Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಬರಿಮಲೆ ಯಾತ್ರಿಗಳಲ್ಲಿ ಆತಂಕ: ಕೇರಳದಲ್ಲಿ ಮೆದುಳು ಜ್ವರದ ಭೀತಿ!
ದಕ್ಷಿಣ ಭಾರತದ ಪ್ರಮುಖ ಯಾಥ್ರಾ ಸ್ಥಳವಾದ ಶಬರಿಮಲೆಗೆ ಲಕ್ಷಾಂತರ ಮಂದಿ ಭಕ್ತರು ಪ್ರಯಾಣಿಸುತ್ತಾರೆ. ಶಬರಿಮಲೆ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ವರೆಗೂ ಲಕ್ಷ ಲಕ್ಷ ಮಂದಿ ಭಕ್ತರು ದಿನವೂ ಅಯ್ಯಪ್ಪನ ದರ್ಶನಕ್ಕೆ ಬರುತ್ತಾರೆ. ಅದ್ರಲ್ಲೂ ಮಕರ ಜ್ಯೋತಿ ದರ್ಶನ ಪಡೆಯಲೆಂದು ದೇವಾಲಯಕ್ಕೆ ಭೇಟಿ ನೀಡುವುದು ನೋಡಬಹುದು.
ನವೆಂಬರ್ 17 ರಿಂದ ಶಬರಿಮಲೆಯ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ಆದ್ರೆ ಕೇರಳದಲ್ಲಿ ಈಗ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಮೆದುಳು ಜ್ವರ) ಪ್ರಕರಣದಲ್ಲಿ ಹೆಚ್ಚಳವಾಗಿದೆ. ಇದು ಭಕ್ತರಿಗೆ ದೊಡ್ಡ ತಲೆನೋವಾಗಿದೆ. ಸದ್ಯ ಈ ಮೆದುಳು ಜ್ವರದ ಕಾರಣದಿಂದ ಕೇರಳ ಆರೋಗ್ಯ ಇಲಾಖೆ ಸಹಾಯವಾಣಿ ಕೂಡ ತೆರೆದಿದೆ.

ತುರ್ತು ಸಂದರ್ಭಗಳಲ್ಲಿ ಭಕ್ತರಿಗೆ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಿತು ಮತ್ತು ರಾಜ್ಯ ಸರ್ಕಾರವು ಸುಗಮ ಮತ್ತು ಅಪಾಯ-ಮುಕ್ತ ತೀರ್ಥಯಾತ್ರೆಗಾಗಿ ತೀರ್ಥಯಾತ್ರೆಯ ಮಾರ್ಗದಲ್ಲಿ ವೈದ್ಯಕೀಯ ಶಿಬಿರಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ನದಿಗಳಲ್ಲಿ ಸ್ನಾನ ಮಾಡುವ ಭಕ್ತರು ತಮ್ಮ ಮೂಗಿಗೆ ನೀರು ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಹಾಗೆ ಫಿಲ್ಟರ್ ನೀರು ಅಥವಾ ಬಾಟಲಿ ನೀರುಗಳ ಸೇವನೆಗೆ ಆಧ್ಯತೆ ನೀಡಲು ತಿಳಿಸಲಾಗಿದೆ. ಈ ಮೆದುಳು ಜ್ವರ ಹರಡುವಿಕೆ ಇಂತಹ ಕಾರಣಗಳಿಂದ ಉಂಟಾಗುತ್ತಿರುವುದನ್ನು ಮನಗಂಡು ಕೆಲವು ಮಾರ್ಗಸೂಚಿಗಳನ್ನು ಸಹ ತಿಳಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಯಾತ್ರಿಕರು ತಮ್ಮ ದಾಖಲೆಗಳು ಮತ್ತು ನಿಯಮಿತ ಔಷಧಿಗಳನ್ನು ಕೊಂಡೊಯ್ಯುವಂತೆ ತಿಳಿಸಲಾಗಿದೆ.
ಇನ್ನು ದೇವಾಲಯ ಭೇಟಿಯಾಗಿ ನಡೆದು ಬರುವವರು ವಿರಾಮಗಳನ್ನು ತೆಗೆದುಕೊಳ್ಳಲು ಮತ್ತು ಆಯಾಸ, ಎದೆ ನೋವು, ಉಸಿರಾಟದ ತೊಂದರೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ ವೈದ್ಯಕೀಯ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಅವರು ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಸಹ ತಿಳಿಸಲಾಗಿದೆ.
ಅಲ್ಲದೆ ಭಕ್ತರು ಕುದಿಸಿದ ನೀರನ್ನು ಮಾತ್ರ ಕುಡಿಯಬೇಕು, ಆಹಾರ ಸೇವಿಸುವ ಮೊದಲು ಕೈ ತೊಳೆಯುವುದು, ತೊಳೆದ ಹಣ್ಣುಗಳನ್ನು ಸೇವಿಸಬೇಕು ಮತ್ತು ಹಳೆಯ ಅಥವಾ ತೆರೆದ ಆಹಾರವನ್ನು ಸೇವಿಸಬಾರದು ಎಂದು ತಿಳಿಸಲಾಗಿದೆ. ತೀರ್ಥಯಾತ್ರೆಯ ಸ್ಥಳದಲ್ಲಿ ಬಯಲು ಮಲವಿಸರ್ಜನೆಯನ್ನು ನಿಷೇಧಿಸಲಾಗಿದೆ. ಹಾಗೆ ತ್ಯಾಜ್ಯಾ ವಿಲೇವಾರಿ ಸಂಬಂಧಿತ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ.
ತೀರ್ಥಯಾತ್ರೆಯು ಅರಣ್ಯ ಪ್ರದೇಶಗಳನ್ನು ಒಳಗೊಂಡಿರುವುದರಿಂದ, ಹಾವು ಕಡಿತಗಳು ಆಗಾಗ ವರದಿಯಾಗುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ, ಆಸ್ಪತ್ರೆಗಳಲ್ಲಿ ವಿಷ ವಿರೋಧಿ ಔಷಧಿಗಳು ದಾಸ್ತಾನು ಮಾಡಲಾಗಿರುವುದರಿಂದ ಯಾತ್ರಿಕರು ತಕ್ಷಣ ವೈದ್ಯಕೀಯ ಆರೈಕೆ ಪಡೆಯಬೇಕೆಂದು ಸಲಹೆ ನೀಡಲಾಗಿದೆ. ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂಸೇವಕ ಆರೋಗ್ಯ ಕಾರ್ಯಕರ್ತರನ್ನು ತೀರ್ಥಯಾತ್ರೆಯ ಮಾರ್ಗಗಳಲ್ಲಿ ನಿಯೋಜಿಸಲಾಗಿದೆ
ಕೇರಳದಲ್ಲಿ ಮೆದುಳು ಜ್ವರದ ಪರಿಣಾಮ
ಕೇರಳದಲ್ಲಿ ಈ ವರ್ಷ 69 ಮೆದುಳು ಜ್ವರ ಪ್ರಕರಣಗಳು ವರದಿಯಾಗಿವೆ. ಅದ್ರಲ್ಲೂ 19 ಸಾವಿನ ವರದಿಯಾಗಿದೆ. ಇದು ಕಳೆದ 6 ವರ್ಷಗಳಲ್ಲೇ ಅಧಿಕ ಎಂದು ತಿಳಿದುಬಂದಿದೆ. ಈ ಅಮೀಬಾಗಳು ಬೆಚ್ಚಗಿನ ನೀರಿನಲ್ಲಿ ಬೆಳೆಯುತ್ತವೆ ಮತ್ತು ಬ್ಯಾಕ್ಟೀರಿಯಾ ಮತ್ತು ಪಾಚಿಗಳನ್ನು ತಿನ್ನುತ್ತವೆ. ಬಾವಿಗಳು ಮತ್ತು ಕೊಳಗಳಂತಹ ಕೇರಳದ ಅನೇಕ ನೀರಿನ ಮೂಲಗಳು ಹೆಚ್ಚಿನ ಮಟ್ಟದ ಕೋಲಿಫಾರ್ಮ್ ಬ್ಯಾಕ್ಟೀರಿಯಾವನ್ನು ಹೊಂದಿವೆ, ಅವು ಒಳಚರಂಡಿ ಮತ್ತು ತ್ಯಾಜ್ಯದಿಂದ ಬರುತ್ತವೆ.
ಸೋಂಕು ಹೇಗೆ ಹರಡುತ್ತದೆ?
ಕಲುಷಿತ ನೀರು ಮೂಗಿಗೆ ಸೇರಿದಾಗ, ಹೆಚ್ಚಾಗಿ ಕೊಳಗಳು, ಸರೋವರಗಳು ಅಥವಾ ಸರಿಯಾಗಿ ಸಂಸ್ಕರಿಸದ ಈಜುಕೊಳಗಳಲ್ಲಿ ಈಜುವಾಗ ಅಥವಾ ಸ್ನಾನ ಮಾಡುವಾಗ ಅಮೀಬಾ ಸಾಮಾನ್ಯವಾಗಿ ದೇಹವನ್ನು ಪ್ರವೇಶಿಸುತ್ತದೆ. ನಂತರ ಅದು ಮೂಗಿನ ಮೂಲಕ ಮೆದುಳಿಗೆ ಚಲಿಸುತ್ತದೆ. ಅಲ್ಲಿ ಅದು ಮೆದುಳಿನ ಕೋಶಗಳನ್ನು ತಿಂದು ತೀವ್ರ ಹಾನಿಯನ್ನುಂಟುಮಾಡುತ್ತದೆ.



Click it and Unblock the Notifications











