Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಜ್ಯದಲ್ಲಿ ಡೆಂಗ್ಯೂವಿಗೆ 4 ಮಕ್ಕಳು ಸೇರಿ 5 ಬಲಿ: ಹೀಗೆ ಮಾಡಿದರೆ ಡೆಂಗ್ಯೂ ಭಯ ಇರಲ್ಲ!
ಕರ್ನಾಟಕದಲ್ಲಿ ಡೆಂಗ್ಯೂ ಕರ್ನಾಟಕದಲ್ಲಿ ಶೇ. 60ರಷ್ಟು ಹೆಚ್ಚಾಗಿದೆ, ಐವರು ಡೆಂಗ್ಯೂವಿಗೆ ಬಲಿಯಾಗಿದ್ದಾರೆ. ಡೆಂಗ್ಯೂ ತಡೆಗೆ ಎಲ್ಲಾ ಸೂಕ್ತ ಮುನ್ನೆಚ್ಚರಿಕೆವಹಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಗ್ಯ ಇಲಾಖೆಗೆ ,ಬಿಬಿಎಂಪಿಗೆ ಮುನ್ಸೂಚನೆ ನೀಡಿದ್ದಾರೆ.

5, 374 ಕೇಸ್‌ಗಳು ಪತ್ತೆಯಾಗಿದೆ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು ಜೂನ್ 24ಕ್ಕೆ 5,374 ಕೇಸ್‌ಗಳು ಬಂದಿವೆ. ಬೆಂಗಳೂರು, ಚಿಕ್ಕಮಂಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ, ಬೆಂಗಳೂರಿಲ್ಲಿಯೇ 1230 ಜನರಿಗೆ ಡೆಂಗ್ಯೂ ತಗುಲಿದೆ.
ಡೆಂಗ್ಯೂವಿಗೆ ಬಲಿಯಾದ ಮಕ್ಕಳು
ಡೆಂಗ್ಯೂ ಮಕ್ಕಳಿಗೆ ಬಂದರೆ ಹೆಚ್ಚು ಅಪಾಯಕಾರಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಗರ್ಭಿಣಿಯರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೆಗೆ ಈ ಡೆಂಗ್ಯೂ ಹೆಚ್ಚು ಅಪಾಯಕಾರಿ. ರಾಜ್ಯದಲ್ಲಿ ಡೆಂಗ್ಯೂವಿನಿಂದ ಒಟ್ಟು 5 ಸಾವಾಗಿದ್ದು ಅದರಲ್ಲಿ ನಾಲ್ಕು ಮಕ್ಕಳು ಮತ್ತೊಬ್ಬರು 32 ವರ್ಷದ ಯುವಕ.
ಆಸ್ಪತ್ರೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆವಹಿಸಲು ಸೂಚನೆ
ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ಟೆಸ್ಟಿಂಗ್ ಕಿಟ್, ಅಗ್ಯತವಿರುವ ವಸ್ತುಗಳು ಇರಬೇಕೆಂದು ಸರ್ಕಾರ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಜ್ವರ ಬಂದವರು ಡೆಂಗ್ಯೂ ಪರೀಕ್ಷೆಗೆ ಒಳ ಪಡುವುದು ಒಳ್ಳೆಯದು.
ಡೆಂಗ್ಯೂ ಲಕ್ಷಣಗಳು
ಡೆಂಗ್ಯೂ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಬದಲಿಗೆ ಸೋಂಕಿತ ಸೊಳ್ಳೆ ಕಡಿತದಿಂದಾಗಿ ಹರಡುವುದು, ಸೊಳ್ಳೆ ಕಚ್ಚಿ 2-7 ದಿನಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುವುದು.
ಮೊದಲಿಗೆ ಜ್ವರ ಬರುತ್ತದೆ, ಸಾಮಾನ್ಯ ಜ್ವರವಾದರೆ ಔಷಧ ತೆಗೆದುಕೊಂಡಂತೆ ಕಡಿಮೆಯಾಗುವುದು, ಅದೇ ಡೆಂಗ್ಯೂ ಜ್ವರವಾದರೆ ಐದು ದಿನವಾದರೂ ಕಡಿಮೆಯಾಗುವುದಿಲ್ಲ
ಜ್ವರ
ಮೈಕೈ ನೋವು
ವಾಂತಿ ಬೇಧಿ
ಸುಸ್ತು
ಗ್ರಂಥಿಗಳಲ್ಲಿ ಊತ
ಮೈ ಮೇಲೆ ಗುಳ್ಳೆಗಳು ಏಳುವುದು
ವಿಪರೀತ ತಲೆನೋವು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಡೆಂಗ್ಯೂ ಗಂಭೀರ ಲಕ್ಷಣಗಳು
ತುಂಬಾನೇ ಸುಸ್ತು
ಕಿಬ್ಬೊಟ್ಟೆ ನೋವು
ತೀವ್ರ ಉಸಿರಾಟದ ಸಮಸ್ಯೆ
ಮಲವಿಸರ್ಜನೆ ಮಾಡುವಾಗ ರಕ್ತಸ್ರಾವ'
ಬಾಯಾರಿಕೆ
ಸುಸ್ತು
ಮೆದುಳಿನಲ್ಲಿ ರಕ್ತಸ್ರಾವ
ಡೆಂಗ್ಯೂ ತಡೆಗಟ್ಟಲು ಚಿಕಿತ್ಸೆ ಇದೆಯೇ?
ಡೆಂಗ್ಯೂ ತಡೆಗಟ್ಟಲು ಮುನ್ನೆಚ್ಚರಿಕೆಯೇ ಚಿಕಿತ್ಸೆ. ಡೆಂಗ್ಯೂವಿಗಾಗಿ ನಿರ್ಧಿಷ್ಟ ಚಿಕಿತ್ಸೆಯಿಲ್ಲ, ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು. ಡೆಂಗ್ಯೂ ರೋಗವನ್ನು ನಾವು ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆವಹಿಸಿದರೆ ತಡೆಗಟ್ಟಬಹುದು.
ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ
ಮೊದಲು ಮಾಡಬೇಕಾಗಿರುವುದು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸುವುದು
ಮಕ್ಕಳಿಗೆ ತುಂಬು ತೋಳಿನ ಉಡುಪು ಹಾಕಿ ಕೊಡಿ
ಸೊಳ್ಳೆ ಕಚ್ಚದಂತೆ ಕ್ರೀಮ್ ಬಳಸಿ
ಮನೆಯೊಳಗಡೆ ಸೊಳ್ಳೆ ಬರದಂತೆ ಸೊಳ್ಳೆ ಪರದೆ ಬಳಸಿ
ಸೊಳ್ಳೆ ಪರದೆಯೊಳಗಡೆ ಮಲಗಿ
ಮನೆ ಸುತ್ತ-ಮುತ್ತ ಕ್ಲೀನ್ ಆಗಿ ಇಡಿ
ಬಕೆಟ್, ಪಾತ್ರೆ, ನೀರಿ ತೊಟ್ಟಿಯಲ್ಲಿ ನೀರು ತುಂಬಿ ಮುಚ್ಚಿಡಿ, ಇಲ್ಲದಿದ್ದರೆ ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
