Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಸನ ಹೃದಯಾಘಾತ ಪ್ರಕರಣ: ಮೊಬೈಲ್ ಬಳಕೆ ಕಾರಣವಾಗಿದ್ದೇಗೆ? ಅಪಾಯಕ್ಕೆ ತಳ್ಳಿದ ಜೀವನ ಶೈಲಿ!
ಯುವ ಪೀಳಿಗೆ ಇಂದು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವುದು ನೋಡಬಹುದು. ಅದ್ರಲ್ಲೂ ಅಧಿಕ ತೂಕ, ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಂದ ಹಿಡಿದು ಜೀವಕ್ಕೆ ಅಪಾಯ ತರುತ್ತಿರುವ ಕ್ಯಾನ್ಸರ್, ಹೃದಯಾಘಾತ ಸಮಸ್ಯೆಗಳು ಕೂಡ ಈ ಸಾಲಿನಲ್ಲಿ ಸೇರಿವೆ. ಅದ್ರಲ್ಲೂ ಹೃದಯಾಘಾತ ಎಂಬ ಹೆಸರು ಕೇಳಿದರೆ ಸಾಕು ರಾಜ್ಯದ ಜನತೆ ಈಗ ಬೆಚ್ಚಿ ಬೀಳುವಂತಾಗಿದೆ.
ಅದ್ರಲ್ಲೂ ಕೋವಿಡ್ ಬಳಿಕ ಈ ಹೃದಯಾಘಾತ ಸಮಸ್ಯೆ ಬಹುತೇಕರ ನಿದ್ದೆಗೆಡಿಸಿದೆ. ಅದ್ರಲ್ಲೂ ರಾಜ್ಯದ ಹಾಸನ ಹಾಗೂ ಬೆಳಗಾವಿಯಲ್ಲಿ ಸಂಭವಿಸುತ್ತಿರುವ ಸರಣಿ ಹೃದಯಾಘಾತಗಳು ಆತಂಕ ಹುಟ್ಟಿಸಿದೆ. ಹಾಸನದಲ್ಲಿ ನಿತ್ಯವೂ ಈ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿರುವುದು ಜನರಲ್ಲಿ ಆತಂಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆಯೊಂದರಲ್ಲಿ ಕಳೆದ 40 ದಿನಗಳ ಅಂತರದಲ್ಲಿ ಸುಮಾರು 37ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವುದು ವರದಿಯಾಗಿದೆ. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹಾಗೆ ಜನ ಸಾಮಾನ್ಯರ ಆರೋಗ್ಯ ಸಂಬಂಧ ದೊಡ್ಡ ಆತಂಕ ಕೂಡ ಎದುರಾಗಿದೆ. ಈ ಏಕಾಏಕಿ ಹೃದಯಾಥಾತ ಪ್ರಕರಣಗಳು ಹೆಚ್ಚಳವಾದ ಬೆನ್ನಲ್ಲೆ ಸರ್ಕಾರ ತನಿಖೆಗಾಗಿ ಒಂದು ಸಮಿತಿ ಕೂಡ ನೇಮಿಸಿತ್ತು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ತಜ್ಞರನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಮೃತಪಟ್ಟವರ ಕೇಸ್ ಸ್ಟಡಿ ಹಾಗೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಿದೆ. ಹಾಗೆ ಈ ಅಸಹಜ ಸಾವುಗಳಿಗೆ ಕಾರಣಗಳನ್ನು ಪತ್ತೆ ಮಾಡಿ ವರದಿ ಕೂಡ ಸಲ್ಲಿಸಲಾಗಿದೆ.
ಹಾಸನದ ಹೊಳೆನರಸೀಪುರ, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ, ಮತ್ತು ಆಲೂರಿನಲ್ಲಿ ಹೆಚ್ಚಿನ ಹೃದಯಾಘಾತ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಯುವಕರ ಸಂಖ್ಯೆ ಹೆಚ್ಛಾಗಿದೆ. ಹಾಗೆ ಹಾಸನದಲ್ಲಿ ವಾಸವಿದ್ದು ಉದ್ಯೋಗ ಸಂಬಂಧ ಬೇರೆ ಜಿಲ್ಲೆಯಲ್ಲಿ ನೆಲೆಸಿರುವವರಲ್ಲೂ ಹೃದಯಘಾತದಂತಹ ಪ್ರಕರಣ ವರದಿಯಾಗಿರುವುದು ನೋಡುಬಹುದು. ಅದರಲ್ಲೂ 19ರಿಂದ 58 ವರ್ಷದ ವರಗಿನ ವಿವಿಧ ವಯಸ್ಸಿನವರು ಈ ಹೃದಯಾಘಾತದಿಂದ ಬಲಿಯಾಗಿರುವುದು ನೋಡಬಹದು.
ಹೃದಯಾಘಾತದಲ್ಲಿ ಮರಣ ಹೊಂದಿದ್ದ ಮಂದಿ ಆರೋಗ್ಯವಂತರಾಗಿದ್ದರು, ಇವರಲ್ಲಿ ಯೋಧ, ಆಟೋ ಚಾಲಕ ವಿದ್ಯಾರ್ಥಿ, ಉದ್ಯೋಗಿ, ಗೃಹಿಣಿ, ಪ್ರಾಧ್ಯಾಪಕ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ. ಹೀಗಾಗಿ 10 ದಿನಗಳ ಒಳಗೆ ಈ ಹೃದಯಾಘಾತಗಳಿಗೆ ನಿಖರ ಕಾರಣ ತಿಳಿಯಲು ಸಮಿತಿ ರಚಿಸಲಾಗಿದ್ದು, ಇದು ಹಾಸನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ (HIMS) ಸಹಯೋಗದೊಂದಿಗೆ ಅಧ್ಯಯನಕ್ಕಿಳಿದಿದೆ.
ಹಾಸನ ಮಾತ್ರವಲ್ಲ ಉಳಿದಂತೆ ರಾಮನಗರದಲ್ಲಿ ಕಳೆದ 2 ತಿಂಗಳಲ್ಲಿ ಸುಮಾರು 20 ಮೃತಪಟ್ಟಿದ್ದರೆ ಬೆಳಗಾವಿ, ಶಿವಮೊಗ್ಗ, ವಿಜಯಪುರದಲ್ಲೂ ಕೂಡ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದು ದೊಡ್ಡ ಆತಂಕ ಸೃಷ್ಟಿಸಿದೆ.
ಹೃದಯಾಘಾತಕ್ಕೆ ಕಾರಣಗಳ ಕುರಿತಾಗಿ ಹರಡಿವೆ ಊಹಾಪೂಹಗಳು
ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಹಲವು ರೀತಿಯ ಊಹಾಪೂಹಗಳು ಕೂಡ ಹರಡಲಾಗಿದೆ. ಅದ್ರಲ್ಲೂ ಮೊಬೈಲ್ ಬಳಕೆ ಹೆಚ್ಚಳ, ಜೀವನ ಶೈಲಿಗಳು, ಆಹಾರ ಪದ್ಧತಿಗಳು ಹೀಗೆ ಹಲವು ವಿಚಾರಗಳು ಕಾರಣ ಎಂದು ಹೇಳಲಾಗಿದೆ. ಆದ್ರೆ ನಿಖರ ಕಾರಣಗಳನ್ನು ತಜ್ಞರ ವರದಿಯಿಂದ ತಿಳಿದುಬರಬೇಕಿದೆ.
ಕೋವಿಡ್ ಲಸಿಕೆ ಕಾರಣವಾಗಿದ್ಯಾ?
ಹಾಸನ ಸೇರಿ ವಿವಿಧ ಕಡೆ ವರದಿಯಾಗುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವೆಂದು ಆರೋಪಿಸುವುದು ನೋಡಬಹುದು. ಆದ್ರೆ ಈ ಹಿಂದೆ ಐಸಿಎಂಆರ್ ವರದಿಯೊಂದು ಕೋವಿಡ್ ಲಸಿಕೆಗೂ ಅಸಹಜ ಸಾವುಗಳಿಗೂ ಅಂದರೆ ಹಠಾತ್ ಹೃದಯಾಘಾತದಂತಹ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ದೃಢಪಡಿಸಿದೆ. ಹಾಗೆ ಹಾಸನ ಪ್ರಕರಣಗಳಲ್ಲೂ ಕೋವಿಡ್ ಲಸಿಕೆಗಳ ಪರಿಣಾಮಗಳಿಲ್ಲ ಎಂದು ವರದಿಯಾಗಿದೆ.
ಹೃದಯಾಘಾತದ ಲಕ್ಷಣಗಳೇನು?
ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಹಾಗೆ ಎಲ್ಲಾ ಎದೆನೋವಿನ ಪ್ರಕರಣಗಳು ಹೃದಯಾಘಾತದ ಲಕ್ಷಣಗಳಾಗಿರುವುದಿಲ್ಲ.
ಸಾಮಾನ್ಯ ಲಕ್ಷಣಗಳೆಂದರೆ
- ಎದೆ ನೋವು
- ಒತ್ತಡ
- ಉಸಿರಾಟದ ತೊಂದರೆ
- ವಾಕರಿಕೆ
- ವಾಂತಿ
- ಅಧಿಕ ಬೆವರು
- ತಲೆತಿರುಗುವಿಕೆ
- ಎಡಗೈ, ಭುಜ, ಕುತ್ತಿಗೆ ಅಥವಾ ದವಡೆಯಲ್ಲಿ ನೋವು
ಹಾಸನದಲ್ಲಿ ಹೃದಯಾಘಾತಕ್ಕೆ ಮಾಂಸಹಾರ ಸೇವನೆ ಕಾರಣವೇ?
ಹಾಸನದಲ್ಲಿ ಅತ್ಯಧಿಕ ಮಾಂಸಹಾರ ಸೇವನೆ ಕೂಡ ಇದೆ ಎಂದು ವರದಿಯೊಂದು ಹೇಳಿದೆ. International Journal of Agriculture Extension and Social Development ಎಂಬ ವದರಿಯಲ್ಲಿ ಹಾಸನವು ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಮಾಂಸ ಸೇವನೆಯ ಜಿಲ್ಲೆ ಎಂದು ತಿಳಿದುಬಂದಿದೆ. ಆದ್ರೆ ಹೃದಯಾಘಾತಗಳಿಗೂ ಮಾಂಸಹಾರ ಸೇವನೆಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ತಿಳಿಸಲಾಗಿದೆ. ಹಾಗೆ ಮೊಬೈಲ್ ಬಳಕೆ ಕೂಡ ಹೃದಯಾಘಾತಕ್ಕೆ ಕಾರಣ ಎಂದು ಆರೋಪಿಸುವುದು ನೋಡಬಹುದು. ಮೊಬೈಲ್ ಬಳಕೆಯಲ್ಲಿ ಇಂದು ಯುವ ಪೀಳಿಗೆ ಸಮಯದ ಮಿತಿ ಇಲ್ಲದೆ ಬಳಕೆ ಮಾಡುತ್ತಿದೆ. ಇದು ಸಹ ಹೃದಯಾಘಾತ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ. ಹಾಗೆ ಮದ್ಯಪಾನಿಗಳು ಹಾಗೆ ಧೂಮ ಪಾನಿಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂಬುದನ್ನು ಕೂಡ ನಾವು ಗಮನಿಸಬೇಕಿದೆ.
ಮೊಬೈಲ್ ಬಳಕೆಯಿಂದ ಹೃದಯಾಘಾತ ಹೆಚ್ಚಳ ಹೇಗೆ?
ಮೊಬೈಲ್ ಫೋನ್ ಬಳಕೆ ಹೃದಯಾಘಾತಕ್ಕೆ ನೇರಾನೇರ ಸಂಬಂಧಿ ಹೊಂದಿದೆ ಎಂದು ವರದಿಗಳು ಸಾಬೀತುಪಡಿಸಿವೆ. ನಿಯಮಿತವಾಗಿ ಮೊಬೈಲ್ ಫೋನ್ ಬಳಕೆಯು ಹೃದಯರಕ್ತನಾಳದ ಕಾಯಿಲೆಗಳ ಅಪಾಯದೊಂದಿಗೆ ಸಕಾರಾತ್ಮಕ ಸಂಬಂಧ ಹೊಂದಿದೆ, ಅದರಲ್ಲೂ ವಿಶೇಷವಾಗಿ ಧೂಮಪಾನಿಗಳು ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಹೆಚ್ಚು ಎಂದು ಎಲ್ಸೆವಿಯರ್ ಪ್ರಕಟಿಸಿದ ಕೆನಡಿಯನ್ ಜರ್ನಲ್ ಆಫ್ ಕಾರ್ಡಿಯಾಲಜಿ ( Canadian Journal of Cardiology) ತಿಳಿಸಿದೆ.
ಮೊಬೈಲ್ ಫೋನ್‌ಗಳಿಂದ ಹೊರಸೂಸಲ್ಪಡುವ ರೇಡಿಯೋ-ಫ್ರೀಕ್ವೆನ್ಸಿ ವಿದ್ಯುತ್ಕಾಂತೀಯ ಕ್ಷೇತ್ರಗಳು (RF-EMF) ಹೈಪೋಥಾಲಾಮಿಕ್-ಪಿಟ್ಯುಟರಿ-ಮೂತ್ರಜನಕಾಂಗದ ಅಕ್ಷದ ಅನಿಯಂತ್ರಣ, ಉರಿಯೂತದ ಪ್ರತಿಕ್ರಿಯೆಗಳು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆದ್ದರಿಂದ ಹೃದಯ ಮತ್ತು ರಕ್ತನಾಳಗಳಂತಹ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಅಧ್ಯಯನಕ್ಕಾಗಿ ಹೃದಯ ಸಂಬಂಧಿ ಸಮಸ್ಯೆ ಹೊಂದಿರದ 444,027 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರನ್ನು 2006ರಿಂದ 2010ರ ವರೆಗೆ ತಮ್ಮ ಮೊಬೈಲ್ ಫೋನ್ ಬಳಕೆಯ ಸಮಯ ಹಾಗೂ ಅವಧಿಯ ಕುರಿತು ಹಂಚಿಕೊಂಡಿದ್ದಾರೆ. ಅವರಲ್ಲಿ ತೀವ್ರ ಬಳಕೆಯವರಲ್ಲಿ ಇಂತಹ ಹೃದಯ ಸಂಬಂಧಿ ಸಮಸ್ಯೆ, ನಿದ್ರೆ ಸಂಬಂಧಿತ ಸಮಸ್ಯೆಗಳ ಹೆಚ್ಚಳ ಆಗಿರುವುದನ್ನು ಪತ್ತೆ ಮಾಡಲಾಗಿದೆ.



Click it and Unblock the Notifications

