Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗರ್ಭನಿರೋಧಕ ಮಾತ್ರೆಯಿಂದ ಖಿನ್ನತೆ ಕಾಡುವುದೇ?
ಮದುವೆ ಆದ ನಂತರ ಪ್ರತಿಯೊಬ್ಬ ಹೆಣ್ಣು ಮಗಳ ಜೀವನ ಬಹಳ ಬದಲಾಗುತ್ತದೆ. ತಾನು ಇರುವ ಮನೆಯಿಂದ ಬೇರೆ ಮನೆಗೆ ಹೋಗಿ ಅಲ್ಲಿ ಹೊಂದಿಕೊಳ್ಳುವ ಭರದಲ್ಲಿ ಸಾಕಷ್ಟು ಮಾನಸಿಕ ಸಮಸ್ಯೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಅದೆಷ್ಟೋ ಹೆಣ್ಣು ಮಕ್ಕಳು ಕೌಟುಂಬಿಕ ಕಾರಣಗಳಿಗೆ ಖಿನ್ನತೆಗೆ ಒಳಗಾಗಿದ್ದು ಇದೆ.
ಮದುವೆಯಾದ ನಂತರ ಬಂಜೆತನ, ಗರ್ಭಧಾರಣೆ, ಗರ್ಭ ನಿರೋಧಕ ಮಾತ್ರೆ ಸೇವನೆ, ಗರ್ಭಪಾತ, ಕುಟುಂಬ ನಿಂದನೆ ಹೀಗೆ ಹಲವಾರು ಕಾರಣಕ್ಕೆ ಮಹಿಳೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಅದರಲ್ಲೂ ಗರ್ಭ ನಿರೋಧಕ ಮಾತ್ರೆ ಸೇವನೆ ವಿಚಾರಕ್ಕೆ ಬಂದಾಗ ಇತ್ತೀಚಿನ ಮಹಿಳೆಯರು ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಖಿನ್ನತೆಗೆ ಒಳಗಾಗುತ್ತಿರುವ ಮಹಿಳೆಯರು!
ದಂಪತಿಗಳಿಗೆ ಅವರಿಗೆ ಮಗು ಬೇಕು ಬೇಡವೋ ಎಂಬುದನ್ನು ನಿರ್ಧರಿಸುವ ಹಕ್ಕು ಹಾಗೂ ಜವಾಬ್ದಾರಿ ಎರಡು ಇರುತ್ತದೆ ಅವರಿಗೆ ಬೇಕು ಅನ್ನಿಸಿದರೆ ಗರ್ಭಧಾರಣೆ ಆದ ನಂತರ ಅದನ್ನು ಕಂಟಿನ್ಯೂ ಮಾಡಬಹುದು ಅಥವಾ ಗಂಡ ಹೆಂಡತಿ ಸಂಪರ್ಕಕ್ಕೆ ಬಂದಾಗ ಗರ್ಭ ನಿರೋಧಕ ಮಾತ್ರೆಯನ್ನು ಕೂಡ ಮಹಿಳೆ ಸೇವಿಸಬಹುದು ಆದರೆ ಈ ರೀತಿ ಗರ್ಭ ನಿರೋಧಕ ಮಾತ್ರೆಯನ್ನು ಸ್ತ್ರೀಯರು ಸೇವಿಸುತ್ತಾ ಬಂದರೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಸಂಶೋಧನೆಯಿಂದ ಸಾಬೀತಾಗಿದ್ದೇನು?
ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ಖಿನ್ನತೆಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಕೂಡ ಹೇಳುತ್ತವೆ. ಅದರಲ್ಲೂ ಹದಿಹರೆಯದ ಹೆಣ್ಣು ಮಕ್ಕಳ ಮೇಲೆ ಗರ್ಭ ನಿರೋಧಕ ಮಾತ್ರೆ ಸೇವನೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಗರ್ಭನಿರೋಧಕ ಮಾತೆ ಸೇವನೆಯಿಂದ ಅಡ್ಡ ಪರಿಣಾಮಗಳು ಹೆಚ್ಚು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಲ್ಲದು.
ಇನ್ನು ಶಾಕಿಂಗ್ ವಿಚಾರ ಅಂದ್ರೆ ಮದುವೆಯಾದ ಸ್ತ್ರೀಯರು ಗರ್ಭ ನಿರೋಧಕ ಮಾತ್ರೆ ಸೇವಿಸಿ ಖಿನ್ನತೆಗೆ ಒಳಗಾಗುವ ಸಾಧ್ಯತೆ 92% ನಷ್ಟು. ಆದರೆ ಹದಿಹರೆಯದವರು ಗರ್ಭ ನಿರೋಧಕ ಮಾತ್ರೆ ಸೇವಿಸಿ ಖಿನ್ನತೆಗೆ ಒಳಗಾಗುತ್ತಿರುವ ಪ್ರಮಾಣ 130% ನಷ್ಟು ಹೆಚ್ಚಳವಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಸೇವಿಸುವ ಗರ್ಭ ನಿರೋಧಕ ಮಾತ್ರ ಹಾರ್ಮೋನಲ್ ಬದಲಾವಣೆಗೆ ಮುಖ್ಯ ಕಾರಣವಾಗುತ್ತದೆ.
ಗರ್ಭನಿರೋಧಕ ಮಾತ್ರೆಯ ಪ್ರಯೋಜನ!
ಗರ್ಭ ನಿರೋಧಕ ಮಾತ್ರೆಯನ್ನು ಮದುವೆಯಾದ ಸ್ತ್ರೀಯರು ತೆಗೆದುಕೊಳ್ಳುವುದು ಒಳ್ಳೆಯದೇ ಯಾಕೆಂದರೆ ಅನಗತ್ಯವಾದ ಗರ್ಭವನ್ನು ತಡೆಯುವುದಕ್ಕೆ ಇದು ಸಹಾಯಕವಾಗುತ್ತದೆ ಅಷ್ಟೇ ಅಲ್ಲದೆ ಅಂಡಾಶಯ ಹಾಗೂ ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿಯಾಗಿದೆ. ಆದರೆ ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ಅಡ್ಡ ಪರಿಣಾಮಗಳು ಕೂಡ ಇವೆ.
ಖಿನ್ನತೆಗೆ ಕಾರಣವಾಗುವ ಗರ್ಭ ನಿರೋಧಕ ಮಾತ್ರೆಗಳು:
ಗರ್ಭ ನಿರೋಧಕ ಮಾತ್ರೆಗಳ ಅಡ್ಡ ಪರಿಣಾಮಗಳಲ್ಲಿ ಮುಖ್ಯವಾಗಿರುವಂತದ್ದು ಮಾನಸಿಕ ಖಿನ್ನತೆ. ಗರ್ಭ ನಿರೋಧಕ ಮಾತ್ರೆಯನ್ನು ಆಗಾಗ ಸೇವಿಸುವುದರಿಂದ ಹಾರ್ಮೋನಲ್ ಬದಲಾವಣೆಗಳು ಆಗುತ್ತವೆ. ಇದರಿಂದ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳು ಕೂಡ ಆಗಬಹುದು. ಅದಕ್ಕಿಂತ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಮಹಿಳೆಯರು ಒಳಗಾಗುತ್ತಾರೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.
ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ವೀರ್ಯಾಣು ಅಂಡಾಶಯದ ಒಳಕ್ಕೆ ಹೋಗಿ ಗರ್ಭಧಾರಣೆ ಆಗದಂತೆ ಪ್ರೊಜೆಸ್ಟ್ರಾನ್ ತಡೆಯುತ್ತದೆ. ಆದರೆ ಗರ್ಭ ನಿರೋಧಕ ಮಾತ್ರೆಯನ್ನು ಮಹಿಳೆಯರು ಹೆಚ್ಚು ಸೇವಿಸುತ್ತಾ ಬಂದರೆ ಅದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಸಾಕಷ್ಟು.
ಗರ್ಭ ತಡೆಯಲು ಹೆಣ್ಣು ಮಕ್ಕಳು ಮಾತ್ರ ಗರ್ಭ ನಿರೋಧಕ ಮಾತ್ರೆಯನ್ನು ಪ್ರತಿ ಬಾರಿ ಸೇವಿಸಬೇಕು ಎಂದಿಲ್ಲ. ಇದಕ್ಕಿಂತ ಉತ್ತಮ ಆಯ್ಕೆ ಅಂದ್ರೆ ಪುರುಷರು ಪ್ರೊಟೆಕ್ಷನ್ ಬಳಸಿಕೊಳ್ಳುವುದು. ಈ ರೀತಿ ಮಾಡಿದರೆ ಯಾವುದೇ ಆರೋಗ್ಯದ ಅಡ್ಡ ಪರಿಣಾಮಗಳಿಲ್ಲದೆ ಗಂಡ ಹೆಂಡತಿ ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
