ತಮಿಳಿನ ಖ್ಯಾತ ಕಂಪೋಸರ್ ವಿಜಯ್ ಆ್ಯಂಟೋನಿ ಮಗಳ ಆತ್ಮಹತ್ಯೆ: ಹದಿಹರೆಯದ ಪ್ರಾಯದವರಲ್ಲಿ ಖಿನ್ನತೆಯ ಲಕ್ಷಣಗಳೇನು?

ತಮಿಳಿನ ಖ್ಯಾತ ಸಂಗೀತ ಸಂಯೋಜಕ, ನಟ ವಿಜಯ್ ಆ್ಯಂಟೋನಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹೊರಬರುತ್ತಿದ್ದಂತೆ ಈಗ ಮತ್ತೆ ಖಿನ್ನತೆಯ ಅಪಾಯದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಹದಿಹರೆಯದ ಮಕ್ಕಳಿಗೆ ಖಿನ್ನತೆ ಕಾಡಿದರೆ ಪೋಷಕರು ನಿರ್ಲಕ್ಷ್ಯ ಮಾಡಲೇಬಾರದು. ವಿಜಯ್‌ ಆ್ಯಂಟೋನಿ ಅವರ ಮಗಳು ಖಿನ್ನತೆಗೆ ಔಷಧಿ ತೆಗೆದುಕೊಳ್ಳುತ್ತಿದ್ದಳು ಎಂಬುವ ಸುದ್ದಿ ಹೊರ ಬರುತ್ತಿದೆ. ಎಲ್ಲಾ ಅನುಕೂಲಕತೆಗಳಿದ್ದರೂ ಆ ಮಗುವಿಗೆ ಖಿನ್ನತೆ ಕಾಡುತ್ತೇ ಎಂದು ಜನರಿಗೆ ಅಚ್ಚರಿಯಾಗಿದೆ.

depression, depression in teens

ಈ ಖಿನ್ನತೆ ಎಂಬುವುದು ಬಡವ- ಶ್ರೀಮಂತ, ಮಕ್ಕಳು-ದೊಡ್ಡವರು ಎನ್ನದೆ ಯಾರನ್ನೂ ಬೇಕಾದರೂ ಕಾಡಬಹುದು, ಕೆಲವೊಂದು ವಿಷಯಗಳು ಮನಸ್ಸನ್ನು ಕೊರೆಯಲಾರಂಭಿಸಿದರೆ ಅದರಿಂದ ಖಿನ್ನತೆ ಉಂಟಾಗುವುದು. ಹದಿಹೆಯದ ಪ್ರಾಯದವರಲ್ಲಿ ಖಿನ್ನತೆಯ ಲಕ್ಷಣಗಳೇನು? ಈ ಖಿನ್ನತೆಯ ಲಕ್ಷಣಗಳು ಕಂಡು ಬಂದಾಗ ಪೋಷಕರು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಖಿನ್ನತೆಯ ಲಕ್ಷಣಗಳು
* ಸದಾ ಬೇಸರದಲ್ಲಿ ಇರುವುದು, ಸುಮ್ಮನೆ ಅಳುವುದು
* ಚಿಕ್ಕ ಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ವಿಚಿತ್ರ ವರ್ತನೆ
* ಎಲ್ಲದರಲ್ಲೂ ನಿರಾಸಕ್ತಿ
* ಸಾಮಾನ್ಯ ಚಟುವಟಿಕೆಗಳಲ್ಲಿ ಆಅಸಕ್ತಿ ಕಳೆದುಕೊಳ್ಳುವುದು
* ಆತ್ಮವಿಶ್ವಾಸ ಕಡಿಮೆಯಾಗುವುದು
* ತಮ್ಮನ್ನೇ ತಾವೇ ನಾನು ಯಾವುದಕ್ಕೂ ಲಾಯಕ್ಕಲ್ಲ ಎಂದು ಭಾವಿಸುವುದು
* ಹಳೆಯ ಸೋಲನ್ನೇ ನೆನೆಸುತ್ತಾ ಕೂರುವುದು
* ಯಾವುದಕ್ಕೂ ಗಮನ ನೀಡಲು ಸಾಧ್ಯವಾಗದಿರುವುದು
* ಆಗಾಗ ಸಾಯುವ ಮಾತು

ವರ್ತನೆಯಲ್ಲಿ ಬದಲಾವಣೆಯಾಗುವುದು
* ಸುಸ್ತು, ಶಕ್ತಿ ಕುಗ್ಗುವುದು
* ನಿದ್ದೆ ಕಡಿಮೆಯಾಗುವುದು ಅಥವಾ ಅತೀ ಹೆಚ್ಚು ನಿದ್ದೆ ಮಾಡುವುದು
* ಆಹಾರ ಸೇವನೆಯಲ್ಲಿ ಬದಲಾವಣೆ, ಮೈ ತೂಕ ಕಡಿಮೆಯಾಗುವುದು
* ಕೆಟ್ಟ ಚಟಗಳ ಕಡೆಗೆ ವಾಲುವುದು
* ಒಂದೇ ಕಡೆ ಸುಮ್ಮನೆ ಕೂರಲು ಸಾಧ್ಯವಾಗದಿರುವುದು ಒಂಥರಾ ಚಡಪಡಿಕೆ
* ಸಾಮಾಜಿಕವಾಗಿ ಬೆರೆಯದೆ ಇರುವುದು
* ಶಾಲಾ ಕಲಿಕೆಯಲ್ಲಿ ,ಚಟುವಟಿಕೆಗಳಲ್ಲಿ ಹಿಂದೆ ಬೀಳುವುದು
* ಶುಚಿತ್ವ ಕಡೆಗೆ ಹೆಚ್ಚಿನ ಗಮನ ನೀಡದಿರುವುದು
* ಇದ್ದಕ್ಕಿದ್ದಂತೆ ಕೋಪಗೊಳ್ಳುವುದು
* ತಮಗೆ ತಾವೇ ಹಾನಿ ಮಾಡಿಕೊಳ್ಳುವುದು
* ಆತ್ಮಹತ್ಯೆಗೆ ಯತ್ನಿಸುವುದು

ಯಾವುದು ಸಹಜ, ಯಾವುದಲ್ಲ?
ಖಿನ್ನತೆ ಯಾವುದು, ಬೇಸರ ಯಾವುದು ಎಂದು ಕಂಡು ಹಿಡಿಯುವುದು ಕಷ್ಟ. ನೀವು ನಿಮ್ಮ ಮಗ ಅಥವಾ ಮಗಳ ಜೊತೆ ಮಾತನಾಡಿ. ಅವರು ಎದುರಿಸುತ್ತಿರುವ ಸವಾಲುಗಳೇನು ಎಂದು ತಿಳಿಯಲು ಪ್ರಯತ್ನಿಸಿ. ಬೇಸರ ಎಂಬುವುದು ಕೆಲವು ದಿನಗಳಿರಬಹುದು, ಆದರೆ ಖಿನ್ನತೆ ಎಂಬುವುದು ದಿನದಿಂದ ದಿನಕ್ಕೆ ವ್ಯಕ್ತಿಯನ್ನು ದುರ್ಬಲನ್ನಾಗಿಸುತ್ತಲೇ ಹೋಗುತ್ತದೆ. ನಿಮ್ಮ ಮಕ್ಕಳಲ್ಲಿ ಈ ರೀತಿ ಬದಲಾವಣೆಯಾದರೆ ಪೋಷಕರು ತುಂಬಾನೇ ಜಾಗ್ರತೆವಹಿಸಬೇಕು.

ಹದಿಹರೆಯದವರಲ್ಲಿ ಖಿನ್ನತೆಗೆ ಏನು ಕಾರಣಗಳಿರಬಹುದು:

ಹೀಯಾಳಿಸುವುದು: ತಮ್ಮನ್ನು ಯಾರಾದರೂ ಹೀಯಾಳಿಸಿದರೆ ಇದು ತುಂಬಾನೇ ಮಾನಸಿಕ ಒತ್ತಡ ಉಂಟಾಗುವುದು. ಇದರಿಂದ ಆತ್ಮವಿಶ್ವಾಸ ಕಡಿಮೆಯಾಗುವುದು, ಭರವಸೆ ಕಳೆದುಕೊಳ್ಳುವುದು. ಬಾಡಿ ಶೇಮಿಂಗ್‌ ತುಂಬಾ ಮಕ್ಕಳು ಎದುರಿಸುತ್ತಾರೆ, ಇದು ಕೂಡ ಖಿನ್ನತೆಗೆ ಕಾರಣ.

ದೈಹಿಕ ಅಥವಾ ಮಾನಸಿಕ ಸಮಸ್ಯೆ: ಏನಾದರೂ ದೈಹಿಕ ಸಮಸ್ಯೆಯಿದ್ದರೆ ಇದು ಕೂಡ ಖಿನ್ನತೆಗೆ ಕಾರಣವಾಗುವುದು. ದೈಹಿಕ ನ್ಯೂನತೆ ಅಥವಾ ತುಂಬಾ ಸಮಯದಿಂದ ಕಾಡುವ ಆರೋಗ್ಯ ಸಮಸ್ಯೆ ಈ ಕಾರಣದಿಂದ ಕೂಡ ಖಿನ್ನತೆ ಉಂಟಾಗುವುದು.

ಮನೆಯ ವಾತಾವರಣ: ಮನೆಯ ವಾತಾವರಣ ಸರಿಯಾಗಿರದಿದ್ದರೆ ಕೂಡ ಮಕ್ಕಳಿಗೆ ಖಿನ್ನತೆ ಕಾಡುವುದು. ಅಪ್ಪ-ಅಮ್ಮನ ಸಂಬಂಧದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದು ಕೂಡ ಮಕ್ಕಳನ್ನು ಬಾಧಿಸುವುದು.

ಮಕ್ಕಳಿಗೆ ಖಿನ್ನತೆ ಕಂಡು ಬಂದಾಗ ಏನು ಮಾಡಬೇಕು?
ಅವರಿಗೆ ಬುದ್ಧಿಮಾತು ಹೇಳಲು ಹೋಗಬೇಡಿ: ತುಂಬಾ ಜನ ಈ ತಪ್ಪನ್ನು ಮಾಡುತ್ತಾರೆ, ಅವರು ಖಿನ್ನತೆಯಿಂದ ಬಳಲುತ್ತಿರುವಾಗ ನೀವು ಅವರಿಗೆ ತುಂಬಾನೇ ಬುದ್ದಿಮಾತು ಹೇಳಲು ಹೋಗಬೇಡಿ, ಮೊದಲಿಗೆ ಅವರು ಏನು ಹೇಳುತ್ತಿದ್ದಾರೆ ಎಂಬುವುದನ್ನು ಕೇಳಿ. ನೀವು ಅವರ ಮಾತುಗಳನ್ನು ಕೇಳುತ್ತಾ ಅವರನ್ನು ಸಮಧಾನ ಪಡಿಸಿ, ಧೈರ್ಯ ತುಂಬಿ

ನಿಧಾನಕ್ಕೆ ಅವರನ್ನು ಬದಲಾಯಿಸಲು ಪ್ರಯತ್ನಿಸಿ:
ನಿಮ್ಮ ಮಕ್ಕಳ ಅನಿಸಿಕೆ, ಭಾವನೆಗಳನ್ನು ಗೌರವಿಸಿ, ಅವರು ಮೊದಲಿಗೆ ಏನೂ ಹೇಳಲು ಬಯಸುವುದಿಲಲ್, ಮೊದಲಿಗೆ ಅವರ ಜೊತೆ ಬೆರೆಯುತ್ತಾ ಕಂಫರ್ಟ್ ಮಾಡಿ. ಆವಾಗ ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಮೆಲ್ಲನೆ ನಿಮ್ಮ ಜೊತೆ ಶೇರ್ ಮಾಡುತ್ತಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Depression:Emotional Changes And Behavioral Changes In Teens

Depression: Emotional changes and behavioral changes in teens, how parents handle this situation, read on..
Story first published: Tuesday, September 19, 2023, 14:56 [IST]
X
Desktop Bottom Promotion