆದರೂ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಲ್ಲ ಏಕೆ?
ಇದು ವೈದ್ಯರಿಗೆ ದಿನನಿತ್ಯ ಎದುರಾಗುವ ಸಾಮಾನ್ಯ ಪ್ರಶ್ನೆ.ಆದರೂ ಇದಕ್ಕೆ ಪದೇ ಪದೇ ಉತ್ತರಿಸುವ ಅಗತ್ಯವಿದೆ. ಆಧುನಿಕ ಸಂಶೋಧನೆಯ ಪ್ರಕಾರ ಡಯಾಬಿಟಿಸ್ ಒಂದೇ ಸಮನಾಗಿರುವುದಿಲ್ಲ.ಏರಿಳಿತ ಸಹಜ. ವ್ಯಕ್ತಿಯಿಂದ ವ್ಯಕ್ತಿಗೆ ಡಯಾಬಿಟಿಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇದರಲ್ಲಿ ನಿಮ್ಮದಾಗಲಿ, ನಿಮ್ಮ ಡಾಕ್ಟರ್ ದಾಗಲಿ ಏನು ತಪ್ಪಿಲ್ಲ. ನಿಮ್ಮ ದೈಹಿಕ ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದರಿಂದ ಡಯಾಬಿಟಿಸ್ ವಿಕೋಪಕ್ಕೆ ತಿರುಗುವುದನ್ನು ತಪ್ಪಿಸಬಹುದು. ನಿಮ್ಮ ಆಹಾರ ಕ್ರಮ, ಚಿಕಿತ್ಸಾವಿಧಾನದಲ್ಲಿ ಯಾವುದೇ ಬದಲಾವಣೆಯಾಗದೇ ಹಾಗೆ ಇದ್ದು, ಮಧುಮೇಹ ಉಲ್ಬಣಿಸಿದರೆ, ಚಿಕಿತ್ಸಾವಿಧಾನ ಬದಲಾಯಿಸುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
