Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
constipation Awareness Month 2023:ಈ ಆಹಾರಗಳು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತೆ
ಡಿಸೆಂಬರ್ ತಿಂಗಳನ್ನು ಮಲಬದ್ಧತೆ ಬಗ್ಗೆ ಜಾಗೃತಿ ಮೂಡಿಸುವ ತಿಂಗಳನ್ನಾಗಿ ಆಚರಿಸಲಾಗುವುದು. ಮಲಬದ್ಧತೆ ಎಂಬುವುದು ಒಂದು ಸರಳ ಸಮಸ್ಯೆ ಅಲ್ಲವೇ ಅಲ್ಲ, ಮಲಬದ್ಧತೆ ಉಂಟಾದರೆ ಮಲವಿಸರ್ಜನೆಗೆ ಹೋಗುವಾಗ ತುಂಬಾನೇ ತೊಂದರೆಯಾಗುವುದು, ಅಲ್ಲದೆ ದಿನಪೂರ್ತಿ ಅಸ್ವಸ್ಥತೆ ಕಾಡುವುದು. ಅಲ್ಲದೆ ನಮ್ಮ ಹೊಟ್ಟೆ ಕ್ಲೀನ್ ಆಗದಿದ್ದರೆ ಇದರಿಂದ ಅನೇಕ ಕಾಯಿಲೆ ಬರುವ ಸಾಧ್ಯತೆ ಇದೆ. ಆದ್ದರಿಂದ ಮಲಬದ್ಧತೆ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.
ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಲಬದ್ಧತೆ ಸಮಸ್ಯೆ ಕಾಡುವುದು. ನಾವಿಲ್ಲಿ ಕೆಲವೊಂದು ಮನೆಮದ್ದು ನೀಡಿದ್ದೇವೆ, ನಿಮ್ಮ ಮಗು ಘನ ಆಹಾರ ಸೇವಿಸಲು ಪ್ರಾರಂಭಿಸಿದ್ದರೆ ಆ ಮಗುವಿಗೂ ಈ ಮನೆಮದ್ದು ಟ್ರೈ ಮಾಡಿ.

ನೀರು ಹಾಗೂ ಕಾಮ ಕಸ್ತೂರಿ ಬೀಜ ಹಾಕಿದ ನೀರು
ಮಲಬದ್ಧತೆ ತಡೆಗಟ್ಟಲು ಸಾಕಷ್ಟು ನೀರು ಕುಡಿಯಬೇಕು, ಯಾರು ನೀರು ಕಡಿಮೆ ಕುಡಿಯುತ್ತಾರೋ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು. ನೀವು ದಿನದಲ್ಲಿ ಎರಡು ಲೀಟರ್ ನೀರು ಕುಡಿಯಿರಿ. ದಿನಾ ಒಂದು ಲೋಟ ನೀರಿಗೆ ಸ್ವಲ್ಪ ಕಾಮ ಕಸ್ತೂರಿ ಬೀಜ ಹಾಕಿ ಕುಡಿದರೆ ಮಲಬದ್ಧತೆ ತಡೆಗಟ್ಟಲು ಸಹಕಾರಿಯಾಗಿದೆ.
ನಾರಿನಂಶ ಅಧಿಕವಿರುವ ಹಣ್ಣು ತರಕಾರಿಗಳನ್ನು ಸೇವಿಸಬೇಕು
ನಾರಿನಂಶವಿರುವ ಆಹಾರ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ. ಓಟ್ಸ್, ಬಾರ್ಲಿ, ನಟ್ಸ್, ಬೀಜಗಳು, ಸಿರಿಧಾನ್ಯಗಳು , ಬಟಾಣಿ ಈ ಬಗೆಯ ಆಹಾರಗಳು ಮಲವನ್ನು ಮೃದುವಾಗಿಸುವುದರಿಂದ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ.
ಕಾಫಿ ಕುಡಿಯಿರಿ
ಮಲಬದ್ಧತೆ ಸಮಸ್ಯೆ ಇರುವವರು ಬ್ಲ್ಯಾಕ್ ಕಾಫಿ ಕುಡಿಯುವುದು ಒಳ್ಳೆಯದು. ಕಾಫಿ ಕುಡಿಯುವುದರಿಂದ ಟಾಯ್ಲೆಟ್‌ಗೆ ಹೋಗಬೇಕನಿಸುತ್ತದೆ. ಆದ್ದರಿಂದ ದಿನದಲ್ಲಿ ಎರಡು ಬಾರಿ ಕಾಫಿ ಕುಡಿಯುವುದು ಒಳ್ಳೆಯದು.
ಪ್ರೊಬಯೋಟಿಕ್ ಆಹಾರವನ್ನು ಸೇವಿಸಿ
ನಿರಂತರ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ಪ್ರೊಬಯೋಟಿಕ್ ಆಹಾರವನ್ನು ಸೇವಿಸಿ. ನೀವು ಪ್ರೊಬಯೋಟಿಕ್ ಆಹಾರವನ್ನು ಸೇವಿಸುವುದರಿಂದ ಮಲ ಮೃದುವಾಗುವುದು, ಇದರಿಂದ ಮಲವಿಸರ್ಜನೆ ಸುಲಭವಾಗಿ ಆಗುವುದು.
ಮೊಸರು
ಪ್ರೊಬಯೋಟಿಕ್ ಟ್ರಿಂಕ್
ಬೆಳ್ಳುಳ್ಳಿ
ಬಾಳೆಹಣ್ಣು
ಬಟಾಣಿ
ಸಕ್ಕರೆ ಗೆಣಸು ಸೇವಿಸಿ
ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಕ್ಕರೆ ಗೆಣಸು ತುಂಬಾನೇ ಪ್ರಯೋಜನಕಾರಿ. ನೀವು ಪ್ರತಿದಿನ ಸಿಹಿ ಗೆಣಸು ತಿನ್ನಿ. ಸಿಹಿ ಗೆಣಸು ಎಲ್ಲಾ ರೀತಿಯಿಂದಲೂ ತುಂಬಾ ಒಳ್ಳೆಯದು. ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಸಿಹಿ ಗೆಣಸು ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ. ಸಿಹಿ ಗೆಣಸು ದೇಹವನ್ನು ಡಿಟಾಕ್ಸ್ ಕೂಡ ಮಾಡುತ್ತದೆ, ಆದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪ್ರೂನ್ಸ್
ಒಣಗಿಸಿದ ಪ್ಲಮ್, ಇದು ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಪ್ರಯೋಜನಕಾರಿ. ಇದನ್ನು ನೀವು ಚಿಕ್ಕ ಮಕ್ಕಳಿಗೂ ಟ್ರೈ ಮಾಡಿ. ಇದು ತುಂಬಾನೇ ಪರಿಣಾಮಕಾರಿ. ಪ್ರೂನ್ಸ್ ಅನ್ನು ನೀರಿನಲ್ಲಿ ನೆನೆಹಾಕಿ ಆ ನೀರನ್ನು ಕುಡಿಸಿ, ಅಥವಾ ಇದನ್ನು ಹಾಕಿ ಮಿಲ್ಕ್‌ಶೇಕ್ ರೀತಿ ಮಾಡಿ ಸೇವಿಸಿ.
ಕೆಲವೊಂದು ಆರೋಗ್ಯ ಸಮಸ್ಯೆಯಿಂದಲೂ ಮಲಬದ್ಧತೆ ಉಂಟಾಗುವುದು
ಥೈರಾಯ್ಡ್ ಮುಂತಾದ ಆರೋಗ್ಯ ಸಮಸ್ಯೆಯಿದ್ದಾಗಲೂ ಮಲಬದ್ಧತೆ ಉಂಟಾಗುವುದು. ಆದ್ದರಿಂದ ಆಗಾಗ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಿ. ಅವರು ನಿಮಗೆ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಕೆಲವೊಂದು ಸಿರಪ್ ನೀಡಬಹುದು.
ವ್ಯಾಯಾಮ ಮಾಡಿ
ಸಾಕಷ್ಟು ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣ ನಮ್ಮ ದೇಹಕ್ಕೆ ಅಗ್ಯತವಿರುವ ದೈಹಿಕ ಚಟುವಟಿಕೆ ದೊರೆಯದೇ ಇರುವುದು. ಆದ್ದರಿಂದ ಪ್ರತಿನಿತ್ಯ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ಉತ್ತಮವಾಗಿರುವುದು, ಇದರಿಂದ ಕೂಡ ಮಲಬದ್ಧತೆ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications