Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
2024 ನೆಮ್ಮದಿ ನೀಡಲ್ವಂತೆ...ಹೃದಯಾಘಾತ ಮತ್ತಷ್ಟು ಹೆಚ್ಚಳ ಎಂದ ವೈದ್ಯರು..
ಇತ್ತೀಚಿನ ದಿನಗಳಲ್ಲಿ ವಿಶ್ವದ ಹಲವಾರು ದೇಶಗಳು ಮತ್ತೊಮ್ಮೆ ಕೋವಿಡ್ ಪ್ರಕರಣಗಳ ಎದುರಿಸುತ್ತಿವೆ. ಇದು ಜಾಗತಿಕ ಆತಂಕಕ್ಕೂ ಕಾರಣವಾಗಿದೆ. ಕೋವಿಡ್‌ನಿಂದ ಇಡೀ ವಿಶ್ವವೇ ಚೇತರಿಸಿಕೊಳ್ಳಲಾದಷ್ಟು ಪರಿಣಾಮ ಎದುರಿಸಿ ಬಿಟ್ಟಿದೆ. ಹೀಗಾಗಿ ಈ ದಿನಗಳಲ್ಲಿ ಕೇಳಿಬರುತ್ತಿರುವ ಹೊಸ ರೂಪಾಂತರಗಳು ಮತ್ತಷ್ಟು ಭೀತಿ ಸೃಷ್ಟಿಸಿವೆ. ಅದರಲ್ಲೂ ಯೂರೋಪ್ ಖಂಡದಲ್ಲಿ ಕೋವಿಡ್ ಮತ್ತೆ ಆವರಿಸುತ್ತಿದೆ.
ಆದರೆ ಕೋವಿಡ್‌ಗಿಂತಲೂ ಅದರ ನಂತರದ ಪರಿಣಾಮವೇ ಅತ್ಯಂತ ಭೀಕರ ಎನಿಸುತ್ತಿದೆ. ಇತ್ತೀಚಿಗೆ ನಾವು ಹೃದಯಾಘಾತದಂತಹ ಪ್ರಕರಣಗಳನ್ನು ಎದುರಿಸುತ್ತಿರುವುದು ಸಹ ಇದರ ಕೊಡುಗೆಯಾಗಿದೆ. ಆರೋಗ್ಯವಂತರೂ ಸಹ ಹೃದಯಾಘಾತದಂತಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇನ್ನು 2024ರಲ್ಲಿ ಈ ಹೃದಯಾಘಾತದಂತಹ ಪಿಡುಗು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಅದರಲ್ಲೂ ಹೊಸದಾಗಿ ಕೇಳಿಬಂದಿರುವ JN.1 ಎಂಬ ಕೋವಿಡ್ ರೂಪಾಂತರವು ಹೃದಯಾಘಾತದ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಜಪಾನ್‌ನ ಉನ್ನತ ಸಂಸ್ಥೆಯಾದ ರಿಕೆನ್‌ನ ಸಂಶೋಧಕರು ವರದಿಯೊಂದರಲ್ಲಿ ಈ ಎಚ್ಚರಿಕೆ ನೀಡಿದ್ದಾರೆ, ಕೊರೊನ ವೈರಸ್ ಮಾನವ ಜೀವಕೋಶಗಳಿಗೆ ಅಂಟಿಕೊಂಡಿರುವ ACE2 ಗ್ರಾಹಕಗಳು ಒಮ್ಮೆ ಕೋವಿಡ್ ಸೋಂಕು ಹೊಂದಿದ್ದ ವ್ಯಕ್ತಿ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾನೆ.
ಕೊರೊನಾದಿಂದ ಹೃದಯಾಘಾತ
ವರದಿಯು ಕಾರಣಗಳ ಬಗ್ಗೆ ಮೌನವಾಗಿದೆ. ಆದರೆ "SARS-CoV-2 ನ ನಿರಂತರ ಸೋಂಕಿನಿಂದಾಗಿ ಭವಿಷ್ಯದ ಹೃದಯ ವೈಫಲ್ಯದ ಅಪಾಯದಲ್ಲಿರುವವರು ಹೆಚ್ಚಾಗುವ ನಿರೀಕ್ಷೆಯಿದೆ" ಎಂದಿದೆ. ನಿರಂತರ ಸೋಂಕಿಗೆ ಒಳಗಾಗುವುದು ಹೃದಯದ ಕಾರ್ಯಧಕ್ಷತೆಗೆ ಅಪಾಯ ತಂದೊಡ್ಡುತ್ತಿದೆ. ಇದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ.
ಇತ್ತೀಚಿನ ಎಚ್ಚರಿಕೆಯು USನಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಲಕ್ಷಾಂತರ ಜನರು ರಜಾದಿನಗಳಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದಾರೆ. ವೇಗವಾಗಿ ಹರಡುವ JN.1 ರೂಪಾಂತರವು ರಾಷ್ಟ್ರವ್ಯಾಪಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.44ರಷ್ಟು ಪಾಲು ಹೊಂದಿದೆ. ಹೀಗಾಗಿ ಈ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ.
ಡೈಲಿ ಎಕ್ಸ್‌ಪ್ರೆಸ್ ಯುಎಸ್'ಗೆ ಹೇಳಿದರು, "ಕೊರೊನಾವೈರಸ್ ಸೋಂಕಿಗೆ ಒಳಗಾದ ಕೆಲವು ಜನರು ತಮ್ಮ ಹೃದಯದಲ್ಲಿ ನಿರಂತರ ವೈರಲ್ ಸೋಂಕನ್ನು ಹೊಂದಿರಬಹುದು." ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೃದಯ ವೈಫಲ್ಯದ ಸಾಂಕ್ರಾಮಿಕಕ್ಕೆ ತಯಾರಿಗಾಗಿ ಪರೀಕ್ಷಾ ವ್ಯವಸ್ಥೆ ಮತ್ತು ಚಿಕಿತ್ಸಾ ವಿಧಾನಗಳನ್ನು ಸ್ಥಾಪಿಸಬೇಕು, ಇದರಲ್ಲಿ ಹೃದಯಾಘಾತ ರೋಗಿಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳವನ್ನು ನಾವು ನೋಡುತ್ತೇವೆ ಎಂದು ರಿಕನ್ ರಿಸರ್ಚ್ ಲೀಡರ್ ಹಿಡೆಟೋಶಿ ಮಸುಮೊಟೊ ಎಚ್ಚರಿಸಿದ್ದಾರೆ.
ಚಳಿಗಾಲದಲ್ಲಿ ಅನಾರೋಗ್ಯ ಮಟ್ಟ ಏರಿಕೆ
ಹೆಚ್ಚುತ್ತಿರುವ ಜ್ವರದಂತಹ ಪ್ರಕರಣಗಳ ಜೊತೆಗೆ, ಈ ಚಳಿಗಾಲದಲ್ಲಿ ಅನಾರೋಗ್ಯದ ಪ್ರಮಾಣದಲ್ಲಿ ದೊಡ್ಡ ಏರಿಕೆ ಕಂಡುಬರಬಹುದು ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ವಿಶೇಷವಾಗಿ ಹೊಸ ವರ್ಷದ ಆಚರಣೆಗಳಿಗಾಗಿ ಕಿಕ್ಕಿರಿದ ಸಾಮೂಹಿಕ ಸೇರ್ಪಡೆಗಳು ಬಹುದೊಡ್ಡ ಕೊಡುಗೆ ನೀಡಬಹುದು.
ಕೋವಿಡ್-ಸಂಬಂಧಿತ ಹೃದಯ ಕಾಯಿಲೆಗಳ ಬಗ್ಗೆ ಆರೋಗ್ಯ ತಜ್ಞರು ಏನು ಹೇಳಿದ್ದಾರೆ?
ಯುಎಸ್, ಯುಕೆ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಇತ್ತೀಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಸಾಕ್ಷಿಯಾದ ನಂತರ, ಹೊಸ ಸ್ಟ್ರೈನ್ ಜೆಎನ್.1 ರ ಹರಡುವಿಕೆ ಹೆಚ್ಚಾದ ಬಳಿಕ ಆರೋಗ್ಯ ತಜ್ಞರು ಇದು ಸಂಭಾವ್ಯ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಹೃದ್ರೋಗವು COVID-19ಗೆ ಹೇಗೆ ಸಂಬಂಧಿಸಿದೆ?
ಜಪಾನ್‌ನ ಉನ್ನತ ಸಂಸ್ಥೆಯಾದ ರಿಕೆನ್‌ನ ಸಂಶೋಧಕರು ವರದಿಯೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ, ಕೊರೊನಾ ವೈರಸ್ ಮಾನವ ಜೀವಕೋಶಗಳಿಗೆ ಅಂಟಿಕೊಂಡಿರುವ ACE2 ಗ್ರಾಹಕಗಳು. ಒಮ್ಮೆ ಕೋವಿಡ್‌ಗೆ ಒಳಗಾದವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ವೈರಲ್ ಶ್ವಾಸಕೋಶಗಳ ಮೇಲೆ ದಾಳಿ ನಡೆಸಿದರೂ ಹೃದಯದ ಕಾರ್ಯ ಧಕ್ಷತೆಗೆ ಹೊಡೆತ ಬೀಳುತ್ತಿದೆ ಎಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
