Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಏಷ್ಯಾದಲ್ಲಿ ಕೋವಿಡ್ ಪ್ರಕರಣ ಏರಿಕೆ..! ಐಪಿಎಲ್ ಆಟಗಾರನಿಗೂ ಕೊರೊನಾ ದೃಢ..!
ಕೋವಿಡ್ -19 ಎಂಬ ಹೆಸರು ಕೇಳಿದರೆ ಸಾಕು ಹಲವರಿಗೆ ಭಯವಾಗುತ್ತೆ. ಹಿಂದೊಮ್ಮೆ ಇಡೀ ಜಗತ್ತಿಗೆ ಹೇಗೆಲ್ಲಾ ಈ ವೈರಸ್ ಕಾಡಿತ್ತು ಎಂಬುದು ಕಣ್ಣ ಮುಂದೆ ಬರಲಿದೆ. ಇಂದಿಗೂ ಕೋವಿಡ್ ವೈರಸ್ ಸಾಮಾನ್ಯ ಜ್ವರವಾಗಿ ಕಾಣಿಸಿಕೊಳ್ಳುತ್ತಿದೆ. ಹಾಗೆ ಬಹುತೇಕ ಮಂದಿ ಕೋವಿಡ್ ಲಸಿಕೆ ಪಡೆದಿರುವ ಕಾರಣ ವೈರಸ್‌ನಿಂದ ಬಹುದೊಡ್ಡ ಹಾನಿ ಸಂಭವಿಸುತ್ತಿಲ್ಲ.
ಇದೆಲ್ಲದರ ನಡುವೆ ಈಗ ಮತ್ತೆ ಕೊರೊನಾ ವೈರಸ್‌ನ ಹೆಸರು ಕೇಳಿಬರುತ್ತಿದೆ. ಅದರಲ್ಲೂ ಸಿಂಗಾಪುರ್ ಹಾಗೂ ಹಾಂಗ್‌ಕಾಂಗ್‌ನಲ್ಲಿ ಕೋವಿಡ್ ಮತ್ತೆ ಹರಡಲು ಆರಂಭಿಸಿದೆ. ಏಕಾಏಕಿ ಈ ನಗರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್ 27 ರಿಂದ ಮೇ 3ರ ವರೆಗಿನ ವಾರದಲ್ಲಿ 14,200 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದು ಈ ಪ್ರಕರಣಗಳಲ್ಲಿನ ಏರಿಕೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಈಗ LF.7 ಮತ್ತು NB.1.8 (ಎರಡೂ JN.1 ರೂಪಾಂತರದ ವಂಶಸ್ಥರು) ಸಿಂಗಾಪುರದಲ್ಲಿ ಹರಡುತ್ತಿದೆ. ಹಾಗೆ ಜನರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಅಧಿಕಾರಿಗಳು ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ.
ಹಾಗೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಧರಿಸುವಂತೆಯೂ ಸೂಚನೆ ನೀಡಲಾಗಿದೆ. ಹಾಗೆ ಈವರೆಗೂ ಬೂಸ್ಟರ್ ಡೋಸ್ ಪಡೆಯದವರು ಪಡೆದುಕೊಳ್ಳುವಂತೆಯೂ ಅಲ್ಲನ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಭಾರತಕ್ಕೇನು ಅಪಾಯ?
ಭಾರತದಲ್ಲೂ ಇಂದಿಗೂ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಪ್ರಮಾಣ ಮಾತ್ರ ಬೆರಳೆಣಿಕೆಯಷ್ಟಿದೆ. ಅದರಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯ ಜ್ವರದ ಬಹುತೇಕ ಪ್ರಕರಣದಲ್ಲಿ ವೈರಸ್ ಪತ್ತೆಯಾಗಬಹುದು ಆದ್ರೆ ಲಸಿಕೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣದಿಂದಾಗಿ ಇದು ಮಾರಕವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಹಾಗೆ ಹಾಂಗ್ ಕಾಂಗ್, ಸಿಂಗಾಪುರ್‌ನಲ್ಲಿ ಕಂಡುಬಂದರುವ ಕೋವಿಡ್ ಹೊಸ ರೂಪಾಂತರವೇ ಎಂಬುದು ಖಚಿತವಾಗಿಲ್ಲ. ಇದು ಭಾರತದಲ್ಲಿ ಸಮಸ್ಯೆ ಉಂಟು ಮಾಡುವ ಲಕ್ಷಣಗಳಿಲ್ಲ ಎಂದು ತಜ್ಞರು ವಿವರಿಸಿದ್ದಾರೆ.
ಏಪ್ರಿಲ್ 28 ರಿಂದ ಭಾರತದಲ್ಲಿ ಈವರೆಗೆ ಕೇವಲ 58 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಅತ್ಯಂತ ಸಾಮಾನ್ಯ ಸಂಖ್ಯೆಯಾಗಿದೆ. ಇದರಲ್ಲಿ ಕೇವಲ ಶೇ.5ರಷ್ಟು ಪ್ರಕರಣಗಳು ಮಾತ್ರವೇ ಆಸ್ಪತ್ರೆಗೆ ದಾಖಲಾಗಬೇಕಿದೆ. ಇದು 2021ರ ಕೋವಿಡ್ ಸಮಯಕ್ಕಿಂತ ಬಹಳ ಕಡಿಮೆ ಪ್ರಮಾಣವಾಗಿದೆ. ಹೀಗಾಗಿ ಇದು ಕಳವಳಕಾರಿ ವಿಚಾರವಾಗಿಲ್ಲ.
ಐಪಿಎಲ್ ಮೇಲೂ ಕೋವಿಡ್ ನೆರಳು
ಇಂಡಿಯನ್ ಪ್ರೈಮಿಯರ್ ಲೀಗ್‌ಗೆ ಮೊದಲಿನಿಂದಲೂ ಅಡೆತಡೆಗಳು ಎದುರಾಗುತ್ತಲೇ ಇದೆ. ಕಳೆದೊಂದು ವಾರದ ಹಿಂದೆ ತಾತ್ಕಾಲಿಕವಾಗಿ ವಿರಾಮ ಪಡೆದಿದ್ದ ಟೂರ್ನಿ ಈಗ ಮತ್ತೆ ಆರಂಭಗೊಂಡಿದೆ, ಆದ್ರೆ ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್‌ಗೆ ಕೋವಿಡ್ ದೃಢಪಟ್ಟಿದೆ. ಅವರು ಆಸ್ಟ್ರೇಲಿಯಾಗೆ ತೆರಳಿದಾಗ ಈ ವೈರಸ್ ಪತ್ತೆಯಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಅವರು ನಿಗದಿತ ಸಮಯಕ್ಕಿಂತ ತಡವಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಅದರಲ್ಲೂ ಇಂದು ನಡೆಯಲಿರುವ ಪಂದ್ಯಕ್ಕೆ ಅವರು ಅಲಭ್ಯವಾಗುತ್ತಿದ್ದಾರೆ. ಹಾಗೆ ಕೋವಿಡ್‌ನಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ಅವರು ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾದಲ್ಲಿ ಕೋವಿಡ್ ದಿಢೀರ್ ಏರಿಕೆ ಕಂಡಿದ್ದೇಕೆ?
ಕೋವಿಡ್ ವೈರಸ್ ಎಂಬುದು ನಿರ್ಮೂಲನೆ ಗೊಂಡಿಲ್ಲ. ಅದರ ಶಕ್ತಿ ಕುಂದಿದೆ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಇಂದಿಗೂ ಹಲವು ರೀತಿಯ ಜ್ವರದ ಪ್ರಕರಣದಲ್ಲಿ ಈ ವೈರಸ್ ವರದಿಯಾಗುತ್ತಿದೆ. ಇನ್ನು ಸಿಂಗಾಪುರ್ ಹಾಗೂ ಹಾಂಗ್ ಕಾಂಗ್‌ನಲ್ಲಿ ದಿಢೀರ್ ಏರಿಕೆಯಾಗಿರುವುದು ಕೂಡ ಅಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ ಆದರೆ ಬಹುಶಃ ಕಡಿಮೆಯಾಗುತ್ತಿರುವ ರೋಗನಿರೋಧಕ ಶಕ್ತಿ ಹಾಗೆ ರೂಪಾಂತರಗಳ ಬಳಿಕ ಹರಡುವಿಕೆ ಹೆಚ್ಚಾಗಿದೆ ಎಂದು ವಿವರಿಸಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
