Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಕ್ಯಾನ್ಸರ್‌ನ ಸೋಲಿಸಿ ಜೀವನದಲ್ಲಿ ಗೆದ್ದವರ ಸ್ಪೂರ್ತಿದಾಯಕ ಕತೆಗಳು
ಇವರ ಕತೆ ನೋಡುವುದಾದರೆ 21 ವರ್ಷದವರೆಗೆ ಯಾವುದೇ ಸಮಸ್ಯೆಯಿಲ್ಲದೆ ತುಂಬಾನೇ ನಾರ್ಮಲ್ ಆಗಿದ್ದರು, ಡಿಗ್ರಿ ಓದುತ್ತಿದ್ದರು, ನೋಡಿದರೆ ಅವರಿಗೆ ಹೊಟ್ಟೆ ನೋವು ಬರುತ್ತದೆ, ಡಾಕ್ಟರ್ ಬಳಿ ಬಂದಾಗ ಟ್ಯೂಮರ್ ಅಂತಾರೆ, ಅದಾದ ಮೂರೇ ದಿನದಲ್ಲಿ ಬಲಭಾಗದ ಕಿಡ್ನಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗುವುದು. ಈ ಕ್ಯಾನ್ಸರ್ ಹೆಸರು Wilm's Tumor. ಅಚ್ಚರಿಯೆಂದರೆ ಇದು ಮಕ್ಕಳಿಗೆ ಬರುವ ಕ್ಯಾನ್ಸರ್ ಆದರೆ ಇವರಿಗೆ ಬಂದಿತ್ತು, ವೈದ್ಯರಿಗೂ ಈ ಬಗ್ಗೆ ಅಚ್ಚರಿಯಿತ್ತು.

ಇದೀಗ ಕ್ಯಾನ್ಸರ್ ಮುಕ್ತಳಾಗಿ ಸಂತೋಷದಿಂದ ಬದುಕುತ್ತಿದ್ದಾನೆ, ಯಾರಿಗೂ ಧೈರ್ಯದ ಅವಶ್ಯಕತೆ ಇದೆಯೂ ಅವರಿಗೆ ನನ್ನ ಕತೆ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇವರ ಹೆಸರು ವೆನಿಸಾ ಮೊದಲಿಗೆ ಇವರು ಕ್ಯಾನ್ಸರ್ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು, ಇವರ ಜೀವನವನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಎರಡನೇ ಬಾರಿಯೂ ಕ್ಯಾನ್ಸರ್ ಬಂದಾಗ ಅವರು ಕ್ಯಾನ್ಸರ್‌ನಿಂದ ಬದುಕಿಳಿದವರ ಕತೆ ಕೇಳುತ್ತಿದ್ದರು. ಇದರಿಂದ ಅವರಿಗೆ ಧೈರ್ಯ ಬರುತ್ತಿತ್ತು, ಅಲ್ಲಿಂದ ಇವರು ತಮ್ಮ ಕತೆಯನ್ನು ಹೇಳುವ ಮೂಲಕ ಬೇರೆಯವರಿಗೆ ಧೈರ್ಯ ತುಂಬುವ ಕೆಲಸ
ಮಾಡುತ್ತಿದ್ದಾರೆ.
ಇವರಿಗೆ ಕ್ಯಾನ್ಸರ್ ಇಲ್ಲ ಆದರೆ ಕ್ಯಾನ್ಸರ್ ಬರಬಾರದೆಂದು ಜೀವನಶೈಲಿ ಬದಲಾಯಿಸಿದವರು
ಎರಡು ಫೋಟೋಗಳನ್ನು ಹಂಚಿಕೊಂಡು ಎರಡನೇ ಪೋಟೋದಲ್ಲಿ ನನ್ನ ಹೊಟ್ಟೆಯೊಳಗೆ ಮಗುವಿರುವ ಖುಷಿಯನ್ನು ಹಂಚಿಕೊಂಡು ತುಂಬಾ ಸ್ಪೂರ್ತಿದಾಯಕ ಕತೆ ಹೇಳಿದ್ದಾರೆ. ಏಕೆಂದರೆ ಇವರು ತಂದೆ-ತಾಯಿಯನ್ನು ಕ್ಯಾನ್ಸರ್‌ನಿಂದ ಕಳೆದುಕೊಳ್ಳುತ್ತಾರೆ. ಆದರೆ ಇವರು ನನ್ನ ಮಕ್ಕಳನ್ನು ಅನಾಥ ಮಾಡಬಾರದು ಎಂದು ನಿರ್ಧರಿಸಿ ಜೀವನಶೈಲಿ ಬದಲಾಯಿಸುತ್ತಾರೆ, ವರ್ಕೌಟ್ ಮಾಡುತ್ತಾರೆ, ಕ್ಯಾನ್ಸರ್ ತಡೆಗಟ್ಟುವಲ್ಲಿ ವರ್ಕೌಟ್ ಕೂಡ ಸಹಕಾರಿ, ಅದರ ಆತ್ಮವಿಶ್ವಾಸದ ನಗು ಇವರ ಮುಖದಲ್ಲಿದೆ.
ಡಾ. ಪೂನಂ ಪಾಟೀಲ್ ಮಣಿಪಾಲ್ ಆಸ್ಪತ್ರೆ (ಓಲ್ಡ್ ಏರ್‌ಪೋರ್ಟ್ ರೋಡ್)ನ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ವಿವರಿಸುತ್ತಾ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9-14 ವರ್ಷದ ಹೆಣ್ಮಕ್ಕಳಿಗೆ HPV ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ.
ಈ ತಾಯಿಯ ಕತೆ ನೋಡುವುದಾದರೆ 2029ರಲ್ಲಿ ಕ್ಯಾನ್ಸರ್ ಇದೆ ಎಂಬುವುದು ತಿಳಿಯುತ್ತದೆ, ಆದರೆ ಅಷ್ಟು ಚಿಕ್ಕ ಮಕ್ಕಳನ್ನು ಬಿಟ್ಟು ಹೋಗುವುದು ಇಷ್ಟವಿರಲಿಲ್ಲ, ಸಾವನ್ನು ಗೆಲ್ಲಬೇಕೆಂದು ತೀರ್ಮಾನಿಸುತ್ತಾರೆ, ಸಾವನ್ನು ಗೆಲ್ಲುತ್ತಾರೆ.
ಹೀಗೆ ಕ್ಯಾನ್ಸರ್ ಗೆದ್ದ ಸಾವಿರಾರು ಜನರು ನಮ್ಮಲ್ಲಿ ಇದ್ದಾರೆ, ಆದ್ದರಿಂದ ಕ್ಯಾನ್ಸರ್ ಇದೆ ಎಂದು ತಿಳಿದಾಗ ಮನೆಯವರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ದೃಢ ನಿರ್ಧಾರದಿಮದ ಹೋರಾಡಿದರೆ ಎಂಥ ಕ್ಯಾನ್ಸರ್ ಕೂಡ ಸೋಲುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications